ಅಯಡೊಫಾರಮ್
ಅಯಡೊಫಾರಮ್ (ಟ್ರೈಅಯೊಡೊಮೀಥೇನ್ ಎಂದೂ ಪರಿಚಿತವಾಗಿದೆ) ಒಂದು ಸಾವಯವ ಸಂಯುಕ್ತ. ಇದರ ರಾಸಾಯನಿಕ ಸೂತ್ರ CHI3.
ತಯಾರಿಕೆ
[ಬದಲಾಯಿಸಿ]೧. ಅಯೋಡೀನನ್ನು ಮದ್ಯಸಾರದಲ್ಲಿ ಕರಗಿಸಿ ಆ ದ್ರಾವಣವನ್ನು ಸೋಡಿಯಮ್ ಕಾರ್ಬೊನೇಟ್ ಕ್ಷಾರದ ಜೊತೆಯಲ್ಲಿ ಕುದಿಸಿದಾಗ ಒಂದು ಹಳದಿ ಬಣ್ಣದ ದ್ರಾವಣ ಉತ್ಪನ್ನವಾಗುತ್ತದೆ. ಇದನ್ನು ತಣಿಸಿದರೆ ಹಳದಿ ಬಣ್ಣದ ಅಯಡೊಫಾರಮ್ ಹರಳುಗಳು (CHI₃) ಘನೀಕರಿಸುತ್ತವೆ.
೨. ಇದನ್ನು ಪಡೆಯುವ ಇನ್ನೊಂದು ವಿಧಾನ: ಮದ್ಯಸಾರ (C₂H₅.OH) ಅಥವಾ ಅಸಿಟೋನ್ (CH₃CO.CH₃) ಜೊತೆಗೆ ಸೋಡಿಯಮ್ ಕಾರ್ಬೊನೇಟ್ ಮತ್ತು ಪೊಟಾಸಿಯಮ್ ಅಯೊಡೈಡ್‌ಗಳನ್ನು ಸೇರಿಸಿ ಆ ಮಿಶ್ರಣದ ಮೂಲಕ ವಿದ್ಯುಚ್ಛಕ್ತಿ ಹಾಯಿಸಿದರೆ ಅಯಡೊಫಾರಮ್ ಸಿಕ್ಕುತ್ತದೆ.
ಮೀಥೈಲ್ ಆಲ್ಕೋಹಾಲ್ (CH₃.OH) ಮೇಲೆ ತಿಳಿಸಿದ ಯಾವ ರೀತಿಯಲ್ಲೂ ಅಯಡೋಫಾರಮನ್ನು ಕೊಡಲಾರದು. ಆದರೆ ಈಥೈಲ್ ಆಲ್ಕೋಹಾಲ್ ಇದನ್ನು ಕೊಡಬಲ್ಲದು. ಇವೆರಡು ಮದ್ಯಸಾರಗಳನ್ನು ಹೋಲಿಸಲು ಇದು ಒಳ್ಳೆಯ ಪರೀಕ್ಷೆ (ಅಯಡೊಫಾರಮ್ ಟೆಸ್ಟ್).
ಗುಣಗಳು ಮತ್ತು ಉಪಯೋಗಗಳು
[ಬದಲಾಯಿಸಿ]ಅಯಡೊಫಾರಮ್ ತೀವ್ರ ವಾಸನೆಯಿರುವ ಹಳದಿ ಬಣ್ಣದ ಹರಳು; (120) ಸೆಂ.ಗ್ರೇ.ನಲ್ಲಿ ದ್ರವೀಕರಿಸುತ್ತದೆ. ಅಯಡೊಫಾರಮ್ ಕ್ಲೋರೋಫಾರಮ್ಮನ್ನು ಅನೇಕ ಲಕ್ಷಣಗಳಲ್ಲಿ ಹೋಲುತ್ತದೆ. ಔಷಧಿಯಲ್ಲಿ ಇದನ್ನು ಕ್ರಿಮಿನಾಶಕ ವಸ್ತುವಾಗಿ ಬಳಸುತ್ತಾರೆ.[೧][೨]
ಉಲ್ಲೇಖಗಳು
[ಬದಲಾಯಿಸಿ]- ↑ Merck Index, 12 Edition, 5054
- ↑ Lyday, Phyllis A. (2005), "Iodine and Iodine Compounds", Ullmann's Encyclopedia of Industrial Chemistry, Wiley-VCH, Weinheim, pp. 1–13, doi:10.1002/14356007.a14_381.pub2, ISBN 9783527306732
ಹೊರಗಿನ ಕೊಂಡಿಗಳು
[ಬದಲಾಯಿಸಿ]- MSDS at JT Baker
- A Method for the Specific Conversion of Iodoform to Carbon Dioxide
- Preparation
- . Encyclopædia Britannica. Vol. 14 (11th ed.). 1911. p. 726.
{{cite encyclopedia}}
: Cite has empty unknown parameters:|separator=
and|HIDE_PARAMETER=
(help)