ಜೇಮ್ಸ್ ಪ್ರೆಸ್ಕಾಟ್ ಜೂಲ್

ವಿಕಿಪೀಡಿಯ ಇಂದ
Jump to navigation Jump to search
ಜೇಮ್ಸ್ ಪ್ರೆಸ್ಕಾಟ್ ಜೂಲ್

ಜೀವನ[ಬದಲಾಯಿಸಿ]

ಜೇಮ್ಸ್ ಪ್ರೆಸ್ಕಾಟ್ ಜೂಲ್, ಇವರು ಇಂಗ್ಲೆಂಡಿನ ಸುಪ್ರಸಿದ್ಧ ಭೌತವಿಜ್ಞಾನಿ. ಇವರು ೨೪ ಡಿಸೆಂಬರ್, ೧೮೧೮ ರಲ್ಲಿ ಜನಿಸಿದರು. ಎಲ್ಲಾ ಕಾರ್ಯ ಉಷ್ಣವನ್ನು ಉತ್ಪಾದಿಸುತ್ತದೆ ಮತ್ತು ಆ ಉಷ್ಣ ,ಶಕ್ತಿಯ ಒಂದು ರೂಪ ಎಂದು ಪ್ರತಿಪಾದಿಸಿದರು. [೧]

ಸಂಶೋಧನೆ[ಬದಲಾಯಿಸಿ]

ಒಂದು ದಿನ ಜೂಲ್, ನೀರಿನ ಧಾರಕದಲ್ಲಿ ಗಾಲಿಯನ್ನ ತಿರುಗಿಸಿದಾಗ, ಆ ನೀರು ಬೆಚ್ಚಗಾಯಿತು. ಗಾಲಿಯನ್ನ ಹೆಚ್ಚು ವೇಗವಾಗಿ ತಿರುಗಿಸಿದಾಗ ನೀರು ಹೆಚ್ಚು ಬಿಸಿಯಾಯಿತು. ಗಾಲಿಯ ಮೇಲೆ ನಡೆವ ಕಾರ್ಯವು ಚಲನ ಶಕ್ತಿಯಾಗಿಯೂ ತರುವಾಯ ಉಷ್ನಶಕ್ತಿಯಾಗಿ ಬದಲಾಗುತ್ತದೆ ಎಂಬುದನ್ನು ಅವರು ಈ ಪ್ರಯೋಗದ ಮೂಲಕ ತಿಳಿಸಿಕೊಟ್ಟರು.

ಜಲಪಾತದ ತಳಭಾಗದಲ್ಲಿರುವ ನೀರು ಮೇಲ್ಮಟ್ಟದ ನೀರಿಗಿಂತಲೂ ಹೆಚ್ಚು ಬಿಸಿಯಾಗಿರುತ್ತದೆ ಎಂಬ ಸಂಗತಿಯನ್ನು ಇವರು ತಿಳಿಸಿಕೊಟ್ಟರು. ಇದರಿಂದ ಧುಮುಕುವ ನೀರಿನ ಶಕ್ತಿಯು ಉಷ್ಣವಾಗಿ ಪರಿವರ್ತನೆಯಾಗುತ್ತದೆ ಎಂಬ ಸಂಗತಿಯು ದೃಢಪಟ್ಟಿತು.[೨]

ಒತ್ತಡದಲ್ಲಿರುವ ಅನಿಲವೂ, ಒಂದು ರಂಧ್ರದ ಮೂಲಕ ಕಡಿಮೆ ಒತ್ತಡ ಪ್ರದೇಶಕ್ಕೆ ಹೋಗುವಂತೆ ಮಾಡಿದಾಗ ಅದರ ಉಷ್ಣತೆ ಇಳಿಮುಖವಾಗುತ್ತದೆ. ಇದನ್ನು ಜೂಲ್ ಥಾಮನ್ಸ್ ಅಥವಾ ಜೂಲ್ ಕೆಲ್ವಿನ್ ಪರಿಣಾಮ ಎಂದು ಕರೆಯಲಾಗುತ್ತದೆ.

ಜೇಮ್ಸ್ ಪ್ರೆಸ್ಕಾಟ್ ಜೂಲ್ ೧೮೮೯ ರಲ್ಲಿ ವಿಧಿವಶರಾದರು.

ಉಲ್ಲೇಖಗಳು[ಬದಲಾಯಿಸಿ]

  1. http://www.famousscientists.org/james-prescott-joule/
  2. http://www.britannica.com/EBchecked/topic/306625/James-Prescott-Joule