ಟಿ.ಎಸ್.ರಾಮಚಂದ್ರರಾವ್
ಗೋಚರ
ಟಿ.ಎಸ್.ರಾಮಚಂದ್ರರಾವ್ ಇವರು ೧೯೨೨ರಲ್ಲಿ ಜನಿಸಿದರು. ಇವರ ತಂದೆ ತೀರ್ಥಹಳ್ಳಿ ಸೂರ್ಯನಾರಾಯಣ ರಾಮಚಂದ್ರರಾವ್; ತಾಯಿ ಬನಶಂಕರಮ್ಮ. ಇವರ ಪತ್ನಿ ಲಲಿತಾ ಸಂಸ್ಕೃತ ಪ್ರಾಧ್ಯಾಪಕಿಯಾಗಿದ್ದರು. ಜನಪ್ರಿಯ ಲೇಖಕಿ ಎಂ.ಕೆ.ಇಂದಿರಾ ಇವರ ಸೋದರಿ.
ಪತ್ರಿಕೋದ್ಯಮ ವಲಯದಲ್ಲಿ
[ಬದಲಾಯಿಸಿ]ಟಿ.ಎಸ್.ರಾಮಚಂದ್ರರಾವ್ ಮೊದಲು ಕೊರವಂಜಿ ಮಾಸಪತ್ರಿಕೆಗೆ ಲೇಖನ ಬರೆಯುತ್ತಿದ್ದರು. ‘ಮಧುವನ’ ಹಾಗು ‘ಮೂನ್‍ಲೈಟ್’ ಎನ್ನುವ ಪತ್ರಿಕೆಗಳನ್ನೂ ನಡೆಯಿಸುತ್ತಿದ್ದರು. ತರುವಾಯ ೧೯೪೮ರಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಸೇರಿ, ಅದರ ಸಂಪಾದಕರಾದರು. ಪ್ರಜಾವಾಣಿಯನ್ನು ಕನ್ನಡದ ಒಂದು ಅತ್ಯುತ್ತಮ ಹಾಗು ಜನಪ್ರಿಯ ಪತ್ರಿಕೆಯನ್ನಾಗಿ ಮಾಡಿದ ಶ್ರೇಯಸ್ಸು ಇವರದು. ಪ್ರಜಾವಾಣಿಯಲ್ಲಿ ದಿನನಿತ್ಯ ಬರೆಯುತ್ತಿದ್ದ ‘ಛೂಬಾಣ’ ಇವರ ಹಾಸ್ಯಲೇಪನದ ಚುಚ್ಚುಬಾಣವಾಗಿ ಅತ್ಯಂತ ಜನಪ್ರಿಯ ಅಂಕಣವಾಗಿತ್ತು.
ಕೃತಿಗಳು
[ಬದಲಾಯಿಸಿ]ಇವರ ಕೃತಿ ‘ಲೇಡಿ ಡಾಕ್ಟರ್’ (ಪ್ರಹಸನ) ಜನಪ್ರಿಯ ಕೃತಿಯಾಗಿತ್ತು.
ನಿಧನ
[ಬದಲಾಯಿಸಿ]ಟಿ.ಎಸ್.ರಾಮಚಂದ್ರರಾವ್ ೧೯೭೭ರಲ್ಲಿ ನಿಧನರಾದರು.