ಆದಿದೇವಾನಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವಾಮಿ ಆದಿದೇವಾನಂದರು(೧೯೧೨-೧೯೮೩) ರಾಮಕೃಷ್ಣ ಮಠದ ಸನ್ಯಾಸಿಯಾಗಿದ್ದರು.

ಜೀವನ[ಬದಲಾಯಿಸಿ]

ಹಿಂದಿನ ಮೈಸೂರು ಸಂಸ್ಥಾನದಲ್ಲಿ ೧೯೧೨ ರಲ್ಲಿ ಇವರು ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ವೆಂಕಟಪತಿ. ೧೯೩೪ರಲ್ಲಿ ಮದ್ರಾಸಿನ ರಾಮಕೃಷ್ಣ ಮಠದಲ್ಲಿ ತಮ್ಮ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸಿದರು. ಸುಮಾರು ೬ ವರ್ಷಗಳವರೆಗೆ ಅಲ್ಲಿಯ ಪ್ರಕಟನಾ ಕೇಂದ್ರದ ಉಸ್ತುವಾರಿಯನ್ನು ನಿರ್ವಹಿಸಿದರು. ಶ್ರೀರಾಮಕೃಷ್ಣರ ನೇರ ಶಿಷ್ಯರಾದ ಸ್ವಾಮಿ ವಿಜ್ಞಾನಾನಂದರಿಂದ ಮಂತ್ರದೀಕ್ಷೆಯನ್ನು ಪಡೆದ ಇವರು, ೧೯೪೨ರಲ್ಲಿ ರಾಮಕೃಷ್ಣ ಸಂಘದ ೬ನೇ ಅಧ್ಯಕ್ಷರಾದ ಸ್ವಾಮಿ ವಿರಜಾನಂದರಿಂದ ಸಂನ್ಯಾಸ ದೀಕ್ಷೆ ಪಡೆದರು. ನಂತರ ವಾರಣಾಸಿಯ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆಯಲ್ಲಿ ೭ ವರುಷ ಸೇವೆ ಸಲ್ಲಿಸಿದರು. ಅಕ್ಟೋಬರ ೧೯೪೭ ರಿಂದ ನವಂಬರ ೧೯೪೮ರವರೆಗೆ ವಿಶಾಖಾಪಟ್ಟಣದ ಕೇಂದ್ರದಲ್ಲಿ ಸೇವೆಸಲ್ಲಿಸಿದರು. ನಂತರ ಮದ್ರಾಸಿನ ಮಠದ ಮ್ಯಾನೇಜರ ಆಗಿ ನಿಯುಕ್ತಗೊಂಡರು. ನಂತರ ಮಂಗಳೂರು ಕೇಂದ್ರದ ಅಧ್ಯಕ್ಷರಾಗಿ ನಿಯುಕ್ತಗೊಂಡರು. ಅಲ್ಲಿಯ ಅನಾಥಾಶ್ರಮ ಮತ್ತು ಧರ್ಮಾಸ್ಪತ್ರೆಗಳು ಇವರ ಕಾಲದಲ್ಲಿ ಅಭಿವೃದ್ಧಿ ಹೊಂದಿದವು. ಡಿಸೆಂಬರ ೧೯೬೫ರಲ್ಲಿ ಇವರು ರಾಮಕೃಷ್ಣ ಮಠದ ಧರ್ಮದರ್ಶಿಯಾಗಿ ಮತ್ತು ರಾಮಕೃಷ್ಣ ಮಿಷನ್ನಿನ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಚುನಾಯಿತರಾದರು. ಕೆಲವು ವರ್ಷಗಳವರೆಗೆ ಸಂಘದ ಖಜಾಂಚಿಯಾಗಿಯೂ ಕಾರ್ಯ ನಿರ್ವಹಿಸಿದರು. ಅನಾರೋಗ್ಯದ ಕಾರಣಗಳಿಂದ ಬೇಲೂರು ಮಠದ ಕಾರ್ಯಗಳಿಂದ ಬಿಡುವು ಪಡೆದು ೧೯೭೦ ರಲ್ಲಿ ಬೆಂಗಳೂರಿನ ಬಸವನಗುಡಿಯ ಮಠದ ಅಧ್ಯಕ್ಷರಾಗಿ ನಿಯುಕ್ತಗೊಂಡರು. ಅಲ್ಲಿಯೇ ಸೇವಾನಿರತರಾಗಿ ತಮ್ಮ ೭೧ನೇ ವಯಸ್ಸಿನಲ್ಲಿ ೧೪ನೇ ಜೂನ ೧೯೮೩ರಂದು ಬ್ರಹ್ಮಲೀನರಾದರು.

ಕೃತಿಗಳು[ಬದಲಾಯಿಸಿ]

ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಅಪಾರ ಪಾಂಡಿತ್ಯಪಡೆದಿದ್ದ ಅವರು ವೇದಾಂತದ ಮೇಲೆ ಅನೇಕ ಶ್ರೇಷ್ಠಗ್ರಂಥಗಳನ್ನು ರಚಿಸಿದ್ದಾರೆ.

ಕನ್ನಡ ಕೃತಿಗಳು[ಬದಲಾಯಿಸಿ]

ಆಂಗ್ಲ ಕೃತಿಗಳು[ಬದಲಾಯಿಸಿ]

ಆಸಕ್ತಿದಾಯಕ ಮಾಹಿತಿ[ಬದಲಾಯಿಸಿ]

  • ಡಿವಿಜಿ ಯವರು ತಮ್ಮ "ಜೀವನ ಧರ್ಮಯೋಗ" ವೆಂಬ ಭಗವದ್ಗೀತೆಯ ಭಾಷ್ಯದ ಪೀಠಿಕೆಯಲ್ಲಿ ಆಧಾರಗ್ರಂಥವನ್ನಾಗಿ ಉಲ್ಲೇಖಿಸಿದ ೨ ಕೃತಿಗಳಲ್ಲಿ ಆದಿದೇವಾನಂದರ ಭಗವದ್ಗೀತೆಯೂ ಒಂದು.