ವಿಷಯಕ್ಕೆ ಹೋಗು

ಕಾರ್ಲ್ ಬೆನ್ಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಲ್ ಬೆನ್ಜ್
Born
Karl Friedrich Michael Vaillant

(೧೮೪೪-೧೧-೨೫)೨೫ ನವೆಂಬರ್ ೧೮೪೪
Died4 April 1929(1929-04-04) (aged 84)
Resting placeCemetery of Ladenburg
NationalityGerman
EducationUniversity of Karlsruhe
OccupationEngineer
Spouseಬರ್ತಾ ರಿಂಗರ್ (m. 1872-1929; his death)

ಕಾರ್ಲ್ ಬೆನ್ಜ್ ರವರು ಜರ್ಮನ್ನಿನ ಎಂಜಿನ್ ವಿನ್ಯಾಸಕ ಮತ್ತು ಆಟೋಮೊಬೈಲ್ ಎಂಜಿನಿಯರ್.ಜನವರಿ ೨೯,೧೮೮೬ರಂದು ಇವರ ಬೆನ್ಜ್ ಮೋಟಾರು ಕಾರಿಗೆ ಪೇಟೆಂಟ್ ಪಡೆದುಕೊಂಡರು.

ವೈಯಕ್ತಿಕ ಜೀವನ

[ಬದಲಾಯಿಸಿ]

ಕಾರ್ಲ್ ಬೆನ್ಜ್ ೨೫ ನವೆಂಬರ್,೧೮೪೪ರಂದು ಜರ್ಮನಿಯ ಬೇಡನ್ ಕಾರ್ಲ್ಸ್ ರೂಹೆಯ ಬಳಿ ಇರುವ ಮುಹಲ್ಬರ್ಗ್ ಎಂಬಲ್ಲಿ ಜನಿಸಿದರು.ಇವರ ತಂದೆ ಜೋಹಾನ್ ಜಾರ್ಜ್ ಬೆನ್ಜ್ ಹಾಗು ತಾಯಿ ಜೋಸೆಫೀನ್ ವೈಲ್ಲಂಟ್.ಕಾರ್ಲ್ ಬೆನ್ಜ್ ಅವರಿಗೆ ಎರಡು ವರ್ಷವಾಗಿದ್ದಾಗ ಅವರ ತಂದೆ ನ್ಯುಮೋನಿಯಾದಿಂದ ಮರಣಹೊಂದಿದರು. ಕಾರ್ಲ್ ಬೆನ್ಜ್ ೨೦ ಜುಲೈ ೧೮೭೨ ರಂದು,ಬರ್ತಾ ರಿಂಗರ್ ಎಂಬಾಕೆಯನ್ನು ವಿವಾಹವಾದರು.ಅವರಿಗೆ ಐದು ಮಕ್ಕಳು: ಯುಜೆನ್ (೧೮೭೩), ರಿಚರ್ಡ್ (೧೮೭೪), ಕ್ಲಾರಾ (೧೮೭೭), ಥೈಲ್ಡ್ (೧೮೮೨) ಮತ್ತು ಎಲೆನ್ (೧೮೯೦).[]

ವಿದ್ಯಾಭ್ಯಾಸ

[ಬದಲಾಯಿಸಿ]

ಬಡತನದಲ್ಲಿ ವಾಸವಾಗಿದ್ದರೂ,ಕಾರ್ಲ್ ಬೆನ್ಜ್ ಅವರ ತಾಯಿ ಅವರಿಗೆ ಉತ್ತಮ ಶಿಕ್ಷಣ ನೀಡಲು ಪ್ರಯತ್ನಿಸಿದರು. ಬೆನ್ಜ್ ಅವರು ಕಾರ್ಲ್ಸ್ ರೂಹೆಯಲ್ಲಿನ ಸ್ಥಳೀಯ ಗ್ರಾಮರ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು.ಹಾಗೂ ಅವರೊಬ್ಬ ಅಸಾಧಾರಣ ವಿದ್ಯಾರ್ಥಿಯಾಗಿದ್ದರು. ಮುಂದೆ ಅವರು ಪಾಲಿ-ಟೆಕ್ನಿಕಲ್ ವಿಶ್ವವಿದ್ಯಾನಿಲಯದಲ್ಲಿ ಫರ್ಡಿನ್ಯಾಂಡ್ ರೆಡ್ಟೆನ್ಬಚೆರ್ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದರು. ಬೆನ್ಜ್ ಮೂಲತಃ ಲಾಕ್ಸ್ಮಿತ್ ಮೇಲೆ ತನ್ನ ಅಧ್ಯಯನವನ್ನು ಕೇಂದ್ರೀಕರಿಸಿದ್ದಾರೆ.ಆದರೆ ಅಂತಿಮವಾಗಿ ತನ್ನ ತಂದೆಯ ಹೆಜ್ಜೆಯಾದ ಇಂಜಿನ್ ಇಂಜಿನಿಯರಿಂಗ್ ಕಡೆಗೆ ಅನುಸರಿಸಿದರು. ಸೆಪ್ಟೆಂಬರ್ ೩೦ ೧೮೬೦ರಂದು ತನ್ನ ೧೫ನೆಯ ವಯಸ್ಸಿನಲ್ಲಿ ಕಾರ್ಲ್ಸ್ರೂಹೆ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಪಾಸಾದರು.ಬೆನ್ಜ್ 1964 ರ ಜುಲೈ 9 ರಂದು ಪದವಿಯನ್ನು ಪಡೆದರು.ಅವರ ಔಪಚಾರಿಕ ಶಿಕ್ಷಣದ ನಂತರ,ಬೆನ್ಜ್ ಹಲವಾರು ಕಂಪೆನಿಗಳಲ್ಲಿ ಏಳು ವರ್ಷಗಳ ವೃತ್ತಿಪರ ತರಬೇತಿಯನ್ನು ಹೊಂದಿದ್ದರು. ಅವರು ಮಾನ್ಹೈಮ್ಗೆ ಡ್ರಾಫ್ಟ್ಸ್ ಮ್ಯಾನ್ ಮತ್ತು ಡಿಸೈನರ್ ಆಗಿ ಮಾಪಕ ಕಾರ್ಖಾನೆಯಲ್ಲಿ ಕೆಲಸ ಮಾಡಲು ತೆರಳಿದರು.1868 ರಲ್ಲಿ ಅವರು ಸೇತುವೆ ನಿರ್ಮಾಣ ಕಂಪೆನಿಗೆ ಕೆಲಸ ಮಾಡಲು ಪೋರ್ಫಝೈಮ್ಗೆ ತೆರಳಿದರು.ಅಂತಿಮವಾಗಿ, ಅವರು ಕಬ್ಬಿಣದ ನಿರ್ಮಾಣ ಕಂಪನಿಯಲ್ಲಿ ಕೆಲಸ ಮಾಡಲು ಅಲ್ಪಾವಧಿಗೆ ವಿಯೆನ್ನಾಗೆ ತೆರಳಿದರು.[]

ವೃತ್ತಿ ಜೀವನ

[ಬದಲಾಯಿಸಿ]

ಚಿಕ್ಕ ವಯಸ್ಸಿನಲ್ಲಿಯೇ ಇಂಜಿನಿಯರ್ ಪದವಿ ಪಡೆದು,ಹಲವಾರು ವರ್ಷಗಳ ಕಾಲ ಅನೇಕ ಯಂತ್ರಗಾರಗಳಲ್ಲಿ ಯಶಸ್ವಿ ಕಾರ್ಯ ನಿರ್ವಹಿಸಿ,ಅನುಭವ ಪಡೆದರು.ಬೆನ್ಜ್ ರವರ ಪತ್ನಿ ರಿಂಗರ್,ಮೋಟಾರು ಕಾರುಗಳ ಉತ್ಪಾದನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದರು.ತನ್ನ ಗಂಡನನ್ನೂ ಈ ಕಾರ್ಯದಲ್ಲಿ ಪ್ರೋತ್ಸಾಯಿಸುತ್ತಿದ್ದರು.ಕೆಲವೇ ದಿನಗಳಲ್ಲಿ 'ಹಗುರವಾಹನ'(Velocipede) ಎಂಬ ಹೊಸ ಯಂತ್ರವನ್ನು ಕಂಡುಹಿಡಿದಿದಲ್ಲದೆ ಅದರ ಮೇಲೆ ಸವಾರಿ ಮಾಡುವ ವಿಧಾನವನ್ನು ಅರಿತರು. ರಿಂಗರ್ ತನ್ನ ಗಂಡನ ಕಾರ್ಯದಲ್ಲಿ ಪ್ರೋತ್ಸಾಹ ನೀಡುತ್ತಲೇ ಬಂದರು.ಸ್ವಯಂ ಚಾಲಿತ ವಾಹನದ ಪ್ರಯೋಗಕ್ಕಾಗಿ ಸಾಕಷ್ಟು ಹಣ ವಿನಿಯೋಗವೂ ಅನಿವಾರ್ಯ ಎಂದು ಎನಿಸಿದ್ದರು.ದಂಪತಿಗಳಿಬ್ಬರೂ ತಮ್ಮ ಕಾರ್ಯವನ್ನು ಮುಂದುವರಿಸಿದರು.ವಾಹನ ಒಂದರ ಮೇಲೆ ಎಂಜಿನ್ ಜೋಡಿಸುವುದನ್ನು ಕಂಡುಹಿಡಿದರು.ಎಂಜಿನ್ ಶಕ್ತಿಯನ್ನು ಚಕ್ರಗಳಿಗೆ ಒಯ್ಯುವ ವಿಧಾನವನ್ನು ತಮ್ಮ ಪ್ರಯೋಗಗಳಂದ ಅರಿತರು.೧೮೮೩ರಲ್ಲಿ ಈ ದಂಪತಿಗಳು ಬೆನ್ಜ್ ಆಂಡ್ ಕಂಪನಿ ರೈನೆಷ್ ಗ್ಯಾಸ್ಮೊಟೋರ್ನ್-ಫ್ಯಾಬ್ರಿಕ್ ಎಂಬ ಸಂಸ್ಥೆಯನ್ನು ತೆರೆದರು.ಮುಂದೆ ೧೨ ವರ್ಷಗಳ ನಿರಂತರ ಪ್ರಯೋಗ ಕಾರ್ಯದ ನಂತರ ವಾಹನ ಸಿದ್ಧವಾಯಿತು. ೧೮೮೬ರ ವೇಳೆಗೆ 'ಕಾರು' ಸಿದ್ಧವಾಯಿತು.ಮುಂದೆ ಬೆನ್ಜ್ ತನ್ನ ಬೆನ್ಜ್ ಕಾರಿಗೆ ಸರ್ವೇಸಾಮಾನ್ಯ ಹಕ್ಕನ್ನು(Patent) ಪಡೆದುಕೊಂಡರು.[]

ಕಾರ್ಲ್ ಬೆನ್ಜ್ ಎಪ್ರಿಲ್ ೪,೧೯೨೯ ರಂದು ಜರ್ಮನಿಯ ಲಾಡೆನ್ಬರ್ಗ್ನಲ್ಲಿ ನಿಧನರಾದರು.[]

ಉಲ್ಲೇಖಗಳು

[ಬದಲಾಯಿಸಿ]