ಮಲೇಬೆನ್ನೂರು
malebennur is famous for rice
[ಬದಲಾಯಿಸಿ]- ಮಲೇಬೆನ್ನೂರು- ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಒಂದು ಮುಖ್ಯ ಊರು. ಇದು ಒಂದು ಹೋಬಳಿಯಾಗಿದ್ದು ಹರಿಹರ ತಾಲೂಕಿನ ಪ್ರಮುಖ ಊರಾಗಿದೆ.
ಭೂಗೋಳ
[ಬದಲಾಯಿಸಿ]ಹರಿಹರದಿಂದ ಶಿವಮೊಗ್ಗ ಹೋಗುವ ರಸ್ತೆಯಲ್ಲಿ ಇರುವ ಈ ಸ್ಥಳವು ಹರಿಹರದಿಂದ ೧೭ ಕಿಲೋಮೀಟರ್ ದೂರದಲ್ಲಿದೆ. ಇದು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆ ಸೀಮಾರೇಖೆ ಹತ್ತಿರವಿದ್ದು, ಮಲೆನಾಡಿಗೆ ಬೆನ್ನು ಮಾಡಿರುವುದರಿಂದ ಮಲೇಬೆನ್ನೂರು ಎಂಬ ಹೆಸರು ಬಂದಿದೆ.
ಪ್ರಾದೇಶಿಕ
[ಬದಲಾಯಿಸಿ]ಮಲೇಬೆನ್ನೂರು ಪ್ರಾಂತ್ಯವು ಭದ್ರಾ ಎಡ ನಾಲಾ ನೀರಾವರಿ ಯೋಜನೆಯಿಂದ ಲಾಭ ಪಡೆದಿದೆ. ಈ ನೀರಾವರಿ ಯೋಜನೆಯಿಂದಾಗಿ ಇಲ್ಲಿ ಜನರ ಮುಖ್ಯ ಕಸುಬು ವ್ಯವಸಾಯವಾಗಿದೆ. ಇಲ್ಲಿ ಭತ್ತ ಹಾಗೂ ಕಬ್ಬನ್ನು ಬೆಳೆಯಲಾಗುತ್ತದೆ. ಇಲ್ಲಿ ಸುಮಾರು ೨೦ ಅಕ್ಕಿ ಗಿರಣಿಗಳಿದ್ದು, ಇಲ್ಲಿನ ಅಕ್ಕಿ ಕರ್ನಾಟಕದಾದ್ಯಂತ ರಫ್ತಾಗುತ್ತದೆ ಹಾಗು ಸುತ್ತಲಿನ ಸುಮಾರು ೧೫ ಹಳ್ಳಿಗಳಿಗೆ ಮಲೇಬೆನ್ನೂರು ವಾಣಿಜ್ಯ ಕೇಂದ್ರವಾಗಿದೆ. ೩ ಚಲನಚಿತ್ರ ಮಂದಿರಗಳು, ಸರ್ಕಾರಿ ಆಸ್ಪತ್ರೆ, ಕಾಲೇಜು, ಬ್ಯಾಂಕು, ಇ-ಗ್ರಾಮ ಸೌಲಭ್ಯಗಳಿವೆ. ಇತಿಹಾಸ ಪ್ರಸಿದ್ದ ಕೊಮಾರನಹಳ್ಳಿಯ ರಂಗನಾಥ ಸ್ವಾಮಿಯ ದೇವಸ್ಥಾನವು ಮಲೇಬೆನ್ನೂರಿನಿಂದ ಕೇವಲ ೨ ಕಿಲೋಮೀಟರ್ ದೂರದಲ್ಲಿದೆ. ಅಲ್ಲದೆ, ಹೆಳವನಕಟ್ಟೆ ಗಿರಿಯಮ್ಮ ಮದುವೆ ಆಗಿ ಉಳಿದದ್ದು ಇಲ್ಲೆ. ತರಾಸು ಅವರ ತಾಯಿಯ ತವರು ಮನೆ ಕೂಡ ಇದಾಗಿದ್ದು, ತರಾಸು ಅವರ ಜನ್ಮ ಆಗಿದ್ದೂ ಮಲೇಬೆನ್ನೂರಿನಲ್ಲೆ.