ವಿಷಯಕ್ಕೆ ಹೋಗು

ಭಾರತದ ಸರ್ವೋಚ್ಛ ನ್ಯಾಯಾಲಯ

ನಿರ್ದೇಶಾಂಕಗಳು: 28°37′20″N 77°14′23″E / 28.622237°N 77.239584°E / 28.622237; 77.239584
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತದ ಸರ್ವೋಚ್ಛ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಛ ನ್ಯಾಯಾಲಯದ ಮುದ್ರೆ
ಸ್ಥಾಪನೆಜನವರಿ ೨೮, ೧೯೫೦
ದೇಶಭಾರತ
ಸ್ಥಳಭಗವಾನ್ ದಾಸ್ ರಸ್ತೆ, ನವ ದೆಹಲಿ, ಭಾರತ, 110201
ಅಕ್ಷಾಂಶ ಮತ್ತು ರೇಖಾಂಶ28°37′20″N 77°14′23″E / 28.622237°N 77.239584°E / 28.622237; 77.239584
ಧ್ಯೇಯವಾಕ್ಯयतो धर्मस्ततो जयः॥ (Yato dharmas tato jayah)
ಧರ್ಮ ಎಲ್ಲಿದೆಯೋ ಅಲ್ಲಿ ಜಯವಿದೆ.
ಸಂಯೋಜನೆ ಪದ್ಧತಿಕೊಲಿಜಿಯಂ ವ್ಯವಸ್ಥೆ
ಅಧಿಕೃತ ಗೊಳಿಸಿದ್ದುಭಾರತದ ಸಂವಿಧಾನ
ನ್ಯಾಯಾಧೀಶರ ಅಧಿಕಾರ ಅವಧಿ65 ವರ್ಷ
ಸ್ಥಾನಗಳ ಸಂಖ್ಯೆ34(33+1)
ಜಾಲತಾಣsci.gov.in
ಭಾರತದ ಮುಖ್ಯ ನ್ಯಾಯಾಧೀಶರು
ಪ್ರಸ್ತುತಡಿ. ವೈ. ಚಂದ್ರಚೂಡ
ಇಂದ೦೯ ನವಂಬರ್ ೨೦೨೨

ಭಾರತದ ಸರ್ವೋಚ್ಛ ನ್ಯಾಯಾಲಯವು ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಅತೀ ಹೆಚ್ಚಿನ ಅಧಿಕಾರವುಳ್ಳ ನ್ಯಾಯಾಲಯವಾಗಿದೆ. ಭಾರತದ ಸಂವಿಧಾನದ ಛೇದ ೫, ಅನುಚ್ಛೇದ ೪ರ ಮೂಲಕ ಈ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಮೂಲ ಉದ್ದೇಶವೆಂದರೆ: ಸಂವಿಧಾನದ ರಕ್ಷಣೆ, ಸಂವಿಧಾನಿಕ ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಯಾವುದೇ ಖಟ್ಲೆಯ ವಾದದ ಕೊನೆಯ ಹಂತ.

ಭಾರತದ ಸರ್ವೋಚ್ಛ ನ್ಯಾಯಾಲಯವು ೨೮ನೇಯ ಜನವರಿ ೧೯೫೦ರಂದು ತನ್ನ ಮೊದಲನೆಯ ಖಟ್ಲೆಯ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಸರ್ವೋಚ್ಚ ನ್ಯಾಯಾಲಯದ ಅಧಿಕಾರ ಹಾಗೂ ಕಾರ್ಯಗಳು. 1.ಪ್ರಾರಂಭಿಕ ಅಥವಾ ಮೂಲ ಅಧಿಕಾರ ಕಾರ್ಯಗಳು. 2.ಮನವಿ ಅಧಿಕಾರ 3.ಸಲಹಾ ಅಧಿಕಾರ.

ಮುಖ್ಯ ನ್ಯಾಯಮೂರ್ತಿಗಳು

[ಬದಲಾಯಿಸಿ]

ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಜಗದೀಶ್‌ ಸಿಂಗ್‌ ಖೇಹರ್‌ ಅವರು ಭಾರತದ 44ನೇ ಮುಖ್ಯ ನ್ಯಾಯಮೂರ್ತಿಯಾಗಿ ದಿ.5 Jan, 2017 ಬುಧವಾರ ಅಧಿಕಾರ ಸ್ವೀಕರಿಸಿದರು. 64 ವರ್ಷದ ಖೇಹರ್‌ ಅವರು ದೇಶದ ನ್ಯಾಯಾಂಗ ವ್ಯವಸ್ಥೆಯ ಸರ್ವೋಚ್ಚ ಹುದ್ದೆಯನ್ನು ಅಲಂಕರಿಸಿದ ಸಿಖ್‌ ಸಮುದಾಯದ ಮೊದಲ ವ್ಯಕ್ತಿ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಖೇಹರ್‌ ಅವರು ಆಗಸ್ಟ್‌ 27 ರವರೆಗೆ ಈ ಹುದ್ದೆಯನ್ನು ನಿರ್ವಹಿಸಿದರು.[]

  • 45ನೇ ಮುಖ್ಯನ್ಯಾಯಮೂರ್ತಿಯಾಗಿ ಮಿಶ್ರಾ (63) ಅವರು 2017 ಆಗಸ್ಟ್ ತಿಂಗಳ 28ರಂದು ಅಧಿಕಾರ ಸ್ವೀಕರಿಸಿದ್ದರು. ಹಾಲಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರು ಇದೇ 27ರಂದು ನಿವೃತ್ತರಾಗಿದ್ದಾರೆ.

ನೂತನ ಮುಖ್ಯ ನ್ಯಾಯಮೂರ್ತಿ

[ಬದಲಾಯಿಸಿ]

ಸುಪ್ರೀಂಕೋರ್ಟ್​​ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೋಗೊಯ್ ಅವರು ಬುಧವಾರ ಅ.3 ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ಅವರ ಅವಧಿ ಅ.2ಕ್ಕೆ ಮುಕ್ತಾಯಗೊಂಡಿತ್ತು. ದೀಪಕ್ ಮಿಶ್ರಾ ಅವರು 13 ತಿಂಗಳು ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನ್ಯಾ.ರಂಜನ್ ಗೋಗೊಯ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಅಸ್ಸಾಂ ರಾಜ್ಯದಿಂದ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೂ ರಂಜನ್ ಗೋಗೊಯ್ ಪಾತ್ರರಾದರು. ನ್ಯಾ.ಗೋಗೊಯ್ ಅವರ ಅಧಿಕಾರಾವಧಿ 2019 ನವೆಂಬರ್ 17ಕ್ಕೆ ಮುಕ್ತಾಯಗೊಂಡಿದೆ. ಒಟ್ಟು 13 ತಿಂಗಳು ಸುಪ್ರೀಂಕೋರ್ಟ್​ನ ಮುಖ್ಯನ್ಯಾಯಮೂರ್ತಿಯಾಗಿ ಗೋಗೊಯ್ ಕಾರ್ಯ ನಿರ್ವಹಿಸಿದ್ದಾರೆ.

  • 18 ನವಂ 2019 ರಂದು SA Bobde:ಎಸ್.ಎ.ಬೋಬ್ಡೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎಸ್​ಎ ಬೋಬ್ಡೆ ಪ್ರಮಾಣವಚನ ಸ್ವೀಕಾರ ... ರಂಜನ್ ಗೊಗೋಯ್ ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಮುಖ್ಯ ... ಶರದ್ ಅರವಿಂದ್ ಬೋಬ್ಡೆ ಸುಪ್ರೀಂಕೋರ್ಟ್​ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ.[]
  • ಭಾರತದ ಸರ್ವೋಚ್ಛ ನ್ಯಾಯಾಲಯ

ಹೆಚ್ಚಿನ ಓದಿಗೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಮುಖ್ಯ ನ್ಯಾಯಮೂರ್ತಿಯಾಗಿ ಖೇಹರ್‌ ಅಧಿಕಾರ ಸ್ವೀಕಾರ;ಪಿಟಿಐ;5 Jan, 2017". Archived from the original on 2017-01-05. Retrieved 2017-01-05.
  2. "18 ನವಂ 2019 ... SA Bobde: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ".


Gml