ವಿಷಯಕ್ಕೆ ಹೋಗು

ಚರ್ಚೆಪುಟ:ಆಪರೇಷನ್ ಡೈಮಂಡ್ ರ್ಯಾಕೆಟ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರ್ಯಾಕೆಟ್ ಯಾಕೆ? Sritri

ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ. ರಾಕೆಟ್ ಪದ ಏಕೆ ತೆಗೆದಿರಿ ಎಂಬ ಅರ್ಥದಲ್ಲಿ ಪ್ರಶ್ನೆ ಕೇಳಿದ್ದರೆ, ಉತ್ತರ: ಚಿತ್ರದ ಹೆಸರಿನಲ್ಲಿ ರ್ಯಾಕೆಟ್ (Racket) ಎಂದೇ ಇರುವುದು. ರಾಕೆಟ್(Rocket) ಎಂದಲ್ಲ. ಇದೀಗ ಈ ಚಲನಚಿತ್ರದಿಂದ ಸೆರೆಹಿಡಿದ ಟೈಟಲ್ ಗಳನ್ನು ಹಾಕಿರುವೆ. - ಮನ|Mana Talk - Contribs ೦೧:೦೬, ೨೨ July ೨೦೦೬ (UTC)
rAkeT ಬದಲು ryAkeT ಬಳಸುವುದೇನೋ ಸರಿ, ಆದರೆ rya ಅಕ್ಷರ 'ರ'ಗೆ 'ಯ' ಒತ್ತಾಗಿ ಕಾಣಿಸಿಕೊಳ್ಳದೇ ಅರ್ಕಾ ಒತ್ತಿನಂತೆ ಕಾಣಿಸುತ್ತಿದೆ. ಲಿನಕ್ಸಿನಲ್ಲಿ, ಮ್ಯಾಕಿನಲ್ಲಿ ಸರಿಯಾಗಿ ಕಾಣಿಸಬಹುದೇನೋ ತಿಳಿಯದು. ಆದ್ದರಿಂದ ಸದ್ಯಕ್ಕೆ ರ್ಯಾಕೆಟ್ ಬಳಕೆಯೂ ವಿಚಿತ್ರವಾಗೇ ಕಾಣುತ್ತಿದೆ. ಹೀಗೆಯೇ ಮೂ (mU), ಯೂ (yU) ಅಕ್ಷರಗಳೂ ಕೂಡ. -ಹಂಸವಾಣಿದಾಸ ೦೪:೦೭, ೯ ಆಗಸ್ಟ್ ೨೦೦೬ (UTC)
ಕನ್ನಡದಲ್ಲಿ ಮೊದಲ ಅಕ್ಷರದಲ್ಲೇ ಅರ್ಕಾವತ್ತು ಇರುವ ಪದಗಳು ಇರುವುದು ಅಪರೂಪ ಅಥವಾ ಇಲ್ಲವೇ ಇಲ್ಲ. ಆದ್ದರಿಂದ ವಿಚಿತ್ರವಾಗಿ ಕಂಡಿರಬಹುದು. ರ್ಯಾಂಕ್ (Rank), ರ್ಯಾಪಿಡ್ (Rapid), ರ್ಯಾಷನಲ್ (Rational) ಇತ್ಯಾದಿ ಪದಗಳಲ್ಲಿ ಹೀಗೆ ಮೊದಲ ಅಕ್ಷರದಲ್ಲೇ ಅರ್ಕಾವತ್ತು ಬರುತ್ತದೆ. ಕನ್ನಡ ಬರವಣಿಗೆಗಳಲ್ಲಿ ಈ ಪದಗಳು ಹೆಚ್ಚು ಹೆಚ್ಚು ಬಳಕೆಗೆ ಬಂದಲ್ಲಿ, ಜನರಿಗೆ ರೂಢಿಯಾಗಬಹುದು.
ಮೂ, ಯೂ ಅಕ್ಷರಗಳು Arial MS Unicode ಫಾಂಟಿನಲ್ಲಿ ಸರಿಯಾಗಿ ಕಾಣುತ್ತದೆ. Windows XP ಉಪಯೋಗಿಸುವ ತುಂಗಾ ಫಾಂಟಿನಲ್ಲಿ ಈ ಸಮಸ್ಯೆ ಇತ್ತು. ಇತ್ತೀಚಿಗೆ ಬಿಡುಗಡೆ ಮಾಡುತ್ತಿರುವ Win XP OSಗಳಲ್ಲಿ ಈ ಸಮಸ್ಯೆ ನಿವಾರಣೆಯಾಗಿದೆ ಎಂದು ಬಳಕೆದಾರರು ತಿಳಿಸಿದ್ದಾರೆ.
ಈ ಎಲ್ಲ issueಗಳ ಬಗ್ಗೆ, ಶೇಷಾದ್ರಿ ವಾಸು ಅವರು ಒಂದು ಲೇಖನ ಬರೆದಿದ್ದಾರೆ. http://www.baraha.com/web_docs/unicode_issues.htm
- ಮನ|Mana Talk - Contribs ೦೪:೪೪, ೯ ಆಗಸ್ಟ್ ೨೦೦೬ (UTC)
ಬರಹದಲ್ಲಿ ಬಹುಶಃ rya ಬರೆಯಬಹುದು ಎಂದು ಕಾಣುತ್ತದೆ. ಒಮ್ಮೆ ನೋಡಿ ತಿಳಿಸುವಿರಾ? (ಇನ್ನೈದು ದಿನ ನಾನು ವಿಂಡೋಸ್ ಎಕ್ಸ್ ಪಿಗೆ ರಿಬೂಟ್ ಆಗೋದು ಡೌಟು) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೬:೨೮, ೯ ಆಗಸ್ಟ್ ೨೦೦೬ (UTC)
ಹೌದು. ಬರಹದಲ್ಲಿ ಬರೆಯಬಹುದು. rya = 'ಯ' ಗೆ ಅರ್ಕಾವತ್ತು. Rya = 'ರ' ಗೆ 'ಯ' ಒತ್ತು. - ಮನ|Mana Talk - Contribs ೧೭:೪೪, ೯ ಆಗಸ್ಟ್ ೨೦೦೬ (UTC)
ಆದರೆ ಈ ಪುಟದ ಶೀರ್ಷಿಕೆಯಲ್ಲಿ "rya" ಇದೆಯೇ ಹೊರತು "Rya" ಅಲ್ಲ.-ಹಂಸವಾಣಿದಾಸ ೧೪:೩೨, ೩೧ ಆಗಸ್ಟ್ ೨೦೦೬ (UTC)
ಪುಟದ ಶೀರ್ಷಿಕೆಯಲ್ಲಿ "rya" ಎಂತಲೂ ಇಲ್ಲ, "Rya" ಎಂತಲೂ ಇಲ್ಲ. :) "ರ್ಯಾ" ಎಂದಿದೆ. ಈಗಾಗಲೆ ತಿಳಿಸಿದಂತೆ, ಯೂನಿಕೋಡಿನ ಈಗಿನ ಆವೃತ್ತಿಯಲ್ಲಿ "rya", "Rya" ಎರಡೂ "ರ್ಯಾ" ಎಂದೇ display ಆಗುತ್ತದೆ.
ಅರ್ಕಾವೊತ್ತು ಮತ್ತು ರ ಗೆ ಒತ್ತು ಬಗ್ಗೆ ಇರುವ ಸಮಸ್ಯೆ ಬಗ್ಗೆ, ಸದಸ್ಯರಾದ Pavanaja ಅವರು ವಿವರವಾಗಿ ಬರೆದಿದ್ದಾರೆ. ಈ ಲೇಖನ ನೋಡಿ.
ಆ ಲೇಖನದಿಂದ ಇಲ್ಲಿನ ಚರ್ಚೆಗೆ ಪೂರಕ ಮಾಹಿತಿ, ಕೆಳಗೆ ಲಗತ್ತಿಸಿದ್ದೇನೆ. - ಮನ|Mana Talk - Contribs ೧೮:೦೧, ೩೧ ಆಗಸ್ಟ್ ೨೦೦೬ (UTC)

“ಯುನಿಕೋಡ್‌‌ನಲ್ಲಿ ರ್ಯಾಂಕ್ ಎಂದು ಮೂಡಿಬರುತ್ತದೆ”.

ಭಾರತೀಯ ಭಾಷೆಗಳನ್ನು ಯುನಿಕೋಡ್ನಲ್ಲಿ ಅಳವಡಿಸುವಾಗ ದೇವನಾಗರಿ ಲಿಪಿಯನ್ನು ಆಧಾರವಾಗಿಟ್ಟುಕೊಂಡು ಇತರೆ ಭಾಷೆಗಳಿಗೆ ಸೂತ್ರ ನಿರ್ಮಿಸಿದರು. ಅದರ ಪ್ರಕಾರ <ರ> + <ವ್ಯಂಜನ> ಬಂದಾಗ <ವ್ಯಂಜನ> <ಅರ್ಕಾವತ್ತು> ಬರತಕ್ಕದ್ದು. ಇದಕ್ಕೆ ಅಪವಾದವೆಂದರೆ <ವ್ಯಂಜನ> ವು <ರ> ಆಗಿದ್ದಾಗ <ರ> <ರ ಒತ್ತು> ಬರತಕ್ಕದ್ದು. ಅಂದರೆ <ರ> + <ಕ> = ರ್ಕ ಮತ್ತು <ರ> + <ರ> = ರ್ರ. ಆದರೆ ಇಲ್ಲಿ ಅವರು ಒಂದು ಸಣ್ಣ ಅಂಶಕ್ಕೆ ಗಮನ ಕೊಡಲಿಲ್ಲ. ಅದೆಂದರೆ ಒಂದು ಪದದ ಪ್ರಾರಂಭದಲ್ಲಿಯೇ ಈ <ರ> ಬಂದರೆ ಎರಡನೆ ಸೂತ್ರ (<ರ> ಕ್ಕೆ <ರ ಒತ್ತು>) ಬರತಕ್ಕದ್ದು ಎಂದು. ಈ ಸಮಸ್ಯೆಗೆ ಪರಿಹಾರವನ್ನು ಯುನಿಕೋಡ್‌ನವರು ತಮ್ಮ PR-37 ರಲ್ಲಿ ಸೂಚಿಸಿದ್ದಾರೆ. ಆಸಕ್ತರು ಯುನಿಕೋಡ್ ತಾಣದಲ್ಲಿ ಪೂರ್ತಿ ವಿವರ ನೋಡಬಹುದು. ಮೈಕ್ರೋಸಾಫ್ಟ್ನವರು ತಮ್ಮ ಮುಂಬರುವ ವಿಂಡೋಸ್ ವಿಸ್ಟದಲ್ಲಿ ಇದನ್ನು ಅಳವಡಿಸಿದ್ದಾರೆ.

“ಯುನಿಕೋಡ್‌ನಲ್ಲಿ ಅರ್ಕಾವೊತ್ತೇ ಬರುತ್ತದೆ. ಉದಾಹರಣೆಗೆ ತರ್ಕ ಎಂದೇ ಆಗುತ್ತದೆ. ರ ಕ್ಕೆ ಕ ಒತ್ತು ಬರುವುದೇ ಇಲ್ಲ”.

ಇದೂ ಕೂಡ ಮೇಲೆ ತಿಳಿಸಿದ ಸಮಸ್ಯೆಯೇ. ಪರಿಹಾರವೂ ಮೇಲೆ ತಿಳಿಸಿದ PR-37 ರಲ್ಲಿ ಇದೆ. ಮೈಕ್ರೋಸಾಫ್ಟ್‌ನವರ ಮುಂಬರುವ ವಿಂಡೋಸ್ ವಿಸ್ಟದಲ್ಲಿ ಇದನ್ನು ಅಳವಡಿಸಲಾಗಿದೆ.

ಯೂನಿಕೋಡಿನ ಈಗಿನ ಆವೃತ್ತಿಯಲ್ಲಿ "rya" ಹಾಗು "Rya" ಹೀಗೆ ಕಾಣಿಸಿಕೊಳ್ಳುತ್ತವೆ. "rya" - ರ್ಯ, "Rya" - ರ್‍ಯ. ಈ ಲೇಖನದ ಶೀರ್ಷಿಕೆಯಲ್ಲಿ ರ್ಯಾಕೆಟ್ ಬದಲು ರ್‍ಯಾಕೆಟ್ ಎಂದು ಬದಲಿಸಬೇಕಿದೆ -ಹಂಸವಾಣಿದಾಸ ೧೬:೦೬, ೧ September ೨೦೦೬ (UTC)

Start a discussion about ಆಪರೇಷನ್ ಡೈಮಂಡ್ ರ್ಯಾಕೆಟ್

Start a discussion