ವಿಷಯಕ್ಕೆ ಹೋಗು

ಖಾಲ್ಸಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಖ್ ಸಂಕೇತವಾದ ಖಂಡಾ

ಖಾಲ್ಸಾ ಎನ್ನುವುದು ಸಿಕ್ಖರ ಯುದ್ಧೋತ್ಸಾಹಿ ಮತೀಯ ಸಂಸ್ಥೆ.

ಸ್ಥಾಪನೆ

[ಬದಲಾಯಿಸಿ]

ಸಿಕ್ಖರ 10ನೆಯ ಗುರು ಗೋವಿಂದ 1708ರಲ್ಲಿ ಕೊಲೆಯಾದ[] ಅನಂತರ ಅವರ ನಾಯಕನಾಗಿದ್ದ ಬಂದಾ 1716ರಲ್ಲಿ ಮರಣದಂಡನೆಗೆ ಗುರಿಯಾದಾಗ[][] ಸಿಕ್ಖರ ಮತಧರ್ಮ ರಕ್ಷಣೆಗಾಗಿ ಫೈಜ಼ುಲ್ಲಾಪುರದ ಕಪೂರ್ ಸಿಂಗ್ ಇದನ್ನು ಸ್ಥಾಪಿಸಿದ. ಗುರು ಗೋವಿಂದ ಸಿಂಗ್ ಸ್ವತಃ ಇದನ್ನು ಸ್ಥಾಪಿಸಿದನೆಂಬ ವಾದವೂ ಇದೆ.[][][] ಈ ವಾದವನ್ನು ಒಪ್ಪಿದರೂ ಕಪೂರ್ ಸಿಂಗ್ ಈ ಸಂಸ್ಥೆಗೆ ನಿಶ್ಚಿತ ರೂಪ ಕೊಟ್ಟನೆಂಬುದಂತೂ ನಿಜ. ಔರಂಗ್‌ಜ಼ೇಬನ ಮತಾಂಧ ನೀತಿಯಿಂದಾಗಿ ಕಷ್ಟಗಳನ್ನನುಭವಿಸುತ್ತಿದ್ದ ಸಿಕ್ಖರಲ್ಲಿ ಗುರು ಗೋವಿಂದ ಸಿಂಗ್ ಧೈರ್ಯ ಸಾಹಸಗಳನ್ನು ತುಂಬಿ ನವಚೈತನ್ಯವನ್ನು ಮೂಡಿಸಿದ.

ನಿಯಮಗಳು

[ಬದಲಾಯಿಸಿ]

ಎಲ್ಲ ಮತಗಳವರೂ ಸಮಾನರೆಂದೂ, ಖಾಲ್ಸಾ ಪಂಥದಲ್ಲಿ ಯಾವ ರೀತಿಯ ಭೇದ ಭಾವಗಳೂ ಇಲ್ಲವೆಂದೂ ಗೋವಿಂದ ಸಿಂಗ್ ಬೋಧಿಸಿದ.[] ಈ ಸಂಸ್ಥೆ ಪ್ರಾರಂಭವಾದಂದಿನಿಂದ ಪ್ರತಿಯೊಬ್ಬ ಸಿಕ್ಖ್ ಮತೀಯನೂ ಯೋಧನಾದ.[] ಪ್ರತಿಯೊಬ್ಬ ಸದಸ್ಯನೂ ಉದ್ದವಾದ ಕೂದಲನ್ನೂ, ಬಾಚಣಿಗೆಯನ್ನೂ, ಕಬ್ಬಿಣದ ಒಂದು ಬಳೆಯನ್ನೂ, ಒಂದು ಕತ್ತಿಯನ್ನೂ ಹೊಂದಿರಬೇಕು; ಮತ್ತು ಷರಾಯಿ ಧರಿಸಬೇಕು; ಹೊಗೆಸೊಪ್ಪು ಮತ್ತಿತರ ಮಾದಕ ಪದಾರ್ಥಗಳನ್ನು ಸೇವಿಸಕೂಡದು; ಉಷಃ ಕಾಲದಲ್ಲೆದ್ದು ಸ್ನಾನಮಾಡಿ ಗುರುಗಳಿಂದ ರಚಿತವಾದ ಸ್ತೋತ್ರಗಳ ಪಠಣ ಮಾಡಬೇಕು-ಎಂಬವು ಖಾಲ್ಸಾ ಸಂಸ್ಥೆಯ ಕೆಲವು ನಿಯಮಗಳು. ಖಾಲ್ಸಾ ಸಭೆ ವೈಶಾಖ ಮತ್ತು ದೀಪಾವಳಿಯ ಮಾಸಗಳಲ್ಲಿ ಅಮೃತಸರದಲ್ಲಿ ಸೇರುತ್ತಿತ್ತು. ಎಲ್ಲರೂ ಒಟ್ಟುಗೂಡಿ ತೀರ್ಥ ಪ್ರಸಾದ ಸ್ವೀಕರಿಸಬೇಕಿತ್ತು. ಸಿಕ್ಖರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸರ್ವಸಮಾನತೆಯ ಆಧಾರದ ಮೇಲೆ ಪ್ರಯತ್ನ ಕೈಗೊಳ್ಳಲಾಗುತ್ತಿತ್ತು. ರಾಷ್ಟ್ರೀಯ ಸಂತರ ಸೇನೆಯಾಗಿ ರೂಪಿತವಾದ ಖಾಲ್ಸಾದ ಸ್ಥಾಪನೆಯ ಅನಂತರ ಸಿಕ್ಖರಲ್ಲಿ ಒಗ್ಗಟ್ಟು ಮೂಡಿತು. ತಮ್ಮ ಧರ್ಮದ ರಕ್ಷಣೆಗಾಗಿ ಪ್ರಾಣ ತೆರಲೂ ಅವರು ಸಿದ್ಧರಾದರು. ಮೊಗಲ್ ಸಾಮ್ರಾಜ್ಯದ ವಿನಾಶಕ್ಕಾಗಿ ಬಹುವಾಗಿ ಹೋರಾಡಿದರು.

ಉಲ್ಲೇಖಗಳು

[ಬದಲಾಯಿಸಿ]
  1. Hardip Singh Syan (2013). Sikh Militancy in the Seventeenth Century: Religious Violence in Mughal and Early Modern India. I.B. Tauris. pp. 222–223. ISBN 978-1-78076-250-0.
  2. Ganda Singh. "Banda Singh Bahadur". Encyclopaedia of Sikhism. Punjabi University Patiala. Retrieved 27 January 2014.
  3. Singh, Kulwant (2006). Sri Gur Panth Prakash: Episodes 1 to 81. Institute of Sikh Studies. p. 415. ISBN 9788185815282.
  4. Mandair, Arvind-Pal Singh (2013). Sikhism: A Guide for the Perplexed. Bloomsbury Academic. pp. 53–54. ISBN 978-1-4411-0231-7., Quote: "The Guru's stance was a clear and unambiguous challenge, not to the sovereignty of the Mughal state, but to the state's policy of not recognizing the sovereign existence of non-Muslims, their traditions and ways of life".
  5. Seiple, Chris (2013). The Routledge handbook of religion and security. New York: Routledge. p. 96. ISBN 978-0-415-66744-9.
  6. Singh, pp. 236–238
  7. Koller, John M (2016). The Indian Way: An Introduction to the Philosophies & Religions of India. Routledge. pp. 312–313. ISBN 978-1-315-50740-8.
  8. Cole, p. 36

ಗ್ರಂಥಸೂಚಿ

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಖಾಲ್ಸಾ&oldid=1245397" ಇಂದ ಪಡೆಯಲ್ಪಟ್ಟಿದೆ