ವಿಷಯಕ್ಕೆ ಹೋಗು

ವಿಕಿಪೀಡಿಯ ಚರ್ಚೆಪುಟ:ಸಂಪಾದನೋತ್ಸವಗಳು/ಸಿದ್ದವೇಶ ಪಠ್ಯ ಪ್ರದರ್ಶನ, ಛಾಯಾಚಿತ್ರೀಕರಣ ಮತ್ತು ಸಂಪಾದನೋತ್ಸವ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿದ್ದವೇಷ ದಾಖಲಿಕರಣ ನಡೆದಿಲ್ಲ . ತುಳುವರ ಸುಗ್ಗಿ ತಿಂಗಳಲ್ಲಿ ನಡೆಯುವ ಈ ಕುಣಿತ ಸುಳ್ಯ ಪ್ರದೇಶದಲ್ಲಿ ಮಾತ್ರ ಇರುವಂತದ್ದು, ಬೆಳ್ತಂಗಡಿ ಪರಿಸರದಲ್ಲಿ ಪುರುಷರ (ನಲ್ಕೆ) ವೇಷ ಎನ್ನುವ ಕುಣಿತ ಇರೋದು. ಈ ಎರಡು ಕುಣಿತಗಳಿಗೆ ಸಾಮ್ಯತೆ ಇದೆ. ಆದರೆ ಅವು ಎರಡು ಒಂದೆಯಲ್ಲ ಬಿನ್ನತೆಗಳಿವೆ ಸಾಕಷ್ಟು ವ್ಯತ್ಯಾಸಗಳಿವೆ. --Lokesha kunchadka (ಚರ್ಚೆ) ೧೯:೩೭, ೨೧ ಮಾರ್ಚ್ ೨೦೧೯ (UTC)

ಆರೋಪದ ಅಭಿಪ್ರಾಯ ಬಗ್ಗೆ

[ಬದಲಾಯಿಸಿ]

ಸಿದ್ಧವೇಶ ಬಗೆಗೆ ಒಂದು ಉತ್ತಮ ಸಂಗ್ರಹ, ದಾಖಲೀಕರಣ ಮತ್ತು ಲೇಖನ ತಯಾರಿಸುವ ದೃಷ್ಟಿಯಿಂದ ೧೯ ನವೆಂಬರ್ ೨೦೧೮‎ ರಂದು ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪಿನವರು ತೀರ್ಮಾನಿಸಿದ್ದೆವು. ಸಿದ್ದವೇಷದಲ್ಲಿ ಪುರುಷ ಭೂತವೂ ಇರುವುದರಿಂದ ಅದನ್ನು ನಡೆಸಬಾರದೆಂದು ಸುಳ್ಯದ ಮಂಡೆಕೋಲು ಗ್ರಾಮದ ಪೇರಾಲಿನ ಊರವರು ತೀಮಾ‍ನಿಸಿರುವುದರಿಂದ ನಡೆಯಲಿಲ್ಲ. ಈ ಬಗ್ಗೆ CISನವರು ಸಂಪಾದನೋತ್ಸವದ ಖರ್ಚು ನೀಡುತ್ತೇವೆಂದು ಒಪ್ಪಿದ್ದರು. ಈ ಪ್ರಕಾರ CISನ ಕಾರ್ಯಕ್ರಮ ಸಂಯೋಜಕ ಗೋಪಾಲಕೃಷ್ಣ ಎ. ಅವರೊಂದಿಗೆ ಕೇಳಿದಾಗ ಕಾರ್ಯಕ್ರಮವನ್ನು ಮುಂದುವರಿಸಿರೆಂದು ದಿನಾಂಕ ೨೦ ಮಾರ್ಚ್ ೨೦೧೯ರಂದು ನನಗೆ ಮೌಖಿಕವಾಗಿ ತಿಳಿಸಿರುವರು. ಈ ಒಪ್ಪಿಗೆಯಂತೆ ಬೆಳ್ತಂಗಡಿ ತಾಲೂಕಿನ ಸಿದ್ದವೇಷ ಮತ್ತು ಬೆಳ್ತಂಗಡಿ ತಾಲೂಕಿನ ಪುರುಷ ಕಟ್ಟುನಯನ್ನು ದಾಖಲೀಕರಣಕ್ಕಾಗಿ ನಮ್ಮ ಕರಾವಳಿ ವಿಕಿಮೀಡಿಯನ್ಸ್ ತಂಡ ದಿನಾಂಕ ೨೧ ಮಾರ್ಚ್ ೨೦೧೯ರಂದು ಸಂಜೆ ಪ್ರಯಾಣ ಬೆಳೆಸಿತು. ನಮ್ಮನ್ನು ಕರೆಸಿಕೊಂಡವರು ಪುದುವೆಟ್ಟು ಗ್ರಾಮದ ಡಾ.ಯದುಪತಿ ಗೌಡರು ಸಂಗ್ರಹಕ್ಕೆ ಬೇಕಾದ ಮಾರ್ಗದರ್ಶನ ನೀಡಿದರು. ಈ ಮಧ್ಯೆ ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನ ವಿದ್ಯಾರ್ಥಿಗಳು, ತುಳು ಎಂ.ಎ. ವಿದ್ಯಾರ್ಥಿಗಳೂ ಬೆಳ್ತಂಗಡಿ ತಾಲೂಕಿನ ಬೇರೆ ಪ್ರದೇಶದಲ್ಲಿ ಕ್ಷೇತ್ರಕಾರ್ಯಕ್ಕೆ ಬಂದಿದ್ದರಂತೆ. ಸಿದ್ದವೇಷ ದಾಖಲಿಕರಣ ನಡೆದಿಲ್ಲ. ತುಳುವರ ಸುಗ್ಗಿ ತಿಂಗಳಲ್ಲಿ ನಡೆಯುವ ಈ ಕುಣಿತ ಸುಳ್ಯ ಪ್ರದೇಶದಲ್ಲಿ ಮಾತ್ರ ಇರುವಂತದ್ದು, ಬೆಳ್ತಂಗಡಿ ಪರಿಸರದಲ್ಲಿ ಪುರುಷರ (ನಲ್ಕೆ) ವೇಷ ಎನ್ನುವ ಕುಣಿತ ಇರೋದು. ಈ ಎರಡು ಕುಣಿತಗಳಿಗೆ ಸಾಮ್ಯತೆ ಇದೆ. ಆದರೆ ಅವು ಎರಡು ಒಂದೆಯಲ್ಲ ಭಿನ್ನತೆಗಳಿವೆ ಸಾಕಷ್ಟು ವ್ಯತ್ಯಾಸಗಳಿವೆ ಎಂಬ ಹೇಳಿಕೆಯನ್ನು ಲೋಕೇಶರು ೧೯:೩೭, ೨೧ ಮಾರ್ಚ್ ೨೦೧೯ ನೀಡುತ್ತಾರೆ.

ದಾಖಲೆಗಳು

[ಬದಲಾಯಿಸಿ]

ಸಿದ್ದವೇಶವೆಂಬುದು ಒಂದು ಕುಣಿತ. ಈ ಕುರಿತಂತೆ ಸ್ಪಷ್ಟ ಮಾಹಿತಿಗಳೊಂದಿಗೆ ಈ ಕೆಳಗೆ ಉಲ್ಲೇಖಿಸಿರುವ ಮೂರು ಪುಸ್ತಕಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಅವುಗಳು ಹೀಗಿವೆ;

  1. ಡಾ.ಪುರುಷೋತ್ತಮ ಬಿಳಿಮಲೆ, ೧೯೯೦. ಕರಾವಳಿ ಜಾನಪದ, ಮಂಗಳಗಂಗೋತ್ರಿ ದಕ್ಷಿಣಕನ್ನಡ ಜಿಲ್ಲೆ ಈ ಪುಸ್ತಕದಲ್ಲಿ ಸಿದ್ಧವೇಶ:ಪ್ರತಿಭಟನೆ ಮತ್ತು ನಿರಸನ ಎಂಬ ಲೇಖನ ಬರೆದಿದ್ದಾರೆ. ಹನ್ನೆರಡು ಪುಟಗಳ ಈ ಲೇಖನದಲ್ಲಿ ಮೂರು ಭಾಗಗಳಲ್ಲಿ ಸಿದ್ದವೇಶ ಕಾಲ-ದೇಶ-ವ್ಯಕ್ತಿ ಚಿತ್ರವನ್ನೂ ಸಿದ್ಧವೇಶದ ತಾತ್ವಿಕ ಹಿನ್ನೆಲೆಯನ್ನೂ ಗೌಡರು ವೈದಿಕವನ್ನು ವಿರೋಧಿಸುವುದನ್ನು ಕುರಿತಂತೆ ಚರ್ಚಿಸುತ್ತಾರೆ.
  2. ಡಾ. ಯದುಪತಿ ಗೌಡ, ೨೦೦೩. ಗೌಡರು-ಜನಾಂಗ ಮತ್ತು ಕುಣಿತ ಸಂ:ಡಾ.ಕೆ.ಚಿನ್ನಪ್ಪ ಗೌಡ, ಗೌಡ ಜನಾಂಗ ಇತಿಹಾಸ ಮತ್ತು ಸಂಸ್ಕೃತಿ, ಬೆಳ್ಳಿಹಬ್ಬ ಆಚರಣಾ ಸಮಿತಿ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ, ಮಂಗಳೂರು ಈ ಕೃತಿಯಲ್ಲಿ ಉಲ್ಲೇಖಿಸಿರುವಂತೆ ಸಿದ್ಧವೇಶ ಮತ್ತು ಪುರಷ ಕಟ್ಟುನ ಎಂಬುದನ್ನು ಉಲ್ಲೇಖಿಸಿದ್ದಾರೆ. ಬೆಳ್ತಂಗಡಿಯಲ್ಲಿ ನಡೆವ ಪುರುಷ ಕಟ್ಟುನಕ್ಕೂ ಮತ್ತು ಸುಳ್ಯದ ಸಿದ್ದವೇಶಕ್ಕೂ ಸಮಾನ ಅಂಶಗಳೇ ಇವೆ. ಕದ್ರಿ ಮಠ, ಪ್ರಧಾನವಾಗಿ ಗೌಡರು ಪಾಳ್ಗೊಳ್ಳವುದು ಇತ್ಯಾದಿ.
  3. ಡಾ.ಚಕ್ಕೆರೆ ಶಿವಶಂಕರ್, ೨೦೦೬. ಜನಪದ ಕಲಾ ಪ್ರವೇಶ, ಸಾಗರ್ ಪ್ರಕಾಶನ, ಬೆಂಗಳೂರು. ಈ ಗ್ರಂಥದಲ್ಲಿ ಕರಾವಳಿ ಕರ್ನಾಟಕದ ಜನಪದ ಕಲೆಗಳು ಭಾಗದಲ್ಲಿ ಸಿದ್ಧವೇಷ ಎಂಬ ಲೇಖನವಿದೆ. ಈ ಕೃತಿಯಲ್ಲಿ ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಕಂಡು ಬರುವ ಸಿದ್ಧವೇಷವು ಪೂರ್ಣಪ್ರಮಾಣದ ಮನರಂಜನಾ ಕುಣಿತವೆಂದು ಹೇಳುತ್ತಾರೆ.
  4. ಡಾ. ಪೂವಪ್ಪ ಕಣಿಯೂರು ತುಳುವೆರೆ ನಲಿಕೆದ ಜಾಲ್ಡ‍್ ಸಿದ್ದೊವೇಸೊದ ಅನನ್ಯತೆ, ಕಳಸೆ ಮದಿಪು ೫೦ -೨೦೦೯

ದಾಖಲೀಕರಿಸುವವರ ಬಗೆಗೆ ಆರೋಪಿಸಿರುವುದು ಎಷ್ಟು ಸರಿ. ಇದು ವಿಕಿಪೀಡಿಯ ಲೇಖಕರ ಲೇಖನ ಬರವಣಿಗೆ ಶೈಲಿಯಲ್ಲಿ ಇದೆಯೇ? --Vishwanatha Badikana (ಚರ್ಚೆ) ೧೧:೦೩, ೨೪ ಮಾರ್ಚ್ ೨೦೧೯ (UTC)

ಸಿದ್ಧವೇಷ ಮತ್ತು ಪುರುಷ ವೇಷ

[ಬದಲಾಯಿಸಿ]

ಲೋಕೇಶ ಕುಂಚಡ್ಕ ಅವರೇ ಬರೆದ ಸಿದ್ಧವೇಶ ಲೇಖನದಿಂದ ಉಧೃತ ಸಾಲುಗಳು:

ತುಳುನಾಡಿನ ಜನಪದ ಕಲೆಗಳಲ್ಲಿ ಪುರುಷ ಕುಣಿತ ಎಂಬುದು ಕೂಡ ಒಂದು. ಈ ಕುಣಿತಕ್ಕೆ ತುಳುನಾಡಿನ ಹಳ್ಳಿಗಳಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಸುಗ್ಗಿ ತಿಂಗಳಲ್ಲಿ ಕೃಷಿ ಚಟುವಟಿಕೆ ಮುಗಿದ ನಂತರ ಪುರುಷ ಪ್ರಧಾನವಾದ ಈ ಕುಣಿತವನ್ನು ಮೂರು, ನಾಲ್ಕು ಅಥವಾ ಐದು ದಿನಗಳ ಕಾಲ ರಾತ್ರಿ ಸಮಯದಲ್ಲಿ ಕುಣಿತ ಮಾಡುವುದು ಕಲೆಯ ವಿಶೇಷತೆಯಾಗಿದೆ. ತುಳುನಾಡಿನ ಜನಪದ ಕುಣಿತಗಳಲ್ಲಿ ಆಚರಣಾತ್ಮಕ ಕುಣಿತಗಳು ಮತ್ತು ಮನೋರಂಜನಾತ್ಮಕ ಕುಣಿತಗಳೆಂಬ ಎರಡು ರೀತಿಯ ಕುಣಿತಗಳಿವೆ. ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಕುಣಿತ ಆಚರಣಾತ್ಮಕವೂ, ಹೌದು ಮನೋರಂಜನೆಯೂ ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ವಾಸ ಮಾಡುತ್ತಿರುವ 'ಗೌಡ' ಜನಾಂಗದವರು ಸುಗ್ಗಿ ಹುಣ್ಣಿಮೆಯ ಸಂದರ್ಭದಲ್ಲಿ ‘ಸಿದ್ಧವೇಷ’ ಕುಣಿಯುತ್ತಾರೆ. ನಿಗದಿ ಪಡಿಸಿದ ದಿನ ಹಳ್ಳಿಯ ಹಿರಿಯನೊಬ್ಬನ ನೇತೃತ್ವದಲ್ಲಿ ಆಸಕ್ತ ಗೌಡ ಯುವಕರು ಊರಿನ ಭೂತದ ಛಾವಡಿಯಲ್ಲೋ, ಗುರಿಕಾರನ ಮನೆಯಲ್ಲೋ ಒಟ್ಟು ಸೇರಿ ‘ಸಿದ್ಧವೇಷ’ ಕುಣಿಯಲು ದಿನ ನಿಶ್ಚಯ ಮಾಡುತ್ತಾರೆ. ಕನಿಷ್ಠ ಏಳೆಂಟು ಮಂದಿ ಯುವಕರು ಕುಣಿತಕ್ಕೆ ನಿಲ್ಲುತ್ತಾರೆ. ಅತ್ಯಂತ ಹಾಸ್ಯಪ್ರಜ್ಞೆ ಇರುವಾತನು ‘ಬ್ರಾಹ್ಮಣ’ನ ವೇಷವನ್ನು ಹಾಕುತ್ತಾನೆ. ಇನ್ನೊಬ್ಬ ದಾಸಯ್ಯನ ವೇಷವನ್ನೂ ಉತ್ಸಾಹಿಯೂ ಕ್ರಿಯಾಶೀಲನೂ ಆಗಿರುವಾತ ಮತ್ತೊಬ್ಬ ಸನ್ಯಾಸಿಯ ವೇಷ ಹಾಕಲು ತಯಾರಾಗುತ್ತಾನೆ. ಇವಿಷ್ಟು ಸಿದ್ಧವೇಷದ ಪಾತ್ರಗಳು.

ಅಂದ ಮೇಲೆ ಸಿದ್ಧವೇಷ ಬೇರೆ ಪುರುಷ ವೇಷ ಬೇರೆ ಬೇರೆ ಎಂದು ಇದೇ ಲೋಕೇಶ ಕುಂಚಡ್ಕ ಅವರು ಆರೋಪಿಸುವುದರಲ್ಲಿ ಅರ್ಥವಿಲ್ಲ. ತಾವೇ ಬರೆದುದು ಅವರಿಗೇ ಮರೆತು ಹೋಗಿದೆ ಅಷ್ಟೆ. ಬಹುಶಃ ತಾತ್ಕಾಲಿಕ ಮರೆವು ಇರಬಹುದು ಅಥವಾ ಸುಮ್ ಸುಮ್ಮನೇ ಅರೋಪಿಸಬೇಕೆಂದೇ ಸರಿಯಾದ ಆಧಾರವಿಲ್ಲದೆ ಆರೋಪಿಸುವುದು ಆಗಿರಬಹುದು.--ಪವನಜ (ಚರ್ಚೆ) ೦೫:೪೬, ೨೬ ಮಾರ್ಚ್ ೨೦೧೯ (UTC)