ನಾಟಿ ಕೋಳಿ ಸಾರು
ಗೋಚರ
ಸಮಾನ ಭಕ್ಷ್ಯಗಳು | ಕೋಳಿ ಸಾರು |
---|---|
ನಾಟಿ ಕೋಳಿ ಸಾರು ಮಂಗಳೂರಿನಲ್ಲಿ ಹೆಚ್ಚಾಗಿ ಮಾಡುತ್ತಾರೆ. ಏಕೆಂದರೆ ಹಳ್ಳಿ ಜನರು ನಾಟಿ ಕೋಳಿಗಳ ಸಾಕಣೆ ಮಾಡುತ್ತಾರೆ. ಆಟಿ ತಿಂಗಳಲ್ಲಿ ಹೆಚ್ಚಾಗಿ ನಾಟಿ ಕೋಳಿ ಸಾರನ್ನ ಮಾಡುತ್ತಾರೆ.[೧]
ಬೇಕಾಗುವ ಸಾಮಾಗ್ರಿಗಳು
[ಬದಲಾಯಿಸಿ]- ನಾಟಿ ಕೋಳಿ ಚಿಕನ್ - 1/2 ಕೆಜಿ
- ಎಣ್ಣೆ - 1/4 ಕಪ್
- ಚಕ್ಕೆ - 1 ತುಂಡು
- ಬಿರಿಯಾನಿ ಎಲೆಗಳು - 1
- ಏಲಕ್ಕಿ - 4
- ಈರುಳ್ಳಿ - 2 (ಹೆಚ್ಚಿದ)
- ಕರಿಬೇವಿನ ಎಲೆಗಳು - ಸ್ವಲ್ಪ
- ಉಪ್ಪು - ರುಚಿಗೆ ತಕ್ಕಂತೆ
- ಅರಿಶಿನ ಪುಡಿ - 1 tsp
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ
- ಚಿಕನ್ ಮಸಾಲಾ ಪುಡಿ - 3-4 ಚಮಚ
- ದೊಡ್ಡ ಟೊಮ್ಯಾಟೊ - 4 (ಕತ್ತರಿಸಿದ)
- ತೆಂಗಿನಕಾಯಿ - 1 ಕಪ್
- ಸೋಂಪು - 1 ಚಮಚ
- ನೀರು - ಅಗತ್ಯಕ್ಕೆ [೨]
- ಕೊತ್ತಂಬರಿ - ಸ್ವಲ್ಪ
ಮಾಡುವ ವಿಧಾನ
[ಬದಲಾಯಿಸಿ]ಮೊದಲು ಮಿಕ್ಸರ್ ಜಾರ್ ಗೆ ತೆಂಗಿನತುರಿ ಮತ್ತು ಸೋಂಪು ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಂಡು ಪಕ್ಕಕ್ಕೆ ಇಡಿ.
- ನಂತರ ಚಿಕನ್ ಅನ್ನು ಅರಿಶಿನ ಪುಡಿಯಿಂದ ಚೆನ್ನಾಗಿ ತೊಳೆದು ಪಕ್ಕಕ್ಕೆ ಇರಿಸಿ.
- ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಚಕ್ಕೆ, ಬಿರಿಯಾನಿ ಎಲೆ, ಏಲಕ್ಕಿ ಹಾಕಿ ಒಗ್ಗರಣೆ ಮಾಡಿ.
- ನಂತರ ಈರುಳ್ಳಿ ಮತ್ತು ಕರಿಬೇವಿನ ಸೊಪ್ಪು ಹಾಕಿ 5 ನಿಮಿಷ ಚೆನ್ನಾಗಿ ಹುರಿಯಿರಿ.
- ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರಿಶಿನ ಪುಡಿ ಹಾಕಿ ಈರುಳ್ಳಿ ಬಣ್ಣ ಬದಲಾಗುವವರೆಗೆ ಹುರಿಯಿರಿ.
- ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಹುರಿಯಿರಿ, ಇದಕ್ಕೆ ಚಿಕನ್ ಮಸಾಲಾ ಸೇರಿಸಿ ಮತ್ತು ಒಂದು ನಿಮಿಷ ಬೆರೆಸಿ.
- ನಂತರ ಟೊಮೆಟೊ ಹಾಕಿ ಮೃದುವಾಗುವವರೆಗೆ ಹುರಿಯಬೇಕು.
- ನಂತರ ತೊಳೆದ ಚಿಕನ್ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತು ಚಿಕನ್ ಜೊತೆ ಎಲ್ಲಾ ಮಸಾಲೆಗಳು ಸೇರಿಕೊಳ್ಳುವವರೆಗೆ ಚೆನ್ನಾಗಿ ಬೆರೆಸಬೇಕು.
- ನಂತರ ಸ್ವಲ್ಪ ನೀರು ಸುರಿಯಿರಿ, ಪಾತ್ರೆ ಮುಚ್ಚಿ ಮತ್ತು 30-35 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಚಿಕನ್ ಅನ್ನು ಬೇಯಿಸಬೇಕು.
ಮೇಲಕ್ಕೆ ತೇಲುವಂತಿರಬೇಕು.[೩]
ತುಳುವಿನಲ್ಲಿ ನಾಟಿ ಕೋಳಿ ಸಾರು
[ಬದಲಾಯಿಸಿ]- ಊರ್ದ ಕೋರಿ ಸಾರ್.
ಉಲ್ಲೇಖಗಳು
[ಬದಲಾಯಿಸಿ]- ↑ "ಮಂಗಳೂರಿನ ನಾಟಿ ಕೋಳಿ ಸಾರು". Retrieved 15 July 2024.
- ↑ "Karnataka style koli saaru / kozhi saaru, Chicken curry recipe – Kannamma Cooks". 5 July 2024. Retrieved 15 July 2024.
- ↑ "ನಾಟಿ ಕೋಳಿ ಸಾರು". Retrieved 15 July 2024.