ಗುಲ್ಗುಲಾ
ಗೋಚರ
ಗುಲ್ಗುಲಾ ಒಡಿಶಾದ ಒಂದು ಸಾಂಪ್ರದಾಯಿಕ ಸಿಹಿ ತಿಂಡಿಯಾಗಿದೆ ಮತ್ತು ಭಾರತದ ವಿವಿಧ ಪ್ರದೇಶಗಳಲ್ಲಿ ತಯಾರಿಸಲ್ಪಡುತ್ತದೆ. ಇದು ಮಾರುಕಟ್ಟೆಗಳಲ್ಲಿ ಸಿಗುವ ಅತ್ಯಂತ ಜನಪ್ರಿಯ ಸಿಹಿ ತಿಂಡಿಗಳಲ್ಲಿ ಒಂದಾಗಿದೆ.[೧] ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ಸಾಂಪ್ರದಾಯಿಕವಾಗಿ ವಿಶೇಷ ಹಬ್ಬದ ಸಂದರ್ಭಗಳಲ್ಲಿ ತಯಾರಿಸಲಾಗುತ್ತದೆ.[೨][೩] ಇವು ಉತ್ತರಾಖಂಡ್, ಉತ್ತರ್ ಪ್ರದೇಶ್, ಬಿಹಾರ್, ಪಂಜಾಬ್, ಒಡಿಶಾದಲ್ಲಿ ಸಾಮಾನ್ಯವಾಗಿವೆ.
ಇವು ಅಮೇರಿಕದಲ್ಲಿನ ಡೋನಟ್‍ಗಳನ್ನು ಹೋಲುತ್ತವೆ ಮತ್ತು ಇವನ್ನು ಮಾಡುವುದು ಬಹಳ ಸುಲಭವಾಗಿದೆ. ಇವು ಸಾಮಾನ್ಯ ಗೋಧಿ ಹಿಟ್ಟು, ಸಕ್ಕರೆ (ಸಾಂಪ್ರದಾಯಿಕವಾಗಿ ಬೆಲ್ಲ) ಮತ್ತು ಕಂಪು/ರುಚಿ ನೀಡಲು ಸಾಂದರ್ಭಿಕವಾಗಿ ಸಂಬಾರ ಪದಾರ್ಥಗಳನ್ನು (ಸೊಂಪಿನ ಬೀಜಗಳು ಸಾಮಾನ್ಯವಾಗಿವೆ) ಬಳಸುತ್ತವೆ. ಮೊಸರು, ಬಾಳೆಹಣ್ಣಿನ ತಿಳ್ಳು, ಯೀಸ್ಟ್ ಅಥವಾ ಒದಗುಪುಡಿಯನ್ನು ಬಳಸಲಾಗಬಹುದು. ಡೋನಟ್‍ಗಳಂತೆ ಇವನ್ನು ಎಣ್ಣೆ ಅಥವಾ ತುಪ್ಪದಲ್ಲಿ ಕರಿಯಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Rashtriya Naak, Vishnu Nagar, Rajkamal Prakashan Pvt Ltd, 2008 p. 89
- ↑ "गुलगुले (मीठे) पुए, Nisha Madhulikadainik Bhaskar". Archived from the original on 2018-09-14. Retrieved 2020-05-14.
- ↑ Hardoi: Sanskritik Gazetteer, Anjali Chauhan, Ayodhya Shodh Sansthan, Vani Prakashan, 2016 p. 150