ಎರಡನೆಯ ಮೈಸೂರು ಯುದ್ಧ
ಎರಡನೆಯ ಮೈಸೂರು ಯುದ್ಧ | |||||||
---|---|---|---|---|---|---|---|
Part of ಆಂಗ್ಲ-ಮೈಸೂರು ಯುದ್ಧಗಳು | |||||||
ಯುದ್ಧದ ಮುಂಚೆ ದಕ್ಷಿಣ ಭಾರತದ ರಾಜ್ಯಗಳು | |||||||
| |||||||
ಕದನಕಾರರು | |||||||
ಮೈಸೂರು ಸಂಸ್ಥಾನ | ಬ್ರಿಟಿಷ್ ಸಾಮ್ರಾಜ್ಯ | ||||||
ಸೇನಾಧಿಪತಿಗಳು | |||||||
ಹೈದರ್ ಆಲಿ |
ಎರಡನೆಯ ಮೈಸೂರು ಯುದ್ಧ (1780-1784) ಮೈಸೂರು ಸಂಸ್ಥಾನಕ್ಕೂ ಬ್ರಿಟಷರಿಗೂ ನಡೆದ ಯುದ್ಧದ ಸರಣಿಯಲ್ಲಿ ಎರಡನೆಯದು. ಅಮೆರಿಕದಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿ ಹೋರಾಟದ ಫಲವಾಗಿ ಬ್ರಿಟಷರು ಮತ್ತು ಫ್ರೆಂಚರ ನಡುವೆ ನಡೆದ ಕದನದ ಸುಳಿಯಲ್ಲಿ ಫ್ರೆಂಚರ ಸ್ನೇಹದಲ್ಲಿದ್ದ ಮೈಸೂರು ಕೂಡಾ ಸಿಕ್ಕಿತು. ಆ ಕಾಲದಲ್ಲಿ ಮೈಸೂರನ್ನು ಆಳುತ್ತಿದ್ದವನು ( ರಾಜಾ ಎಂಬ ಗೌರವನಾಮ ಇಲ್ಲದಿದ್ದರೂ) ಹೈದರ್ ಆಲಿ. ಹಿಂದೊಮ್ಮೆ ಮರಾಠರ ವಿರುದ್ಧದ ಯುದ್ಧದಲ್ಲಿ ಬ್ರಿಟಿಷರ ವಿಶ್ವಾಸಘಾತುಕತನವನ್ನು ಕಂಡು ಕಿಡಿಕಿಡಿಯಾಗಿದ್ದ ಹೈದರ್ ಆಲಿ ಬ್ರಿಟಿಷರೊಂದಿಗೆ ಸೇಡು ತೀರಿಸಿಕೊಳ್ಳಲು , ಫ್ರೆಂಚರ ಸಹಾಯಕ್ಕೆ ಒಮ್ಮನಸ್ಸಿನಿಂದ ಧುಮುಕಿದ. ೧೭೭೮ರಲ್ಲಿ ಬ್ರಿಟನ್ ಮೇಲೆ ಯುದ್ಧ ಸಾರಿದಾಗ, ಈಗಾಗಲೇ ಮದರಾಸಿನಲ್ಲಿ ಬಲವಾಗಿ ಬೇರುಬಿಟ್ಟಿದ್ದ ಬ್ರಿಟೀಷರು ,ಫ್ರೆಂಚರನ್ನು ಭಾರತದಿಂದ ಓಡಿಸುವ ಪಣ ತೊಟ್ಟರು. ಮಲಬಾರ್ ತೀರದ ಮಾಹೆಯನ್ನು ಗೆದ್ದುಕೊಂಡ ಬ್ರಿಟೀಷರು , ಹೈದರ ಆಶ್ರಿತನೊಬ್ಬನ ಕೆಲ ಭೂಭಾಗಗಳನ್ನೂ ಸ್ವಾಧೀನಕ್ಕೆ ತೆಗೆದುಕೊಂಡರು. ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಹೈದರಾಲಿಯು , ಮರಾಠರು ತನ್ನಿಂದ ಕಿತ್ತುಕೊಂಡ ಪ್ರದೇಶಗಳನ್ನು ಮರುಪಡೆಯುವುದರಲ್ಲಿ ಯಶಸ್ವಿಯಾದನು. ಕೃಷ್ಣಾ ನದಿಯವರೆಗ ಹರಡಿದ್ದ ತನ್ನ ರಾಜ್ಯದಿಂದ , ಬೆಂಕಿ ಹೊತ್ತಿ ಉರಿಯುತ್ತಿದ್ದ ಗ್ರಾಮಗಳ ಮದ್ಯೆ , ಕಣಿವೆ, ಘಟ್ಟಗಳನ್ನು ಬಳಸಿಕೊಂಡು, ಮದರಾಸಿನಿಂದ ಕೇವಲ ೪೫ ಮೈಲಿ ( ೭೨ ಕಿ.ಮೀ) ದೂರದ ಕಾಂಜೀವರವನ್ನು ಒಂದಷ್ಟೂ ಪ್ರತಿರೋಧವಿಲ್ಲದೆ ತಲುಪಿದನು. ಮದರಾಸಿನ ಸೈಂಟ್ ಥಾಮಸ್ ಮೌಂಟಿನಲ್ಲಿ ೫೨೦೦ ಸೈನಿಕರೊಂದಿಗೆ ಬೀಡುಬಿಟ್ಟಿದ್ದ , ಸರ್ ಹೆಕ್ಟರ್ ಮನ್ರೋಗೆ ಬೆಂಕಿಯ ಜ್ವಾಲೆಗಳು ಕಾಣಿಸಿದ ನಂತರವೇ ಬ್ರಿಟೀಷರ ಪ್ರತಿಕ್ರಿಯೆಗೆ ಚಾಲನೆ ಸಿಕ್ಕಿತು. ಗುಂಟೂರಿಂದ ವಾಪಸು ಕರೆಸಿದ್ದ ಕರ್ನಲ್ ಬೈಲೀಯ ಕೈಕೆಳಗಿನ ಸಣ್ಣ ಸೈನ್ಯವನ್ನು ಹೈದರಾಲಿಯನ್ನು ಎದುರಿಸಲು ಕಳುಹಿಸಲಾಯಿತು. ಅಪ್ರತಿಮ ಧೈರ್ಯದಿಂದ ಕಾದಾಡಿದರೂ, ಬೈಲಿಯ ೨೮೦೦ ಜನರ ಸೇನೆ ಸಂಪೂರ್ಣ ಸೋಲಪ್ಪಿತು. ಆದಿನ ೧೭೮೦ರ ಸೆಪ್ಟೆಂಬರ್ ೧೦.
ಚಿತ್ತೂರಿನ ಪುನರ್ ಸ್ವಾಧೀನ
[ಬದಲಾಯಿಸಿ]ಹೈದರಾಲಿಯ ಹಿರಿಯ ಮಗ , ಟಿಪ್ಪು ಸುಲ್ತಾನನು ೧೭೬೯-೭೨ರಲ್ಲಿ ನಡೆದ ಮೈಸೂರು ಮರಾಠಾ ಯುದ್ಧದಲ್ಲಿ ಅತೀವ ಆಸಕ್ತಿ ತೋರಿದ್ದನು. ೧೭೭೨ರಲ್ಲಿ ಪೇಶ್ವೆ ಮಾಧವರಾಯನು ಅಳಿದ ಮೇಲೆ, ಮರಾಠರು ಹೈದರನಿಂದ ಕಿತ್ತುಕೊಂಡಿದ್ದ ಪ್ರದೇಶಗಳನ್ನು ಮತ್ತೆ ವಾಪಸು ಗಳಿಸಿಕೊಳ್ಳಲು , ಮೈಸೂರಿನ ಉತ್ತರ ಭಾಗಕ್ಕೆ ಟಿಪ್ಪುವನ್ನು ಕಳುಹಿಸಲಾಯಿತು. ಎರಡನೆಯ ಮೈಸೂರು ಯುದ್ಧದ ಸಮಯದಲ್ಲಿಯಾಗಲೇ ಯುದ್ಧನೀತಿಯಲ್ಲೂ, ಮುತ್ಸದ್ದಿತನದಲ್ಲಿಯೂ ಟಿಪ್ಪು ಬಹಳಷ್ಟು ಪರಿಣತಿ ಸಂಪಾದಿಸಿದ್ದ. ೧೭೮೦ರ ಸೆಪ್ಟೆಂಬರಿನ ಪೊಳಿಲೂರಿನ ಯುದ್ಧದಲ್ಲಿ ಕರ್ನಲ್ ಬೈಲಿಯ ಸೈನ್ಯವನ್ನು ಬಗ್ಗುಬಡಿದನು. ಬ್ರಿಟೀಷರು ಭಾರತದಲ್ಲಿ ಎದುರಿಸಿದ ಮೊಟ್ಟಮೊದಲ ಮತ್ತು ಗಂಭೀರ ಸೋಲು ಇದಾಗಿತ್ತು. ಸಂಪೂರ್ಣ ಬ್ರಿಟೀಷ್ ಸೇನೆ ಹತವಾಯಿತು ಅಥವಾ ಸೆರೆ ಸಿಕ್ಕಿತು. ಇದ್ದ ೮೬ ಸೇನಾಧಿಕಾರಿಗಳಲ್ಲಿ ೩೬ ಜನ ಸತ್ತರು. ಸೆರೆ ಸಿಕ್ಕ ೩೮೨೦ ಸೈನಿಕರಲ್ಲಿ ೫೦೮ ಯೂರೋಪಿಯನ್ನರಿದ್ದರು. ಕರ್ನಲ್ ಬೈಲೀ ಸ್ವತಃ ಸೆರೆಸಿಕ್ಕಿದ. ಇದರಿಂದ ಬ್ರಿಟೀಷರಲ್ಲಿ ಉಂಟಾದ ತಲ್ಲಣದ ಪರಿಣಾಮವಾಗಿ ಮದರಾಸಿನ ಬ್ಲಾಕ್ ಟೌನ್ ಅರ್ಧಕ್ಕರ್ಧ ಖಾಲಿಯಾಯಿತು. ಭಾರತದ ಮೂರು ಮಹಾರಾಜರು, ಮೊಘಲ್ ಚಕ್ರವರ್ತಿ ಶಾ ಅಲಂ, ಔಂಧಿನ ನವಾಬ ಶುಜಾ ಉದ್ದೌಲಾ ಮತ್ತು ಬಂಗಾಳದ ನವಾಬ ಮೀರ್ ಕಾಸೀಮರನ್ನು ಒಂದೇ ಯುದ್ಧದಲ್ಲಿ ಸೋಲಿಸಿದ್ದ , ಬಕ್ಸಾರ್ ಯುದ್ಧದ ವೀರ, ಸರ್ ಹೆಕ್ಟರ್ ಮನ್ರೋ ಟಿಪ್ಪುವಿನ ಎದುರು ಬರಲಿಲ್ಲ. ತನ್ನೆಲ್ಲ ಫಿರಂಗಿಗಳನ್ನು ಕಾಂಜೀವರಂನ ಕೆರೆಯಲ್ಲಿ ಎಸೆದು ಆತ ಮದರಾಸು ಬಿಟ್ಟು ಪರಾರಿಯಾದ. ೧೭೮೨ರ ಫೆಬ್ರುವರಿ ೧೮ರಂದು ಟಿಪ್ಪು ಕರ್ನಲ್ ಬ್ರೈತ್ ವೈಟನನ್ನು ತಂಜಾವೂರಿನ ಹತ್ತಿರದ ಅನ್ನಗುಡಿ ಎಂಬಲ್ಲಿ ಸೋಲಿಸಿದ.ಬ್ರಿಟೀಷ್ ಸೈನ್ಯದಲ್ಲಿ ೧೦೦ ಯೂರೋಪಿಯನ್ನರೂ, ೩೦೦ಅಶ್ವಸೈನಿಕರೂ, ೧೪೦೦ ಕಾಲಾಳುಗಳೂ ಮತ್ತು ೧೪ ಇತರ ಶಸ್ತ್ರಾಸ್ತ್ರಗಳೂ ಇದ್ದವು . ಎಲ್ಲಾ ಸೈನಿಕರನ್ನು ಸೆರೆ ಹಿಡಿದ ಟಿಪ್ಪು, ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡ. ಆಗ ಸಾಮಾನ್ಯವಾಗಿದ್ದ, ಕೆಲವೇ ನೂರು ಯೂರೋಪಿಯನ್ ಸೈನಿಕರ ತುಕಡಿಗಳು ಹೈದರ್ ಮತ್ತು ಟಿಪ್ಪು ಬರುವವರೆಗೆ ಭಾರತಲ್ಲಿ ವ್ಯಾಪಕ ಹಾನಿಯೆಸಗಿದ್ದವು. ೧೭೮೧ರ ಡಿಸೆಂಬರಿನಲ್ಲಿ ಟಿಪ್ಪು ಬ್ರಿಟೀಷರಿಂದ ಚಿತ್ತೂರನ್ನು ಯಶಸ್ವಿಯಾಗಿ ಗೆದ್ದುಕೊಂಡ. ಈ ಎಲ್ಲ ಯುದ್ಧಗಳಿಂದ , ಡಿಸೆಂಬರಿ ೧೭೮೨ರಲ್ಲಿ ಹೈದರ್ ಕೊನೆಯುಸಿರೆಳೆಯುವ ವೇಳೆಗಾಗಲೇ ಟಿಪ್ಪು ಸಾಕಷ್ಟು ಯುದ್ಧಾನುಭವ ಗಳಿಸಿಕೊಂಡಿದ್ದ.
ಮಂಗಳೂರಿನ ಒಪ್ಪಂದ
[ಬದಲಾಯಿಸಿ]ಮಂಗಳೂರಿನ ಒಪ್ಪಂದದೊಂದಿಗೆ ಎರಡನೆರಯ ಮೈಸೂರು ಯುದ್ಧ ಕೊನೆಗೊಂಡಿತು. ಭಾರತದ ಇತಿಹಾಸದಲ್ಲಿ ಇದೊಂದು ಮುಖ್ಯ ದಾಖಲೆ. ಭಾರತದ ವ್ಯಕ್ತಿಯೊಬ್ಬ ಬ್ರಿಟಿಷರಿಗೆ ಪಾಠ ಕಲಿಸಿ, ಅವರನ್ನು ದೀನ ಸ್ಥಿತಿಗೆ ತಂದದ್ದು ಇದೇ ಕೊನೆಯ ಬಾರಿಯಾಗಿತ್ತು. ವಾರನ್ ಹೇಸ್ಟಿಂಗ್ಸ್ ಇದನ್ನು ಅವಮಾನಕಾರೀ ಶಾಂತಿಸ್ಥಾಪನೆ ಎಂದು ಕರೆದು, ”ಬ್ರಿಟೀಷ್ ದೇಶದ ವಿಶ್ವಾಸ ಮತ್ತು ಗೌರವವನ್ನು ಭಂಗಿಸಿದ” ಮದರಾಸು ಸರಕಾರಕ್ಕೆ ತಕ್ಕ ಶಿಕ್ಷೆ ನೀಡುವಂತೆ ಬಬ್ರಿಟನ್ನಿನ ರಾಜನಿಗೂ, ಪಾರ್ಲಿಮೆಂಟಿಗೂ ಆಗ್ರಹಿಸಿದ. ಈ ಸೋಲಿನಿಂದ ಮುಖಭಂಗಿತರಾದ ಬ್ರಿಟೀಷರು ಅಂದಿನಿಂದಲೇ ಅಂದರೆ ೧೭೮೪ರ ಮಾರ್ಚ್ ೧೧ ರಿಂದ ಟಿಪ್ಪುವಿನ ಶಕ್ತಿಹರಣಕ್ಕೆ ತೀವ್ರ ಪ್ರಯತ್ನ ನಡೆಸಿದರು. ಮಂಗಳೂರಿನ ಒಪ್ಪಂದ ಟಿಪ್ಪುವಿನ ಮುತ್ಸದ್ದಿನತನಕ್ಕೆ ಸಾಕ್ಷಿಯಾಗಿದೆ.ದೀರ್ಘ ಯುದ್ಧವನ್ನು ಯಶಸ್ವಿಯಾಗಿ ಮುಗಿಸಿದ್ದಷ್ಟೇ ಅಲ್ಲ, ಉತ್ತರದ ಪ್ರದೇಶಗಳ ಮೇಲೆ ಕಣ್ಣಿಟ್ಟಿದ್ದ ಮರಾಠರ ಪ್ರಯತ್ನಗಳನ್ನೂ ಅವನು ವಿಫಲಗೊಳಿಸಿದನು.[೧] [೨]
ನೋಡಿ
[ಬದಲಾಯಿಸಿ]- ಒಂದನೆಯ ಮೈಸೂರು ಯುದ್ಧ |
- ಎರಡನೆಯ ಮೈಸೂರು ಯುದ್ಧ |
- ಮೂರನೇ ಮೈಸೂರು ಯುದ್ಧ |
- ನಾಲ್ಕನೆಯ ಮೈಸೂರು ಯುದ್ಧ |
- ಟಿಪ್ಪು ಸುಲ್ತಾನ್ |
- ಲಾರ್ಡ್ ಕಾರ್ನ್ವಾಲಿಸ್
ಉಲ್ಲೇಖ
[ಬದಲಾಯಿಸಿ]