ವಿಷಯಕ್ಕೆ ಹೋಗು

ಸದಸ್ಯ:Monisha.santosh/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವಸ್ಥಾನ

[ಬದಲಾಯಿಸಿ]

ಭಾರತದಾದ್ಯಂತ ಅನೇಕ ದೇವಸ್ಥಾನಗಳನ್ನು ವೀಕ್ಷಿಸಲು ನಾವು ಹೋಗುತ್ತೇವೆ ಆದರೆ ನಮ್ಮ ಕರ್ನಾಟಕದಲ್ಲಿರುವ ಅನೇಕ ದೇವಸ್ಥಾನಗಳನ್ನು ನಾವು ಇನ್ನು ನೋಡಿರುವುದಿಲ್ಲ. ಅಂತ ಎಷ್ಟು ಸ್ಥಳಗಳಲ್ಲಿ ಲಕ್ಷ್ಮಿ ಆದಿನಾರಾಯಣ ದೇವಸ್ಥಾನ. ಇದು ಅತ್ಯಂತ ಸುಂದರವಾದ ದೇವಸ್ಥಾನ ಗಳಲ್ಲಿ ಒಂದಾಗಿದೆ. ಇಲ್ಲಿನ ಸುತ್ತಲಿನ ಪರಿಸರ ಬಹಳ ರಮಣೀಯ ಹಾಗೂ ಆಕರ್ಷಕವಾಗಿದೆ. ಇಲ್ಲಿನ ಜನರು ಸ್ನೇಹಜೀವಿಗಳು.

ಸ್ಥಳ ಪರಿಚಾಯ

[ಬದಲಾಯಿಸಿ]

ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವಸ್ಥಾನವು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಯೆಲ್ಲೋಡು ಬೆಟ್ಟದ ಮೇಲಿದೆ.

ಯೆಲ್ಲೋಡು ಗ್ರಾಮವು ಪೂರ್ವದಲ್ಲಿ ಬಾಗೇಪಲ್ಲಿ ತಾಲ್ಲೂಕು ದಕ್ಷಿಣದಲ್ಲಿ ಚಿಕ್ಕಬಳ್ಳಾಪುರ ತಾಲೂಕು ಉತ್ತರದಲ್ಲಿ ಚೀಲ ಮದ್ದೂರು ತಾಲೂಕು ಪಶ್ಚಿಮದಲ್ಲಿ ಗೌರಿಬಿದನೂರು ತಾಲೂಕಿನಿಂದ ಸುತ್ತುವರೆಯಲ್ಪಟ್ಟಿದೆ.

ಚಿಕ್ಕಬಳ್ಳಾಪುರ ,ಶಿಡ್ಲಘಟ್ಟ ,ಹಿಂದೂಪುರ ಮತ್ತು ವಿಜಯಪುರ ಯೆಲ್ಲೋಡು ಗ್ರಾಮದ ಹತ್ತಿರದಲ್ಲಿವೆ.ಕನ್ನಡ ಇಲ್ಲಿನ ಆಡುಭಾಷೆಯಾಗಿದೆ.

ದೇವಸ್ಥಾನದ ಬಗ್ಗೆ

[ಬದಲಾಯಿಸಿ]

ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವಸ್ಥಾನವು ಸ್ವಯಂ ಉದ್ಭವ ಮೂರ್ತಿ ಎಂಬ ನಂಬಿಕೆಯಿದೆ. ಈ ದೇವಸ್ಥಾನವು ಸಾವಿರ ವರ್ಷಗಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ. ಇಲ್ಲಿನ ದೇವರು ಆನೆಯಾಕಾರದ ಬೆಟ್ಟದ ಮೇಲೆ ಇದೆ. ಭಾರತದಾದ್ಯಂತ ಹರಡಿರುವ ೧೦೦೦೦ಕ್ಕೂ ಮೇಲ್ಪಟ್ಟ ಕುಟುಂಬಗಳಿಗೆ ಶ್ರೀಲಕ್ಷ್ಮಿ ಆದಿನಾರಾಯಣಸ್ವಾಮಿ ಕುಟುಂಬದದೈವವಾಗಿದೆ. ೬೧೮ ಮೆಟ್ಟಿಲುಗಳುಳ್ಳ ಈ ದೇವಸ್ಥಾನದ ಅಕ್ಕಪಕ್ಕ ಹಸಿರು ತುಂಬಿದೆ.ಈ ದೇವಸ್ಥಾನದ ಸುಂದರ ದೃಶ್ಯ ಸರೋವರ ಮತ್ತು ಸುತ್ತಲೂ ಇರುವ ಹಸಿರು ಕಣ್ಣಿಗೆ ಹಬ್ಬದಂತೆ ಇರುತ್ತದೆ. ಮಾಘ ಮಾಸದ ಪ್ರತಿ ಭಾನುವಾರದಂದು ಇಲ್ಲಿ ವಿಶೇಷ ಪೂಜೆ ಇರುತ್ತದೆ  ಮತ್ತು ಮಾರನೇ ಭಾನುವಾರದಂದು ಇಲ್ಲಿ ರಥೋತ್ಸವ ನೆರವೇರುತ್ತದೆ.  ಇಲ್ಲಿ ವೈಕುಂಠ ಏಕಾದಶಿಯನ್ನು ಬಹಳ ವಿಜೃಂಭಣೆಯಿಂದ ನಡೆಯುತ್ತದೆ ಮತ್ತು ಇಲ್ಲಿನ ವೈಕುಂಟ ದ್ವಾರವು ಬೆಳಗ್ಗೆ ೫ ಗಂಟೆಯಿಂದ ಪ್ರಾರಂಭವಾಗಿ ರಾತ್ರಿಯವರೆಗೂ ತೆರೆದಿರುತ್ತದೆ.ಪ್ರತಿ ಹುಣ್ಣಿಮೆಯಂದು ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವಸ್ಥಾನದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆಯು ನಡೆಯುತ್ತದೆ. ದೇವಸ್ಥಾನದ ಪ್ರದೇಶದಲ್ಲಿರುವ ಗಣೇಶನ ದೇವಸ್ಥಾನದಲ್ಲಿ ಕಲ್ಯಾಣೋತ್ಸವ ಸಹ ನಡೆಯುತ್ತದೆ. ಇಲ್ಲಿ ಪ್ರತಿ ಭಾನುವಾರದಂದು ಕೇಶಮುಂಡನ ಕಾರ್ಯಕ್ರಮ ಸಹ ನಡೆಯುತ್ತದೆ . ಇದಕ್ಕಾಗಿ ಅನೇಕ ಭಕ್ತಾದಿಗಳು ಆಗಮಿಸುತ್ತಾರೆ.ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಮಾಗಮಾಸ ವನ್ನು ಬಹಳ ಉತ್ಸಾಹ ಭರಿತವಾಗಿ ಆಚರಿಸುತ್ತಾರೆ.

ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವಸ್ಥಾನವು ಸ್ಥಳೀಯರಲ್ಲಿ ಬಹಳ ಜನಪ್ರಿಯ ಸ್ಥಳವಾಗಿದೆ . ಭಕ್ತರಿಗೆ ಅನುಕೂಲವಾಗಲೆಂದು ಕಲ್ಲಿನ ಮೆಟ್ಟಿಲುಗಳನ್ನು ಮಾಡಲಾಗಿದೆ.ದುಃಖದ ವಿಷಯವೇನೆಂದರೆ ಇಲ್ಲಿ ಅನೇಕ ಬಿಕ್ಷುಕರು ಕಾಣಸಿಗುತ್ತಾರೆ, ಪ್ರತಿ ನಾಲ್ಕು ಮೆಟ್ಟಿಲುಗಳಿಗೆ ಭಿಕ್ಷುಕರು ಕುಳಿತಿರುತ್ತಾರೆ.ಅಕ್ಕ-ಪಕ್ಕದ ಊರುಗಳಿಂದ ಬಂದ ವಯಸ್ಸಾದ ಪುರುಷರು ಮತ್ತು ಮಹಿಳೆಯರು ಹೆಚ್ಚು ಸಂಪಾದನೆಗೆಂದು ಇಲ್ಲಿ ಬಂದು ಭಿಕ್ಷೆ ಬೇಡುವವರು ಎಂದೆನಿಸುತ್ತದೆ. ಅನೇಕ ಭಕ್ತರು ಪ್ರತಿಯೊಬ್ಬ ಭಿಕ್ಷುಕರಿಗೆ  ದಾನ ಮಾಡುತ್ತಾರೆ.

ರಸ್ತೆ ಮಾರ್ಗದರ್ಶಿ

[ಬದಲಾಯಿಸಿ]

ಈ ದೇವಸ್ಥಾನವು ಬೆಂಗಳೂರು ಏಳನೇ ಹೆದ್ದಾರಿ ಮತ್ತು ಹೈದರಾಬಾದ್ ನಡುವಿನಲ್ಲಿ ಬಾಗೇಪಲ್ಲಿಯ ತಿರುವಿನಿಂದ ಮೂರು ಕಿಲೋಮೀಟರ್ ದೂರದಲ್ಲಿದೆ. ಈ ದೇವಸ್ಥಾನವು ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ,೧೨೦ ಕಿಲೋಮೀಟರ್ ದೂರದಲ್ಲಿದೆ.ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಗೆಪಲ್ಲಿ ಗಿಂತ ಮೂರು ಕಿಲೋಮೀಟರ್ ಮುಂಚಿತವಾಗಿ ಎಡ ತಿರುವು ತೆಗೆದುಕೊಳ್ಳಬೇಕು ತಿರುವಿನಲ್ಲಿ ಪ್ರಯಾಣಿಸುತ್ತಿರುವಾಗ ನಿಮ್ಮ ಬದುಕಿನಲ್ಲಿ ಸತ್ಯಸಾಯಿ ಕಟ್ಟಡ ಮತ್ತು ಮಸೀದಿಯನ್ನು ಕಾಣಬಹುದು ಎಂದು ಬಾರಿನಲ್ಲಿ ಬಂದಮೇಲೆ ಅಂದಾಜು ಹತ್ತು ಕಿಲೋಮೀಟರ್ ದೂರಕ್ಕೆ ನಿಮ್ಮ ಗುರಿಯನ್ನು ತಲುಪಬಹುದು.

ಇಲ್ಲಿನ ದೇವಸ್ಥಾನಕ್ಕೆ ಸಾರಿಗೆ ವ್ಯವಸ್ಥೆ ಅಷ್ಟು ಸೂಕ್ತವಾಗಿ ಇಲ್ಲದ ಕಾರಣ ಅನೇಕ ಭಕ್ತರು ತಮ್ಮ ಸ್ವಂತ ವಾಹನಗಳಲ್ಲಿ ತೆರಳುತ್ತಾರೆ.

ನೀವು ಬೆಂಗಳೂರಿನಿಂದ ಹೊರಡುವುದಾದರೆ ಈ ಕೆಳಕಂಡ ಸ್ಥಳಗಳನ್ನು ದಾರಿಯಲ್ಲಿ ನೋಡಬಹುದಾಗಿದೆ.

೧. ಬೆಂಗಳೂರಿನಿಂದ ಬೆಳಿಗ್ಗೆ ಆರು ಮೂವತ್ತಕ್ಕೆ ಹೊರಟು ಎಲ್ಲೋಡೆ ತಲುಪಬೇಕು.

೨. ಊಟದ ನಂತರ ಎಲ್ಲೆಡೆಯಿಂದ ತೆರಳಿ 3:00 ಗಂಟೆಗೆ ಲೇಪಾಕ್ಷಿ ತಲುಪಬಹುದು.

೩. ಸಾಯಂಕಾಲ 5 ಗಂಟೆಗೆ ಲೇಪಾಕ್ಷಿ ಯಿಂದ ವಿದುರಾಶ್ವತ ಕ್ಕೆ ತೆರಳಬಹುದು.

೪. 6:00 ಗೆ ವಿದುರಾಶ್ವತ ದಿಂದ ಘಾಟಿ ಸುಬ್ರಹ್ಮಣ್ಯಕ್ಕೆ ಹೋಗಬಹುದು.

೫. ಗಾಡಿಯಿಂದ ಹೊರಟು 9:00 ಗಂಟೆಗೆ ಬೆಂಗಳೂರನ್ನು ಸೇರಬಹುದು.

ಬೆಂಗಳೂರಿನಿಂದ ಒಂದು ದಿನದ ಪ್ರವಾಸಕ್ಕೆ ಇದು ಸೂಕ್ತ ಸ್ಥಳವಾಗಿದೆ,  ಸುಮಾರು 250 ಕಿಲೋಮೀಟರ್ ದೂರವಿರುತ್ತದೆ.

ಊಟದ ವ್ಯವಸ್ಥೆ:-

[ಬದಲಾಯಿಸಿ]

ಇಲ್ಲಿ ವಾರದಲ್ಲಿ ಶನಿವಾರದ ಸಾಯಂಕಾಲದಿಂದ ಸೋಮವಾರ ಬೆಳಗಿನವರೆಗೆ ಉಚಿತವಾದ ಊಟದ ವ್ಯವಸ್ಥೆ ಇರುತ್ತದೆ. ಮಾಘಮಾಸದ ತಿಂಗಳಲ್ಲಿ ಪ್ರತಿದಿನ ಊಟದ ವ್ಯವಸ್ಥೆ ಇರುತ್ತದೆ.

ದೇವಸ್ಥಾನದ ಪ್ರವೇಶದ್ವಾರದಲ್ಲಿ ದೇವರ ದರ್ಶನ ಪಡೆದ ಭಕ್ತಾದಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿಯವರು ಪ್ರಸಾದ ವಿನಿಯೋಗ ಮಾಡುತ್ತಾರೆ.

ದೇವಸ್ಥಾನದ ಛತ್ರದ ಮುಂಭಾಗದಲ್ಲಿ ಟೀ ಅಂಗಡಿಯಲ್ಲಿ ಕುರುಕು ತಿಂಡಿಗಳನ್ನು ಬೋಂಡಾ ಬಜ್ಜಿ ಮಸಾಲಾಪುರಿ ದೊರೆಯುತ್ತವೆ.

ಇಲ್ಲಿ ಹತ್ತಿರದಲ್ಲಿ ಹೋಟೆಲ್ಗಳು ಮತ್ತು ರೆಸ್ಟೋರೆಂಟುಗಳು ದೊರೆಯುವುದಿಲ್ಲ ದೇವಸ್ಥಾನದ ಮುಂಭಾಗದಲ್ಲಿರುವ ಒಂದು ಚಿಕ್ಕ ಗುಡಿಸಿಲಿನಲ್ಲಿ ಒಂದು ಅಜ್ಜಿ ಮಾಡುವ ಇಡ್ಲಿಗಳು ಮಾತ್ರ ದೊರೆಯುತ್ತದೆ ಮತ್ತು ಇಡ್ಲಿಗಳು ತುಂಬಾ ರುಚಿಕರವಾಗಿರುತ್ತದೆ.

ದೇವಸ್ಥಾನದ ಮುಂಭಾಗದಲ್ಲಿರುವ ಟೀ ಅಂಗಡಿಯಲ್ಲಿ ನಿಮಗೆ ಕಾಫಿ ಟೀ ದೊರೆಯುತ್ತದೆ.

ವಸತಿಸ್ಥಳ ಮಾಹಿತಿ

[ಬದಲಾಯಿಸಿ]

ಭಕ್ತರ ಅನುಕೂಲಕ್ಕಾಗಿ ಅಗತ್ಯ ಅನುಕೂಲ ಗಳಿರುವ ೪೪ ಕೊಠಡಿ ಮತ್ತು ಮೂರು ಕಾಟೇಜುಗಳು ನಿರ್ಮಿಸಲ್ಪಟ್ಟಿವೆ. ಈಗ ಅಸ್ತಿತ್ವದಲ್ಲಿರುವ ದೇವಸ್ಥಾನದ ಛತ್ರವು ಸುಮಾರು ೧೦೦ ವರ್ಷಗಳಷ್ಟು ಹಳೆಯದಾಗಿದ್ದು ದಾಸ ಲಕ್ಷ್ಮಯ್ಯ ಶೆಟ್ಟಿ ಅವರಿಂದ ಕಟ್ಟಲ್ಪಟ್ಟಿದೆ. ಈ ಛತ್ರವು ದೇವಸ್ಥಾನದ ಟ್ರಸ್ಟ್ ನ ಸುಪರ್ದಿಯಲ್ಲಿದೆ. ದೇವಸ್ಥಾನದ ಟ್ರಸ್ಟ್ ಮೊದಲು ಬಂದ ಭಕ್ತಾದಿಗಳಿಗೆ ಉಚಿತವಾಗಿ ಮತ್ತು ಕಾಟೇಜ್ ವ್ಯವಸ್ಥೆ ಮಾಡಿಕೊಡುತ್ತದೆ.ಈ ದೇವಸ್ಥಾನದ ಬೇಟಿ ನಮಗೆ ಅತ್ಯಂತ ಸುಂದರ ಮತ್ತು ತೃಪ್ತಿಕರವಾದ ಅನುಭವ ನೀಡಿತು. ಕುಟುಂಬ ಸಮೇತ ತೆರಳಿ ತಪ್ಪದೆ ನೋಡಲೇಬೇಕಾದ ಪ್ರೇಕ್ಷಣೀಯ-ಸ್ಥಳವಾಗಿದೆ.

ಸುತ್ತಮುತ್ತ ಇರುವ ಪ್ರವಾಸಿ ತಾಣಗಳು

[ಬದಲಾಯಿಸಿ]

೧. ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ

ಲೇಪಾಕ್ಷಿ

೨. ಲೇಪಾಕ್ಷಿ

೩. ಘಾಟಿ ಸುಬ್ರಹ್ಮಣ್ಯ ದೇವಸ್ಥಾನ

೪. ವಿದುರಾಶ್ವತ

೫. ಪುಟ್ಟಪರ್ತಿ.

ಉಲ್ಲೇಖ

[ಬದಲಾಯಿಸಿ]

<r>https://dharmawiki.org/index.php/Sri_Lakshmi_Adinarayana_Swami_Temple,_Chikballapur,_Karnataka,_India</r>

<r>http://www.ajeyarao.com/2018/01/sri-lakshmi-adinarayana-swami-temple.html</r>

<r>http://srilakshmiadinarayanaswamytemple.blogspot.com/</r>