ಕೇನ್ ರೀಚಾರ್ಡ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇನ್ ರೀಚಾರ್ಡ್ಸನ್

ಕೇನ್ ರೀಚಾರ್ಡ್ಸನ್, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಬಲಗೈ ವೇಗದ ಬೌಲರ್ ಹಾಗೂ ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್ಮನ್. ದೇಶೀಯ ಕ್ರಿಕೆಟ್ನಲ್ಲಿ ಅಡಿಲೆಡ್ ಸ್ಟ್ರೈಕರ್ಸ್, ಮೆಲ್ಬೋರ್ನ್ ರೇನೆಗೇಡ್ಸ್ ಹಾಗೂ ಸೌತ್ ಆಸ್ಟ್ರೇಲಿಯಾ ತಂಡಗಳಿಗೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ೨೦೧೩ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ತಂಡದಿಂದ ಪಾದಾರ್ಪಣೆ ಮಾಡಿದ ಕೇನ್, ಕೊನೆಯ ಬಾರಿ ೨೦೧೬ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡಿದ್ದರು.[೧][೨][೩]

ಆರಂಭಿಕ ಜೀವನ[ಬದಲಾಯಿಸಿ]

ನಥಾನ್ ರವರು ಫೆಬ್ರವರಿ ೧೨, ೧೯೯೧ ಆಸ್ಟ್ರೇಲಿಯಾದ ಎದುಂಡ, ಸೌತ್ ಆಸ್ಟ್ರೇಲಿಯಾದಲ್ಲಿ ಜನಿಸಿದರು. ಇವರು ೨೦೦೮-೯ರ ಬಿಗ್ ಬ್ಯಾಷ್ ಸರಣಿಯಲ್ಲಿ ಸಧ್ರನ್ ರೆಡ್ ಬ್ಯಾಕ್ಸ್ ತಂಡದಿಂದ ಟಿ೨೦ ಕ್ರಿಕೆಟ್ ಹಾಗೂ ಫ್ರೋಡ್ ರೇಂಜರ್ ಸರಣಿ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಪದಾರ್ಪಣೆ ಮಾಡಿದರು. ನಂತರ ೨೦೦೯ರಲ್ಲಿ ಆಸ್ಟ್ರೇಲಿಯಾದ ೧೯ರ ವಯೋಮಿತಿ ಕ್ರಿಕೆಟ್ ತಂಡದ ಸದಸ್ಯರಾಗಿ ಭಾರತದ ವಿರುದ್ಧದ ಸರಣಿಗೆ ಆಯ್ಕೆ ಆದರು, ನಂತರ ೨೦೧೦ರ ವಿಶ್ವಕಪ್ ಗೆ ಆಯ್ಕೆ ಆದರು.[೪][೫][೬][೭][೮]

ವೃತ್ತಿ ಜೀವನ[ಬದಲಾಯಿಸಿ]

ಫೆಬ್ರವರಿ ೨೧, ೨೦೧೧ರಲ್ಲಿ ಅಡಿಲೇಡ್ ಸೌತ್ ಆಸ್ಟ್ರೇಲಿಯಾ ಹಾಗೂ ಕ್ವೀನ್ಸ್ ಲ್ಯಾಂಡ್ ವಿರುಧ್ಧ ನಡೆದ ಪಂದ್ಯದ ಮೂಲಕ ಇವರು ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪನೆ ಮಾಡಿದರು.[೯]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಜನವರಿ ೧೩, ೨೦೧೩ ರಂದು ಅಡಿಲೇಡ್ ನಲ್ಲಿ ಶ್ರೀಲಂಕಾ ವಿರುಧ್ಧ ನಡೆದ ಎರಡನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೧೦] ಅಕ್ತೋಬರ್ ೦೫, ೨೦೧೪ ರಂದು ದುಬೈನಲ್ಲಿ ಪಾಕಿಸ್ತಾನ ವಿರುಧ್ಧ ನಡೆದ ಏಕೈಕ ಟಿ೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೧೧]

ಪಂದ್ಯಗಳು[ಬದಲಾಯಿಸಿ]

  • ಏಕದಿನ ಕ್ರಿಕೆಟ್ : ೨೨ ಪಂದ್ಯಗಳು[೧೨]
  • ಟಿ-೨೦ ಕ್ರಿಕೆಟ್ : ೧೫ ಪಂದ್ಯಗಳು

ವಿಕೇಟ್ಗಳು[ಬದಲಾಯಿಸಿ]

  1. ಏಕದಿನ ಪಂದ್ಯಗಳಲ್ಲಿ: ೩೪
  2. ಟಿ-೨೦ ಪಂದ್ಯಗಳಲ್ಲಿ: ೧೭

ಉಲ್ಲೇಖಗಳು[ಬದಲಾಯಿಸಿ]

  1. https://www.cricbuzz.com/live-cricket-scorecard/11903/delhi-capitals-vs-pune-warriors-39th-match-indian-premier-league-2013
  2. https://www.cricbuzz.com/live-cricket-scorecard/16415/sunrisers-hyderabad-vs-royal-challengers-bangalore-27th-match-indian-premier-league-2016
  3. https://www.cricbuzz.com/profiles/6262/kane-richardson
  4. https://www.cricket.com.au/news/kane-richardson-has-a-hair-raising-experience/2014-07-19
  5. https://www.espncricinfo.com/series/8627/scorecard/361321/queensland-vs-south-australia-twenty20-big-bash-2008-09
  6. https://www.espncricinfo.com/series/8626/scorecard/361291/victoria-vs-south-australia-ford-ranger-cup-2008-09
  7. https://www.espncricinfo.com/story/_/id/22827152/
  8. https://thewest.com.au/sport/cricket/where-are-they-now-australias-last-under-19-cricket-world-cup-winners-from-2010-all-grown-up-ng-b88732986z
  9. https://www.espncricinfo.com/series/8043/scorecard/474042/south-australia-vs-queensland-sheffield-shield-2010-11
  10. https://www.espncricinfo.com/series/12264/scorecard/573015/australia-vs-sri-lanka-2nd-odi-sri-lanka-tour-of-australia-2012-13
  11. https://www.espncricinfo.com/series/11581/scorecard/727917/australia-vs-pakistan-only-t20i-australia-tour-of-united-arab-emirates-2014-15
  12. http://www.espncricinfo.com/australia/content/player/272262.html