ಸ್ಪರ್ಶಮಣಿ
ಸ್ಪರ್ಶಮಣಿಯು (ಸ್ಪರ್ಶವೇದಿ, ಪರುಷ) ಪಾದರಸದಂತಹ ಕ್ಷುದ್ರಲೋಹಗಳನ್ನು ಚಿನ್ನ ಅಥವಾ ಬೆಳ್ಳಿಯಾಗಿ ಬದಲಿಸುವ ಸಾಮರ್ಥ್ಯವಿದ್ದ ಒಂದು ಪೌರಾಣಿಕ ರಸವಿದ್ಯಾ ವಸ್ತು. ಇದನ್ನು ಸಿದ್ಧರಸವೆಂದು ಕೂಡ ಕರೆಯಲಾಗುತ್ತದೆ, ಮತ್ತು ನವಯೌವನಕ್ಕೆ ಮತ್ತು ಅಮರತ್ವವನ್ನು ಸಾಧಿಸಲು ಉಪಯುಕ್ತವಾಗಿತ್ತು; ಅನೇಕ ಶತಮಾನಗಳವರೆಗೆ, ರಸವಿದ್ಯೆಯಲ್ಲಿ ಇದು ಅತ್ಯಂತ ಅರಸಲಾದ ಗುರಿಯಾಗಿತ್ತು. ಸ್ಪರ್ಶಮಣಿಯು ರಸವಿದ್ಯೆಯ ಅತೀಂದ್ರಿಯ ಪರಿಭಾಷೆಯ ಕೇಂದ್ರ ಸಂಕೇತವಾಗಿತ್ತು, ಮತ್ತು ಶ್ರೇಷ್ಠತಮ ಮಟ್ಟದಲ್ಲಿ ಪರಿಪೂರ್ಣತೆ, ಜ್ಞಾನೋದಯ, ಮತ್ತು ಸ್ವರ್ಗಸುಖವನ್ನು ಸಂಕೇತಿಸುತ್ತಿತ್ತು. ಸ್ಪರ್ಶಮಣಿಯನ್ನು ಶೋಧಿಸುವ ಪ್ರಯತ್ನಗಳನ್ನು ಮ್ಯಾಗ್ನಮ್ ಓಪಸ್ (ಮಹಾ ಕಾರ್ಯ) ಎಂದು ಕರೆಯಲಾಗುತ್ತಿತ್ತು.[೧]
ಹಿಂದೂ ಧರ್ಮದಲ್ಲಿ
[ಬದಲಾಯಿಸಿ]ಹಿಂದೂ ಧರ್ಮದಲ್ಲಿ ಇದನ್ನು ವಿಷ್ಣು ಮತ್ತು ಗಣೇಶರೊಂದಿಗೆ ಸಂಬಂಧಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಇದನ್ನು ಹಲವುವೇಳೆ ನಾಗ ರಾಜನ ಸ್ವಾಧೀನದಲ್ಲಿರುವ ಅಥವಾ ಮಕರದ ಹಣೆಯ ಮೇಲಿರುವ ಅದ್ಭುತ ರತ್ನವಾಗಿ ಚಿತ್ರಿಸಲಾಗುತ್ತದೆ. ಮೂಲತಃ ೧೦ನೇ ಶತಮಾನದಲ್ಲಿ ಬರೆಯಲ್ಪಟ್ಟ ಯೋಗ ವಾಸಿಷ್ಠವು ಸ್ಪರ್ಶಮಣಿಯ ಬಗ್ಗೆ ಒಂದು ಕಥೆಯನ್ನು ಹೊಂದಿದೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ Heindel, Max, Freemasonry and Catholicism,
- ↑ Venkatesananda, Swami (1984). The Concise Yoga Vasistha. Albany: State University of New York Press. pp. 346–353. ISBN 0-87395-955-8. OCLC 11044869.