ವಿಷಯಕ್ಕೆ ಹೋಗು

ಮೆಂಬ್ರೇಸಿಡೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೆಂಬ್ರೇಸಿಡೀ
ಸೆರೇಸಾ ಟಾರೀನಾ
Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಆರ್ಥ್ರೊಪೋಡಾ
ವರ್ಗ: ಇನ್ಸೆಕ್ಟಾ
ಗಣ: ಹೆಮಿಪ್ಟೆರಾ
ಉಪಗಣ: ಆಚೆನೊರಿಂಕಾ
ಕೆಳಗಣ: ಸಿಕಾಡೊಮೊರ್ಫ಼ಾ
ಮೇಲ್ಕುಟುಂಬ: ಮೆಂಬ್ರಕಾಯ್ಡೀ
ಕುಟುಂಬ: ಮೆಂಬ್ರೇಸಿಡೀ
Rafinesque, 1815
ಉಪಕುಟುಂಬಗಳು

ಸೆಂಟ್ರೊನೊಡಿನೇ (ವಿವಾದಗ್ರಸ್ತ)
ಸೆಂಟ್ರೋಟಿನೇ
ಡಾರ್ನಿನೇ
ಎಂಡಾಯ್ಆಸ್ಟಿನೇ
ಹೆಟೆರೊನೋಟಿನೇ
ಮೆಂಬ್ರೇಸಿನೇ
ನಿಕೊಮಿಯಿನೇ (ವಿವಾದಗ್ರಸ್ತ)
ಸ್ಮೈಲಿಯಿನೇ
ಸ್ಟೆಗಾಸ್ಪಿಡಿನೇ (ವಿವಾದಗ್ರಸ್ತ)
ಮತ್ತು ಇನ್ನಷ್ಟು

Synonyms

ನಿಕೊಮಿಯಿಡೇ

ಮೆಂಬ್ರೇಸಿಡೀ ಹೆಮಿಪ್ಟೆರಾ ಉಪಗಣಕ್ಕೆ ಸೇರಿದ ಕೀಟಗಳ ಕುಟುಂಬ. ಇದರಲ್ಲಿ ಸುಮಾರು 350 ಜಾತಿಗಳಿದ್ದು ಇವೆಲ್ಲವನ್ನೂ ಒಟ್ಟಾಗಿ ಸಾಮಾನ್ಯವಾಗಿ ಮರಜಿಗಿಗಳು (ಟ್ರೀ ಹಾಪರ್ಸ್) ಎಂದು ಕರೆಯಲಾಗುತ್ತದೆ.[][] ಇವು ವಿಚಿತ್ರ ಆಕಾರವಾಗಿದ್ದು ಇವನ್ನು ಗುರುತಿಸುವುದು ಸುಲಭ. ಇವುಗಳ ಪ್ರೋನೋಟಮ್ ಭಾಗ ತಲೆಯನ್ನು ಸಂಪೂರ್ಣವಾಗಿ ಆವರಿಸಿದೆಯಲ್ಲದೆ ಉದರಭಾಗದ ಮೇಲೂ ವಿಸ್ತರಿಸಿದಂತಿದ್ದು ವಿವಿಧ ಆಕಾರವನ್ನು ತಳೆಯುತ್ತದೆ. ಕೆಲವು ಪ್ರಭೇದಗಳ ಬೆನ್ನುಭಾಗ ಗೂನಾಗಿದ್ದು ಇನ್ನು ಕೆಲವಲ್ಲಿ ಮುಳ್ಳು, ಕೋಡು ಮುಂತಾಗಿ ಬಾಚಿಕೊಂಡಿರುತ್ತದೆ. ರೆಕ್ಕೆಗಳು ತುಂಬ ತೆಳುವಾಗಿದ್ದು, ಪ್ರೋನೋಟಮ್ಮಿನ ಒಳಗೆ ಹುದುಗಿರುವುವು.

ಗಾತ್ರದಲ್ಲಿ ಇವು ಚಿಕ್ಕವು; ದೇಹದ ಉದ್ದ 16-12 ಮಿ.ಮೀ ಮೀರದು. ದೇಹದ ಬಣ್ಣ ಹಳದಿ, ಹಸುರು, ಕಂದು, ಕಪ್ಪು ಮುಂತಾಗಿ ವೈವಿಧ್ಯಮಯ.

ಇವುಗಳ ವಾಸ ಸಾಮಾನ್ಯವಾಗಿ ಮರಗಳಲ್ಲಿ ಅಥವಾ ಪೊದೆಗಳಲ್ಲಿ. ಕೆಲವು ಪ್ರಭೇದಗಳು ಮೈದಾನ ಪ್ರದೇಶಗಳಲ್ಲಿ ಬೆಳೆಯುವ ಹುಲ್ಲು, ಕಳೆಗಿಡ ಇತ್ಯಾದಿಗಳ ಮೇಲೂ ಕಾಣಬರುವುದುಂಟು.

ಸಂತಾನೋತ್ಪತ್ತಿ

[ಬದಲಾಯಿಸಿ]

ಮರಗಳ ತೊಗಟೆ, ದಾರುಭಾಗ, ಎಲೆಗಳ ಮಧ್ಯನಾಳ, ಕಾಂಡ ಮುಂತಾದ ಭಾಗಗಳಲ್ಲಿ ತಮ್ಮ ಉಳಿಯಂಥ ಅಂಡ ನಿಕ್ಷೇಪಕದ (ಓವಿಪಾಸಿಟರ್) ಸಹಾಯದಿಂದ ಮೊಟ್ಟೆಯಿಡುವುವು. ವರ್ಷದಲ್ಲಿ ಸಾಮಾನ್ಯವಾಗಿ ಎರಡು ಬಾರಿ ಸಂತಾನೋತ್ಪತ್ತಿ ಆಗುವುದು. ಮೊಟ್ಟೆಗಳಿರುವ ಕಾಂಡಭಾಗ ಒಣಗಿ ಗಿಡಗಳು ನಾಶವಾಗಬಹುದು.

ಪಿಡುಗು ಉಂಟುಮಾಡುವ ಗುಣ

[ಬದಲಾಯಿಸಿ]

ಈ ಕೀಟಗಳು ಗಿಡಮರಗಳಿಗೆ ಅಷ್ಟಾಗಿ ಹಾನಿಕರವಲ್ಲ. ಅಮೆರಿಕದಲ್ಲಿ ಸೇಬು ಗಿಡಗಳಿಗೆ ಸ್ಟಿಕ್ಟೊಸಿಫ್ಯಾಲ ಬ್ಯುಬೇಲಸ್ ಎಂಬ ಮರಜಿಗಿ (ಬಫೆಲೊ ಟ್ರೀ ಹಾಪರ್) ಕೊಂಚ ಪ್ರಮಾಣದಲ್ಲಿ ಹಾನಿಯುಂಟು ಮಾಡುತ್ತದೆ. ಭಾರತದಲ್ಲಿ ಇವುಗಳ ಪಿಡುಗು ಗಣನೀಯವಾಗಿಲ್ಲ.

ಉಲ್ಲೇಖಗಳು

[ಬದಲಾಯಿಸಿ]
  1. Britannica, The Editors of Encyclopaedia. "treehopper". Encyclopedia Britannica, 14 Feb. 2022, https://www.britannica.com/animal/treehopper. Accessed 23 November 2023.
  2. "treehopper ." The Columbia Encyclopedia, 6th ed.. . Encyclopedia.com. 17 Nov. 2023 <https://www.encyclopedia.com>.


ಹೊರಗಿನ ಕೊಂಡಿಗಳು

[ಬದಲಾಯಿಸಿ]
  • Mikó I.; et al. (2012). "On dorsal prothoracic appendages in treehoppers (Hemiptera: Membracidae) and the nature of morphological evidence". PLOS ONE. 7 (1): e30137. Bibcode:2012PLoSO...730137M. doi:10.1371/journal.pone.0030137. PMC 3260216. PMID 22272287.
  • Dietrich, C. H. Treehopper FAQ. Section for Biodiversity, Illinois Natural History Survey, Champaign, IL, USA. 2006.
  • Imagess. Family Membracidae - Treehoppers (United States and Canada). BugGuide.
  • DrMetcalf: a resource on cicadas, leafhoppers, planthoppers, spittlebugs, and treehoppers
  • Deitz, L. L. and M. S. Wallace. 2010. Treehoppers: Aetalionidae, Melizoderidae, and Membracidae (Hemiptera). North Carolina State University Insect Museum.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: