ಸದಸ್ಯ:Monisha.santosh

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ನನ್ನ ಪರಿಚಯ[ಬದಲಾಯಿಸಿ]

ನನ್ನ ಹೆಸರು ಮೊನಿಷ. ಎಸ್. ನಾನು ನನ್ನ ನಸ೯ರಿ ಶಿಕ್ಷಣ ವನ್ನು ನಮ್ಮ ಮನೆಯ ಹತ್ತಿರದ ಒಂದು ಶಾಲೆಯಲ್ಲಿ ಮುಗಿಸಿದೆ. ನನ್ನ ಪ್ರಾಥಮಿಕ ಶಿಕ್ಷಣವನ್ನು ನಿಮ೯ಲ ಬಾಲಕೀಯರ ಶಾಲೆಯಲ್ಲಿ ಮಾಡಿದ್ದೇನೆ ಮತ್ತು ಪ್ರೌಢ ಶಿಕ್ಷಣವನ್ನು ನಿಮ೯ಲ ಪ್ರೌಢ ಶಾಲೆಯಲ್ಲಿ ಮುಗಿಸಿದ್ದೇನೆ. ಅಲ್ಲಿ ನಾನು ಬಹಳಷ್ಟು ಕಲಿತೆ ನನ್ನ ಜೀವನದ ಅತ್ಯಂತ ಹತ್ತಿರವಾದ ಗೆಳೆಯರನ್ನು ಸಂಪಾದಿಸಿದ ಸ್ಥಳವಿದು. ಇಂದಿ ಗು ನನ್ನ ಶಾಲೆಯ ಗೆಳೆಯರು ನನ್ನ ಜೀವನ ನಾನ್ನ ಸಿಹಿ ಕಹಿ ಕ್ಷಣಗಳಲ್ಲಿ ಒಂದು ಭಾಗವಾಗಿದ್ದಾರೆ. ಇವರು ನನ್ನ ಇನ್ನೂoದು ಕುಟುಂಬ ಎಂದರೆ ತಪ್ಪಾಗದು. ಆದನಂತರ ನಾನು ನನ್ನ ಪದವಿ ಪೂವ೯ ಶಿಕ್ಷಣವನ್ನ ಸಂತ ಜೋಸೆಫರ ಕಾಲೇಜಿನಲ್ಲಿ ಓದಿದ್ದೇನೆ. ಇಲ್ಲಿ ನನ್ನ ಸ್ನೇಹಿತರು ಜೀವನದಲ್ಲಿ ಯಾರ ಹತ್ತಿರ ಯಾವ ರೀತಿ ಇರಬೇಕು ಮತ್ತು ಇವರೆಲ್ಲರಿಂದ ನಮ್ಮ ಜೀವನ ಒಳ್ಳೆಯ ಕಡೆ ಹೋಗುತೋ ಇಲ್ಲವೋ ಎಂದು ತಿಳಿಯುತಿತ್ತು. ಮತ್ತು ನನ್ನಪದವಿ ಶಿಕ್ಷಣವನ್ನು ಕ್ರೈಸ್ಟ್ (ಡೀಮಟು ಬಿ ಯಾನಿವಸಿ೯ಟಿ) ಪಡೆಯುತ್ತಿರುವೆ. ಹೊಸ ಜನ ಹೊಸ ಶಿಕ್ಷಣ ಈ ಹೊಸ್ನ ತನ ನನಗೇನು ಹೊಸದಲ್ಲ. ಏಕೆಂದರೆ ನಾವು ನಮ್ಮ ಮನೆಯನ್ನು ಎರಡು ವರ್ಷಕ್ಕೆ ಒಂದು ಬಾರಿ ಬದಲಾಯಿಸುತ್ತಾ ಇರುತ್ತೇವೆ. ಆದುದರಿ೦ದ ಜನರೊಂದಿಗೆ ಬೇಗ ಬೆರೆತು ಹೋಗಿಬಿಡುತ್ತೇನೆ

ನನ್ನ ಕುಟುಂಬ[ಬದಲಾಯಿಸಿ]

ನಾವು ಐದು ಮಂದಿ ವಾಸಿಸುತ್ತಿದೇವೆ. ನಾನು, ನನ್ನ ತಾಯಿ , ನನ್ನ ತಂದೆ, ನನ್ನ ತಂಗಿ ಮತ್ತು ನಮ್ಮ ಅಜ್ಜಿ ಜೊತೆಯಲ್ಲಿಯೇ ವಾಸಿಸುತ್ತೇವೆ. ನನ್ನ ತಂದೆಯ ಹೆಸರು ಆರ್.ಸಂತೋಷ್ ಕುಮಾರ್, ಅವರು ಪೇ೦ಟಿಂಗ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ನನ್ನ ತಂದೆ ಬಹಳ ಕಟ್ಟುನಿಟ್ಟಾದ ವ್ಯಕ್ತಿ. ಆದರೂ ನನ್ನ ತಾಯಿಗೆ ಮನೆಯ ಕೆಲಸದಲ್ಲಿ ಸಹಾಯ ಮಾಡಿಕೊಡುತ್ತಾರೆ. ನನ್ನ ತಂದೆಯ ಅಡುಗೆಯoತು ನನಗೆ ಬಹಳ ಇಷ್ಟ. ಮತ್ತು ತಾಯಿಯ ಹೆಸರು ಸುಮ , ನನ್ನ ತಾಯಿ ಗೃಹಿಣಿ. ತಾಯಿ ಇಲ್ಲದಿದ್ದರೆ ಮನೆಯಲ್ಲಿಯಾರಿಗೂ ಕೈ ಕಾಲ ಆಡುವುದಿಲ್ಲ. ಎಲ್ಲಾ ಕೆಲಸಕ್ಕೂ ತಾಯಿ ಜೊತೆಗಿದ್ದರೆ ಸಾಕು ಎಲ್ಲಿಲ್ಲದ ಡೈಯ೯. ನಾನು ಈ ದಿನ ಕನ್ನಡ ಒಂದು ಹಂತದಲ್ಲಿ ಅಥ೯ ಮಾಡಿಕೊಳ್ಳಲು ಮತ್ತು ಬರೆಯಲು ಕಾರಣ ನನ್ನ ತಾಯಿ ಮಾತ್ರ. ನನ್ನ ತಂಗಿಯ ಹೆಸರು ಭವಾನಿ , ಇವಳು ೯ನೇ ತರಗತಿ ಓದುತ್ತಿದ್ದಾಳೆ, ತಂಗಿ ಇಲ್ಲದಿದ್ದರೆ ಮನೆ ಮನೆಯಂತೆ ಇರುವದಿಲ್ಲಾ ಸದಾ ಕಾಲ ಜಗಳವಾಡುತ್ತಾ ಇದ್ದರು ಅವಳನ್ನು ಕಂಡರೆ ನನಗೆ ಬಹಳ ಇಷ್ಟ.ಮತ್ತು ನಮ್ಮ ಅಜ್ಜಿಯ ಹೆಸರು ಜಮುನ, ಇವರಿಗೆ ಭಕ್ತಿ ಕಥೆಗಳನ್ನು ಹೇಳುವುದಕ್ಕೆ ಬಹಳ ಇಷ್ಟ. ಈ ಆಧುನಿಕ ಕಾಲದಲ್ಲಿ ಸಿನಿಮಾ ಸಿರಿಯಲ್ ಗಳ ಕಾಲದಲ್ಲಿ ಅಜ್ಜಿ ಕಥೆಗಳ ಅತ್ಯಂತ ಪ್ರಿಯವಾದದ್ದು.

ಆಸಕ್ತಿ[ಬದಲಾಯಿಸಿ]

ಚಿಕ್ಕಂದಿನಲ್ಲಿ ನನಗೆ ರಸ್ತಯಲ್ಲಿ ಅಣ್ಣಮ್ಮ ಮತ್ತು ಗಣೇಶ ಬಂದಿದರೆ ನೃತ್ಯ ಮಾಡುವುದೆಂದರೆ ಬಹಳ ಇಷ್ಟವಿತ್ತ.ನನಗೆ ಬಹಳ ಹವ್ಯಾಸಗಳಿವೆ ಅದರಲ್ಲಿ ಸಂಗೀತ ಕೇಳುವುದು, ಪುಸ್ತಕ ಓದುವುದು, ನಾನು ಕಥ ಪುಸ್ತಕ ಓದುವುದು ಬಹಳ ಆಸೆ. ಹಾಗೂ ನನ್ನ ತಾಯಿಗೆ ಕೈ ಕೆಲಸಗಳಲ್ಲಿ ಸಹಾಯ ಮಾಡುವುದು, ನನ್ನ ತಂಗಿ ಮತ್ತು ಅಜ್ಜಿ ಯೊಂದಿಗೆ ಆಟ ಆಡುವುದು, ಅಡಿಗೆ ಮಾಡುವುದು ಮತ್ತು ಬಹಳಷ್ಟು ಕಡೆಗಳಿಗೆ ಹೋಗುವುದೆಂದರೆ ತುಂಬ ಇಷ್ಟ.

ವಿದ್ಯಾಭ್ಯಾಸ  [ಬದಲಾಯಿಸಿ]

ನಾನು ನನ್ನ ಪದವಿ ಶಿಕ್ಷಣವನ್ನು ಮುಗಿಸಿದ ನಂತರ ಸಿವಿಲ್ ಶಿಕ್ಷಣದ ಯು ಪಿ ಸ್ ಸಿ ಪರೀಕ್ಷೆಯನ್ನು ಮುಗಿಸಿ ಸೆಂಟ್ರಲ್ ನಲ್ಲಿ ಐಎಎಸ್ ಮಾಡಬೇಕೆಂಬ ಬಲವಾದ ಗುರಿಯನ್ನು ಮುಂದಿಟ್ಟುಕೊಂಡು ಓದುತ್ತಿದ್ದೇನೆ. ನನ್ನ ಮನೆಯಲ್ಲಿ ನಾನು ದೊಡ್ಡ ಮಗಳಾದ್ದರಿಂದ ನಾನು ಚೆನ್ನಾಗಿ ಓದಿ ಮುಂದೆ ನನ್ನ ತಂಗಿಗೆ ಒಳ್ಳೆ ಸ್ಪೂತಿ೯ಯಾಗಿ ನಿಲ್ಲಬೇಕಾಗಿದೆ.

ನಮ್ಮ ತಂದೆ ತಾಯಿ ನಮಗೆ ಒಳ್ಳೆಯ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನಗಳಿಸಲು ಒತ್ತಾಸೆಯಾಗಿ ನಿಂತಿದ್ದಾರೆ. ನಾವಿಬ್ಬರೂ ಕೂಡ ನಮ್ಮ ತಂದೆ ತಾಯಿಯ ಕಷ್ಟಗಳನ್ನು ಅರಿತು ಅವರಿಗೆ ಸಂತೋಷವಾಗಲೆಂದು ಚೆನ್ನಾಗಿ ಓದುತ್ತಿದ್ದೇವೆ.

ನಾನು ನನ್ನ ಶಾಲೆಯಲ್ಲಿದ್ದಾಗ ನನ್ನ ಶಾಲೆಯ ಬ್ಯಾಂಡ್ನ ನಾಯಕಿಯಾಗಿದ್ದೆ. ನಾನು ೧೦ನೇ ತರಗತಿಯಲ್ಲಿ ಮುಖ್ಯ ಪರೀಕ್ಷೆಯಲ್ಲಿ ೯೦ ಅಂಕಗಳನ್ನು ಗಳಿಸಿದ್ದ. ನನಗೆ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಬಂಧ ಬರೆಯುವುದೆಂದರೆ ಬಹಳ ಇಷ್ಟ. ನನಗೆ ಚಲನಚಿತ್ರಗಳು ಮತ್ತು ನಾಟಕಗಳೆಂದರೆ ಬಹಳ ಇಷ್ಟ. ನಾನು ೯ನೇ ತರಗತಿಯಲ್ಲಿದ್ದಾಗ ಕುದುರೆ ಮೊಟ್ಟೆ ಎಂಬ ನಾಟಕದಲ್ಲಿ ಭಾಗಿಯಾಗಿದ್ದೆ. ಆಗಿನಿಂದಲೂ ನನಗೆ ಓದುವುದರಲ್ಲಿ ಬಹಳ ಆಸಕ್ತಿ ಇತ್ತು. ಶಾಲೆಯ ದಿನಗಳಲ್ಲಿ ಬಹಳ ಉತ್ಸಾಹದಿಂದ ಎಲ್ಲಾ ಕಾಯ೯ಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಶಿಕ್ಷಕರ ದಿನಾಚರಣೆ, ಶಾಲೆ ದಿನಾಚರಣೆಗಳಲ್ಲಿ ನೃತ್ಯ ಪ್ರದಶ೯ನ ಇತ್ಯಾದಿಗಳಲ್ಲಿ ಸೇರುತ್ತಿದ್ದೆ.

ನಂತರ ಕಾಲೇಜಿನ ದಿನಗಳಲ್ಲಿ ನಾನು ಬಹಳಷ್ಟು ಕಾಯ೯ಕ್ರಮಗಳಲ್ಲಿ ಭಾಗವಹಿಸುತಿದ್ದೆ.

ನನಗೆ ಫೋಟೊಗ್ರಫಿಯಲ್ಲಿ ಬಹಳ ಆಸಕ್ತಿ ಇದೆ. ಬಿಡುವಾದಾಗ ಅಡುಗೆ ಮನೆಗೆ ಹೋಗಿ ಏನಾದರೂ ಪ್ರಯೋಗಗಳನ್ನು ಮಾಡುತ್ತಾ ಇರುತ್ತೇನೆ. ಕೇಕ್ ತಯಾರಿಸುವುದೆಂದರೆ ಬಹಳ ಇಷ್ಟ.ನನಗೆ ಪ್ರಾಣಿಗಳೆಂದರೆ ಸ್ವಲ್ಪ ಭಯ. ಆದರೂ ನಾಯಿಮರಿ ಬೆಕ್ಕಿನ ಮರಿ ಕಂಡರೆ ತುಂಬಾ ಇಷ್ಟ.

ಈಗ ನಾನು ಓದುತ್ತಿರುವ ಕಾಲೇಜಿನಲ್ಲಿ ಒಳ್ಳೆಯ ಶಿಕ್ಷಣದೊಂದಿಗೆ ಬಹಳಷ್ಟು ಇತರ ಕಾಯ೯ ಕ್ರಮಗಳಲ್ಲಿ ಭಾಗವಹಿಸಿ ಜೀವನದಲ್ಲಿ ಇನ್ನು ಮುಂದೆ ಬಹಳಷ್ಟು ವಿಚಾರಗಳನ್ನು ಕಲಿಯಬೇಕೆಂಬ ಆಸೆಯಿದೆ. ಇದನ್ನು ನೆರವೇರಿಸಲು ಬಹಳ ಉತ್ಸಾಹದಿಂದ ಇದ್ದೇನೆ ಮತ್ತು ಒಳ್ಳೆಯ ಇಲ್ಲಿ೦ದ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿ ಕೊಂಡು ಹೋಗುತ್ತೇನೆ.

ಧನ್ಯವಾಧಗಳು."