ಸದಸ್ಯ:Maadhavapriyaa/ನನ್ನ ಪ್ರಯೋಗಪುಟ
ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಗಣೇಶ ದೇವಸ್ಥಾನ
[ಬದಲಾಯಿಸಿ]ಕರ್ನಾಟಕದ ಕಡಲ ತೀರವು ಗಣಪತಿ ದೇವಸ್ಥಾನಗಳಿಗೆ ಪ್ರಸಿದ್ಧವಾಗಿದೆ. ಗೋಕರ್ಣ, ಹಟ್ಟಿ ಅಂಗಡಿ, ಸೌತಡ್ಕ, ಶರವು ಹೀಗೆ ಪ್ರಸಿದ್ಧವಾಗಿರುವ ಗಣೇಶನ ದೇವಸ್ಥಾನಗಳಲ್ಲಿ ಇಡಗುಂಜಿ ವಿನಾಯಕ ದೇವಸ್ಥಾನವು ಕೂಡ ಸೇರಿದೆ.
ಪುರಾಣ ಕಥೆ
[ಬದಲಾಯಿಸಿ]೧೫೦೦ ವರುಷಗಳಿಗೂ ಹೆಚ್ಚಿನ ಇತಿಹಾಸ ಇಡಗುಂಜಿ ದೇವಸ್ಥಾನದ್ದು. ಇಲ್ಲಿನ ಸ್ಥಳ ಪುರಾಣ ಹೇಳುವಂತೆ ಕಲಿಯುಗದ ಆರಂಭದಲ್ಲಿ ವಾಲಖೀಲ್ಯ ಮುನಿಗಳು ತಮ್ಮ ತಪಸ್ಸಿಗೆ ರಾಕ್ಷಸರಿಂದ ಉಂಟಾಗುತ್ತಿದ್ದ ತೊಂದರೆಗಳನ್ನು ನಿವಾರಿಸುವಂತೆ ನಾರದ ಮುನಿಗಳನ್ನು ಪ್ರಾರ್ಥಿಸುತ್ತಾರೆ. ಆಗ ನಾರದ ಮುನಿಗಳು ಪಾರ್ವತಿ ಮಾತೆಯ ಬಳಿ ಬಾಲಗಣಪತಿಯನ್ನು ಈ ಪ್ರದೇಶಕ್ಕೆ ಕಳುಹಿಸಿಕೊಡುವಂತೆ ಕೇಳಿಕೊಳ್ಳುತ್ತಾರೆ. ತಾಯಿಯ ಆಣತಿಯಂತೆ ಗಣೇಶ ಈ ಪ್ರದೇಶದಲ್ಲಿ ಬಂದು ನೆಲೆಗೊಳ್ಳುತ್ತಾಣೆ. ಬಳಿಕ ಗಣಪತಿಯ ಆಶೀರ್ವಾದದಿಂದ ವಾಲಖೀಲ್ಯ ಮುನಿಗಳು ತಪಸ್ಸಾನಾಚರಿಸಿ ಸಿದ್ಧಿಯನ್ನು ಪಡೆದುಕೊಳ್ಳುತ್ತಾರೆ. ಅಲ್ಲದೇ ಕಲಿಯುಗಾರಂಭಲ್ಲಿ ರಾಕ್ಷಸ ಸಂಹಾರಾರ್ಥವಾಗಿ ಭೇಟಿಯಿತ್ತಿದ್ದ ತ್ರಿಮೂರ್ತಿಗಳು ಈ ಪ್ರದೇಶದಲ್ಲಿ ಚಕ್ರತೀರ್ಥ ಹಾಗೂ ಬ್ರಹ್ಮತೀರ್ಥ ಎಂಬ ಹೊಂಡಗಳನ್ನೂ ಹಾಗೂ ನಾರದಮುನಿಗಳು ದೇವತೀರ್ಥ ಎಂಬ ಇನ್ನೊಂದು ಹೊಂಡವನ್ನೂ ನಿರ್ಮಿಸಿದ್ದರು ಎಂದೂ ಹೇಳುತ್ತದೆ ಇಲ್ಲಿನ ಸ್ಥಳಪುರಾಣ. [೧]
ಗಣೇಶ ಮೂರ್ತಿಯ ವಿಶೇಷತೆ
[ಬದಲಾಯಿಸಿ]- ಇಲ್ಲಿ ಗಣೇಶನು ದ್ವಿಭುಜ ಭಂಗಿಯಲ್ಲಿ ಆಕರ್ಷಕ ಕಪ್ಪು ಶಿಲೆಯ ಮೂರ್ತಿಯಾಗಿ ಪೀಠವೊಂದರ ಮೇಲೆ ನಿಂತಿದ್ದಾನೆ.
- ಇಲ್ಲಿನ ಗಣೇಶನ ಮೂರ್ತಿಯು ಎರಡು ದಂತಗಳನ್ನು ಹೊಂದಿದ್ದಾನೆ.
- ಬಲಗೈನಲ್ಲಿ ಪದ್ಮವನ್ನೂ, ಎಡಗೈನಲ್ಲಿ ಮೋದಕ ತುಂಬಿದ ಪಾತ್ರೆಯನ್ನೂ ಹಿಡಿದಿದ್ದಾನೆ.
- ಜೊತೆಗೆ ಸೊಂಡಿಲಿನಿಂದ ಮೋದಕವನ್ನು ಸವಿಯುತ್ತಿದ್ದಾನೆ ಬಾಲಗಣೇಶ.
- ಈ ಮೂರ್ತಿಯ ಮತ್ತೆರಡು ವಿಶೇಷತೆಗಳೆಂದರೆ ಇಲ್ಲಿ ಗಣೇಶನ ಹೊಟ್ಟೆಗೆ ನಾಗರವನ್ನು ಸುತ್ತಿಲ್ಲ ಹಾಗೂ ಪಕ್ಕದಲ್ಲಿ ಎಂದಿನಂತೆ ಇರುವ ಮೂಷಿಕನೂ ಇಲ್ಲ.
ಸರಿಸುಮಾರು ಎರಡು ಸಾವಿರಕ್ಕೂ ಹೆಚ್ಚು ಇತಿಹಾಸ ಹೊಂದಿದೆ ಎನ್ನಲಾಗಿರುವ ಈ ಗಣೇಶನ ಮೂರ್ತಿಯನ್ನು ಮಹೋತಭಾರ ಶ್ರೀ ವಿನಾಯಕ ದೇವರು ಎಂದೂ ಕರೆಯಲಾಗುತ್ತದೆ.[೨]
ಎಲ್ಲಿದೆ?
[ಬದಲಾಯಿಸಿ]ಉತ್ತರ ಕನ್ನಡ ಜಿಲ್ಲೆಯ ''ಹೊನ್ನಾವರ'' ತಾಲ್ಲೂಕಿನಲ್ಲಿದೆ ಇಡಗುಂಜಿ ದೇವಸ್ಥಾನ.
ತಲುಪುವುದು ಹೇಗೆ?
[ಬದಲಾಯಿಸಿ]ಇಡಗುಂಜಿಗೆ
- ರಸ್ತೆ ಮಾರ್ಗ
- ಹತ್ತಿರದ ರೈಲು ನಿಲ್ದಾಣ
- ಹೊನ್ನಾವರ (ಕೊಂಕಣ ರೈಲ್ವೆ) ಅಥವಾ ಮುರುಡೇಶ್ವರ (ಕೊಂಕಣ ರೈಲ್ವೆ)ಗಳು
- ಸಮೀಪದ ವಿಮಾನ ನಿಲ್ದಾಣ
- ಮಂಗಳೂರಿನ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಉಲ್ಲೇಖಗಳು
[ಬದಲಾಯಿಸಿ]- ↑ http://www.aralikatte.com/2018/03/01/idagunji-maha-ganapathi-temple/
- ↑ "ಇಡಗುಂಜಿ ವಿನಾಯಕ ದೇವಸ್ಥಾನ ಒಂದು ಅದ್ಭುತ". Satwadhara News. Satwadhara News.