ವಿಷಯಕ್ಕೆ ಹೋಗು

ಚಿಂತಾಮಣಿ (ರತ್ನ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಮತ್ತು ಬೌದ್ಧ ಎರಡು ಸಂಪ್ರದಾಯಗಳಲ್ಲಿ, ಚಿಂತಾಮಣಿಯು ಬಯಕೆಯನ್ನು ಈಡೇರಿಸುವ ರತ್ನ. ಕೆಲವರು, ಇದು ಪಾಶ್ಚಾತ್ಯ ರಸವಿದ್ಯೆಯಲ್ಲಿನ ಸ್ಪರ್ಶಮಣಿಗೆ ಸಮನಾಗಿದೆ ಎಂದು ಹೇಳುತ್ತಾರೆ.[] ಇದು ಬೌದ್ಧ ಧರ್ಮಗ್ರಂಥಗಳಲ್ಲಿ ಕಂಡುಬರುವ ಹಲವಾರು ಮಣಿ ರತ್ನ ಚಿತ್ರಗಳಲ್ಲಿ ಒಂದಾಗಿದೆ.

ಹಿಂದೂ ಧರ್ಮದಲ್ಲಿ ಇದನ್ನು ದೇವತೆಗಳಾದ ವಿಷ್ಣು ಮತ್ತು ಗಣೇಶರೊಂದಿಗೆ ಸಂಬಂಧಿಸಲಾಗಿದೆ. ಹಿಂದೂ ಸಂಪ್ರದಾಯದಲ್ಲಿ ಇದನ್ನು ಹಲವುವೇಳೆ ನಾಗರ ರಾಜನ ಸ್ವಾಮ್ಯದಲ್ಲಿರುವ ಅಥವಾ ಮಕರದ ಹಣೆಯ ಮೇಲಿರುವ ಅದ್ಭುತ ರತ್ನವಾಗಿ ಚಿತ್ರಿಸಲಾಗುತ್ತದೆ. ಮೂಲತಃ ಕ್ರಿ.ಶ. ೧೦ನೇ ಶತಮಾನದಲ್ಲಿ ಬರೆಯಲ್ಪಟ್ಟ ಯೋಗ ವಾಸಿಷ್ಠವು ಚಿಂತಾಮಣಿಯ ಬಗ್ಗೆ ಒಂದು ಕಥೆಯನ್ನು ಹೊಂದಿದೆ. ವಿಷ್ಣು ಪುರಾಣವು ತನ್ನ ಒಡೆಯನಿಗೆ ಸಮೃದ್ಧಿಯನ್ನು ದಯಪಾಲಿಸುವ, ಯದು ವಂಶ ವ್ಯವಸ್ಥೆಯನ್ನು ಕೋಶೀಕರಿಸುವ ಸ್ಯಮಂತ ರತ್ನದ ಬಗ್ಗೆ ಹೇಳುತ್ತದೆ.[] ವಿಷ್ಣು ಪುರಾಣವು ಕ್ರಿ.ಶ. ಮೊದಲ ಸಹಸ್ರಮಾನದ ಮಧ್ಯದಲ್ಲಿ ಬರೆಯಲ್ಪಟ್ಟಿತು ಎಂದು ಹೇಳಲಾಗಿದೆ. ಇದು ಮುಂಚಿನ ಧರ್ಮ ಅಥವಾ ಜನಶ್ರುತಿಯನ್ನು ಬಳಸಿಕೊಳ್ಳುತ್ತದೆ.

ಟಿಪ್ಪಣಿಗಳು

[ಬದಲಾಯಿಸಿ]
  1. Guénon, René (2004) [1962]. Symbols of Sacred Science. Sophia Perennis, USA.
  2. The Past before us: Historical traditions of early North India, Romila Thapar, Harvard, 2013

ಉಲ್ಲೇಖಗಳು

[ಬದಲಾಯಿಸಿ]