ವಿಷಯಕ್ಕೆ ಹೋಗು

ಚೆಂಚು ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೆಂಚು
చెంచు
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ 
ಪ್ರದೇಶ: ಆಂಧ್ರಪ್ರದೇಶ (ಕರ್ನೂಲ್ ಜಿಲ್ಲೆ, ಪ್ರಕಾಶಂ ಜಿಲ್ಲೆ, ಗುಂಟೂರು ಜಿಲ್ಲೆ), ತೆಲಂಗಾಣ (ಮಹಬೂಬ್‌ನಗರ ಜಿಲ್ಲೆ), ಕರ್ನಾಟಕ ಮತ್ತು ಒರಿಸ್ಸಾದಲ್ಲಿ ಹೆಚ್ಚಿನ ಸಾಂದ್ರತೆ
ಒಟ್ಟು 
ಮಾತನಾಡುವವರು:
೨೬,೦೦೦
ಭಾಷಾ ಕುಟುಂಬ:
 ದಕ್ಷಿಣ-ಮಧ್ಯ
  ತೆಲುಗು ಉಪಭಾಷೆ
   ಚೆಂಚು 
ಬರವಣಿಗೆ: ತೆಲುಗು ಅಕ್ಷರಮಾಲೆ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: cde
Indic script
Indic script
ಈ ಪುಟ ಭಾರತೀಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಅನಿಯತ ಸ್ವರಾಕ್ಷರ ಸ್ಥಾನ ಮತ್ತು ಸೇರ್ಪಡೆಗಳಲ್ಲಿ ತೊಂದರೆಗಲನ್ನು ಕಾಣಬಹುದು. ಹೆಚ್ಚು...

ಚೆಂಚು ಭಾಷೆಯು ದ್ರಾವಿಡ ಭಾಷೆಯಾಗಿದ್ದು, ಅದು ದಕ್ಷಿಣ-ಮಧ್ಯ ಕುಟುಂಬದ ತೆಲುಗು ಶಾಖೆಗೆ ಸೇರಿದೆ. ಚೆಂಚು ಮೂಲನಿವಾಸಿಗಳು ಕಾಡುಗಳ ಬೇಟೆಗಾರರು. ಸುಮಾರು ೨೮೦,೭೬೪ ಜನರು (೧೯೮೧ ಜನಗಣತಿ) ಬುಡಕಟ್ಟಿನವರಾಗಿದ್ದಾರೆ. ಈ ಭಾಷೆಯನ್ನು ಹೆಚ್ಚಾಗಿ ಭಾರತದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮಾತನಾಡುತ್ತಾರೆ. ಇದನ್ನು ಚೆಂಚುಕುಲಂ, ಚೆಂಚ್ವಾರ್, ಚೆನ್ಸ್ವರ್ ಅಥವಾ ಚೋಂಚರು ಎಂದೂ ಕರೆಯುತ್ತಾರೆ.[]

ಚೆಂಚು ಪದ ನಿಷ್ಪತ್ತಿ

[ಬದಲಾಯಿಸಿ]

ಚೆಂಚೂ(ˈchen chü') ಇದರ ಬಹುವಚನ ರೂಪ ಚೆಂಚು ಅಥವಾ ಚೆಂಚಸ್. ಇವರು ಮಧ್ಯ ಭಾರತದ ಹೈದರಾಬಾದಿನ ಜನರು. ಇವರಲ್ಲಿ ಹೆಚ್ಚಿನವರು ತೆಲುಗು ಜನಸಂಖ್ಯೆಯಿಂದ ಪ್ರಭಾವಿತರಾಗಿದ್ದಾರೆ. ಆದರೆ ಕೆಲವರು ಆಹಾರ-ಸಂಗ್ರಹಿಸುವ ಆರ್ಥಿಕತೆಗೆ ಅಂಟಿಕೊಳ್ಳುತ್ತಾರೆ. ಇವರು ಪ್ರಾಚೀನ ಭಾರತದ ಜನಾಂಗೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಕಷ್ಟಕರ ಸಂದರ್ಭಗಳ ನಡುವೆಯೂ ವಾಸಿಸುತ್ತಿದ್ದಾರೆ.[]

ಚೆಂಚು ಸಾಂಸ್ಕೃತಿಕ ಬದುಕು

[ಬದಲಾಯಿಸಿ]

ಚೆಂಚು, ದಕ್ಷಿಣ ಭಾರತದ ಜನರು. ೨೧ ನೇ ಶತಮಾನದ ತಿರುವಿನಲ್ಲಿ ಸುಮಾರು ೫೯,೦೦೦ಕ್ಕಿಂತ ಹೆಚ್ಚಿನ ಚೆಂಚುಗಳು ಆಂಧ್ರಪ್ರದೇಶ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ. ಅವರು ಈ ಪ್ರದೇಶದ ದ್ರಾವಿಡ ಭಾಷೆಯಾದ ತೆಲುಗಿನ ರೂಪಾಂತರಗಳನ್ನು ಮಾತನಾಡುತ್ತಾರೆ. ವಾಟಲ್ ಮತ್ತು ಹುಲ್ಲಿನ ಅವರ ಸುತ್ತಿನ ಮನೆಗಳು ಈ ಪ್ರದೇಶದ ಇತರ ಜನರು ಬಳಸುವಂತೆ ಭಿನ್ನವಾಗಿರುವುದಿಲ್ಲ. ಕೆಲವು ಚೆಂಚುಗಳು ಬೇಟೆಯಾಡುವ ಮೂಲಕ ಮತ್ತು ಕಾಡಿನ ಖಾದ್ಯ ಉತ್ಪನ್ನಗಳನ್ನು, ವಿಶೇಷವಾಗಿ ಗೆಡ್ಡೆಗಳನ್ನು ಸಂಗ್ರಹಿಸುವ ಮೂಲಕ ತಮ್ಮ ಆಹಾರವನ್ನು ಗಳಿಸುತ್ತಾರೆ.[] ಅವರ ಬೇಟೆಯ ಸಾಧನಗಳೆಂದರೆ ಬಿಲ್ಲು ಮತ್ತು ಬಾಣ. ಲೋಹದ ತುದಿಯ ಅಗೆಯುವ ಕೋಲು, ಕೊಡಲಿ ಮತ್ತು ಸರಳ ಚಾಕು ಕೃಷಿ ಸಾಧನಗಳು. ಚೆಂಚುಗಳು ಪ್ರಬಲವಾದ ಹಿಂದೂ ನಾಗರಿಕತೆ, ಅದಕ್ಕಿಂತಳು ಹಿಂದಿನ ಭಾರತದ ಮೂಲನಿವಾಸಿಗಳಾಗಿದ್ದಾರೆ. ಅವರ ಆಚರಣೆಗಳು ಸರಳವಾಗಿವೆ. ಅವರಲ್ಲಿ ಧಾರ್ಮಿಕ ಮತ್ತು ರಾಜಕೀಯ ವಿಶೇಷತೆಗಳು ಕಡಿಮೆ. ವೈವಾಹಿಕ ಕುಟುಂಬಗಳಾಗಿ ವಾಸಿಸುತ್ತಾರೆ. ಮಹಿಳೆಯರು ಪುರುಷರೊಂದಿಗೆ ಸಮಾನ ಶ್ರೇಣಿಯನ್ನು ಇದ್ದಾರೆ. ಪ್ರಾಯ ಪ್ರಬುದ್ಧರಾದ ನಂತರ ಮಾತ್ರ ಮದುವೆಯಾಗುತ್ತಾರೆ.[] ಆದರೂ, ಹೆಚ್ಚಿನ ಚೆಂಚುಗಳು ಕೃಷಿ ಮತ್ತು ಅರಣ್ಯ ಕಾರ್ಮಿಕರು. ಅವರು ಅಲೆಮಾರಿಗಳು, ಆಹಾರ-ಸಂಗ್ರಹಿಸಿ ಜೀವನ ಸಾಗಿಸುತ್ತಾರೆ. ಹೆಚ್ಚಿನವರು ಹಿಂದೂ ದೇವರುಗಳು ಮತ್ತು ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ ಮತ್ತು ತುಲನಾತ್ಮಕವಾಗಿ ಉನ್ನತ ಜಾತಿ ಸ್ಥಾನಮಾನವನ್ನು ಪಡೆದಿದ್ದಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Chenchu | Encyclopedia.com". www.encyclopedia.com.
  2. "Definition of CHENCHU". www.merriam-webster.com (in ಇಂಗ್ಲಿಷ್).
  3. Fürer-Haimendorf, Christoph von (1943). The Aboriginal Tribes of Hyderabad. Vol. 1, The Chenchus. London: Macmillan.
  4. "Chenchu | Tribal Community, Telangana, India | Britannica". www.britannica.com (in ಇಂಗ್ಲಿಷ್).
  5. Jinka Ramamurthy, Malavika; Hoffman, David M. (2023). ""Development" definitions of internally displaced people and the government: A study of the Chenchu tribe in the Nallamala forest of southern India". Frontiers in Conservation Science. doi:10.3389/fcosc.2023.1126168/full.{{cite web}}: CS1 maint: unflagged free DOI (link)


ಬಾಹ್ಯ ಕೊಂಡಿಗಳು

[ಬದಲಾಯಿಸಿ]