ಬೆದರುಗೊಂಬೆ
ಬೆದರುಗೊಂಬೆ ಎಂಬುವುದು ಹಲವುವೇಳೆ ಮನುಷ್ಯನ ಆಕೃತಿಯಂತಿರುವ ದೀಹ ಅಥವಾ ಬೊಂಬೆ. ಮನುಷ್ಯರಂತೆ ಕಾಣುವ ಬೆದರುಗೊಂಬೆಗಳಿಗೆ ಸಾಮಾನ್ಯವಾಗಿ ಹಳೆ ಬಟ್ಟೆಗಳನ್ನು ತೊಡಿಸಿ ತೆರೆದ ಜಮೀನುಗಳಲ್ಲಿ ಇರಿಸಲಾಗುತ್ತದೆ. ಇದರ ಉದ್ದೇಶ ಪಕ್ಷಿಗಳು ಇತ್ತೀಚೆಗೆ ಬೀರಿದ ಬೀಜ ಹಾಗೂ ಬೆಳೆಯುತ್ತಿರುವ ಫಸಲಿಗೆ ತೊಂದರೆ ಕೊಡುವುದನ್ನು ಮತ್ತು ಅವುಗಳನ್ನು ತಿನ್ನುವುದಕ್ಕೆ ಅಡ್ಡಿಪಡಿಸುವುದು. ರೈತರು ಪ್ರಪಂಚದಾದ್ಯಂತ ಬೆದರುಗೊಂಬೆಗಳನ್ನು ಬಳಸುತ್ತಾರೆ, ಮತ್ತು ಜನಪ್ರಿಯ ಸಂಸ್ಕೃತಿಗಳಲ್ಲಿ ಹೊಲಗಳು ಹಾಗೂ ಗ್ರಾಮಪ್ರದೇಶಗಳ ಗಮನಾರ್ಹ ಸಂಕೇತವಾಗಿವೆ.
ವಿನ್ಯಾಸ
[ಬದಲಾಯಿಸಿ]ಬೆದರುಗೊಂಬೆಯ ಸಾಮಾನ್ಯ ರೂಪವೆಂದರೆ ಹಳೆ ಬಟ್ಟೆಗಳನ್ನು ತೊಟ್ಟಿರುವ ಮಾನವರಂತೆ ಕಾಣುವ ಆಕೃತಿ. ಇದರಿಂದ ಕಾಗೆಗಳು ಅಥವಾ ಗುಬ್ಬಚ್ಚಿಗಳಂತಹ ಪಕ್ಷಿಗಳು ಧಾನ್ಯಗಳನ್ನು ತಿನ್ನದಂತೆ ಅಡ್ಡಿಪಡಿಸಬಹುದು. ಗಾಳಿಯಂತ್ರಗಳಂತಹ ಯಂತ್ರಗಳನ್ನು ಬೆದರುಗೊಂಬೆಗಳಾಗಿ ಬಳಸಲಾಗಿದೆ, ಆದರೆ ಪ್ರಾಣಿಗಳು ಆ ರಚನೆಗಳೊಂದಿಗೆ ಹೆಚ್ಚು ಪರಿಚಿತವಾದಂತೆ ಅವುಗಳ ಪರಿಣಾಮಕಾರಿತ್ವ ಕಡಿಮೆಯಾಗುತ್ತದೆ.
ಹೆಚ್ಚಿನ ಓದಿಗೆ
[ಬದಲಾಯಿಸಿ]Scarecrow Fact and Fable, Peter Haining, 1986