ಗಜ಼ೇನಿಯ
ಗಜ಼ೇನಿಯ | |
---|---|
ಗಜ಼ೇನಿಯ ರೈಗೆನ್ಸ್ ಬೆಳವಣಿಗೆ ವಾಡಿಕೆ | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್‍ಗಳು |
ಏಕಮೂಲ ವರ್ಗ: | ಆಸ್ಟರಿಡ್ಸ್ |
ಗಣ: | ಆಸ್ಟರಾಲೀಸ್ |
ಕುಟುಂಬ: | ಆಸ್ಟರೇಸೀ |
ಉಪಕುಟುಂಬ: | ವರ್ನನಿಯಾಯ್ಡಿಯೇ |
ಪಂಗಡ: | ಆರ್ಕ್‌ಟಾಟಿಡಿಯೇ |
ಉಪಪಂಗಡ: | ಗೊರ್ಟರೈಯಿನೇ |
ಕುಲ: | ಗಜ಼ೇನಿಯ Gaertn. |
Type species | |
ಗಜ಼ೇನಿಯ ರೈಗೆನ್ಸ್[೧] | |
Synonyms[೨] | |
|
ಗಜ಼ೇನಿಯ[೩] ಕಂಪಾಸಿ಼ಟೀ (ಆಸ್ಟರೇಸೀ) ಕುಟುಂಬಕ್ಕೆ ಸೇರಿದ ಒಂದು ಏಕವಾರ್ಷಿಕ ಇಲ್ಲವೆ ಬಹುವಾರ್ಷಿಕ ಅಲಂಕಾರಸಸ್ಯ. ಸುಂದರವಾದ ಮತ್ತು ಕೆಂಪು, ಕಿತ್ತಳೆ, ಕೆನೆ, ಹಳದಿ, ಬಿಳಿ, ಕಂದು ಮುಂತಾದ ವರ್ಣರಂಜಿತವಾದ ಹೂಗಳು ಇರುವುದರಿಂದ ಇದನ್ನು ತೋಟಗಳಲ್ಲಿ ಶೋಭೆಗೆಂದು ಬೆಳೆಸುತ್ತಾರೆ. ಅಗಲವಾದ ಮಡಿಗಳಲ್ಲಿ ಬೆಳೆಸಲು ಈ ಗಿಡ ಉತ್ತಮವಾದುದಾದರೂ ಈಚೀಚೆಗೆ ಇದರ ಜನಪ್ರಿಯತೆ ಕಡಿಮೆಯಾಗುತ್ತಿದೆ.
ವಿವರಗಳು
[ಬದಲಾಯಿಸಿ]ಗಜೇ಼ನಿಯ ಸುಮಾರು 15-25 ಸೆಂಮೀ. ಎತ್ತರಕ್ಕೆ ಬೆಳೆಯುವ ಮೂಲಿಕೆ ಸಸ್ಯ. ಕೆಲವು ಬಗೆಗಳಲ್ಲಿ ಕಾಂಡವೇ ಇಲ್ಲ. ಇನ್ನು ಕೆಲವು ಬಗೆಗಳಲ್ಲಿ ಇದ್ದರೂ ಬಲು ಮೋಟು. ಎಲೆಗಳು ನೆಲದ ಮಟ್ಟದಿಂದಲೇ ಕಮಲದ ರೀತಿಯಲ್ಲಿ ಹರಡಿಕೊಂಡಿರುತ್ತವೆ. ಕೆಲವು ಕಾಂಡದ ಮೇಲೆ ಅಲ್ಲಲ್ಲೆ ಇರುವುದೂ ಉಂಟು. ಹೂಗಳು ಚಂಡು ಮಂಜರಿ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗೊಂಚಲಿನ ಅಂಚಿನ ಹೂಗಳು ವರ್ಣರಂಜಿತವಾಗಿರುವುದರಿಂದ ಇಡೀ ಗೊಂಚಲು ಸುಂದರವಾಗಿ ಕಾಣುತ್ತದೆ. ಕೆಲವು ಪ್ರಭೇದಗಳಲ್ಲಿ ದಳಗಳ ಬುಡದಲ್ಲಿರುವ ಬಣ್ಣಬಣ್ಣದ ಚುಕ್ಕೆಗಳು ನವಿಲುಗರಿಯ ಕಣ್ಣುಗಳಂತೆ ಕಾಣುತ್ತದೆ. ಗಜೇ಼ನಿಯದ ಇನ್ನೊಂದು ವಿಸ್ಮಯಕಾರಕ ಗುಣವೆಂದರೆ ರಾತ್ರಿಯ ಹೊತ್ತು ಹೂದಳಗಳು ಮುಚ್ಚಿಕೊಳ್ಳುವುದು ಮತ್ತು ಎಲೆಗಳೆಲ್ಲ ತಮ್ಮ ಬಿಳಿಯ ಬಣ್ಣದ ತಳಭಾಗ ಎದ್ದು ಕಾಣುವಂತೆ ತಿರುವಿಕೊಳ್ಳುವುದು. ಗಜೇ಼ನಿಯದ ಫಲ ಎಕೀನ್ ಮಾದರಿಯದು.
ಪ್ರಭೇದಗಳು
[ಬದಲಾಯಿಸಿ]ಗಜೇ಼ನಿಯದಲ್ಲಿ ಸುಮಾರು 18 ಪ್ರಭೇದಗಳಿವೆ.[೨][೪] ಉದ್ಯಾನ ಪ್ರಾಮುಖ್ಯವಿರುವವು ಗಜೇ಼ನಿಯ ರಿಗೆನ್ಸ್, ಗ.ಸ್ಪ್ಲಂಡೆನ್ಸ್, ಗ. ಪಿನೇಟ, ಗ. ಯೂನಿಫ್ಲೋರ ಮತ್ತು ಗ. ಪ್ಯಾವೋನಿಯ.
ಸಸ್ಯವೃದ್ಧಿ
[ಬದಲಾಯಿಸಿ]ಗಜೇ಼ನಿಯದ ವಿವಿಧ ಪ್ರಭೇದಗಳನ್ನು ಬೀಜಗಳಿಂದ, ಕಾಂಡದ ತುಂಡುಗಳಿಂದ ಮತ್ತು ಗೂಟಿ ಕಟ್ಟುವುದರಿಂದ ವೃದ್ಧಿ ಮಾಡಬಹುದು. ಬೀಜಗಳನ್ನು ಮೈದಾನ ಪ್ರದೇಶಗಳಲ್ಲಿ ಸೆಪ್ಟೆಂಬರ್-ಆಕ್ಟೋಬರ್ ತಿಂಗಳಲ್ಲಿಯೂ ಗುಡ್ಡಗಾಡುಗಳಲ್ಲಿ ಮಾರ್ಚಿ-ಏಪ್ರಿಲ್ ತಿಂಗಳಲ್ಲಿಯೂ ಬಿತ್ತಬಹುದು. ಬೀಜ ಬಿತ್ತಿದ 3-3½ ತಿಂಗಳ ಅನಂತರ ಗಿಡ ಹೂ ಬಿಡಲು ಪ್ರಾರಂಭಿಸುತ್ತದೆ. ಚೆನ್ನಾಗಿ ನೀರು ಬಸಿದು ಹೋಗುವಂಥ ಫಲವತ್ತಾದ ಮಣ್ಣು ಇದರ ವೃದ್ಧಿಗೆ ಉತ್ತಮ.
ಛಾಯಾಂಕಣ
[ಬದಲಾಯಿಸಿ]-
ಗಜ಼ೇನಿಯ ಹೆಟೆರೊಕೇಟಾ ಗೋಗ್ಯಾಪ್ ಎನ್.ಆರ್., ನಾಮಾಕ್ವಾಲಂಡ್, ಉತ್ತರ ಭೂಶಿರ, ದಕ್ಷಿಣ ಆಫ಼್ರಿಕಾ
-
ಗಜ಼ೇನಿಯ ಲಿಕ್ಟೆನ್ಸ್ಟೈನಿಯೈ ಗೋಗ್ಯಾಪ್ ಎನ್.ಆರ್., ನಾಮಾಕ್ವಾಲಂಡ್, ಉತ್ತರ ಭೂಶಿರ, ದಕ್ಷಿಣ ಆಫ಼್ರಿಕಾ
-
ಗಜ಼ೇನಿಯ ರೈಗೆನ್ಸ್ (ಹೂವು)
-
'ಕಾಪರ್ ಕಿಂಗ್' ಎಂದು ಪರಿಚಿತಚಿರುವ ಪೊದೆ ಗಜ಼ೇನಿಯ (ಗಜ಼ೇನಿಯ ರೈಗೆನ್ಸ್) ತಳಿ, ಲಾಸ್ ವೇಗಾಸ್ನ ಡೆಜ಼ರ್ಟ್ ಡೆಮಾನ್ಸ್ಟ್ರೇಶನ್ ಗಾರ್ಡನ್ನಲ್ಲಿ
-
ಬಿಳಿ ಮತ್ತು ನೇರಳೆ ಗಜ಼ೇನಿಯ
ಉಲ್ಲೇಖಗಳು
[ಬದಲಾಯಿಸಿ]- ↑ Tropicos, Gazania Gaertn.
- ↑ ೨.೦ ೨.೧ Flann, C (ed) 2009+ Global Compositae Checklist
- ↑ Sunset Western Garden Book, 1995:606–607
- ↑ "African plants database". Retrieved 2008-04-11.