ವಿಷಯಕ್ಕೆ ಹೋಗು

ಶ್ರೀಪ್ರಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀಪ್ರಿಯ
Born
ಅಲಮೇಲು

5 ಮಾರ್ಚ್, 1956
ಚೆನ್ನೈ[], ತಮಿಳುನಾಡು
Occupation(s)ನಟಿ, ನಿರ್ದೇಶಕಿ
Years active1973 - ಈವರೆಗೆ
Spouseರಾಜಕುಮಾರ್ ಸೇತುಪತಿ

ಶ್ರೀಪ್ರಿಯ (5 ಮಾರ್ಚ್ 1956), ದಕ್ಷಿಣ ಭಾರತದ ಪ್ರಸಿದ್ಧ ನಟಿ. ತಮ್ಮ ನಟನಾವೃತ್ತಿಯನ್ನು ತೆಲುಗು ಚಿತ್ರವೊಂದರಿಂದ ಆರಂಭಿಸಿದ ಶ್ರೀಪ್ರಿಯ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯ ಸುಮಾರು 300ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿಯಾಗಿ ಮಾತ್ರವಲ್ಲದೆ, ನಿರ್ದೇಶನದಲ್ಲೂ ಯಶ ಕಂಡಿದ್ದಾರೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ಚೆನ್ನೈನಲ್ಲಿ ಸಂಗೀತ ಪರಂಪರೆಯ ಕುಟುಂಬದಲ್ಲಿ ಹುಟ್ಟಿದ ಶ್ರೀಪ್ರಿಯಾರ ಹುಟ್ಟುಹೆಸರು ಅಲಮೇಲು. ಚಿಕ್ಕ ವಯಸ್ಸಿನಲ್ಲೇ ಶಾಸ್ತ್ರೀಯ ನೃತ್ಯವನ್ನು ಕಲಿತ ಶ್ರೀಪ್ರಿಯ ಕರ್ನಾಟಕ ಸಂಗೀತವನ್ನೂ ಅಭ್ಯಾಸ ಮಾಡಿದರು. ಪ್ರಸಿದ್ಧ ನೃತ್ಯಪಟು, ಪದ್ಮಶ್ರೀ ಪುರಸ್ಕೃತರಾದ 'ದಂಡಾಯುಧಪಾಣಿ ಪಿಳ್ಳೈ' ಇವರ ಕುಟುಂಬದವರೇ ಆಗಿದ್ದರು.

1988ರಲ್ಲಿ ರಾಜಕುಮಾರ್ ಸೇತುಪತಿಯವರನ್ನು ಆಂಧ್ರಪ್ರದೇಶದ ದೇವಸ್ಥಾನವೊಂದರಲ್ಲಿ ಮದುವೆಯಾದ ಶ್ರೀಪ್ರಿಯ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ವೃತ್ತಿ

[ಬದಲಾಯಿಸಿ]
ನಟಿಯಾಗಿ

ನಟಿಯಾಗಿ ಮೊದಲು ಕಾಣಿಸಿಕೊಂಡದ್ದು 1973ರ 'ವೈಶಾಲಿ' ಎಂಬ ತೆಲುಗು ಚಿತ್ರದಲ್ಲಿ. ಆ ಬಳಿಕ 1974ರ ತಮಿಳು ಚಿತ್ರ 'ಮುರುಗನ್ ಕಾಟ್ಟಿಯ ವಳಿ'. ಮುಂದೆ ಶ್ರೀಪ್ರಿಯ ತಮಿಳು ಚಿತ್ರಗಳ ಯಶಸ್ವೀ ನಾಯಕಿಯಾದರು. 1977ರಲ್ಲಿ ಬಿಡುಗಡೆಯಾದ ಕಮಲ್ ಹಾಸನ್ ಜೊತೆಗೆ ನಟಿಸಿದ 'ಅವಳ್ ಅಪ್ಪಡಿದಾನ್' ಚಿತ್ರ ಶ್ರೀಪ್ರಿಯ ಅವರಿಗೆ ಜನಪ್ರಿಯತೆ ತಂದಿತು. ಆ ಬಳಿಕ ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಾ ಬಂದ ಶ್ರೀಪ್ರಿಯ ಅವರ ಮೊದಲ ಕನ್ನಡ ಚಿತ್ರ 'ಮರಿಯಾ ಮೈ ಡಾರ್ಲಿಂಗ್'(1980).

ನಿರ್ದೇಶಕಿಯಾಗಿ

ಶ್ರೀಪ್ರಿಯ ನಿರ್ದೇಶಿಸಿದ ಮೊದಲ ಚಿತ್ರ 1984ರ ತಮಿಳು ಚಿತ್ರ 'ಶಾಂತಿ ಮುಹೂರ್ತಮ್'. ಈವರೆಗೆ ಅವರು ನಿರ್ದೇಶಿಸಿರುವ ಒಟ್ಟು ಚಿತ್ರಗಳ ಸಂಖ್ಯೆ 6. ಅವುಗಳಲ್ಲಿ ಕನ್ನಡದ 'ನಾಗಿಣಿ'(1991) ಮತ್ತು ತೆಲುಗಿನ 'ದೃಶ್ಯಮ್'(2014) ಕೂಡ ಸೇರಿವೆ.

ಕನ್ನಡದಲ್ಲಿ

[ಬದಲಾಯಿಸಿ]

ಶ್ರೀಪ್ರಿಯ ನಟಿಸಿದ ಮೊದಲ ಕನ್ನಡ ಚಿತ್ರ 1980ರಲ್ಲಿ ಬಿಡುಗಡೆಯಾದ "ಮರಿಯಾ ಮೈ ಡಾರ್ಲಿಂಗ್"[]. ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ತಯಾರಾದ ಈ ಚಿತ್ರದಲ್ಲಿ ಕಮಲ್ ಹಾಸನ್ ನಾಯಕನಟರಾಗಿದ್ದರು. ತನ್ನ ತಾಯಿಯ ಕೊಲೆಗಾರರ ಮೇಲೆ ಸೇಡು ತೀರಿಸಿಕೊಳ್ಳುವ ಮಗಳ ಪಾತ್ರದಲ್ಲಿ ಶ್ರೀಪ್ರಿಯ ನಟಿಸಿದರು.

"ಜಿಮ್ಮಿಗಲ್ಲು"(1982) ಶ್ರೀಪ್ರಿಯ ನಟಿಸಿದ ಎರಡನೇ ಕನ್ನಡ ಚಿತ್ರ. ಈ ಚಿತ್ರದಲ್ಲಿ ನ್ಯಾಯಕ್ಕಾಗಿ ಹೋರಾಡುವ ವಕೀಲೆಯ ಪಾತ್ರ ನಿರ್ವಹಿಸುವ ನಾಯಕಿಯಾಗಿ ವಿಷ್ಣುವರ್ಧನ್ ಜೊತೆ ಶ್ರೀಪ್ರಿಯ ನಟಿಸಿದರು.

ವಿಷ್ಣುವರ್ಧನ್, ಅಂಬರೀಷ್, ಲೋಕೇಶ್, ಸುರೇಶ್ ಹೆಬ್ಳಿಕರ್, ಅನಂತನಾಗ್ ಮುಂತಾವರೊಂದಿಗೆ ಶ್ರೀಪ್ರಿಯ ಅವರು ನಟಿಸಿದ್ದಾರೆ. ಕನ್ನದಲ್ಲಿ ಅವರು ನಟಿಸಿರುವ ಬಹುಪಾಲು ಹಾಡುಗಳನ್ನು ಖ್ಯಾತ ಗಾಯಕಿ ವಾಣಿ ಜಯರಾಂ ಹಾಡಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]
  • ಅವಳ್ ಅಪ್ಪಡಿದಾನ್ ಚಿತ್ರದ ನಟನೆಗೆ ತಮಿಳುನಾಡು ರಾಜ್ಯದ ಅತ್ತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ
  • 1985 - ತಮಿಳುನಾಡು ಸರ್ಕಾರದಿಂದ 'ಕಲೈಮಾಮಣಿ ಪುರಸ್ಕಾರ'[]

ಉಲ್ಲೇಖಗಳು

[ಬದಲಾಯಿಸಿ]
  1. "ನಟಿ ಶ್ರೀಪ್ರಿಯ". Nettv4u.com.
  2. "ಕಮಲ್ ಹಾಸನ್ ಮತ್ತು ಶ್ರೀಪ್ರಿಯ ಕನ್ನಡ ಚಿತ್ರ". Vijayakarnataka.
  3. "Celebrity Sripriya". nettv4u.com.


ಹೊರಗಿನ ಕೊಂಡಿಗಳು

[ಬದಲಾಯಿಸಿ]

ಶ್ರೀಪ್ರಿಯ at IMDb