ವಿಷಯಕ್ಕೆ ಹೋಗು

ಅದಾರ ಪೂನಾವಾಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅದಾರ ಪೂನಾವಾಲಾ
೪ ನೇ ಏಷ್ಯನ್ ಅವಾರ್ಡ್ಸ್‌ನಲ್ಲಿ ಆದಾರ್ ಪೂನಾವಾಲಾ ಮತ್ತು ಸೈರಸ್ ಪೂನಾವಾಲಾ
ಅದಾರ (ಎಡಭಾಗದಲ್ಲಿ) ಮತ್ತು ೨೦೧೪ ರಲ್ಲಿ ಸೈರಸ್ ಪೂನವಾಲಾ
ಜನನ (1981-01-14) ೧೪ ಜನವರಿ ೧೯೮೧ (ವಯಸ್ಸು ೪೩)
ನಾಗರಿಕತೆIndian
ವಿದ್ಯಾಭ್ಯಾಸಪುಣೆಯ ಬಿಷಪ್ ಶಾಲೆ
ಸೈಂಟ್ ಎಡ್ಮಂಡ್ ಸ್ಕೂಲ್ ಕ್ಯಾಂಟರ್ಬರಿ]
ಶಿಕ್ಷಣ ಸಂಸ್ಥೆಯೂನಿವರ್ಸಿಟಿ ಆಫ್ ವೆಸ್ಟ್ ಮಿನಿಸ್ಟರ್
Titleಸಿ.ಇ.ಓ , ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ
ಅಧ್ಯಕ್ಷರು, ಪೂನಾವಲ್ಲ ಫಿನ್ಕಾರ್ಪ್
Term2011–present
ಸಂಗಾತಿ
ನತಾಶಾ ಪೂನವಾಲಾ
(m. ೨೦೦೬)
[]
ಮಕ್ಕಳು2
ಪೋಷಕ
ಜಾಲತಾಣwww.adarpoonawalla.com

ಅದಾರ ಪೂನವಾಲ (ಜನನ ೧೪ ಜನವರಿ ೧೯೮೧) ಒಬ್ಬ ಭಾರತೀಯ ಉದ್ಯಮಿ. ಅವರು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ []


ಮತ್ತು ಪೂನಾವಲ್ಲ ಫಿನ್‌ಕಾರ್ಪ್‌ನ ಅಧ್ಯಕ್ಷರಾಗಿದ್ದಾರೆ. [] 1966 ರಲ್ಲಿ ಅವರ ತಂದೆ ಸೈರಸ್ ಪೂನಾವಾಲಾ ಇದನ್ನ ಸ್ಥಾಪಿಸಿದರು,. ಈ ಸಂಸ್ಥೆ ಉತ್ಪಾದಿಸಿದುವ ಲಸಿಕೆಗಳ ಪ್ರಮಾಣ ಗಮನಿಸಿದರೆ ಇದು ಸಂಖ್ಯೆಯಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆ. []

ವೈಯಕ್ತಿಕ ಜೀವನ

[ಬದಲಾಯಿಸಿ]

ಅದಾರ ಪೂನಾವಾಲಾ ಅವರು ಪಾರ್ಸಿ ( ಜೋರಾಸ್ಟ್ರಿಯನ್ ) ದರ್ಮಕ್ಕೆ ಸೇರಿದವರು. ಇವರು ಸೈರಸ್ ಪೂನಾವಾಲಾ ಅವರ ಮಗ. ಇವರು ನತಾಶಾ ಪೂನಾವಾಲಾ ಅವರನ್ನು ವಿವಾಹವಾಗಿದ್ದಾರೆ ಇವರಿಗೆ ಇಬ್ಬರು ಮಕ್ಕಳು []. ಡಿಸೆಂಬರ್ ೨೦೨೩ ರಲ್ಲಿ, ಪೂನಾವಲ್ಲ ಲಂಡನ್‌ನಲ್ಲಿ ೧,೪೪೬ ಕೋಟಿ ರೂಪಾಯಿ ಮೌಲ್ಯದ ಅತ್ಯಂತ ದುಬಾರಿ ಆಸ್ತಿಯನ್ನು ಖರೀದಿಸಿದರು. [] []

ಶಿಕ್ಷಣ

[ಬದಲಾಯಿಸಿ]

ಅದಾರ ಪೂನವಾಲ ಅವರು ಬಿಷಪ್ ಸ್ಕೂಲ್ (ಪುಣೆ) ಮತ್ತು ಸೇಂಟ್ ಎಡ್ಮಂಡ್ ಸ್ಕೂಲ್ ಕ್ಯಾಂಟರ್ಬರಿಯಲ್ಲಿ ಶಿಕ್ಷಣ ಪಡೆದರು ಮತ್ತು ನಂತರ ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು . []

ವೃತ್ತಿ

[ಬದಲಾಯಿಸಿ]

ಪೂನಾವಾಲ ಅವರು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತರ ೨೦೦೧ ರಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಸೇರಿಕೂಂಡರು. ೩೫ ದೇಶಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ, ಪೂನವಾಲ ಕಂಪನಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆ, ಹೊಸ ಉತ್ಪನ್ನಗಳ ಪರವಾನಗಿ ಮತ್ತು ಯುನಿಸೆಫ್ ಮತ್ತು ಪ್ಯಾನ್ ಅಮೇರಿಕನ್ ಆರೋಗ್ಯ ಸಂಸ್ಥೆ ಸೇರಿದಂತೆ ವಿಶ್ವಸಂಸ್ಥೆಯ ಏಜೆನ್ಸಿಗಳಿಗೆ ಲಸಿಕೆ ಪೂರೈಕೆಮಾಡುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಪೂರ್ವ-ಅರ್ಹತೆಯನ್ನು ಪಡೆಯುವುದರ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ೨೦೧೫ ರ ಹೊತ್ತಿಗೆ, ಅವರು ಕಂಪನಿಯು ಉತ್ಪನ್ನಗಳನ್ನು ೧೪೦ ದೇಶಗಳಿಗೆ ರಫ್ತು ಮಾಡಿಸಿದ್ದಾರೆ; ಸಂಸ್ಥೆಯ ಆದಾಯವು ೮೫ ಭಾಗ ವಿದೇಶದಿಂದ ಬಂದಿದೆ. [] [೧೦]

೨೦೧೧ ರಲ್ಲಿಸಂಸ್ಥೆಯ ಸಿ.ಇ.ಒ ಆದರು. ೨೦೧೨ ರಲ್ಲಿ, ನೆದರ್ಲ್ಯಾಂಡ್ಸ್ ಮೂಲದ ಸರ್ಕಾರಿ ಲಸಿಕೆ ತಯಾರಿಕಾ ಕಂಪನಿಯಾದ ಬಿಲ್ಥೋವನ್ ಬಯೋಲಾಜಿಕಲ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. [೧೧] [೧೨] ಪೂನಾವಾಲ ಅವರು ಜಾಗತಿಕ ಲಸಿಕೆ ಒಕ್ಕೂಟವಾದ ಜಿ.ಎ.ವಿ.ಐ. ಅಲಯನ್ಸ್‌ನ ಮಂಡಳಿಯ ಸದಸ್ಯರಾಗಿದ್ದಾರೆ. [೧೩]

೨೦೧೪ ರಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ನ ಪೋಲಿಯೊ ಲಸಿಕೆ ಪ್ರಾರಂಭಿಸಿದರು ಇದು ಸಂಸ್ಥೆಯ ಅತ್ಯುತ್ತಮ ಉತ್ಪನ್ನವಾಗಿ ಮಾರಾಟವಾಯಿತು. ಅದೇ ವರ್ಷದಲ್ಲಿ ಡೆಂಗ್ಯೂ ಮತ್ತು ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆಗಳನ್ನು ತಯರಿಸಲು ಪ್ರಾರಂಬಿಸಿದರು [೧೦]. ಪ್ರಸ್ತುತ ಅವರು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿ.ಇ.ಒ ಆಗಿದ್ದಾರೆ.

೩೧ ಮೇ ೨೦೨೧ ರಂದು, ಕಂಪನಿಯಲ್ಲಿ ೬೬% ಪಾಲನ್ನು ಹೂಂದಿದ ನಂತರ ಅವರನ್ನು ಪೂನಾವಲ್ಲ ಫಿನ್‌ಕಾರ್ಪ್‌ನ ಅಧ್ಯಕ್ಷರಾಗಿ ನೇಮಿಸಲಾಯಿತು. [೧೪] [೧೫]

ದಿ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಕೋವಿಡ್-೧೯ ಲಸಿಕೆಗಳ ಬೇಡಿಕೆಯಿಂದಾಗಿ ಬಂದ ಬೆದರಿಕೆಗಳಿಂದಾಗಿ ಭಾರತವನ್ನು ಬಿಟ್ಟು ಲಂಡನ್‌ಗೆ ಹೋಗುತಿದ್ದೇನೆ ಎಂದು ಪೂನಾವಾಲ ಹೇಳಿದರು. [೧೬] [೧೭] ಈ ಬೆದರಿಕೆಗಳಿಂದ ಭಾರತ ಸರ್ಕಾರವು ಅವರಿಗೆ 'ವೈ' ವರ್ಗದ ಭದ್ರತೆಯನ್ನು ಒದಗಿಸಿದೆ. [೧೮]. ಭಾರತದಲ್ಲಿ ನಡೆಯುತ್ತಿರುವ ಉತ್ಪಾದನೆಯ ಜೊತೆಗೆ ಭಾರತದ ಹೊರಗೆ ಕೋವಿಡ್ ಲಸಿಕೆ ಉತ್ಪಾದನೆಯನ್ನು ಪ್ರಾರಂಭಿಸಿದರು[೧೪] [೧೫].

ಪರೋಪಕಾರ

[ಬದಲಾಯಿಸಿ]

೨೦೨೦ ರಲ್ಲಿ, ಪೂನಾವಾಲ ಲಸಿಕೆಗಳ ಸಂಶೋಧನಾ ಕಟ್ಟಡದ ರಚನೆಗೆ ನಿಧಿಯನ್ನು ನೀಡಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ $66 ಮಿಲಿಯನ್ ದೇಣಿಗೆ ನೀಡುವುದಾಗಿ ಸಂಸ್ಥೆ ಘೋಷಿಸಿತು. [೧೯] [೨೦]

ಪ್ರಶಸ್ತಿಗಳು

[ಬದಲಾಯಿಸಿ]
  • ೨೦೧೬ ರಲ್ಲಿ, ಅವರು GQ ಮ್ಯಾಗಜೀನ್‌ನಿಂದ ವರ್ಷದ ಫಿಲಂಥರೊಪಿಸ್ಟ್(ಲೋಕೋಪಕಾರಿ) ಪ್ರಶಸ್ತಿಯನ್ನು ಪಡೆದರು. [೨೧]
  • ೨೦೧೭ ರಲ್ಲಿ, ಅವರು ಹಾಲ್ ಆಫ್ ಫೇಮ್ ಅವಾರ್ಡ್ಸ್ ವಿಭಾಗದಲ್ಲಿ ಹ್ಯುಮ್ಯಾನಿಟೆರಿಯನ್ ಎನ್ದೊವರ್ ಅವಾರ್ಡ್.[೨೨] ಮತ್ತು CNN-News18 [೨೩] ನಲ್ಲಿ ಸಿ.ಎಸ್.ಅರ್. ವ್ಯಾಪಾರ ವಿಭಾಗದಲ್ಲಿ ವರ್ಷದ ಭಾರತೀಯ ಪ್ರಶಸ್ತಿಯನ್ನು ಸಹ ಪಡೆದರು.
  • ೨೦೧೮ ರಲ್ಲಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ವರ್ಷದ ಉದ್ಯಮ ನಾಯಕನ ಇಟಿ ಎಡ್ಜ್ ಮಹಾರಾಷ್ಟ್ರ ಅಚೀವರ್ಸ್ ಪ್ರಶಸ್ತಿಗಳನ್ನು ಪೂನಾವಾಲಾ ಅವರಿಗೆ ನೀಡಿದರು, [೨೪] ಅವರು ಅದೇ ವರ್ಷದಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಾಗಿ ಸಿ.ಎನ್.ಬಿ.ಸಿ ಏಷ್ಯಾದ ಪ್ರಶಸ್ತಿಯನ್ನು ಪಡೆದರು [೨೫]
  • ೨೦೨ ರಲ್ಲಿ, ಫಾರ್ಚೂನ್ ನಿಯತಕಾಲಿಕದ ಆರೋಗ್ಯ ರಕ್ಷಣೆ ವಿಭಾಗದಲ್ಲಿ '೪೦ ವರ್ಷದೊಳಗಿನ ೪೦ ' ಪಟ್ಟಿಯಲ್ಲಿ ಪೂನಾವಾಲ ಹೆಸರನ್ನು ಸೇರಿಸಲಾಗಿದೆ. [೨೬]
  • ೨೦೨೧ ರಲ್ಲಿ, ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿದ, ಸೀರಮ್ ಇನ್‌ಸ್ಟಿಟ್ಯೂಟ್ ತಯಾರಿಸಿದ ಲಸಿಕೆ, ಕೋವಿಶೀಲ್ಡ್ ಅನ್ನು ಭಾರತದಲ್ಲಿ ಮತ್ತು ಜಾಗತಿಕವಾಗಿ ಬೃಹತ್ ಪ್ರಮಾಣದದಲ್ಲಿ ಯಶಸ್ವಿಯಾಗಿ ಪೂರೈಸಿ. ಕೋವಿಡ್ -೧೯ ವಿರುದ್ಧ ಹೋರಾಡುವಲ್ಲಿ ಅಪ್ರತಿಮ ಕೊಡುಗೆಗಾಗಿ ಅಡಾರ್ ಎಕನಾಮಿಕ್ ಟೈಮ್ಸ್‌ನಿಂದ ವರ್ಷದ ವಾಣಿಜ್ಯೋದ್ಯಮಿ ಎಂದು ಗುರುತಿಸಲ್ಪಟ್ಟಿದೆ. [೨೭]
  • 2021 ರಲ್ಲಿ, ಟೈಮ್ 100 , ಟೈಮ್‌ನ ' 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ವಾರ್ಷಿಕ ಪಟ್ಟಿಯಲ್ಲಿ ಇವರ ಹೆಸರನ್ನು ಸೆರಿಸಲಾಯಿತು. [೨೮]

ಉಲ್ಲೇಖಗಳು

[ಬದಲಾಯಿಸಿ]
  1. "Farm fatale: When billionaire Adar Poonawala's glamourous [sic] wife Natasha posed with a horse!". The Economic Times. 2016-10-28. Retrieved 2018-12-13.
  2. "ಭಾರತ ಮೂಲದ ಲಸಿಕೆ ಬಿಲಿಯನೇರ್‌ಗಳು, ಮಹಾರಾಷ್ಟ್ರ". Bloomberg. 11 August 2020 – via www.bloomberg.com.
  3. "ಪೂನಾವಲ್ಲ ಫಿನ್‌ಕಾರ್ಪ್ 5 ವರ್ಷಗಳಲ್ಲಿ 50,000 ಕೋಟಿ ರೂ".
  4. ನಾರಾಯಣ, ಆದಿ (15 June 2011). "ಬಿಲಿಯನೇರ್ ನೇತೃತ್ವದ ಭಾರತೀಯ ಔಷಧ ತಯಾರಕ, ಲಸಿಕೆ ಅಧ್ಯಯನದಲ್ಲಿ ಗ್ಲಾಕ್ಸೋವನ್ನು ಸೋಲಿಸುತ್ತದೆ". ಬ್ಲೂಮ್‌ಬರ್ಗ್. Retrieved 2 September 2015.
  5. "Natasha children s Navjot ceremony in Golden saree..." indiaherald.com. 16 May 2023. Retrieved 14 July 2023.
  6. "ಪೂನಾವಾಲಾ ಅವರು ಲಂಡನ್‌ನಲ್ಲಿ ೧೪೪೬ ಕೋಟಿ ರೂಪಾಯಿ ಮೌಲ್ಯದ ಬೆಲೆಬಾಳುವ ಆಸ್ತಿಯನ್ನು ಖರೀದಿಸಿದ್ದಾರೆ". ಬ್ರೂಟೈಮ್ಸ್ (in ಇಂಗ್ಲಿಷ್).
  7. "₹1446 ಕೋಟಿ ಮೌಲ್ಯದ ಲಂಡನ್‌ನ ವರ್ಷದ ಅತ್ಯಂತ ದುಬಾರಿ ಮನೆಯನ್ನು ಖರೀದಿಸಲು ಅದಾರ ಪೂನಾವಾಲಾ ಒಪ್ಪಂದ ಮಾಡಿಕೊಂಡಿದ್ದಾರೆ". ಹಿಂದೂಸ್ತಾನ್ ಟೈಮ್ಸ್ (in ಇಂಗ್ಲಿಷ್). 12 December 2023.
  8. "Westminster alumnus-led vaccine manufacturer set to play a leading role in large scale production of coronavirus vaccine | University of Westminster, London". www.westminster.ac.uk. Retrieved 2020-09-13.
  9. ಡ್ಯಾಂಗರ್, ಕಿಮಿ (೬ ಜೂನ್ ೨೦೦೫). "ಖಾಸಗಿ ಉದ್ಯಮಿಗಳು". [[:en:India Today}ಇಂಡಿಯಾ ಟುಡೇ]]. Retrieved ಸೆಪ್ಟೆಂಬರ್ 2, 2015. {{cite news}}: Check date values in: |date= (help)
  10. ೧೦.೦ ೧೦.೧ "ಸೈರಸ್ ಪೂನವಾಲಾ ಅವರ ಮಗ ಅದಾರ ಪೂನಾವಲ ಹೇಗೆ ಧೈರ್ಯದಿಂದ ಕುಟುಂಬದ ವ್ಯವಹಾರದ ಹಾದಿಯನ್ನು ಬದಲಾಯಿಸುತ್ತಿದ್ದಾರೆ". ಎಕನಾಮಿಕ್ ಟೈಮ್ಸ್. 11 ಏಪ್ರಿಲ್ 2014. Archived from the original on 2015-07-05. Retrieved 13 ಆಗಸ್ಟ್ 2015.
  11. "ಡಚ್ ಸಂಸ್ಥೆ ಬಿಲ್ಥೋವನ್ ಅನ್ನು ರೂ. 550 ಕೋಟಿಗೆ ಸೆರಂ ಸಂಸ್ಥೆ ಖರೀದಿಸಿತು". business line. 4 July 2012. Retrieved 20 August 2015.
  12. "Serum Institute of India buys Dutch vaccine maker for $40.3 mn". NDTV Profit. 4 July 2012. Retrieved 20 August 2015.
  13. "Governance". www.gavi.org. 10 July 2023.
  14. ೧೪.೦ ೧೪.೧ ಗೋಪಕುಮಾರ್, ಗೋಪಿಕಾ (2021-05-31). "ಮ್ಯಾಗ್ಮಾ ಫಿನ್‌ಕಾರ್ಪ್‌ನ ಅಧ್ಯಕ್ಷರಾಗಿ ಅದಾರ್ ಪೂನಾವಲ್ಲ ಅವರನ್ನು ನೇಮಿಸಲಾಗಿದೆ". ಮಿಂಟ್ (in ಇಂಗ್ಲಿಷ್).
  15. ೧೫.೦ ೧೫.೧ ಕಮಲಿ, ನಾಜ್ನೀನ್. "ಭಾರತದ ೧೦ನೇ ಶ್ರೀಮಂತ ಬಿಲಿಯನೇರ್‌ಗಳು ೨೦೨೧". ಫೋರ್ಬ್ಸ್ (in ಇಂಗ್ಲಿಷ್). Retrieved 2021-07-23.
  16. ಕಪೂರ್, ಮನವಿ (ಮೇ ೨೦೨೧). "India's vaccine czar has left the country for the UK due to "unprecedented" threats". en:Quartz.
  17. "'ಪ್ರಭಾವಶಾಲಿ ವ್ಯಕ್ತಿಗಳಿಂದ ಆಕ್ರಮಣಕಾರಿ ಕರೆಗಳು ಬರುತ್ತಿದೆ ': ಲಸಿಕೆ ಒತ್ತಡದ ಕುರಿತು ಸೀರಮ್ ಸಿ.ಇ.ಒ ಅದಾರ ಪೂನವಾಲ ; ಇಂಡಿಯಾ ನ್ಯೂಸ್ - ಟೈಮ್ಸ್ ಆಫ್ ಇಂಡಿಯಾ". ಟೈಮ್ಸ್ ಆಫ್ ಇಂಡಿಯಾ. ಮೇ ೨೦೨೧.
  18. "ಕೋವಿಶೀಲ್ಡ್ ಸರಬರಾಜಿನ ಬೆದರಿಕೆಗಳ ನಡುವೆ ಸೀರಮ್ ಇನ್‌ಸ್ಟಿಟ್ಯೂಟ್ ಸಿಇಒ ಆದರ್ ಪೂನವಾಲಾಗೆ ಕೇಂದ್ರವು ವೈ ವರ್ಗದ ಭದ್ರತೆಯನ್ನು ನೀಡುತ್ತದೆ". www.businesstoday.in. ೨೯ ಏಪ್ರಿಲ್ ೨೦೨೧. {{cite web}}: Check date values in: |date= (help)
  19. "ಭಾರತದ ಬಿಲಿಯನೇರ್ ಪೂನಾವಾಲ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ $66 ಮಿಲಿಯನ್ ಕೊಡುವುದಾಗಿ ವಾಗ್ದಾನ ಮಾಡಿದ್ದಾರೆ". www.aljazeera.com (in ಇಂಗ್ಲಿಷ್). Retrieved ೨೦೨೧-೧೨-೨೧. {{cite web}}: Check date values in: |access-date= (help)
  20. "£50m funding for Poonawalla Vaccines Research Building at Oxford University | University of Oxford". www.ox.ac.uk (in ಇಂಗ್ಲಿಷ್). 15 December 2021. Retrieved 2021-12-21.
  21. "GQ Awards Men of the Year – Philanthropist". GQ India. 27 September 2016. Retrieved 27 September 2016.
  22. "Got Humanitarian Endeavour Award". Biz Asia. 28 March 2017. Retrieved 28 March 2017.
  23. "Adar Poonawalla is Indian of the Year in CSR Business Category". CNN News 18. Retrieved 30 November 2017.
  24. "CM Devendra Fadnavis presents the Business Leader of the Year Award to Adar Poonawala". Femina. Retrieved 27 February 2018.
  25. "Adar Poonawalla received the CNBC Asia's award for Corporate Social Responsibility of the year". Livemint. Retrieved 7 April 2018.
  26. "Adar Poonawalla | 2020 40 under 40 in Health". Fortune (in ಇಂಗ್ಲಿಷ್). Retrieved 2020-09-13.
  27. "ET Awards: Adar Poonawalla, doing India proud with a small jab, and a big gamble". The Economic Times. 8 February 2021.
  28. "PM Modi, Mamata, Adar Poonawalla among Time Magazine's 100 'most influential people of 2021'". The Indian Express (in ಇಂಗ್ಲಿಷ್). 15 September 2021. Retrieved 10 November 2021.


[[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:೧೯೮೧ ಜನನ]] [[ವರ್ಗ:Pages with unreviewed translations]]