ವಿಷಯಕ್ಕೆ ಹೋಗು

ಹಿರೇಮಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿರೇಮಗಳೂರು
Hiremagaluru
ಹಳ್ಳಿ
ದೇಶ India
ರಾಜ್ಯಕರ್ನಾಟಕ
ಜಿಲ್ಲೆಚಿಕ್ಕಮಗಳೂರು
ಭಾಷೆಗಳು
 • Officialಕನ್ನಡ
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)

ಹಿರೇಮಗಳೂರು, ಚಿಕ್ಕಮಗಳೂರಿನ ಹೊರ ವ್ಯಾಪ್ತಿಯಲ್ಲಿರುವ ಒಂದು ಚಿಕ್ಕ ಹಳ್ಳಿ. ಸಖರಾಯ ಮಹಾರಾಜರು ತಮ್ಮ ಹೆಣ್ಣು ಮಕ್ಕಳ ಮದುವೆಯ ವೇಳೆ ವರದಕ್ಷಿಣೆಯಾಗಿ ನೀಡಿದ ಎರಡು ಹಳ್ಳಿಗಳಲ್ಲಿ ಇದೂ ಒಂದು. ಹಿರೇಮಗಳೂರು ಶಬ್ದವು ಹಿರೇ-ಹಿರಿಯ ಹಾಗು ಮಗಳು (ಹಿರೇ+ಮಗಳೂರು) ಪದಗಳಿಂದ ಬಂದಿದೆ. ವರದಕ್ಷಿಣೆಯಾಗಿ ನೀಡಿದ ಇನ್ನೋಂದು ಊರು ಚಿಕ್ಕಮಗಳೂರು (ಚಿಕ್ಕ+ಮಗಳೂರು).

ಹಿರೇಮಗಳೂರಿನಲ್ಲಿ ಕೋದಂಡ ರಾಮ ದೇವಾಲಯವಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಿರೇಮಗಳೂರು ಕಣ್ಣನ್ ಅವರು ಈ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ದೇವಾಲಯದ ವಿಶೇಷತೆ ಏನೆಂದರೆ , ಇಲ್ಲಿಯ ದೇವರಿಗೆ ಕನ್ನಡ ಮಂತ್ರಗಳ ಮೂಲಕ ಪೂಜೆ ಸಲ್ಲಿಸಲಾಗುತ್ತದೆ.