ವಿಷಯಕ್ಕೆ ಹೋಗು

ದೊಡ್ಡೇರಿ ವೆಂಕಟಗಿರಿ ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

[ಬದಲಾಯಿಸಿ]

ದೊಡ್ಡೇರಿ ವೆಂಕಟಗಿರಿರಾವ್ ಇವರು ಶಿವಮೊಗ್ಗಾ ಜಿಲ್ಲೆಯ ಕೆಳದಿಯಲ್ಲಿ ೧೯೧೩ ಡಿಸೆಂಬರ ೨೮ರಂದು ಜನಿಸಿದರು .ಇವರ ತಂದೆ ತಿಮ್ಮಪ್ಪ ; ತಾಯಿ ರುಕ್ಮಿಣಿ. ದೊಡ್ಡೇರಿ ವೆಂಕಟಗಿರಿರಾವ್ ವೃತ್ತಿಯಲ್ಲಿ ವೈದ್ಯರಾದಂತೆ , ಚಿತ್ರಗ್ರಹಣ ಪ್ರವೀಣರೂ ಆಗಿದ್ದರು. ಇವರು ಅಖಿಲ ಭಾರತ ಫೋಟೋಗ್ರಾಫಿ ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು. ಇವರ ಎರಡು ಕಾದಂಬರಿಗಳು, “ಸಂಪ್ರದಾನ” , “ದೃಷ್ಟಿದಾನ” ಇವು ಕನ್ನಡ ವಾರಪತ್ರಿಕೆ ಸುಧಾದಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಜನಪ್ರಿಯ ಕಾದಂಬರಿಗಳು.

ಜನನ/ಜೀವನ

[ಬದಲಾಯಿಸಿ]

ಡಾ. ಡಿ.ವಿ.ರಾವ್ ಅವರದು ವಿಶಿಷ್ಟ ವೈವಿಧ್ಯಮಯ ಬದುಕು. ವೈದ್ಯಕೀಯ, ವ್ಯವಸಾಯ , ಛಾಯಾಗ್ರಹಣ, ಸಾಹಿತ್ಯ, ಲೈಂಗಿಕ ಮನೋವಜ್ಞಾನ, ಹೀಗೆ ಹಲವು ಹವ್ಯಾಸವುಳ್ಳವರು. ಮೂಲ ಊರು ಸೊರಬ ತಾಲ್ಲೂಕು ದೊಡ್ಡೇರಿ ಎಂಬ ಹಳ್ಳಿ. ಅವರ ತಾಯಿ ರುಕ್ಮಿಣಿಯ ಸೋದರ ಕೆಳದಿಯ ನಾಡಿಗ ಲಕ್ಷ್ಮಿನಾರಾಯಣ ಇವರ ಮನೆಯಲ್ಲಿ ೨೮-೧೨- ೧೯೧೩ರಲ್ಲಿ ಜನನ. ತಂದೆ ತಿಮ್ಮಪ್ಪ. ಸಾಗರದ ಪುರಸಭೆಯ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ. ಆಗಲೇ ಪದ್ಯ ಕಥೆ ಬರೆಯುತ್ತಿದ್ದರು. ಅವರ ಗುರು ಪಂಡಿತ ಅಳಸಿಂಗಾಚಾರ್ಯರು ಇವರನ್ನು ಪ್ರೋತ್ಸಾಹಿಸಿದರು. ದೇವುಡು ನರಸಿಂಹ ಶಾಸ್ತ್ರಿಗಳ ಮಕ್ಕಳ ಪುಸ್ತಕ ಪತ್ರಿಕೆಯಲ್ಲಿ ಇವರ ಅನೇಕ ಕಥೆ, ಕವನಗಳು ಪ್ರಕಟವಾಯಿತು.

ಹೆಚ್ಚಿನ ವಿದ್ಯಾಭ್ಯಾಸ ಮತ್ತು ಉದ್ಯೋಗ

[ಬದಲಾಯಿಸಿ]

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ನಂತರ ರಾಯಚೂರು ಜಿಲ್ಲೆಯ ಪಂಡಿತ ತಾರಾನಾಥರ ಪ್ರೇಮ ವಿದ್ಯಾ ಪೀಠದಲ್ಲಿ ಅಧ್ಯಯನ ಮಾಡಿ ಆಯುರ್ವೇದ ಶಿರೋಮಣಿ ಡಿಪ್ಲೋಮ ಪದವಿಗಳಿಸಿ ೧೯೩೮ ರಲ್ಲಿ ಸಾಗರದಲ್ಲಿ ವ್ಶೆದ್ಯ ವೃತ್ತಿ ಆರಂಭಿ ಸಿದರು. ಕೊಡಗಿನ ಗಣಪಯ್ಯನವರ ಮಗಳು ಸಾವಿತ್ರಮ್ಮ ಅವರನ್ನು ವಿವಾಹವಾದರು. ಮುಂದೆ ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ೩೨ ವರ್ಷ ವ್ಶೆದ್ಯ ವೃತ್ತಿ ಯಲ್ಲಿ ದುಡಿದರು. ಅವರಿಗೆ ಮೂರುಜನ ಗಂಡುಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು.

ಮರಳಿ ಹಳ್ಳಿಗೆ

[ಬದಲಾಯಿಸಿ]

ವ್ಶೆದ್ಯ ವೃತ್ತಿಗೆ ವಿದಾಯ ಹೇಳಿ ತಮ್ಮ ಸ್ವಂತ ಊರಾದ ಸಾಗರದ ಹತ್ತಿರದ ಸೊರಬ ತಾಲ್ಲೂಕಿನ ಬಿ.ದೊಡ್ಡೇರಿಗೆ ಬಂದು ನೆಲಸಿ ಅಡಿಕೆ ತೋಟದ ವ್ಯವಸಾಯ ವೃತ್ತಿಯಲ್ಲಿ ತೊಡಗಿದರು. ಕೆಲವು ಮಕ್ಕಳ ಖಾಹಿಲೆಗೆ ವೈದ್ಯಕೀಯ ಸಲಹೆಯನ್ನೂ ಕೊಡುತ್ತಿದ್ದರು.

ಹವ್ಯಾಸ :

[ಬದಲಾಯಿಸಿ]

ಛಾಯಾಗ್ರಹಣ ಮತ್ತು ಸಾಹಿತ್ಯ ಇವರ ಮುಖ್ಯ ಹವ್ಯಾಸ. ಛಾಯಾಗ್ರಹಣದಲ್ಲಿ ಹಲವಾರು ರಾಷ್ಟೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಸಿದ್ದಾರೆ. ಛಾಯಾಗ್ರಹಣ ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ. ಹೊಸಬರಿಗೆ ಮಾರ್ಗದರ್ಶನ ನೀಡಿದ್ದಾರೆ. ಆಧುನಿಕ ಛಾಯಾ ಚಿತ್ರಕಲೆ, ಅವರ ಮಹತ್ವದ ಕೃತಿ.

ಸಾಹಿತ್ಯ ಸಾಧನೆ

[ಬದಲಾಯಿಸಿ]
  • ಇವರು ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಒಂದು ಮಕ್ಕಳ ಕವನ ಸಂಗ್ರಹ ಪ್ರಕಟವಾಗಿದೆ., ಇವರು ಮೊದಲಿಗೆ "ಕಲಾಕುಮಾರ" ಎಂಬ ಕಾವ್ಯನಾಮದಲ್ಲಿ ಕವನ ಕಥೆಗಳನ್ನು ಬರೆಯುತ್ತಿದ್ದರು. ಅವರ "ಸಂಪ್ರದಾನ" , "ದೃಷ್ಟಿದಾನ", "ಅವದಾನ", ಗಳು ಜನಪ್ರಿಯ ಕಾದಂಬರಿಗಳು. ಪುಟ್ಟಣ್ಣ ಕಣಗಾಲ ತಯಾರಿಸಿದ "ಅಮೃತ ಘಳಿಗೆ", ಇವರ ಕಾದಂಬರಿ ಆಧಾರಿತವಾದದ್ದು. "ತುಂಬಿದ ಕೊಡ", ಇವರ ಕಥಾಸಂಕಲನ. "ಮುಕ್ತಾ" ಇವರ ಇನ್ನೊಂದು ಜನಪ್ರಿಯ ಕಾದಂಬರಿ.
  • ಇವರು ಲೈಂಗಿಕ ಮನೋವಿಜ್ಞಾನದ ವಿಷಯವಾಗಿ "ವಿಕೃತ ಕಾಮ", ಎಂಬ ಕೃತಿಯನ್ನು ರಚಿದುದಲ್ಲದೆ "ದಾಂಪತ್ಯ ವಿಜ್ಞಾನ" ಎಂಬ ಮಾಸಪತ್ರಿಕೆಯನ್ನು ಕೆಲವುವರ್ಷ ಇವರ ಸಂಪಾದಕತ್ವದಲ್ಲಿ ನೆಡಸಿದರು. ಮುಂದೆ ಅದು ನಷ್ಟವನ್ನು ಅನುಭವಿಸಿದ್ದರಿಂದ ನಿಲ್ಲಿಸಬೇಕಾಯಿತು. ಅವಧಾನ - ಈ ಕಾದಂಬರಿಯು ಅಮೃತ ಘಳಿಗೆ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಅದಕ್ಕೆ ಮೊದಲು ಸುಧಾ - ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಸಾರವಾಗಿತ್ತು.
  • ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಡಿ.ವಿ.ರಾವ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ೧೯೮೧ ರಲ್ಲಿ "ರಾಜ್ಯೋತ್ಸವ ಪ್ರಶಸ್ತಿ", ನೀಡಿ ಗೌರವಿಸಿದೆ. ಇವರು ಬೆಂಗಳೂರಿನಲ್ಲಿ ರುವ "ಅಖಿಲ ಹವ್ಯಕ ಮಹಾಸಭೆ"ಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಇವರು ಅವರ ೯೧ ನೇ ವರ್ಷದಲ್ಲಿ. ದಿನಾಂಕ ೨೬-೫- ೨೦೦೪ರಲ್ಲಿ ನಮ್ಮನ್ನು ಅಗಲಿದರು. ಇವರ ಕೆಲವು ಕೃತಿಗಳು ಇಂತಿವೆ:

ಕೃತಿಗಳು

[ಬದಲಾಯಿಸಿ]

ಕವನ ಸಂಕಲನ

[ಬದಲಾಯಿಸಿ]
  • ರೋಹಿಣಿ

ಕಥಾ ಸಂಕಲನ

[ಬದಲಾಯಿಸಿ]
  • ತುಂಬಿದ ಕೊಡ

ಕಾದಂಬರಿ

[ಬದಲಾಯಿಸಿ]
  1. ಅತ್ತಿಯ ಹೂವು
  2. ದೃಷ್ಟಿದಾನ
  3. ಸಂಪ್ರದಾನ
  4. ಇಷ್ಟಕಾಮ್ಯ
  5. ಅವಧಾನ - ಈ ಕಾದಂಬರಿಯು ಅಮೃತ ಘಳಿಗೆ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಅದಕ್ಕೆ ಮೊದಲು ಸುಧಾ - ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಸಾರವಾಗಿತ್ತು.

ವೈಜ್ಞಾನಿಕ

[ಬದಲಾಯಿಸಿ]
  • ಸಂತಾನ ಸಂಯಮ
  • ಪ್ರಸವ ಜ್ಞಾನ

ಬಾಲ ಸಾಹಿತ್ಯ

[ಬದಲಾಯಿಸಿ]
  • ಕಂದನ ಹಾಡುಗಳು
  • ದಾಳಿಂಬೆ ಚೆಲುವೆ