ಕರಣಂ ಪವನ್ ಪ್ರಸಾದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರಣಂ ಪವನ್ ಪ್ರಸಾದ
ಜನನಬೆಂಗಳೂರು, ಕರ್ನಾಟಕ, ಭಾರತ
ವೃತ್ತಿಲೇಖಕ, ನಾಟಕಕಾರ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಬೆಂಗಳೂರು ವಿಶ್ವವಿದ್ಯಾಲಯ
ಪ್ರಕಾರ/ಶೈಲಿಕಾದಂಬರಿ, ನಾಟಕ
ವಿಷಯಅಧ್ಯಾತ್ಮಿಕ, ವಾಸ್ತವಿಕತೆ, ಸಮಕಾಲೀನ

ಕರಣಂ ಪವನ್ ಪ್ರಸಾದ್ ಬೆಂಗಳೂರು ಮೂಲದ ಕನ್ನಡ ಭಾಷೆಯ ಒಬ್ಬ ನಾಟಕಕಾರ, ಲೇಖಕ. ಅವರ ಮೊದಲ ಕಾದಂಬರಿ ಕರ್ಮದಿಂದಾಗಿ ಅವರಿಗೆ ಉದಯೋನ್ಮುಖ ಯುವ ಲೇಖಕ ಎಂಬ ಒಳ್ಳೆಯ ಖ್ಯಾತಿಯು ಬಂದಿತು.

ಪ್ರಾಥಮಿಕ ಜೀವನ[ಬದಲಾಯಿಸಿ]

ಕರಣಂ ಪವನ್ ಪ್ರಸಾದ ಬೆಂಗಳೂರಿನಲ್ಲಿ ಜನಿಸಿದರು. ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ.

ವೃತ್ತಿ ಜೀವನ[ಬದಲಾಯಿಸಿ]

ಡಾ. ಎಸ್.ಎಲ್.ಭೈರಪ್ಪರೊಂದಿಗೆ

ಪ್ರಾರಂಭದಲ್ಲಿ ಒಂದು ಮಾಧ್ಯಮ ಸಂಸ‍್ಥೆಯಲ್ಲಿ ಸೃಜನಾತ್ಮಕ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ಆ ಸಮಯದಲ್ಲಿ ನಾಟಕ ರಂಗದಲ್ಲಿ ತೊಡಗಿಸಿಕಂಡರು. ಜೊತೆಗೆ ಈ ಸಮಯದಲ್ಲಿ ಬೀದಿ ಬಿಂಬ ರಂಗ ತುಂಬ, ಪುರಹರ ಸೇರಿದಂತೆ ಕೆಲವು ನಾಟಕಗಳನ್ನು ರಚಿಸಿ ನಿರ್ದೇಶಿಸಿದರು. [೧].

ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

  1. ಕರ್ಮ - ೨೦೧೪
  2. ನನ್ನಿ - ೨೦೧೫
  3. ಗ್ರಸ್ತ - ೨೦೧೭
  4. ರಾಯಕೊಂಡ -೨೦೨೦
  5. ಸತ್ತು - ೨೦೨೨

ನಾಟಕ[ಬದಲಾಯಿಸಿ]

  1. ಬೀದಿ ಬಿಂಬ ರಂಗದ ತುಂಬ ೨೦೧೧
  2. ಪುರಹರ ೨೦೧೨
  3. ಭವ ಎನಗೆ ಹಿಂಗಿತು ೨೦೧೭

ಭಾಷಾಂತರ[ಬದಲಾಯಿಸಿ]

  1. Karma (ಆಂಗ್ಲ) ೨೦೧೫

ಪ್ರೌಢ ಪ್ರಬಂಧಗಳು[ಬದಲಾಯಿಸಿ]

  • ಪರ್ವದ ಕೃಷ್ಣ : ರಾಜತಂತ್ರ ಮತ್ತು ರಾಜಕಾರಣ[೨].
  • ಹೊಸ ಓದುಗನ ಜಗತ್ತು

ಕೃತಿಗಳ ಪರಿಚಯ[ಬದಲಾಯಿಸಿ]

ಅವರ ಮೊದಲ ಕಾದಂಬರಿ ಕರ್ಮ. ಎಸ್.ಎಲ್.ಭೈರಪ್ಪನವರು ಈ ಕಾದಂಬರಿಯನ್ನು ಓದಿ ಮೆಚ್ಚಿದರು. [೧]. ಶತಾವಧಾನಿ ಗಣೇಶ್‍ರು ಕೃತಿಯನ್ನು ಪರಾಮರ್ಶಿಸಿ ಅವರ ಮೊದಲ ಕಾದಂಬರಿಯನ್ನು ಬಿಡುಗಡೆ ಮಾಡಿದರು [೧][೩]. ಕಾದಂಬರಿಯು ವಿವಿಧ ವಲಯಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆಯಿತು. ಪ್ರಸ್ತುತ ಸಮಾಜದಲ್ಲಿ, ನಗರದಲ್ಲಿ ಬೆಳೆದ ಒಬ್ಬ ವ್ಯಕ್ತಿ ತನ್ನ ನಂಬಿಕೆ ಮತ್ತು ಧಾರ್ಮಿಕ ಆಚರಣೆಗಳ ನಡುವಿನ ತೊಳಳಾಟದಲ್ಲಿ ಒದ್ದಾಡಿ ಜೀವನದ ಅರ್ಥವನ್ನು ಹುಡುಕುವುದನ್ನು, ಈ ಕಾದಂಬರಿಯು ಅರ್ಥಪೂರ್ಣವಾಗಿ ಪ್ರತಿಬಿಂಬಿಸುತ್ತದೆ ಎಂದು ಓದುಗರ ಅಭಿಮತ[೪][೫].

ಅವರ ಎರಡನೆಯ ಕಾದಂಬರಿ ನನ್ನಿ. ಇದು ಕ್ರೈಸ್ತ ಮತದ ಒಂದು ಸಂಸ್ಥೆಯನ್ನು ಕೇಂದ್ರವಾಗಿರಿಸಿ ಬರೆದ ಕಾದಂಬರಿ. ಕೆಲವರ ಪ್ರಕಾರ ಇದರಲ್ಲಿ ಬರುವ ಪಾತ್ರಗಳು ಮತ್ತು ಸಂಸ್ಥೆ, ಒಂದು ಹೆಸರಾಂತ ಕ್ಯಾಥೊಲಿಕ್ ಕ್ರೈಸ್ತ ಮಿಷನರಿ ಸಂಸ್ಥೆ ಮತ್ತು ಅದನ್ನು ನಡೆಸಿದ ಖ್ಯಾತ ವ್ಯಕ್ತಿಗಳನ್ನು ಹೋಲುತ್ತವೆ ಎಂದಾಗಿತ್ತು. [೬][೭].

ಮೂರನೆಯ ಕಾದಂಬರಿ ಗ್ರಸ್ತದ ಮೂಲಕ ಬೇರೊಂದು ಆಯಾಮವನ್ನು ಅನ್ವೇಶಿಸಲು ಪ್ರಯತ್ನವನ್ನು ಮಾಡಿದ್ದಾರೆ. ಕಥಾನಾಯಕ ತನ್ನ ಎಂದಿನ ಪರಿಧಿಯನ್ನು ಮೀರುವ ಪ್ರಯತ್ನವನ್ನು ಮಾಡಿದಾಗ ವಿಜ್ಞಾನ ಮತ್ತು ವೇದಾಂತವನ್ನು ತಿಳಿಯುವ ಯತ್ನವೂ ಆಗುತ್ತದೆ. ಹೇಗೆ ಅವನು ಇವೆಲ್ಲವನ್ನೂ ನಿರ್ವಹಿಸಿ ಅಂತಿಮ ಸತ್ಯವನ್ನು ಕಂಡುಕೊಳ್ಳುತ್ತಾನೆ ಎಂಬುದು ಇಲ್ಲಿನ ಕಥಾವಸ್ತು.[೮][೯].

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ "ಭೈರಪ್ಪ ಹೊಗಳಿದ 'ಕರ್ಮ' ಕೃತಿ ವಿಶ್ವದೆಲ್ಲೆಡೆ ಲಭ್ಯ". kannada.oneindia.com. kannada.oneindia.com. Archived from the original on 1 ಏಪ್ರಿಲ್ 2019. Retrieved 6 May 2020.{{cite web}}: CS1 maint: bot: original URL status unknown (link).
  2. ಪ್ರಸಾದ, ಕರಣಂ ಪವನ್. "ಪರ್ವದ ಕೃಷ್ಣನ ಬಗ್ಗೆ ಕರಣಂ ಪವನ್ ಪ್ರಸಾದರ ಪ್ರೌಡ ಪ್ರಬಂಧ". Retrieved 6 May 2020..
  3. "ಕರ್ಮ ಪವನ್ ಪ್ರಸಾದ್‍ರ ಚೊಚ್ಚಲ ಕೃತಿ". www.newindianexpress.com. newindianexpress. Archived from the original on 6 ಮೇ 2020. Retrieved 6 May 2020.{{cite web}}: CS1 maint: bot: original URL status unknown (link).
  4. "ಕರ್ಮದ ಬಗ್ಗೆ ಬ್ಲಾಗ್". booksrevisit.blogspot.com. booksrevisit.blogspot.com. Archived from the original on 9 ಸೆಪ್ಟೆಂಬರ್ 2019. Retrieved 6 May 2020.{{cite web}}: CS1 maint: bot: original URL status unknown (link)
  5. "ಕರ್ಮದ ಬಗ್ಗೆ goodreads.com ಜಾಲತಾಣದಲ್ಲಿ ಜನರ ಅಭಿಪ್ರಾಯ". www.goodreads.com. goodreads. Retrieved 6 May 2020.
  6. ಹೆಗಡೆ, ತೇಜಸ್ವಿನಿ. "'ನನ್ನಿ' ಎಂದರೆ ನನ್ ಓರ್ವಳ ಸತ್ಯಾನ್ವೇಷಣೆಯ ಕಥೆ". kannada.oneindia.com. oneindia.com. Archived from the original on 8 ಜನವರಿ 2018. Retrieved 6 May 2020.{{cite web}}: CS1 maint: bot: original URL status unknown (link).
  7. "ನನ್ನಿಯ ಬಗ್ಗೆ goodreads.com ಜಾಲತಾಣದಲ್ಲಿ ಜನರ ಅಭಿಪ್ರಾಯ". www.goodreads.com. goodreads. Retrieved 6 May 2020.
  8. "ಗ್ರಸ್ತದ ಬಗ್ಗೆ goodreads.com ಜಾಲತಾಣದಲ್ಲಿ ಜನರ ಅಭಿಪ್ರಾಯ". www.goodreads.com. goodreads. Retrieved 6 May 2020.
  9. "ಕರಣಂ ಅವರ ಅರಿವಿನ ಸತ್ಯ ಹುಡುಕಾಟ ಗ್ರಸ್ತ ಕಾದಂಬರಿ". kannada.oneindia.com. oneindia.com. Archived from the original on 7 ಜನವರಿ 2020. Retrieved 6 May 2020.{{cite web}}: CS1 maint: bot: original URL status unknown (link).