ವಿಷಯಕ್ಕೆ ಹೋಗು

ವಿ. ಈಶ್ವರಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿ. ಈಶ್ವರಯ್ಯ
ವಿ. ಈಶ್ವರಯ್ಯ
ವಿ. ಈಶ್ವರಯ್ಯ
ಜನನ10 ಮಾರ್ಚ್, 1951
ನೆಮಿಲ್ಲಕಳ್ವ ಹಳ್ಳಿ, ತೆಲಂಗಾಣ
ರಾಷ್ಟ್ರೀಯತೆಭಾರತೀಯ

ವಂಗಲಾ ಈಶ್ವರಯ್ಯ, ಅಥವಾ ವಿ. ಈಶ್ವರಯ್ಯ ಅವರು ೧೯.೦೯.೨೦೧೩ ರಿಂದ ಸೆಪ್ಟೆಂಬರ್ ೨೦೧೬ ರವರೆಗೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿದ್ದರು.[] ಈ ನೇಮಕಾತಿಗೆ ಮೊದಲು, ಅವರು ಭಾರತದ ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ೧೯೯೯ರಲ್ಲಿ ಅವರನ್ನು ಆಂಧ್ರಪ್ರದೇಶದ ಹೆಚ್ಚುವರಿ ನ್ಯಾಯಾಧೀಶ

ರಾಗಿ ಸಾಂವಿಧಾನಿಕ ಹುದ್ದೆಗೆ ಏರಿಸಲಾಯಿತು ಮತ್ತು ೨೦೦೦ರಲ್ಲಿ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. [] ನಂತರದಲ್ಲಿ ಭಾರತ ಸರ್ಕಾರವು ೨೩ ಸೆಪ್ಟೆಂಬರ್ ೨೦೧೩ ರಂದು, ಆಗ ಆಂಧ್ರಪ್ರದೇಶ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದ ವಂಗಲಾ ಈಶ್ವರಯ್ಯ ಅವರನ್ನು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ (NCBC) ಅಧ್ಯಕ್ಷರನ್ನಾಗಿ ನೇಮಿಸಿತು. ಹಿಮಾಚಲ ಪ್ರದೇಶ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾದ ನ್ಯಾಯಮೂರ್ತಿ ಎಂ.ಎನ್.ರಾವ್ ರವರು ವಂಗಲಾ ಈಶ್ವರಯ್ಯ ಅವರ ನಂತರ ಈ ಹುದ್ದೆಯನ್ನು ಅಲಂಕರಿಸಿದರು. - ಇನ್ನಷ್ಟು ನೋಡಿ: ಪ್ರೊಫೈಲ್ ನೋಡಿ: ನ್ಯಾ. ವಿ. ಈಶ್ವರಯ್ಯ, ಅಧ್ಯಕ್ಷರು, ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ.

ಅವರು ಒಂದು ಜರ್ನಲ್‌ಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳುತ್ತಾರೆ, "ಜನರು ಮತ್ತು ಸಮಾಜದ ಮನಸ್ಥಿತಿಯು ಬದಲಾಯಿಸಿ, ಕಾನೂನುಗಳನ್ನು ಗೌರವಿಸುವುದನ್ನು ಕಲಿಯದ ಹೊರತು ನಾವು ಎಷ್ಟೇ ಹೊಸ ಕಾನೂನುಗಳನ್ನು ಜಾರಿಗೆ ತಂದರೂ ಅಪರಾಧವನ್ನು ಪೂರ್ತಿಯಾಗಿ ನಿರ್ನಾಮ ಮಾಡಲಾಗದು; ಕಡಿಮೆ ಮಾಡಬಹುದಷ್ಟೇ. ವಿಧೇಯತೆ, ಪ್ರಾಮಾಣಿಕತೆ ಮತ್ತು ಉನ್ನತ ಮೌಲ್ಯಗಳು ಕ್ರಮೇಣ ಬೆಲೆ ಕಳೆದುಕೊಳ್ಳುತ್ತಿರುವುದರಿಂದ ಕಾನೂನುಗಳು ಪರಿಣಾಮಕಾರಿಯಾಗಲು ಸಾಧ್ಯವಾಗುತ್ತಿಲ್ಲ". []

ಅವರು ಬ್ರಹ್ಮ ಕುಮಾರಿ ಆಧ್ಯಾತ್ಮಿಕ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಲೇಖರಾಜ್ ಕೃಪಲಾನಿ ಅವರಿಂದ ಪ್ರಭಾವಿತರಾಗಿದ್ದಾರೆ. ಪಾಕಿಸ್ತಾನದ ಸಿಂಧ್‌ನಲ್ಲಿರುವ ಸಿಂಧಾಲಜಿಯ ಇನ್‌ಸ್ಟಿಟ್ಯೂಟ್‌ಗೆ ಭೇಟಿ ನೀಡಿದಾಗ, ಅವರು ಗಡಿ ಘರ್ಷಣೆಗಳ ಹತೋಟಿಗೆ ಮೀಸಲಿಟ್ಟ ರಕ್ಷಣಾ ಬಜೆಟ್ ಅನ್ನು ಕಡಿತಗೊಳಿಸುವ ಮೂಲಕ ಸಾರ್ವತ್ರಿಕ ಶಾಂತಿ, ಸಾಮರಸ್ಯ ಮತ್ತು ತಮ್ಮ ಜನರ ಅಭಿವೃದ್ಧಿಯತ್ತ ಗಮನ ಹರಿಸುವಂತೆ ಭಾರತ ಮತ್ತು ಪಾಕಿಸ್ತಾನಕ್ಕೆ ಕರೆ ನೀಡಿದರು.

ಅವರು 2020 ರಲ್ಲಿ ಜಗನ್ ಮೋಹನ್ ರೆಡ್ಡಿ ಸರ್ಕಾರದಿಂದ ಪ್ರಭಾವಿತರಾಗಿ ಉಚ್ಚ ನ್ಯಾಯಲಯವನ್ನು ದೂರಿದರು. ಎಬಿಎನ್ ಸುದ್ದಿ ಚಾನೆಲ್‌ನಲ್ಲಿ ಆಡಿಯೋ ಸೋರಿಕೆಯಾದ ಬಗ್ಗೆ ಇವರ ಮೇಲೆ ಆರೋಪ ಬಂದಿತ್ತು.

ವೃತ್ತಿ ಜೀವನ

[ಬದಲಾಯಿಸಿ]

ಅವರು ಹೈದರಾಬಾದ್‌ನ ಸಿಟಿ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ( ಬಿಎಸ್‌ಸಿ) ಅಂತಿಮ ವರ್ಷದಲ್ಲಿ ಓದುತ್ತಿದ್ದಾಗ ವಿವಾಹವಾದರು. ಮದುವೆಯ ನಂತರ, ಅವರ ಚಿಕ್ಕಪ್ಪ ವೈದ್ಯಕೀಯದಲ್ಲಿ ಡಿಗ್ರಿ ಮಾಡಲು ಪ್ರೋತ್ಸಾಹಿಸಿದರು. ಆದರೆ ಅವರ ಕುಟುಂಬ ಸದಸ್ಯರ ಸಾವಿನಿಂದಾಗಿ ಪ್ರವೇಶ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ.

ಅವರು ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಪದವಿ ಪಡೆದರು. ಅವರು ೧೯೭೮ರಲ್ಲಿ ವಕೀಲಿ ವೃತ್ತಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ಹಿರಿಯ ವಕೀಲ ತಲ್ಲೂರಿ ದಶರಥ ರಾಮಯ್ಯ ಅವರ ಅಡಿಯಲ್ಲಿ ಅಬಕಾರಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಲು ಪ್ರಾರಂಭಿಸಿದರು. ೧೯೮೦ರಿಂದಲೇ ಅವರು ಸ್ವತಂತ್ರ ವಕೀಲನಾಗಿ ಹೈದರಾಬಾದ್‌ನ ಹೈಕೋರ್ಟ್‌ಗಳು ಮತ್ತು ಸಿವಿಲ್ ನ್ಯಾಯಾಲಯಗಳಲ್ಲಿ ಸಿವಿಲ್, ಕ್ರಿಮಿನಲ್, ಸೇವೆ ಮತ್ತು ಸಾಂವಿಧಾನಿಕ ವಿಷಯಗಳನ್ನು ನಿರ್ವಹಿಸಲು ಆರಂಭಿಸಿದರು. []

ಅವರು ಜನವರಿ ೧೯೯೦ ರಿಂದ ಡಿಸೆಂಬರ್ ೧೯೯೪ ರವರೆಗೆ ಐದು ವರ್ಷಗಳ ಕಾಲ ಸರ್ಕಾರಿ ಪ್ಲೀಡರ್ ಆಗಿ ಕೆಲಸ ಮಾಡಿದರು. ಅವರು ಆಂಧ್ರಪ್ರದೇಶದ ಡೈರಿ ಅಭಿವೃದ್ಧಿ ನಿಗಮ ನಿಯಮಿತ (ಎಪಿಡಿಡಿಸಿಎಲ್) ಮತ್ತು ನಲ್ಗೊಂಡ ಜಿಲ್ಲಾ ಸಹಕಾರಿ ಕೇಂದ್ರೀಯ ಬ್ಯಾಂಕಿನ ಸ್ಥಾಯಿ ಸಲಹೆಗಾರರಾಗಿ ಕೆಲಸ ಮಾಡಿದರು. ಅವರು ಸಿಕಂದರಾಬಾದ್‌ನ ಮದರ್ ತೆರೇಸಾ ಚಾರಿಟಿಯಲ್ಲಿಯೂ ಸಲಹೆಗಾರರಾಗಿದ್ದರು.

೧೭ ಮೇ ೧೯೯೯ ರಂದು, ಅವರನ್ನು ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ನಂತರ, ಅವರು ೨೦ ಏಪ್ರಿಲ್ ೨೦೦೦ ರಂದು ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡರು ಹಾಗೂ ಈಗಲೂ ಗೌರವ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದಾರೆ.

ಅವರ ನೇಮಕಾತಿಯ ದಿನಾಂಕದಿಂದ ಅವರು ಸಸ್ಯಾಹಾರಿಗಳಾಗಿ ಬದಲಾದರು ಮತ್ತು ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದಂದಿನಿಂದ, ವಚನಬದ್ಧನಾಗಿ ಉಳಿಯಲು ಆಧ್ಯಾತ್ಮಿಕ ಉನ್ನತಿಗಾಗಿ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದರು. ಅವರು ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅನುಯಾಯಿ.

ತೀರ್ಪುಗಳು

[ಬದಲಾಯಿಸಿ]

ವೈಎಸ್ಆರ್ ಸರ್ಕಾರವು ತಮ್ಮ ಪಕ್ಷದ ಸದಸ್ಯರಾದ ರಾಜಗೋಪಾಲ್ ಲಗಡಪತಿ ಒಡೆತನದ ಎಮಾರ್ ಪ್ರಾಪರ್ಟೀಸ್ ಮತ್ತು ಲ್ಯಾಂಕೋ ಗ್ರೂಪ್ ಗೆ, ಮುಸ್ಲಿಂ ವಕ್ಫ್ ಬೋರ್ಡ್‌ಗಳಿಗೆ ಸೇರಿದ ಸ್ಥಳಗಳಲ್ಲಿ ಗಗನಚುಂಬಿ ಕಟ್ಟಡವನ್ನು ನಿರ್ಮಿಸಲು ಕಾನೂನುಬಾಹಿರವಾಗಿ ಸ್ಥಳ ಹಂಚಿಕೆ ಮಾಡಿತ್ತು. ವಂಗಲಾ ಈಶ್ವರಯ್ಯನವರು ಈ ಯೋಜನೆಯನ್ನು ಮಧ್ಯಂತರ ಆದೇಶದ ಮೂಲಕನಿಲ್ಲಿಸಿದರು. []

ಆಡಳಿತದಲ್ಲಿರುವ ರಾಜಕೀಯ ಪಕ್ಷಗಳು ವಿರೋಧ ಪಕ್ಷಗಳ ಮೇಲೆ ಕಿರುಕುಳ ನೀಡುವ ಉದ್ದೇಶಕ್ಕಾಗಿ ಕಾನೂನಿನ ದುರ್ಬಳಕೆ ಮಾಡುವುದನ್ನು ತಡೆಗಟ್ಟಲು, ಪೊಲೀಸ್ ಅಧಿಕಾರಿಗಳು ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಅವರು ನಿಷೇಧಿಸಿದರು. []

ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ಸಿಕ್ಕಿಬಿದ್ದ ಉದ್ಯೋಗಿಗಳಿಗೆ ಜಾತಿ ಅಥವಾ ಧರ್ಮದ ಆಧಾರದ ಮೇಲೆ ಪಕ್ಷಪಾತ ಮಾಡಿದಾಗ, ತಪ್ಪಿತಸ್ಥರ ಜಾತಿಯನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲರ ಮೇಲೂ ಸಮಾನವಾಗಿ ಶಿಕ್ಷಾಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವಂತೆ ಏಕರೂಪ ಕಾರ್ಯವಿಧಾನವನ್ನು ರೂಪಿಸಿ ನ್ಯಾಯಯುತ ಹಾಗೂ ನಿಷ್ಪಕ್ಷಪಾತ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಆಡಳಿತದಲ್ಲಿದ್ದ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದರು. 

ಎಮಾರ್ ಪ್ರಾಪರ್ಟೀಸ್ ಮತ್ತು ಸಂಬಂಧಿ ಸಂಸ್ಥೆಗಳು ಮಾಡಿದ ವಂಚನೆ ಮತ್ತು ಭ್ರಷ್ಟ ಚಟುವಟಿಕೆಗಳ ಕಾರಣದಿಂದ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಒದಗಿದ ಕಾರಣ, ಶಾಸಕರಾದ ಶ್ರೀ.ಶಂಕರ್ ರಾವ್ ಅವರು ಬರೆದ ಪತ್ರಗಳ ಮೇಲೆ ರಿಟ್ ಅರ್ಜಿಗಳನ್ನು ನಿರ್ವಹಿಸಬಹುದೆಂದು ಅವರು ನಿರ್ಧರಿಸಿದರು. ಮೇಲ್ಕಾಣಿಸಿದ ಸಂಸ್ಥೆಗಳು ಮಾಜಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಹಾಗೂ ಅವರ ಪುತ್ರನಾದ ವೈಎಸ್ ಜಗನ್ ಮೋಹನ್ ರೆಡ್ಡಿ ಅವರುಗಳು ಹುಟ್ಟು ಹಾಕಿದ ಸಂಸ್ಥೆಗಳಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವುದರಿಂದ, ವೈಎಸ್ ಜಗನ್ ಮೋಹನ್ ರೆಡ್ಡಿಯವರು ತಮ್ಮ ತಂದೆಯವರ ಸ್ಥಾನಮಾನಗಳನ್ನು ಬಳಸಿಕೊಂಡು, ಆ ಸಂಸ್ಥೆಗಳಿಗೆ ವಂಚನೆ ಮಾಡಲು ಅನುವು ಮಾಡಿಕೊಟ್ಟರೆಂಬುದು ಶ್ರೀ ಶಂಕರ ರಾವ್ ರವರ ಪತ್ರಗಳ ಸಾರಾಂಶವಾಗಿತ್ತು. []

ಬಾಹ್ಯ ಸಂಪರ್ಕ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Appointment of NCSC, NCBC Chairpersons by year end: Thaawar Chand Gehlot". 3 November 2016.
  2. ೨.೦ ೨.೧ "Hon". Supremecourtcaselaw.com. Archived from the original on 2012-03-01. Retrieved 2012-07-09.
  3. "Suman Cine Hero". Goudsinfo.com. Archived from the original on 2012-03-01. Retrieved 2012-07-09.
  4. "Andhra HC puts Lanco skyscraper on hold". Indian Express. 2007-10-04. Retrieved 2012-07-09.
  5. "Andhra Pradesh / Hyderabad News : Police restrained in their action against TDP leaders". The Hindu. 2005-11-30. Archived from the original on 2007-11-20. Retrieved 2012-07-09.
  6. Kumar, M Sagar (2009-10-11). "Act uniformly in ACB cases, HC tells govt". The Times of India. Archived from the original on 2012-10-25. Retrieved 2012-07-09.