ವಿಷಯಕ್ಕೆ ಹೋಗು

ಜೂಲಿಯಸ್ ರಾಬರ್ಟ್ ಮೇಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೂಲಿಯಸ್ ಮೇಯರ್

ಜೂಲಿಯಸ್ ರಾಬರ್ಟ್ ಮೇಯರ್ (1814-78) ಜರ್ಮನಿಯ ಒಬ್ಬ ಭೌತವಿಜ್ಞಾನಿ.

ಜನನ ವಿಟೆನ್‌ಬರ್ಗ್ 25-11-1814. ಮರಣ  ಹೈಲ್‌ಬ್ರಾನ್ 20-3-1878. ವೃತ್ತಿಯಿಂದ ಈತ ವೈದ್ಯಕೀಯ ಪರಿಣಿತನಾಗಿದ್ದರೂ ಈತನನ್ನು ಸಾಮಾನ್ಯವಾಗಿ ಯಾಂತ್ರಿಕ ಉಷ್ಣೋತ್ಪಾದನಾ ಸಿದ್ಧಾಂತದ ಜನಕ ಎಂದು ಪರಿಗಣಿಸುವುದು ವಾಡಿಕೆ. ಈತನ ಎಲ್ಲ ಸಂಶೋಧನೆ 1867ರಲ್ಲಿ ಡೈ ಮೆಕಾನಿಕ್ ಡರ್‌ವಾರ್ಮ್ ಎಂಬ ಗ್ರಂಥದಲ್ಲಿ ಪ್ರಕಟವಾಯಿತು.

ಮೊದಲು ಹೀಲ್‌ಬ್ರಾನ್‌ನಲ್ಲಿಯ ವಿದ್ಯಾಶಾಲೆಯಲ್ಲಿ ಶಿಕ್ಷಣ ಪಡೆದ ಮೇಯರ್ ಮುಂದೆ ಟುಬಿಂಗೆನ್, ಮ್ಯೂನಿಕ್ ಹಾಗೂ ಪ್ಯಾರಿಸ್‌ಗಳಲ್ಲಿ ವೈದ್ಯಕೀಯ ಕಲಿತು ಪದವೀಧರನಾದ. 1840ರಲ್ಲಿ ಈತ ಹಡಗಿನ ಶಸ್ತ್ರವೈದ್ಯನಾಗಿ ಜಾವಕ್ಕೆ ಹೋದ. ಅಲ್ಲಿ ಈತ ರಕ್ತವನ್ನು ಕುರಿತ ವ್ಯಾಸಂಗಕ್ಕೆ ಅಧಿಕ ಲಕ್ಷ್ಯ ಹರಿಸಿ ತನ್ನ ಕಾರ್ಯವ್ಯಾಪ್ತಿಯನ್ನು ಪ್ರಾಣಿಜನ್ಯ ಉಷ್ಣದ ಸಂಶೋಧನೆಗೆ ವಿಸ್ತರಿಸಿದ. ಈ ಕಾರ್ಯಕ್ಕೆ ಯಾಂತ್ರಿಕ ವಿಚಾರ ಸರಣಿಯನ್ನು ಅನ್ವಯಿಸಿದ. ಮುಂದೆ 1841ರಲ್ಲಿ ಹೀಲ್‌ಬ್ರಾನ್‌ಗೆ ತಿರುಗಿಬಂದು ಹಲವು ವರ್ಷಪರ್ಯಂತ ವೈದ್ಯಕೀಯ ವೃತ್ತಿಯನ್ನು ಮುಂದುವರಿಸಿದ. ವೃತ್ತಿಯ ಹೊರಗೆ ವೈಜ್ಞಾನಿಕ ಪರಿಶ್ರಮದಲ್ಲಿ ಪೂರ್ತಿನಿರತನಾಗಿ ಉಷ್ಣಕ್ಕೆ ಸಂಬಂಧಿಸಿದ ಕ್ರಾಂತಿಕಾರಿ ಸಿದ್ಧಾಂತದ ಪ್ರಾರಂಭಿಕ ನಿರೂಪಣೆಯನ್ನು ವೈಜ್ಞಾನಿಕ ಪತ್ರಿಕೆಗಳಲ್ಲಿ ಪ್ರಕಟಿಸಿದ (1842). ಅದೇ ಪ್ರಕಟಣೆಯಲ್ಲಿ ಶಕ್ತಿ ಹಾಗೂ ಅದರ ಸಂರಕ್ಷಣೆ ಇವುಗಳೊಳಗಿನ ಅನ್ಯೋನ್ಯ ಸಂಬಂಧಗಳನ್ನು ಕುರಿತಾದ ತನ್ನ ಅಭಿಪ್ರಾಯಗಳನ್ನು ವಿವರಿಸಿದ.[][] ಮೂರು ವರ್ಷಗಳ ಅನಂತರ ತನ್ನ ಸಂಶೋಧನೆಯ ಉತ್ಪತ್ತಿ ಕುರಿತು ಸೈದ್ಧಾಂತಿಕ ಮುನ್ಸೂಚನೆಗಳನ್ನು ನೀಡಿದ. ಈತನ ಸಮಕಾಲೀನನಾದ ಜೇಮ್ಸ್ ಪ್ರೆಸ್ಕಾಟ್ ಜೌಲ್ ಇಂಗ್ಲೆಂಡಿನಲ್ಲಿ ಯಾಂತ್ರಿಕ ಉಷ್ಣದ ಸಿದ್ಧಾಂತವನ್ನು ಪ್ರಕಟಿಸಿದ. ಇದರಿಂದಾಗಿ ಈ ಸಂಶೋಧನೆಯ ಅಗ್ರಮಾನ್ಯತೆ ಯಾರಿಗೆ ಸಲ್ಲುತಕ್ಕದೆಂಬ ಬಗ್ಗೆ ವಿವಾದ ಉದ್ಭವಿಸಿತು.

ಉಲ್ಲೇಖಗಳು

[ಬದಲಾಯಿಸಿ]
  1. Mayer, Robert (1841). Paper: 'Remarks on the Forces of Nature"; as quoted in: Lehninger, A. (1971). Biogenergetics – the Molecular Basis of Biological Energy Transformations, 2nd. Ed. London: The Benjamin/Cummings Publishing Company. First Law
  2. "30+ Variations of the 1st Law of Thermodynamics". IoHT Publications. {{cite web}}: Missing or empty |url= (help)


ಹೆಚ್ಚಿನ ಓದಿಗೆ

[ಬದಲಾಯಿಸಿ]