ವಿಷಯಕ್ಕೆ ಹೋಗು

ಮ್ಯಾಕ್ಸ್ ಫಾನ್ ಲವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ್ಯಾಕ್ಸ್ ಫಾನ್ ಲವೆ

ಮ್ಯಾಕ್ಸ್ ಫಾನ್ ಲವೆ (1879-1960) ಜರ್ಮನಿಯ ಒಬ್ಬ ಭೌತವಿಜ್ಞಾನಿ. ಎಂಟ್ರೊಪಿ ಪರಿಕಲ್ಪನೆಯನ್ನು ದ್ಯುತಿವಿಜ್ಞಾನಕ್ಕೆ (ಆಪ್ಟಿಕ್ಸ್) ಅನ್ವಯಿಸಿದ. ಹರಿವ ನೀರಿನಲ್ಲಿ ಬೆಳಕಿನ ವೇಗ ಕುರಿತ ಸೂತ್ರ ಐನ್‌ಸ್ಟೈನ್ ತಮ್ಮ ವಿಶೇಷ ಸಾಪೇಕ್ಷತಾ ಸಿದ್ಧಾಂತದಲ್ಲಿ (1905) ಪ್ರತಿಪಾದಿಸಿದ ಪ್ರಕಾರವೇ ಇದೆಯೆಂದು ರುಜುವಾತಿಸಿದ. ಸ್ಫಟಿಕಗಳಲ್ಲಿರುವ ಪರಮಾಣುಗಳು ಹೇಗೆ ಎಕ್ಸ್-ಕಿರಣಗಳನ್ನು ವಿವರ್ತಿಸುತ್ತವೆ ಎಂಬ ವಿದ್ಯಮಾನವನ್ನು ಆವಿಷ್ಕರಿಸಿದ (1912).[] ಈ ಆವಿಷ್ಕಾರ ಈತನಿಗೆ ನೊಬೆಲ್ ಪಾರಿತೋಷಿಕ ತಂದುಕೊಟ್ಟಿತು (1914). ಜ಼್ಯೂರಿಕ್ (1912), ಫ್ರ‍್ಯಾಂಕ್‌ಫರ್ಟ್ (1914) ಮತ್ತು ಬರ್ಲಿನ್ (1919) ನಗರಗಳ ವಿಶ್ವವಿದ್ಯಾಲಯಗಳಲ್ಲಿ ಸೇವೆಸಲ್ಲಿಸಿದ್ದ. ಬರ್ಲಿನ್-ಡಲ್‌ಹೆಲ್ಮ್‌ನಲ್ಲಿದ್ದ (ತತ್ಪೂರ್ವದ) ಕೈಸರ್ ವಿಲ್‌ಹೆಲ್ಮ್ ಇನ್‌ಸ್ಟಿಟ್ಯೂಟ್ ಫಾರ್ ಫಿಸಿಕ್ಸ್‌ನ ನಿರ್ದೇಶಕನಾಗಿ 71ನೆಯ ವಯಸ್ಸಿನಲ್ಲಿ ನೇಮಕಗೊಂಡ.

ಉಲ್ಲೇಖಗಳು

[ಬದಲಾಯಿಸಿ]
  1. Stoddart, Charlotte (1 March 2022). "Structural biology: How proteins got their close-up". Knowable Magazine. doi:10.1146/knowable-022822-1. Retrieved 25 March 2022.


ಹೊರಗಿನ ಕೊಂಡಿಗಳು

[ಬದಲಾಯಿಸಿ]