ಸದಸ್ಯ:Meera Gopala Rao/Brigade Road
12°58′26″N 77°36′27″E / 12.973801°N 77.6075°E12°58′26″N 77°36′27″E / 12.973801°N 77.6075°E{{#coordinates:}}: cannot have more than one primary tag per page
ಬ್ರಿಗೇಡ್ ರಸ್ತೆ ಒಂದು ದೊಡ್ಡ ವಾಣಿಜ್ಯ ಕೇಂದ್ರವಾಗಿದೆ. ಭಾರತದ ಕರ್ನಾಟಕ ರಾಜ್ಯದ ಬೆಂಗಳೂರಿನ ಹೃದಯಭಾಗದಲ್ಲಿರುವ ಅತ್ಯಂತ ಜನನಿಬಿಡ ವ್ಯಾಪಾರಿ ಸ್ಥಳಗಳಲ್ಲಿ ಒಂದಾಗಿದೆ, [೧] . ಇದು ಎಂ ಜಿ ರಸ್ತೆಯಿಂದ ಹೊಸೂರು ರಸ್ತೆಯವರೆಗೆ ಏಕಮುಖ ಸಂಪರ್ಕ ರಸ್ತೆಯಾಗಿದ್ದು, ರೆಸಿಡೆನ್ಸಿ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ಅನ್ನು ಜೋಡಿಸುತ್ತದೆ.
ಈ ರಸ್ತೆಯಲ್ಲಿರುವ ಗಮನಾರ್ಹ ಕಟ್ಟಡಗಳಲ್ಲಿ ಸೇಂಟ್ ಪ್ಯಾಟ್ರಿಕ್ ಚರ್ಚ್ ಮತ್ತು ಬೆಂಗಳೂರು ಒಪೇರಾ ಹೌಸ್ ಸೇರಿವೆ. ಒಪೆರಾ ಹೌಸ್ ಅನ್ನು ಪ್ರಸ್ತುತ ಸ್ಯಾಮ್‌ಸಂಗ್ ಗುತ್ತಿಗೆ ಪಡೆದಿದೆ. ಹಾಗಾಗಿ ಇದನ್ನು ಸ್ಯಾಮ್‌ಸಂಗ್ ಒಪೇರಾ ಹೌಸ್ ಎಂದು ಕರೆಯಲಾಗುತ್ತದೆ. ಬಹುರಾಷ್ಟ್ರೀಯತೆಯ ದೃಷ್ಟಿಯಿಂದ ಇದೊಂದು ಅನುಭವ ಕೇಂದ್ರವಾಗಿ ಮತ್ತು ಅಂಗಡಿಯಾಗಿ ಬಳಸಲ್ಪಡುತ್ತದೆ. [೨] ಇನ್ನೊಂದು ಗಮನಾರ್ಹ ಹೆಗ್ಗುರುತೆಂದರೆ ಸಪ್ಪರ್ ವಾರ್ ಮೆಮೋರಿಯಲ್. ಇದು ಮದ್ರಾಸ್ ಸಪ್ಪರ್ಸ್ ಮತ್ತು ಮೈನರ್ಸ್ (ಮದ್ರಾಸ್ ಇಂಜಿನಿಯರ್ ಗ್ರೂಪ್) ನ ಸೈನಿಕರಿಗೆ ಸಮರ್ಪಿತವಾದ ಮೊದಲ ವಿಶ್ವಯುದ್ಧದ ಸ್ಮಾರಕ.
ಈ ರಸ್ತೆಯು ವಾಣಿಜ್ಯ ಕೇಂದ್ರವಾಗಿ ಅತ್ಯಂತ ಪ್ರಸಿದ್ಧವಾಗಿದೆ. ಇದು ಹಲವಾರು ಶಾಪಿಂಗ್ ಕೇಂದ್ರಗಳು, ಪುಸ್ತಕ ಮಳಿಗೆಗಳು ಮತ್ತು ಅಂತರರಾಷ್ಟ್ರೀಯ ಬ್ರಾಂಡ್‌ಗಳ ಚಿಲ್ಲರೆ ಮಾರಾಟ ಮಳಿಗೆಗಳನ್ನು ಹೊಂದಿದೆ. ಇದು ಅನೇಕ ಕೆಫೆಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು ಮತ್ತು ಇತರ ಮನೋರಂಜನಾ ಕೇಂದ್ರಗಳನ್ನು ಹೊಂದಿದೆ. ಈ ರಸ್ತೆಯು ಹಲವು ವರ್ಷಗಳಿಂದ ಬೆಂಗಳೂರು ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಕೇಂದ್ರವಾಗಿದೆ. ಬೀದಿಯುದ್ದಕ್ಕೂ ಬಣ್ಣಬಣ್ಣದ ದೀಪಗಳಿಂದ ಸಿಂಗರಿಸಲಾಗುತ್ತದೆ ಮತ್ತು ಇಡೀ ರಸ್ತೆಯು ಸಂಭ್ರಮಾಚರಣೆಗಾಗಿ ಮೀಸಲಾಗಿರುತ್ತದೆ. ಭಾರತದ ಮೊದಲ ಕೆಎಫ್‌ಸಿ ಮಳಿಗೆ ಜೂನ್ ೧೯೯೫ರಲ್ಲಿ ಬ್ರಿಗೇಡ್ ರಸ್ತೆಯಲ್ಲಿ ಆರಂಭವಾಯಿತು. [೩] [೪]
೨೦೦೪ರಲ್ಲಿ, ರಸ್ತೆಯ ೮೫ ಪಾರ್ಕಿಂಗ್ ತಾಣಗಳನ್ನು ನಿರ್ವಹಿಸಲು ಪಾರ್ಕಿಂಗ್ ಮೀಟರ್‌ಗಳನ್ನು ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳಲಾಯಿತು. ಇಲ್ಲಿ ಒಂದು ದಿನದಲ್ಲಿ ಸರಾಸರಿ ೧೪೦೦ ಕಾರುಗಳು ನಿಲುಗಡೆ ಮಾಡುತ್ತವೆ. [೫]
ಬ್ರಿಗೇಡ್ ರಸ್ತೆಯು ಬಸ್ ನಿಲ್ದಾಣವನ್ನು ಹೊಂದಿದೆ. ನಮ್ಮ ಮೆಟ್ರೋ ಪರ್ಪಲ್ ಲೈನ್‌ನಲ್ಲಿರುವ ಎಂಜಿ ರೋಡ್ ಮೆಟ್ರೋ ನಿಲ್ದಾಣದಿಂದಲೂ ಇದನ್ನು ಪ್ರವೇಶಿಸಬಹುದು.
-
ಬೆಂಗಳೂರಿನ ಬ್ರಿಗೇಡ್ ರಸ್ತೆಯ ಸಂಜೆ ಸೊಬಗು
-
ಬ್ರಿಗೇಡ್ ರಸ್ತೆಯಲ್ಲಿರುವ ಕೆಎಫ್‌ಸಿ ರೆಸ್ಟೋರೆಂಟ್
-
ಹೊಸ ವರ್ಷದ ಆಚರಣೆಗಾಗಿ ವರ್ಣರಂಜಿತ ದೀಪಗಳಿಂದ ರಸ್ತೆಯನ್ನು ಅಲಂಕರಿಸಲಾಗಿದೆ
-
ಎಂಜಿ ರಸ್ತೆಯ ಪ್ರವೇಶದ್ವಾರಕ್ಕೆ ಮುಖ ಮಾಡಿರುವ ಬ್ರಿಗೇಡ್ ರಸ್ತೆಯ ಉತ್ತರ ಭಾಗದ ನೋಟ
-
ಸಪ್ಪರ್ ಯುದ್ಧ ಸ್ಮಾರಕ
ಉಲ್ಲೇಖಗಳು
[ಬದಲಾಯಿಸಿ][[ವರ್ಗ:ಭಾರತದಲ್ಲಿ ಶಾಪಿಂಗ್ ಜಿಲ್ಲೆಗಳು ಮತ್ತು ಬೀದಿಗಳು]] [[ವರ್ಗ:ಬೆಂಗಳೂರಿನ ಪ್ರವಾಸಿ ಆಕರ್ಷಣೆಗಳು]]
- ↑ "Bangalore | Bengaluru | Garden City | Bangalore Tourism | Silicon Valley Of India". Archived from the original on 31 March 2008. Retrieved 1 April 2008.
- ↑ "A Binary Saga: Samsung Opera House, Bengaluru". outlookindia.com/outlooktraveller/ (in ಇಂಗ್ಲಿಷ್). Archived from the original on 18 December 2020. Retrieved 2020-08-30.
- ↑ "Farmers Attack Kentucky Fried Chicken Outlet". AP NEWS. Archived from the original on 7 January 2021. Retrieved 2021-01-05.
- ↑ White, Michael (2009). A short course in international marketing blunders [electronic resource]: mistakes made by companies that should have known better (in ಇಂಗ್ಲಿಷ್). World Trade Press. ISBN 978-1-60780-008-8. Archived from the original on 7 January 2021. Retrieved 5 January 2021.
- ↑ "Military precision on Brigade Road". The Hindu. Bangalore. 17 June 2013. Retrieved 2013-08-06.