ಸದಸ್ಯ:Sinchan1940560/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋಕರ್ಣ -ಉತ್ತರ ಕನ್ನಡ ಜಿಲ್ಲೆ[ಬದಲಾಯಿಸಿ]

ನನ್ನ ಹೆಸರು ಸಿಂಚನ್ ಉಲ್ಲಾಸ್ ನಾಯಕ್. ನಾನು ೧೩-೦೫-೨೦೦೧ ರ ಕಾರವಾರ ಜಿಲ್ಲೆಯ ಹೊನ್ನಾವರ್ ತಾಲೂಕಿನಲ್ಲಿ ಜನಿಸಿದ್ದೆನೆ. ನನ್ನ ತಂದೆಯ ಹೆಸರು ಉಲ್ಲಾಸ್ ನಾಯಕ್ .ನನ್ನ ತಾಯಿಯ ಹೆಸರು ವೆದಿಕಾ ನಾಯಕ್.

ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ; ಪರಶುರಾಮ ಭೂಮಿ ಎಂಬ ಐತಿಹ್ಯಗಳನ್ನು ಹೊಂದಿರುವ ಈ ಪ್ರದೇಶ ವಾಯವ್ಯ ದಿಕ್ಕಿನಲ್ಲಿದೆ. ಕಾರವಾರದಿಂದ ಸುಮಾರು ೬೫ ಕಿ.ಮಿ. ದೂರದಲ್ಲಿದೆ.

ಗೋಕರ್ಣದ ಬೀಚ್[ಬದಲಾಯಿಸಿ]

  • ಧಾರ್ಮಿಕತೆ, ಆಧುನೀಕತೆ, ಸೌಂದರ್ಯ, ಮೂರೂ ಕೂಡಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಅಪಾರ ಪ್ರಮಾಣದ ವಿದೇಶಿಗರನ್ನು ಸೆಳೆಯುತ್ತಿರುವ ಕ್ಷೇತ್ರ ಎನ್ನಬಹುದು. ಇಲ್ಲಿಗೆ ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್, ಜರ್ಮನಿ, ಇಸ್ರೇಲ್ ಮತ್ತು ರಷ್ಯಾ ಪ್ರಜೆಗಳು ಬರುವುದು ಮಾಮೂಲು.
  • ಗೋಕರ್ಣದ ಬೀಚ್‌ಗಳಿಗೆ ವಿದೇಶಿಗರು ಬರುವುದು ಮೋಜು, ಮಸ್ತಿ ಮಾಡಲು, ಮಾದಕ ದ್ರವ್ಯ ಸೇವಿಸಲು ಎಂಬ ಕಲ್ಪನೆ ಬಹುತೇಕರಲ್ಲಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಅವರು ಮಾಡುತ್ತಿರುವ ಕೆಲಸಗಳು ಕುತೂಹಲ ಮೂಡಿಸುತ್ತವೆ. ಇಲ್ಲಿಯ ಜನರೊಂದಿಗೆ ಬೆರೆತು ಸ್ಥಳೀಯ ಉಡುಗೆ ತೊಡುಗೆ ರೂಢಿಸಿಕೊಂಡ ವಿದೇಶಿಗರ ದೊಡ್ಡ ದಂಡೇ ಇಲ್ಲಿದೆ. ರಾಮತೀರ್ಥದ ನೀರಿನಲ್ಲಿ ಸ್ನಾನ ಮಾಡಿ ಯೋಗ, ಧ್ಯಾನ ಮಾಡುವುದನ್ನು ಹೆಚ್ಚಿನ ವಿದೇಶಿಗರು ನಿತ್ಯದ ಕಾಯಕವಾಗಿಸಿಕೊಂಡಿದ್ದಾರೆ.

ಜಾನಪದ ಜೀವನದೊಡನೆ ಸಹಯೋಗ[ಬದಲಾಯಿಸಿ]

  • ದೇಶ ಸುತ್ತುವ ಸಲುವಾಗಿ ಬರುವ ಕೆಲವು ವಿದೇಶಿ ಪ್ರವಾಸಿಗರು ಹಾಲಕ್ಕಿಗಳೊಂದಿಗೆ ಬೆರೆತು ದವಸ ಧಾನ್ಯ ಬೆಳೆಯುವ, ತರಕಾರಿಗೆ ನೀರು ಹಾಕುವ, ಕೊಯ್ಯುವ ಹಾಗೂ ಭತ್ತ ಬೇರ್ಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಲಕ್ಕಿಗರ ಸಾಂಪ್ರದಾಯಿಕ ಅಡುಗೆ, ಉಡುಗೆ ತೊಡುಗೆಗಳಿಗೆ ಮಾರು ಹೋಗಿರುವ ಹಲವರು ಅದನ್ನೇ ಅನುಸರಿಸುತ್ತಿದ್ದಾರೆ. ಗೋಕರ್ಣ ಸಮೀಪದ ಭಾವಿಕೊಡ್ಲದ ರಾಮಗೌಡ ಎಂಬುವವರ ಮನೆಯಲ್ಲಿ ನೆಲೆಸಿದ್ದ ಸ್ಪೇನ್ ದೇಶದ ಕಾರ್ಲ್ ರಿಚಾರ್ಡೋ ಹಾಗೂ ಇಟಲಿಯ ರಿಜ್ವಾನ್ ಫೇಸ್, ಭತ್ತದ ಬಣವೆಯಿಂದ ಹುಲ್ಲು ಕಟ್ಟನ್ನು ಹಲಗೆ ಮೇಲೆ ಬಡಿದು ಭತ್ತ ಬೇರ್ಪಡಿಸುವುದನ್ನು ಬಹಳ ಆಸ್ಥೆಯಿಂದ ಕಲಿತಿದ್ದಾರೆ.
  • ಮಹಾಬಲೇಶ್ವರ ದೇವಸ್ಥಾನ
  • ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ಆಕರ್ಷಣೆಗಳಲ್ಲಿ ಒಂದಾಗಿದೆ. ಕೆಲವೊಮ್ಮೆ ಪ್ರಾಣಲಿಂಗ ಅಥವಾ ಆತ್ಮಲಿಂಗ ಎಂದು ಕರೆಯಲ್ಪಡುತ್ತದೆ ಇದಕ್ಕೆ ಕಾರಣ ಇಲ್ಲಿರುವ  ಶಿವಲಿಂಗ ಇದರಿಂದ ಭಕ್ತರಲ್ಲಿ ಇದು ಜನಪ್ರಿಯವಾಗಿದೆ . ಈ ಧಾರ್ಮಿಕ ಕ್ಷೇತ್ರವನ್ನು  ಕಾಶಿ ಅಥವಾ ವಾರಣಾಸಿಯ ಶಿವನ  ದೇವಾಲಯಗಳಷ್ಟೇ  ಪವಿತ್ರವಾದುದು ಎಂದು ಪರಿಗಣಿಸಲ್ಪಟ್ಟಿದೆ ಅದಲ್ಲದೆ ಪ್ರಸ್ತುತ ಏಳು ಮುಕ್ತಿಕ್ಷೇತ್ರಗಳಲ್ಲಿ ಇದು ಕೂಡಾ ಒಂದಾಗಿದೆ. ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು ಬರುವ ಭಕ್ತರು ಮೊದಲು ಅರಬ್ಬೀ ಸಮುದ್ರದಲ್ಲಿ ಒಮ್ಮೆ ಜಳಕ ಮಾಡಿ ಬರುವುದು ಇಲ್ಲಿನ ರೂಢಿ. ಬಿಳಿ ಗ್ರಾನೈಟ್ ಕಲ್ಲುಗಳನ್ನು  ಬಳಸಿ ತಯಾರಿಸಲಾಗಿರುವ ಈ ರಚನೆಯು ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು  ಪ್ರತಿನಿಧಿಸುತ್ತದೆ.ದೇವಸ್ಥಾನ ತಲುಪಿದ ನಂತರ, ಪ್ರವಾಸಿಗರು ಮಧ್ಯ ಭಾಗದಲ್ಲಿ ರಂದ್ರವುಳ್ಳ ಚೌಕಾಕಾರದ ಸಾಲಿಗ್ರಾಮ ಪೀಠದಲ್ಲಿ  ಶಿವಲಿಂಗವನ್ನು ಸ್ಥಾಪಿಸಿರುವುದನ್ನು ಗಮನಿಸಬಹುದು . ಈ ಕೇಂದ್ರಭಾಗದಲ್ಲಿನ ರಂದ್ರ ಶಿವಲಿಂಗವನ್ನು ಮೇಲಿನಿಂದ ವೀಕ್ಷಿಸಲು ಭಕ್ತರಿಗೆ ಸುಲಭವಾಗಿಸುತ್ತದೆ . ಇದಲ್ಲದೆ ಈ  ದೇವಾಲಯದಲ್ಲಿ 1500 ವರ್ಷದ  ಹಿಂದಿನ ಕಲ್ಲಿನಿಂದ ಕೆತ್ತಿದ  ಶಿವನ ಒಂದು ಆಕೃತಿಯಿದೆ . ಹಿಂದೂ ಧರ್ಮದ ಜನರ ತಮ್ಮ ಮೃತ ಸಂಬಂಧಿಕರ ಅಂತಿಮ ಆಚರಣೆಗಳನ್ನು ಕೈಗೊಳ್ಳಲು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ . ಈ ಲಿಂಗದ ದರ್ಶನ ಪಡೆದವರಿಗೆ ಆಶೀರ್ವಾದದ ತುಂತುರುವಾಗುತ್ತದೆ ಎಂಬುದು ನಂಬಿಕೆ . ಮಹಾಬಲೇಶ್ವರ ದೇವಸ್ಥಾನವು ಶಿವರಾತ್ರಿಯ ಸಂದರ್ಭದಲ್ಲಿ  ನೂರಾರು ಭಕ್ತರಿಂದ ತುಂಬಿ ತುಳುಕುತ್ತದೆ.
  • ಆತ್ಮ ಲಿಂಗ ಕ್ಷೇತ್ರ
  • ಗೋಕರ್ಣ ಒಂದು ಉಳಿದ ಎರಡು ಕ್ಷೇತ್ರಗಳೆಂದರೆ ವಾರಾಣಾಸಿ ಹಾಗೂ ರಾಮೇಶ್ವರ. ಗೋಕರ್ಣ ಕ್ಷೇತ್ರದ ಸುತ್ತ ಅರೇಬಿಯಾ ಸಮುದ್ರ, ಪೂರ್ವದಲ್ಲಿ ಸಿದ್ದೇಶ್ವರ ಕ್ಷೇತ್ರ, ಉತ್ತರದಲ್ಲಿ ಗಂಗಾವಳಿ ನದಿ, ದಕ್ಷಿಣದಲ್ಲಿ ಅಘನಾಶಿನಿ ನದಿಗಳಿವೆ. ಇಂಥಹ ಪ್ರಕೃತಿ ರಮಣೀಯತೆಯಿಂದ ಕಂಗೊಳಿಸುತ್ತಿರುವ ಈ ಕ್ಷೇತ್ರದಲ್ಲಿ ಶಿವನಆತ್ಮ ಲಿಂಗ ಕ್ಷೇತ್ರ.
  • ಉಪ್ಪಿನ ಸತ್ಯಾಗ್ರಹ
    ಭಾರತದಲ್ಲಿ ಬ್ರಿಟಿಷ್ ಆಡಳಿತದ ವೇಳೆಯಲ್ಲಿ, ಉಪ್ಪಿನ ಮೇಲೆ ವಿಧಿಸಿದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿಯವರುನಡೆಸಿದ ಸತ್ಯಾಗ್ರಹ ಚಳುವಳಿಯನ್ನು ಉಪ್ಪಿನ ಸತ್ಯಾಗ್ರಹ ಅಥವಾ ದಾಂಡಿ ಯಾತ್ರೆ ಎನ್ನಲಾಗುತ್ತದೆ. ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ, ಮಹಾತ್ಮ ಗಾಂಧಿಯವರು ತಮ್ಮಅನುಯಾಯಿಗಳೊಡನೆ, ಸಬರಮತಿ ಆಶ್ರಮದಿಂದ ಸಮುದ್ರ ತಟದಲ್ಲಿರುವ ದಾಂಡಿಯವರೆಗಿನ ೨೪೦ ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರು. ಇಲ್ಲಿ ಈ ಕರದ ವಿರೋಧದ ಸಂಕೇತವಾಗಿ ನಿಬಂಧನೆಯ ವಿರುದ್ಧವಾಗಿ ಉಪ್ಪನ್ನು ತಯಾರಿಸಿದರು. ಈ ಚಳುವಳಿಯು ೧೯೩೦ನೇ ಇಸವಿಯ ಮಾರ್ಚ್ ೧೨ ರಿಂದ ಏಪ್ರಿಲ್ ೬ರವರಗೆ ನಡೆಯಿತು.