ವಿಷಯಕ್ಕೆ ಹೋಗು

ಮುಕುಟ್‍ಮಣಿಪುರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಕುಟ್‍ಮಣಿಪುರ್ ಭಾರತದ ಪಶ್ಚಿಮ ಬಂಗಾಳ ರಾಜ್ಯದ ಬ್ಞಾಕುರಾ ಜಿಲ್ಲೆಯ ಒಂದು ಹಳ್ಳಿ. ಇದು ಝಾರ್ಖಂಡ್ ಗಡಿಗೆ ಸಮೀಪದಲ್ಲಿರುವ ಕಂಗ್ಸಾಬತಿ ಮತ್ತು ಕುಮಾರಿ ನದಿಗಳ ಸಂಗಮದಲ್ಲಿದೆ.

ಭೂಗೋಳಶಾಸ್ತ್ರ

[ಬದಲಾಯಿಸಿ]

ಕಂಗಸಾಬತಿ ಯೋಜನೆ

[ಬದಲಾಯಿಸಿ]
ಮುಕುಟ್‍ಮಣಿಪುರ್ ಅಣೆಕಟ್ಟು

1956 ರಲ್ಲಿ, ಮುಕುಟ್‍ಮಣಿಪುರ್‌ನಲ್ಲಿ ಒಂದು ದೈತ್ಯ ನೀರಿನ ಅಣೆಕಟ್ಟು ಜಲಾಶಯವನ್ನು ಯೋಜಿಸಲಾಯಿತು. ಬ್ಞಾಕುರಾ, ಪುರೂಲಿಯಾ, ಪಶ್ಚಿಮ ಮೇದಿನಿಪುರ್ ಮತ್ತು ಮೇಲಿನ ಹೂಗ್ಲಿಯ ಭಾಗಗಳಲ್ಲಿ ವ್ಯಾಪಿಸಿರುವ ೮,೦೦೦ ಚದರ ಕಿಲೋಮೀಟರ್ ಕೃಷಿ ಭೂಮಿಗೆ ಪ್ರಮುಖ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಮುಕುಟ್‍ಮಣಿಪುರ್ ಅಣೆಕಟ್ಟನ್ನು ಯೋಜಿಸಲಾಗಿತ್ತು.[] ಸರೋವರದಿಂದ ಸರಿಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಬನ್‍ಗೋಪಾಲ್‍ಪುರ್ ಮೀಸಲು ಅರಣ್ಯವಿದ್ದು ಇದು ಅನೇಕ ಜಾತಿಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ.

ಮುಕುಟ್‍ಮಣಿಪುರ್ ಅಣೆಕಟ್ಟು
ಮುಕುಟ್‍ಮಣಿಪುರ್ ಪಾರ್ಶ್ವನಾಥ್ ತಿಲಾ

ಗಮನಾರ್ಹ ಆಕರ್ಷಣೆಗಳು

[ಬದಲಾಯಿಸಿ]

ಸರೋವರದಿಂದ ಸರಿಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಬನ್‍ಗೋಪಾಲ್‍ಪುರ್ ಮೀಸಲು ಅರಣ್ಯವಿದೆ. ಇದು ಅನೇಕ ಜಾತಿಯ ಸಸ್ಯ ಮತ್ತು ಪ್ರಾಣಿಗಳ ನೆಲೆಯಾಗಿದೆ. ಅಣೆಕಟ್ಟಿನಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಪ್ರಾಚೀನ ಪಟ್ಟಣವಾದ ಅಂಬಿಕಾನಗರ್, ಒಂದು ಕಾಲದಲ್ಲಿ ಜೈನರ ಪ್ರಮುಖ ಯಾತ್ರಾ ಸ್ಥಳವಾಗಿತ್ತು. ಆದರೆ, 1898ರಲ್ಲಿ ಒಂದು ಪ್ರವಾಹವು ಉಳಿದಿರುವ ಹೆಚ್ಚಿನ ಭಾಗವನ್ನು ನಾಶಮಾಡಿತು.[]

ಮುಕುಟ್‍ಮಣಿಪುರ್ 10.8 ಕಿಮೀ ಉದ್ದದ ಮಾನವ ನಿರ್ಮಿತ ಮಣ್ಣಿನ ದಂಡೆಯ ಶುದ್ಧ ನೀರಿನ ಅಣೆಕಟ್ಟಿಗೆ ನೆಲೆಯಾಗಿದೆ. ಇದು ಬೇಸಿಗೆಯ ತಿಂಗಳುಗಳಲ್ಲಿ ನೀರಾವರಿಗಾಗಿ ಕಂಗಸಾಬತಿ ಮತ್ತು ಕುಮಾರಿ ನದಿಗಳನ್ನು ಬ್ಞಾಕುರಾ, ಪುರುಲಿಯಾ ಮತ್ತು ಮಿಡ್ನಾಪುರದ ಮೂರು ಬರಪೀಡಿತ ಜಿಲ್ಲೆಗಳಿಗೆ ಕಾಲುವೆ ಮೂಲಕ ಹರಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]


ಹೊರಗಿನ ಕೊಂಡಿಗಳು

[ಬದಲಾಯಿಸಿ]