ಥಯೊಸಲ್ಫ್ಯೂರಿಕ್ ಆಮ್ಲ
ಥಯೊಸಲ್ಫ್ಯೂರಿಕ್ ಆಮ್ಲ (H2S2O3) ಒಂದು ಅಕಾರ್ಬನಿಕ ಸಂಯುಕ್ತ. ಇದುವರೆಗೂ ಇದನ್ನು ಪ್ರತ್ಯೇಕಿಸಲು ಸಾಧ್ಯವಾಗಿಲ್ಲ. ದ್ರಾವಣದಲ್ಲಿ ಕ್ಷಣಿಕವಾಗಿ ಉತ್ಪತ್ತಿಯಾಗಿ ಕೂಡಲೇ ಗಂಧಕ ಮತ್ತು ಸಲ್ಫ್ಯೂರಸ್ ಆಮ್ಲಗಳಿಗೆ ವಿಭಜಿಸುವುದು. ಉಂಟಾದ ಸಲ್ಫ್ಯೂರಸ್ ಆಮ್ಲದ ದೆಸೆಯಿಂದ ಇದಕ್ಕೂ ಅಪಕರ್ಷಣ ಗುಣ ಪ್ರಾಪ್ತವಾಗುತ್ತದೆ.
ಥಯೊಸಲ್ಫೇಟುಗಳು
[ಬದಲಾಯಿಸಿ]ಥಯೊಸಲ್ಫ್ಯೂರಿಕ್ ಆಮ್ಲದ ಲವಣಗಳೇ (salts) ಥಯೊಸಲ್ಫೇಟುಗಳು. ಇವು ಸ್ಥಿರ ವಸ್ತುಗಳು. ಇವುಗಳಲ್ಲಿ ಮುಖ್ಯವಾದದ್ದು ಸೋಡಿಯಂ ಥಯೊಸಲ್ಫೇಟ್ (Na2S2O3). ಇದು ಛಾಯಚಿತ್ರಗ್ರಾಹಕರಿಗೆ ಪರಿಚಿತವಾದ ಲವಣ. ಹೈಪೊ ಎಂಬುದು ಇದರ ವ್ಯವಹಾರ ನಾಮ.[೧] ದ್ರಾವ್ಯ ಸಲ್ಫೈಡುಗಳನ್ನು ಗಾಳಿಯಿಂದ ಉತ್ಕರ್ಷಿಸಿ ಅಥವಾ ಸಲ್ಫೈಟುಗಳ ದ್ರಾವಣಗಳೊಡನೆ ಗಂಧಕವನ್ನು ಕುದಿಸಿ ಥಯೊಸಲ್ಫೇಟುಗಳನ್ನು ಮಾಡಿಕೊಳ್ಳಬಹುದು.[೨]
2K2S2 + 3O2 → 2K2S2O3
Na2SO3 + S → Na2S2O3
ಸೋಡಿಯಂ ಸಲ್ಫೈಡ್ ಮತ್ತು ಸಲ್ಫೈಡುಗಳ ಮಿಶ್ರಣ ಅಯೊಡೀನಿನೊಡನೆ ವರ್ತಿಸಿದಾಗಲೂ ಸೋಡಿಯಂ ಥಯೊಸಲ್ಫೇಟು ರೂಪಿತವಾಗುತ್ತದೆ. ಇದನ್ನು ಸ್ಪ್ರಿಂಗನ ಕ್ರಿಯೆ ಎನ್ನುವುದುಂಟು. ವಾಸ್ತವವಾಗಿ ಸೋಡಿಯಂ ಥಯೊಸಲ್ಫೇಟಿನ ಎರಡು ಅಣುಗಳು ಸೇರಿ ಅಯೊಡೀನಿನ ಸಮ್ಮುಖದಲ್ಲಿ ಸೋಡಿಯಂ ಟೆಟ್ರಥಯೊನೇಟನ್ನು ಕೊಡುವ ಕ್ರಿಯೆಗೆ ಈ ಹೆಸರು.[೩] ಸೋಡಿಯಂ ಥಯೊಸಲ್ಫೇಟಿನ ದ್ರಾವಣಕ್ಕೆ ಬೆಳ್ಳಿಯ ಹ್ಯಾಲೈಡುಗಳನ್ನು ವಿಲೀನಮಾಡಿಕೊಂಡು ಸಂಕೀರ್ಣ ಲವಣವಾಗಬಲ್ಲ ಸಾಮರ್ಥ್ಯ ಉಂಟು. ಛಾಯಚಿತ್ರಗ್ರಹಣ ಕಲೆಯಲ್ಲಿ ಹೈಪೊವಿನ ಬಳಕೆ ಈ ಗುಣವನ್ನು ಅವಲಂಬಿಸಿದೆ. ಅಲ್ಲದೆ ಇದು ಚಿನ್ನದ ಕ್ಲೋರೈಡನ್ನೂ ಹೀಗೆಯೇ ಸಂಕೀರ್ಣ ಲವಣವಾಗಿ ಮಾರ್ಪಡಿಸುವುದು. ಅದಕ್ಕೆ ಸೋಡಿಯಂ ಆರೋಥಯೊಸಲ್ಫೇಟ್ [Na3{Au(S2O3)2}] ಎನ್ನುವರು.[೪] ಇದನ್ನು ಚುಚ್ಚುಮದ್ದಿನ ರೂಪದಲ್ಲಿ ಕೊಟ್ಟರೆ ಸಂಧಿವಾತ ರೋಗ ಗುಣವಾಗುವುದು ಕಂಡುಬಂದಿದೆ.[೫]
ಉಲ್ಲೇಖಗಳು
[ಬದಲಾಯಿಸಿ]- ↑ Gibson CR (1908). The Romance of Modern Photography, Its Discovery & Its Achievements. Seeley & Co. pp. 37.
hyposulphite-of-soda herschel fixer hypo.
- ↑ Barbera JJ, Metzger A, Wolf M. "Sulfites, Thiosulfates, and Dithionites". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a25_477.
{{cite encyclopedia}}
: Cite has empty unknown parameter:|authors=
(help) - ↑ Greenwood, N. N.; Earnshaw, A. (2 January 1991). Chemistry of the Elements - 3rd Edition. Elsevier. doi:10.1016/C2013-0-11881-8. ISBN 978-1-4832-8008-0. OCLC 1040594550. Retrieved 2022-02-15.
- ↑ Ruben H, Zalkin A, Faltens MO, Templeton DH (1974). "Crystal structure of sodium gold(I) thiosulfate dihydrate, Na3Au(S2O3)2.2H2O". Inorganic Chemistry. 13 (8): 1836–1839. doi:10.1021/ic50138a011.
- ↑ Shaw III CF (September 1999). "Gold-based therapeutic agents". Chemical Reviews. 99 (9): 2589–2600. doi:10.1021/cr980431o. PMID 11749494.