ವಿಷಯಕ್ಕೆ ಹೋಗು

ಚರ್ಚೆಪುಟ:ರಷ್ಯಾ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಿಯಾದ spelling ಯೇನು?

[ಬದಲಾಯಿಸಿ]

ರಶ್ಯ, ರಷ್ಯ, ರಶ್ಯಾ, ರಷ್ಯಾ ಅಥವ ರಶ್ಶಿಯ ಈ ಲೇಖನದ ಹೆಸರಿನಂತೆಯೇ ಇವೆ. ಯಾವುದಕ್ಕೆ ಯಾವುದು ರೀಡೈರೆಕ್ಟ್ ಪಡೆಯಬೇಕು? ನನಗೆ ರಷ್ಯಾ ಸರಿಯೆನಿಸುತ್ತದೆ. ಶುಶ್ರುತ \ಮಾತು\ಕತೆ ೦೯:೨೨, ೧೦ September ೨೦೦೬ (UTC)

ಇಂಗ್ಲಿಷ್ ಸ್ಪೆಲಿಂಗ್ Russia ಎಂದು ಇದೆ. ಇದರ ಸಮಾನಧ್ವನಿ ರಶ್ಶಿಯಾ ಎಂದಾಗುವದು.ಕನ್ನಡಿಗರು ರಶಿಯಾ ಎಂದು ಉಚ್ಚರಿಸಿದರೆ ಹಾಗೂ ಅದೇ ರೀತಿ ಬರೆದರೆ ತಪ್ಪೇನಿಲ್ಲ. ಅಲ್ಲವೆ?--Sunaath ೦೯:೩೫, ೧೦ September ೨೦೦೬ (UTC)sunaath
ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ರಷ್ಯಾ ಎಂದು ಬಳಸುತ್ತಾರೆ. ಅದ್ದರಿಂದ ಈ ಹೆಸರಿನ ಲೇಖನವನ್ನು ಉಳಿಸಿಕೊಂಡು, ಉಳಿದ ಲೇಖನಗಳನ್ನು ಇದಕ್ಕೆ ರೀಡೈರೆಕ್ಟ್ ಮಾಡಬಹುದು ಎನ್ನುವುದು ನನ್ನ ಅಭಿಪ್ರಾಯ. Naveenbm ೦೯:೪೯, ೧೦ September ೨೦೦೬ (UTC) ನವೀನ್
ನವೀನ್ ಅವರ ಅಭಿಪ್ರಾಯ ನನ್ನದೂ ಕೂಡ. 'ರಷ್ಯಾ' ಎಂಬುದು ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ, ಅಂತರಜಾಲ ಕನ್ನಡ ತಾಣಗಳಲ್ಲಿ ಬಳಕೆಯಲ್ಲಿರುವ ಪದ. ಈ ಹೆಸರಿನ ಲೇಖನವನ್ನು ಅಂತಿಮವಾಗಿಟ್ಟುಕೊಂಡು, ಉಳಿದ ಹೆಸರುಗಳಿಂದ (ರಶ್ಯ, ರಷ್ಯ, ರಶ್ಯಾ, ರಶ್ಶಿಯ, ರಶಿಯ) 'ರಷ್ಯಾ' ಲೇಖನಕ್ಕೆ ರೀಡೈರೆಕ್ಟ್ ಕೊಡುವುದು ಸೂಕ್ತ. - ಮನ|Mana Talk - Contribs ೧೪:೪೦, ೧೦ September ೨೦೦೬ (UTC)

ಅಂತರಾಷ್ಟ್ರೀಯ ಧ್ವನಿ ಆಧಾರಿತ ಅಕ್ಷರಗಳಲ್ಲಿ ಇದು ಆಂಗ್ಲದಲ್ಲಿ [ˈrʌʃə] ಎಂದು ಹಾಗು ರಶ್ಯನ್/ರಷ್ಯನ್ ಭಾಷೆಯಲ್ಲಿ [rʌ'sʲi.jə] ಎಂದು ಲಿಖಿತವಾಗಿದೆ. ನನ್ನ interpretation ಪ್ರಕಾರ ಇವು respectively [ರಶ್ಯ] ಮತ್ತು [ರ'ಸ್ಯ್‍ಇ.ಯ] ಎಂದು ಆಗುತ್ತದೆ. ಆದರೆ ನವೀನ್ ಮತ್ತು ಮನ ರವರ ಪ್ರಕಾರ ಮಾಧ್ಯಮಗಳಲ್ಲಿ ರಷ್ಯಾ ಎಂದು ಉಪಯೋಗವಾಗುವುದರಿಂದ ಅದನ್ನೆ ಬಳಸೋಣ (anglicization ರೀತಿ kannadafication?). ಅದೇ ರೀತಿ ಪುಟಗಳನ್ನು organize ಮಾಡುವೆ. ಶುಶ್ರುತ \ಮಾತು \ಕತೆ ೦೫:೩೬, ೧೩ September ೨೦೦೬ (UTC)