ಪಾಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾಯಾ[೧] ಭಾರತೀಯ ಉಪಖಂಡದ ಒಂದು ಸಾಂಪ್ರದಾಯಿಕ ಆಹಾರವಾಗಿದೆ.

ಇದನ್ನು ವಿವಿಧ ಹಬ್ಬಗಳು ಮತ್ತು ಸಮಾರಂಭಗಳಲ್ಲಿ ಬಡಿಸಲಾಗುತ್ತದೆ, ಅಥವ ವಿಶೇಷ ಅತಿಥಿಗಳಿಗಾಗಿ ತಯಾರಿಸಲಾಗುತ್ತದೆ. ಹಿಂದಿ ಉರ್ದು ಭಾಷೆಯಲ್ಲಿ ಪಾಯಾ ಎಂದರೆ 'ಕಾಲುಗಳು'.[೨]

ಈ ಖಾದ್ಯದ ಮುಖ್ಯ ಘಟಕಾಂಶಗಳೆಂದರೆ ವಿವಿಧ ಸಂಬಾರ ಪದಾರ್ಥಗಳೊಂದಿಗೆ ಬೇಯಿಸಲಾದ ಪಾದಗಳು (ಅಥವಾ ಗೋವು, ಮೇಕೆ, ಎಮ್ಮೆ ಅಥವಾ ಕುರಿಗೊರಸು).

ಹಿಂದೆ ಇದನ್ನು ಸೌಮ್ಯ ಶಾಖದಲ್ಲಿ ಹಲವು ಗಂಟೆಗಳ ಕಾಲ (ಸಾಮಾನ್ಯವಾಗಿ ಇಡೀ ರಾತ್ರಿ) ಒಲೆಯ ಮೇಲೆ ಬೇಯಿಸಲಾಗುತ್ತಿತ್ತು. ಆದರೆ, ಇಂದಿನ ದಿನಗಳಲ್ಲಿ, ಇದನ್ನು ಬಹುತೇಕವಾಗಿ ಪ್ರೆಷರ್ ಕುಕ್ಕರ್‌ನಲ್ಲಿ ಬೇಯಿಸಲಾಗುತ್ತದೆ. ಈ ಖಾದ್ಯವು ಸೂಪ್‍ನಂತಹ ಸ್ನಿಗ್ಧತೆಯನ್ನು ಹೊಂದಿದ್ದು ಇದನ್ನು ಸಾಮಾನ್ಯವಾಗಿ ಚಳಿಗಾಲದ ತಿಂಗಳುಗಳಲ್ಲಿ ಬೆಳಗಿನ ತಿಂಡಿಯಾಗಿ ನಾನ್‍ನೊಂದಿಗೆ ತಿನ್ನಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Tamil Attukaal Paya (ஆட்டுக்கால் பாயா)" (in Tamil). Vikatan. 2017. Retrieved 1 February 2020.{{cite web}}: CS1 maint: unrecognized language (link)
  2. "पाया (Paya) meaning in English - पाया मीनिंग - Translation" (in English). Hinkhoj. 2007. Retrieved 5 June 2018.{{cite web}}: CS1 maint: unrecognized language (link)
"https://kn.wikipedia.org/w/index.php?title=ಪಾಯಾ&oldid=993186" ಇಂದ ಪಡೆಯಲ್ಪಟ್ಟಿದೆ