ವಾಮನ ಶ್ರೀನಿವಾಸ್ ಕುಡ್ವಾ
ವಾಮನ ಶ್ರೀನಿವಾಸ್ ಕುಡ್ವಾ | |
---|---|
Born | ವಾಮನ್ ಶ್ರೀನಿವಾಸ್ ಕುಡ್ವಾ ೯ ಜೂನ್ ೧೮೯೯ |
Died | ೩೦ ಜೂನ್ ೧೯೬೭ |
Resting place | ಮಂಗಳೂರು |
Nationality | ಭಾರತೀಯ |
Occupation | ಕೈಗಾರಿಕೋದ್ಯಮಿ |
Spouse | ಶಾಂತಾ ಕುಡ್ವಾ |
Children | ೬ |
Website | www |
ವಾಮನ್ ಶ್ರೀನಿವಾಸ್ ಕುಡ್ವಾರವರನ್ನು (೯ ಜೂನ್ ೧೮೯೯ - ೩೦ ಜೂನ್ ೧೯೬೭), ಜನಪ್ರಿಯವಾಗಿ ವಿ. ಎಸ್ ಕುಡ್ವಾ ಎಂದು ಕರೆಯುತ್ತಾರೆ. ಇವರು ಭಾರತದ ಅತ್ಯಂತ ಹಳೆಯ ಮತ್ತು ಪ್ರಮುಖ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಒಂದಾದ ಸಿಂಡಿಕೇಟ್ ಬ್ಯಾಂಕ್‌ನ ಸಂಸ್ಥಾಪಕ ನಿರ್ದೇಶಕರಾಗಿದ್ದರು.[೧] [೨]
ಜನನ ಮತ್ತು ಶಿಕ್ಷಣ
[ಬದಲಾಯಿಸಿ]ಕುಡ್ವಾರವರು ೦೯ ಜೂನ್ ೧೮೯೯ರಲ್ಲಿ ಮಂಗಳೂರಿನ ಮೂಲ್ಕಿಯಲ್ಲಿ ಜನಿಸಿದರು ( ಮುಲ್ಕಿ, ಕರ್ನಾಟಕ). ಕುಡ್ವಾರವರ ಕುಟುಂಬವು ಮುಲ್ಕಿಯಲ್ಲಿ ಕುಡ್ವಾಸ್ ಎಂದು ಕರೆಯಲ್ಪಡುತ್ತಿತ್ತು. ಅವರ ತಂದೆ ಶ್ರೀನಿವಾಸ್ ರಾಮಚಂದ್ರ ಕುಡ್ವಾ ಅವರು ಸಣ್ಣ ಕೈ ಮಗ್ಗದ ಘಟಕವನ್ನು ಹೊಂದಿದ್ದರು ಮತ್ತು ಮುಲ್ಕಿಯಲ್ಲಿ ಕಾರುಗಳು ಇಲ್ಲದಿದ್ದಾಗ ಕೆಲಸ ಮಾಡಲು ಸೈಕಲ್ ಬಳಸುತ್ತಿದ್ದರು. ಸರಳ ಪರಿಸರದಲ್ಲಿ ಬೆಳೆದ ಕುಡ್ವಾ ತನ್ನ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಲ್ಕಿಯಲ್ಲಿ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಉಡುಪಿಯಲ್ಲಿ ಪಡೆದರು. ಅವರು ಶಾಲಾ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು ಮತ್ತು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಉತ್ತಮ ಬರಹಗಾರರಾಗಿದ್ದರು.
ಅವರ ತಂದೆ ೧೯೦೮ ರಲ್ಲಿ ಉಡುಪಿಗೆ ಸ್ಥಳಾಂತರಗೊಂಡು ಹಾರ್ಡ್‌ವೇರ್ ಅಂಗಡಿಯೊಂದನ್ನು ಪ್ರಾರಂಭಿಸಿದರು. ಅಲ್ಲಿ ಕುಡ್ವಾ ತಮ್ಮ ಬಿಡುವಿನ ವೇಳೆಯನ್ನು ಕಳೆಯುತಿದ್ದರು. ೧೯೧೮ ರಲ್ಲಿ ಅವರು ಮಂಗಳೂರಿನ ಸರ್ಕಾರಿ ಕಾಲೇಜಿನಿಂದ ಮಧ್ಯಂತರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಾಂಬೆಗೆ ತೆರಳಿ ವಿಕ್ಟೋರಿಯಾ ಜುಬಿಲಿ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಿದರು. ಉನ್ನತ ಶ್ರೇಣಿಯ ವಿದ್ಯಾರ್ಥಿಯಾಗಿ ೩ ವರ್ಷಗಳ ನಂತರ ಅವರು ಮಹಾತ್ಮ ಗಾಂಧಿ ಅವರ ಸಹಕಾರೇತರ ಚಳುವಳಿಗೆ ಪ್ರತಿಕ್ರಿಯೆಯಾಗಿ ತಮ್ಮ ಅಧ್ಯಯನವನ್ನು ತ್ಯಜಿಸಿ ಊರಿಗೆ ಮರಳಿದರು. ಇಂಗ್ಲಿಷ್ ನೆರವಿನ ಶಾಲೆಗಳನ್ನು ಬದಲಿಸಲು ಗಾಂಧೀಜಿಯವರ ಕರೆಯ ಮೇರೆಗೆ ಕಾಂಗ್ರೆಸ್ ಪಕ್ಷ ಪ್ರಾರಂಭಿಸಿದ ರಾಷ್ಟ್ರೀಯ ಶಾಲೆಯಲ್ಲಿ ಅವರು ಸ್ವಯಂಸೇವಕ ಶಿಕ್ಷಕರಾಗಿ ಕೆಲಸನಿರ್ವಹಿಸಿದರು.
ವಿವಾಹ ಮತ್ತು ಸಿಪಿಸಿ ಕಂಪನಿಗೆ ಸೇರ್ಪಡೆ
[ಬದಲಾಯಿಸಿ]ವಾಮನ ಕುಡ್ವಾರವರು ೧೯೨೨ ರಿಂದ ೧೯೨೬ರಲ್ಲಿ ಎಂಜಿನಿಯರಿಂಗ್ ಕಾರ್ಯಾಗಾರವನ್ನು ಪ್ರಾರಂಭಿಸಿದರು. ೧೯೨೬ ರಲ್ಲಿ ಕೆನರಾ ಸಾರ್ವಜನಿಕ ಸಾಗಣೆ ಸಹ ಲಿಮಿಟೆಡ್ (ಸಿಪಿಸಿ ಕೋ ಲಿಮಿಟೆಡ್) ನ ಅಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವಿ.ಎಸ್. ಕಾಮತ್ ಅವರ ಕರೆಗೆ ಪ್ರತಿಕ್ರಿಯೆಯಾಗಿ ಕುಡ್ವಾರವರು ಮಂಗಳೂರಿಗೆ ಹೋಗಿ ಅಲ್ಲಿನ ವರ್ಕ್ಸ್ ಮ್ಯಾನೇಜರ್ ಆಗಿ ಸೇರ್ಪಡೆಗೊಂಡರು. ೧೯೨೮ ರಲ್ಲಿ ಅವರು ಕಾಮತ್ ಅವರ ಮಗಳನ್ನು ಮದುವೆಯಾದರು. ೧೯೩೨ ರಲ್ಲಿ ಅವರು ಕಾಮತ್ ಅವರ ಮರಣದ ನಂತರ ಸಿಪಿಸಿ ಕೋ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಆದರು. ೧೯೩೮ ರಲ್ಲಿ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆಯಾದರು ಮತ್ತು ೧೯೬೬ ರವರೆಗೆ ಆ ಸ್ಥಾನದಲ್ಲಿ ಮುಂದುವರೆದರು. ಅವರ ಆಡಳಿತದ ಅವಧಿಯಲ್ಲಿ ಸಿಪಿಸಿ ಕೋ ಲಿಮಿಟೆಡ್ ಅಭಿವೃದ್ಧಿ ಹೊಂದಿ ದೇಶದಲ್ಲಿ ದೊಡ್ಡ ಹೆಸರನ್ನು ಗಳಿಸಿತು.
ಪತ್ರಿಕೋದ್ಯಮದಲ್ಲಿ ಆಸಕ್ತಿ
[ಬದಲಾಯಿಸಿ]ಕುಡ್ವಾ ತಮ್ಮ ವಿದ್ಯಾಭ್ಯಾಸದ ದಿನಗಳಲ್ಲಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿದ್ದರು. ೧೯೨೨ ರಲ್ಲಿ ಅವರು ಕನ್ನಡ ವಾರಪತ್ರಿಕೆ "ಸತ್ಯಾಗ್ರಹಿ" ಅನ್ನು ಸಂಪಾದಿಸಿದ್ದಾರೆ. ೧೯೨೩ ರಿಂದ ೧೯೩೪ ರವರೆಗೆ ಅವರು ಕನ್ನಡ "ಸ್ವದೇಶಾಭಿಮಾನಿ" ಯ ಸಂಪಾದಕರಾಗಿ ಕೆಲಸ ಮಾಡಿದರು.
ಅವರು ರಾಜ್ಯ ಪತ್ರಕರ್ತರ ಸಲಹಾ ಸಮಿತಿಯ ಸದಸ್ಯರಾಗಿದ್ದರು. ೧೯೪೧ ರಲ್ಲಿ ಅವರು ದಿ ನ್ಯೂಸ್ ಪೇಪರ್ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಪ್ರಾರಂಭಿಸಿದರು. ಅದು ನಂತರ ಕನ್ನಡ ದೈನಂದಿನ ಪತ್ರಿಕೆ "ನವಭಾರತ್" ಅನ್ನು ಪ್ರಕಟಿಸಿತು.[೩] ಇದರ ಸಂಪಾದಕರಾಗಿ ಅವರು ಕನ್ನಡ ಪತ್ರಕರ್ತರ ಗೌರವವನ್ನು ಗಳಿಸಿದರು ಮತ್ತು ಮಂಗಳೂರಿನಲ್ಲಿ ಅಖಿಲಾ ಕರ್ನಾಟಕ ಪತ್ರಕರ್ತರ ಸಮ್ಮೇಳನವನ್ನು ಸಹ ಆಯೋಜಿಸಿದರು.
ರೋಟರಿ ಕ್ಲಬ್
[ಬದಲಾಯಿಸಿ]ವಾಮನ ಕುಡ್ವಾರವರು ಮಂಗಳೂರಿನಲ್ಲಿ ಮೊದಲ ರೋಟರಿ ಕ್ಲಬ್ ಅನ್ನು ಪ್ರಾರಂಭಿಸುವ ಜವಾಬ್ದಾರಿಯನ್ನು ಹೊಂದಿದ್ದರು. ಅವರು ಎಸ್.ಕೆ. ಅಭಿವೃದ್ಧಿ ಮತ್ತು ಕಲ್ಯಾಣ ಮಂಡಳಿ, ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘ ಮತ್ತು ಎಸ್.ಕೆ. ಗ್ರಾಮ ಕೈಗಾರಿಕೆಗಳ ಸಂಘದ ಅಧ್ಯಕ್ಷರಾಗಿದ್ದರು.
ಭಾರತದಿಂದ ಹೊರಹೋಗುವುದು ಪ್ರಯಾಸಕರವಾದರೂ ಅಪರೂಪದ ದಿನಗಳಲ್ಲಿ ಅವರು ಭಾರತ ಮತ್ತು ವಿದೇಶಗಳಿಗೆ ವ್ಯಾಪಕವಾಗಿ ಪ್ರಯಾಣಿಸಿದರು. ಅವರು ೧೯೫೧ ರಲ್ಲಿ ಮಧ್ಯಪ್ರಾಚ್ಯ, ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಹೋಗಿದ್ದರು. ೧೯೬೦ ಮತ್ತು ೧೯೬೩ ರಲ್ಲಿ ಅವರು ಮತ್ತೊಮ್ಮೆ ಯುರೋಪ್, ಯುನೈಟೆಡ್ ಸ್ಟೇಟ್ಸ್ ಮತ್ತು ಜಪಾನ್ ದೇಶಗಳಿಗೆ ಪ್ರಯಾಣಿಸಿದರು.
ಸಾಮಾಜಿಕ ನಾಯಕ
[ಬದಲಾಯಿಸಿ]ಮಣಿಪಾಲದ ಟಿ.ಎಂ.ಎ.ಪೈ ಮತ್ತು ಉಪೇಂದ್ರ ಅನಂತ್ ಪೈ ಅವರೊಂದಿಗೆ ಕುಡ್ವಾ ಸಿಂಡಿಕೇಟ್ ಬ್ಯಾಂಕಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿರ್ದೇಶಕರಲ್ಲಿ ಒಬ್ಬರಾಗಿದ್ದರು. ನಂತರದ ದಿನಗಳಲ್ಲಿ ಇದನ್ನು ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು.
೧೯೪೮ ರಲ್ಲಿ ಅವರು ದಕ್ಷಿಣ ಕೆನರಾದ ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು ಮುಂದಿನ ೩ ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರೆದರು.[೪] ಯು.ಶ್ರೀನಿವಾಸ್ ಮಲ್ಯ ಅವರೊಂದಿಗೆ ಇವರು ಎಲ್ಲಾ ಹವಾಮಾನ ಬಂದರು ಮತ್ತು ವಿಮಾನ ನಿಲ್ದಾಣವನ್ನು ಮಂಗಳೂರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅವರು ಜಿಲ್ಲೆಯ ಆರ್ಥಿಕ ಕಲ್ಯಾಣಕ್ಕಾಗಿ ಕೆಲಸ ಮಾಡಿದಾಗ ಅದರ ಶೈಕ್ಷಣಿಕ ಪ್ರಗತಿಯಲ್ಲಿಯೂ ಅವರು ಅಪಾರ ಕೊಡುಗೆ ನೀಡಿದರು. ಅವರು ೧೯೫೫ ರಲ್ಲಿ ಕೆನರಾ ವಿದೇಶಿ ವಿದ್ಯಾರ್ಥಿವೇತನ ಸಾಲ ಪ್ರಾರಂಭಿಸಿದರು.[೫] ಈಗ ಉನ್ನತ ತಾಂತ್ರಿಕ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಾಲ ಕೊಡುವುದರಲ್ಲಿ ಕೆನರಾ ಫೌಂಡೇಶನ್ ಹೆಸರುವಾಸಿಯಾಗಿದೆ. ಮತ್ತೊಮ್ಮೆ ಯು.ಶ್ರೀನಿವಾಸ್ ಮಲ್ಯ ಅವರೊಂದಿಗೆ ಸ್ಥಾಪಿಸಿದ ಕರ್ನಾಟಕ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜನ್ನು ಈಗ ಎನ್‌ಐಟಿಕೆ ಎಂದು ಕರೆಯಲಾಗುತ್ತದೆ.
ಕುಡ್ವಾರವರು ೧೯೬೭ ರಲ್ಲಿ ನಿಧನರಾದರು.ಆದರೆ ಅವರನ್ನು ಇಂದಿಗೂ ನೆನಪಿಸಿಕೊಳ್ಳುವ ಮಂಗಳೂರು ಮತ್ತು ದಕ್ಷಿಣ ಕನ್ನಡದ ಜನರಿಗೆ ಅವರು "ಕರ್ಮಯೋಗಿ" ಎಂದೆ ಪ್ರಖ್ಯಾತರು.
ಉಲ್ಲೇಖಗಳು
[ಬದಲಾಯಿಸಿ]- ↑ https://en.wikipedia.org/wiki/Vaman_Srinivas_Kudva#cite_note-1
- ↑ https://en.wikipedia.org/wiki/Vaman_Srinivas_Kudva#cite_note-Syndicate_Bank_-_ourprofile-2
- ↑ https://en.wikipedia.org/wiki/Vaman_Srinivas_Kudva#cite_note-4
- ↑ https://en.wikipedia.org/wiki/Vaman_Srinivas_Kudva#cite_note-KCCI-5
- ↑ https://en.wikipedia.org/wiki/Vaman_Srinivas_Kudva#cite_note-TCF-6