ಲಹರಿ ಸಂಸ್ಥೆಯು ೧೯೭೪ ರಲ್ಲಿ ಮನೋಹರ್ ನಾಯ್ಡು ಅವರ ರೂ.500. ಬಂಡವಾಳದೊಂದಿಗೆ ಸ್ಥಾಪನೆಯಾಯಿತು [೧] ಕಳೆದ ಮೂರು ದಶಕಗಳಲ್ಲಿ ಈ ಸಂಸ್ಥೆಯು ಅತ್ಯಂತ ಜನಪ್ರಿಯತೆ ಪಡೆದಿದೆ. ಕನ್ನಡದ ಪ್ರೇಮಲೋಕ, ತಮಿಳಿನ ರೋಜಾ, ದಳಪತಿ ಸೇರಿದಂತೆ ಹಲವಾರು ಚಲನಚಿತ್ರಗಳ ಹಾಡುಗಳು, ಚಿತ್ರೇತರ ಧ್ವನಿಸುರುಳಿಗಳು, ಜನಪದ ಗೀತೆಗಳು, ಭಾವಗೀತೆಗಳು ಈ ಕಂಪನಿಯ ಅಡಿಯಲ್ಲಿ ಬಿಡುಗಡೆಯಾಗಿವೆ[೨]