ಥಾಯ್ಲೆಂಡ್‍ನ ಥಾಮ್ ಲುವಾಗ್ ಗುಹೆಯಲ್ಲಿ ರಕ್ಷಣಾಕಾರ್ಯ
ಮಕ್ಕಳು ಕಾಣೆಯಾದುದು
[ಬದಲಾಯಿಸಿ]- ಥಮ್ ಲ್ವಾಂಗ್ ಗುಹೆಯಲ್ಲಿ ಸಿಲುಕಿದ ಬಾಲಕರ ರಕ್ಷಣೆ:
Lua error in ಮಾಡ್ಯೂಲ್:Location_map/multi at line 143: Unable to find the specified location map definition: "Module:Location map/data/Thailand" does not exist.
- ದಿನಾಂಕ 23 ಜೂನ್ 2018 ರಂದು, ಪಿಕ್‍ನಿಕ್ಕಿಗೆ ಹೋದ 11 ರಿಂದ 17 ರ ವಯಸ್ಸಿನ ಹನ್ನೆರಡು ಬಾಲಕರು ಮತ್ತು 25 ವರ್ಷ ಪ್ರಾಯದ ಒಬ್ಬ ವ್ಯಕ್ತಿ (ಫುಟ್ಬಾಲ್ ತರಬೇತುದಾರ)ಒಟ್ಟು ಹದಿಮೂರು ಜನ ಥೈಲ್ ಲುಯಾಂಗ್ ನಾಂಗ್ ನಾನ್ (ಥಾಯ್: ถ้ำ หลวง นาง นอน) ನಲ್ಲಿ ಥೈಲ್ಯಾಂಡಿನ ಚಿಯಾಂಗ್ ರೈ ಪ್ರಾಂತ್ಯದ ಗುಹೆಯಲ್ಲಿ ಸಿಲುಕಿಕೊಂಡರು. ಭಾರೀ ಮಳೆಯು ಬಂದು ಅವರು ಗುಹೆಯ ಒಳಗೆ ಭೇಟಿ ಮಾಡುವ ಸಮಯದಲ್ಲಿ ಪ್ರವಾಹವು ಭಾಗಶಃ ಗುಹೆಯನ್ನು ಪ್ರವೇಶ ಮಾಡುವ ಸುರಂಗವನ್ನೂ ಗುಹೆಯನ್ನೂ ಆವರಿಸಿ ತುಂಬಿಕೊಂಡಿತು. ಅವರು ಹೊರಗೆ ಬರಲಾರದೆ ಗುಹೆಯವಳಗೇ ಉಳಿದರು. , ಸ್ಥಳೀಯ ಅಸೋಸಿಯೇಷನ್ ಫುಟ್ಬಾಲ್ ತಂಡದ ಎಲ್ಲ ಹುಡುಗ ಸದಸ್ಯರು ಮತ್ತು ಅವರ ಸಹಾಯಕ ಕೋಚ್ ಕೆಲವು ಗಂಟೆಗಳ ನಂತರ ಕಾಣೆಯಾಗಿದ್ದಾರೆ ಎಂದು ವರದಿಯಾಯಿತು., ಮತ್ತು ಹುಡುಕಾಟದ ಕಾರ್ಯಾಚರಣೆಗಳು ತಕ್ಷಣವೇ ಆರಂಭಗೊಂಡವು.
- ಅವರನ್ನು ಪತ್ತೆಹಚ್ಚುವ ಪ್ರಯತ್ನಗಳಿಗೆ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣದಿಂದ ಅಡ್ಡಿಯಾಯಿತು, ಒಂದು ವಾರದವರೆಗೆ ಯಾವುದೇ ಸಂಪರ್ಕವನ್ನು ಮಾಡಲು ಸಾಧ್ಯವಾಗಲಿಲ್ಲ.
ರಕ್ಷಣಾ ಕಾರ್ಯ
[ಬದಲಾಯಿಸಿ]- ವಿಶ್ವಾದ್ಯಂತ ಮಾಧ್ಯಮ ಪ್ರಸಾರ ಮತ್ತು ಸಾರ್ವಜನಿಕ ಹಿತಾಸಕ್ತಿಗಳ ಮಧ್ಯಪ್ರವೇಶದಿಂದ ರಕ್ಷಣಾ ಕಾರ್ಯಾಚರಣೆಯು ಭಾರೀ ದೊಡ್ಡ ಕಾರ್ಯಾಚರಣೆಯಾಗಿ ವಿಸ್ತರಿಸಿತು. ಕಿರಿದಾದ ಸುರಂಗದ ಹಾದಿಗಳು ಮತ್ತು ಮಣ್ಣಿನ ನೀರಿನಲ್ಲಿ ಹೋರಾಡಿದ ನಂತರ, ಬ್ರಿಟಿಷ್ ಡೈವರ್ಗಳು ಕಳೆದುಹೋದ ಒಂಬತ್ತು ದಿನಗಳ ನಂತರ, ಜುಲೈ 2 ರಂದು ಗುಹೆ ಬಾಯಿಯಿಂದ 3.2 ಕಿಲೋಮೀಟರ್ಗಳಷ್ಟು (2.0 ಮೈಲಿ) ಎತ್ತರದ ಬಂಡೆಯ ಮೇಲೆ ಕಾಣೆಯಾದ ಜನರನ್ನು ಕಂಡುಹಿಡಿದರು.. ರಕ್ಷಣಾ ಸಂಘಟಕರು ತಮ್ಮ ಮುಂಚಿನ ಪಾರುಗಾಣಿಸು ವ ಕಾರ್ಯವನ್ನು ಸಕ್ರಿಯಗೊಳಿಸಲು ಹುಡುಗರಿಗೆ ಮತ್ತು ಅವರ ತರಬೇತುದಾರನಿಗೆ ಮೂಲಭೂತ ಧುಮುಕುವ ತಂತ್ರಗಳನ್ನು ಕಲಿಸುವುದು ಅಥವಾ ಮಳೆಗಾಲದ ಅಂತ್ಯದ ವೇಳೆಗೆ ಪ್ರವಾಹದ ನೀರು ಕಡಿಮೆಯಾಗಲು ತಿಂಗಳುಗಳ ಕಾಲ ನಿರೀಕ್ಷಿಸಬೇಕೆ ಎಂದು ಚರ್ಚಿಸಿದ್ದಾರೆ.
- ಆದರೂ ರಕ್ಷಣಾಕಾರ್ಯವನ್ನು ಮುಂದುವರಿಸಿ ಗುಹೆಯ ಪ್ರವೇಶ- ಸುರಂಗ ವ್ಯವಸ್ಥೆಯಿಂದ ಮಳೆಯು ಸುರಿಯುತ್ತಿದ್ದರೂ ನೀರನ್ನು ಪಂಪ್ ಮಾಡುವ ಮೂಲಕ, ಅನೆಕ ದಿನಗಳ ನಂತರ, ಜುಲೈ 8 ರಂದು ಹುಡುಗರಲ್ಲಿ ನಾಲ್ಕು ಮಂದಿ ಬಾಲಕರನ್ನು ರಕ್ಷಿಸಲಾಯಿತು. ಮರುದಿನ ಮತ್ತೆ ನಾಲ್ಕು ಬಾಲಕರನ್ನು ರಕ್ಷಿಸಲಾಯಿತು. ಜುಲೈ 9 ರ ವೇಳೆಗೆ, ನಾಲ್ಕು ಹುಡುಗರು ಮತ್ತು ಅವರ ಸಹಾಯಕ ತರಬೇತುದಾರರು ಸಿಕ್ಕಿಬಿದ್ದವರು ಗುಹೆಯ ಒಳಗೇ ಉಳಿದಿದ್ದರು.[೫][೬]
ಥಾಯ್ಲೆಂಡಿನಲ್ಲಿ ವಾಡಿಕೆ ಮಳೆಗಾಲದ ಆರಂಭ ಜುಲೈ ದಿನಾಂಕ11 ರಿಂದ
[ಬದಲಾಯಿಸಿ]- ಮುನ್ಸೂಚನೆಯಂತೆ ಪುನಃ ನಿಯತ ಕಾಲದ ಮಳೆಗಾಲ ಜುಲೈ 11 ರಂದು ಪುನಂ ಆರಂಭಗೊಳ್ಳುವುದಕ್ಕಿಂತ ಮುಂಚಿತವಾಗಿ ಎಲ್ಲಾ ಜನರನ್ನು ಹೊರಗೆ ತರಲು ಪಾರುಗಾಣಿಕೆಯ ರಕ್ಷಣಾ ತಂಡಗಳು ತೀವ್ರವಾಗಿ ಪ್ರಯತ್ನದಲ್ಲಿ ತೊಡಗಿದವು . ಜುಲೈ 11 ರಿಂದ ಕನಿಷ್ಟ ದಿನಕ್ಕೆ 52 ಮಿಲಿಮೀಟರ್ ಮಳೆ ಸುರಿಯುವ ಸೂಚನೆ ಇತ್ತು.
- ಅನೇಕ ದೇಶಗಳಿಂದ ಮುಳುಗು ತಜ್ಞರು, ಥಾಯ್ ನೌಕಾಪಡೆಯ ಸಮುದ್ರ ರಕ್ಷಕರ (Thai Navy SEALs, volunteers) ಪಡೆಯವರು , ಸ್ವಯಂಸೇವಕರು ಮತ್ತು ತಾಂತ್ರಿಕ ಸಹಾಯ ತಂಡಗಳು ಸೇರಿದಂತೆ ಸುಮಾರು 1,000 ಕ್ಕೂ ಹೆಚ್ಚಿನ ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಪಾರುಗಾಣಿಕಾ ಕಾರ್ಯಾಚರಣೆ ಸಂದರ್ಭದಲ್ಲಿ ಒಂದು ಸಾವು (ಕಾರ್ಯಪಡೆಯವರದು ) ಸಂಭವಿಸಿದೆ: ಗುಹೆಯ ಒಳಭಾಗಕ್ಕೆ ಗಾಳಿಯನ್ನೂ, ಇತರೆ ಅಗತ್ಯ ಸರಬರಾಜುಗಳನ್ನು ಪೂರೈಸಿದ ನಂತರ ಗುಹೆ ತೆರೆಯಲು ಮರಳಲು ಪ್ರಯತ್ನಿಸುವಾಗ ಜುಲೈ 5 ರಂದು 38 ವರ್ಷ ವಯಸ್ಸಿನ ಮಾಜಿ ಥಾಯ್ ಸೀಲ್ ಉಸಿರಾಟದ ಸ್ವಯಂಸೇವಕ ತಜ್ಞ ಸಾವನ್ನಪ್ಪಿದನು.
- ದಿ.10 ಜುಲೈ 2018 ರ ಹೊತ್ತಿಗೆ ಎಲ್ಲಾ ಹುಡುಗರೂ ಅವರ ತರಬೇತುದಾರರೂ ಗುಹೆಯಿಂದ ರಕ್ಷಿಸಲ್ಪಟ್ಟರು.[೭]
ವಿವರ
[ಬದಲಾಯಿಸಿ]ಥಮ್ ಲ್ವಾಂಗ್ ನಂಗ್ ನಾನ್ ಎಂಬುದು ಥೈಯಾಂಗ್ ಮತ್ತು ಮ್ಯಾನ್ಮಾರ್ ನಡುವಿನ ಗಡಿಪ್ರದೇಶದ ಪರ್ವತ ಶ್ರೇಣಿಯಾದ ಡೊಯಿ ನಾಂಗ್ ನಾನ್ನ ಕೆಳಗೆ ಕಾರ್ಸ್ಟಿಕ್ ಗುಹೆ ಸಂಕೀರ್ಣವಾಗಿದೆ. ಈ ವ್ಯವಸ್ಥೆಯು 10 ಕಿಲೋಮೀಟರ್ (6.2 ಮೈಲಿ) ಉದ್ದವಾಗಿದೆ ಮತ್ತು ನೂರಾರು ಮೀಟರ್ ಸುಣ್ಣದ ಕಲ್ಲುಗಳ ಅಡಿಯಲ್ಲಿ ಸುತ್ತುವರೆಯುವ ಅನೇಕ ಆಳವಾದ ನೆಲಕುಸುತ /ಹಿನ್ಸರಿತಗಳು, ಕಿರಿದಾದ ಹಾದಿಗಳು ಮತ್ತು ಸುರಂಗಗಳನ್ನು ಹೊಂದಿದೆ. ಗುಹಾ ವ್ಯವಸ್ಥೆಯ ಭಾಗವು ಕಾಲೋಚಿತವಾಗಿ ಪ್ರವಾಹದಿಂದಾಗಿ, ಮಳೆಗಾಲದಲ್ಲಿ ನೀರು (ಜುಲೈ-ನವೆಂಬರ್) ಗುಹೆಗಳಲ್ಲಿ ಪ್ರವೇಶಿಸುವುದರ ವಿರುದ್ಧ ಸಲಹೆ ನೀಡುವ ಸಂಕೇತವು ಪ್ರವೇಶದ್ವಾರದಲ್ಲಿದೆ.
23 ಜೂನ್ 2018 ರಂದು, ಸ್ಥಳೀಯ ಜೂನಿಯರ್ ಫುಟ್ಬಾಲ್ ತಂಡದಿಂದ 11 ಮತ್ತು 16 ರ ವಯಸ್ಸಿನ ಹನ್ನೆರಡು ಹುಡುಗರ ಪೈಕಿ ವೈಲ್ಡ್ ಬೋರ್ಸ್ ಟೀಮು ಮತ್ತು ಅವರ ಜೊತೆ 25 ವರ್ಷ ವಯಸ್ಸಿನ ತರಬೇತುದಾರ, ಏಕಾಪೊಲ್ ಚಾನ್ಟಾಂಗ್, ಎಂಬ ಗುಂಪು, ಗುಹೆ ಅನ್ವೇಷಿಸಲು ಹೊರಟ ನಂತರ ಕಾಣೆಯಾಯಿತು.. ಪೈರಪಟ್ ಸೊಮ್ಪಿಯಾಂಗ್ಜೈ ಎಂಬ ಹುಡುಗನ 17 ನೇ ಹುಟ್ಟುಹಬ್ಬವನ್ನು ಆಚರಿಸಲು ಈ 4 - 5 ಕಿಲೋಮೀಟರ್ ಉದ್ದದ ಸುರಂಗದ ಗುಹೆಗೆ ಪಿಕ್ನಿಕ್ ಕಾರ್ಯಕ್ರಮ ನಡೆಸಲು ಅವರು ಆಯೋಜಿಸಿದರು. ಗುಹೆ ಪ್ರವೇಶಿಸಿದ ನಂತರ ಹಠಾತ್ ಮತ್ತು ನಿರಂತರ ಮಳೆಯಿಂದ ದಾರಿಯ ಸುರಂಗ ಮತ್ತು ಗುಹೆಯಲ್ಲಿ ನೀರು ತುಂಬಿಕೊಂಡು ಈ ಗುಂಪು ಸುರಂಗಗಳಲ್ಲಿ ಸಿಕ್ಕಿಕೊಂಡಿತ್ತು. ಅವರು ಗುಹೆಯ ಎತ್ತರ ಪ್ರದೇಶದಲ್ಲಿ ಆಶ್ರಯ ಪಡೆದರು. ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಮತ್ತು ಸಸ್ಯ ಸಂರಕ್ಷಣೆ ಇಲಾಖೆಯ ರೇಂಜರ್ ಗುಹೆ ಪ್ರವೇಶದ್ವಾರದಲ್ಲಿ ಈ ಗುಂಪಿನ ಪ್ರಯಾಣದ ಸಿದ್ಧತೆಯ ವಸ್ತುಗಳನ್ನು ನೋಡಿದ ನಂತರ ಕಾಣೆಯಾದ ಗುಂಪಿನ ಬಗೆಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ತಕ್ಷಣ ಹುಡುಕುವ ನಂತರ ಮತ್ತು ರಕ್ಷಣೆಯ ಕಾರ್ಯಕ್ರಮ ತೆಗೆದುಕೊಂಡರು.
ಥಾಮ್ ಲುವಾಗ್ ಗುಹೆ
[ಬದಲಾಯಿಸಿ]- ಗುಹೆಯ ಮಾರ್ಗದ ವಿವರವಾದ ಚಿತ್ರಕ್ಕೆಮತ್ತು ವಿಡಿಯೋಕ್ಕೆ ನೋಡಿ:Thailand rescue:
- 4 ಕಿ.ಮೀ. ಗುಹೆಯ ಉದ್ದ. (ಸುಮಾರು 2 ಮೈಲಿ))
- 1275 ಮೀಟರ್ ಬೆಟ್ಟದ ಎತ್ತರ (ಸುಮಾರು 4330 ಅಡಿ)ಮೇಲಿನಿಂದ ಸುರಂಗ ಕೊರೆಯುವುದಾದರೆ ಸಮಾರು 2000 ಅಡಿ ಕೊರೆಯಬೇಕಿತ್ತು. ಆದರೂ ನಾಲ್ಕಾರು ಕಡೆ 400-500 ಮೀ.ಆಳದವರೆಗೆ ಸುರಂಗ ಕೊರೆದಿದ್ದರು.
- ರಕ್ಷಣೆಗೆ ಅಡ್ಡಿಯಾಗಿದ್ದ ಅಂಶಗಳು
- ಮಳೆ ಹಾಗೂ ಪ್ರವಾಹ ಹೆಚ್ಚುತ್ತಿದ್ದು, ಗುಹೆಯಲ್ಲಿ ನೀರಿನ ಮಟ್ಟ ದಿನೇ ದಿನೇ ಏರಿಕೆಯಾಗುತ್ತಿತ್ತು;
- ಗುಹೆಯಲ್ಲಿ ಕಡಿಮೆಯಾಗುತ್ತಿರುವ ಆಮ್ಲಜನಕದ ಪ್ರಮಾಣ;
- ಈ ಮಾರ್ಗದಲ್ಲಿ ಅಡ್ಡಿಯಾಗಿರುವ ಕಿರುದಾರಿ (ಪ್ಯಾಸೇಜ್);
- 2 ಕಿ.ಮೀಟರ್‌ನಷ್ಟು ಮಾರ್ಗ ಸಂಪೂರ್ಣ ಕತ್ತಲು. ಈ ಕತ್ತಲಿನಲ್ಲಿಯೇ ಈಜಿಕೊಂಡು ಹೋಗಬೇಕು;
- ಸಿಲುಕಿರುವ ಯಾರೊಬ್ಬರಿಗೂ ಸ್ಕೂಬಾ ಡೈವಿಂಗ್ (ಆಮ್ಲಜನಕದ ಸಿಲೆಂಡರ್ ನೊದಿಗೆ ಮುಳುಗುವ ಅನುಭವ ಇಲ್ಲ;
- ಮ್ಯಾನ್ಮಾರ್ ಗಡಿಯ ಗುಹೆಯನ್ನು ಜೂನ್ 23ರಂದು ಪ್ರವೇಶಿಸಿದ 11ರಿಂದ 16 ವರ್ಷದ 12 ಬಾಲಕರು ಹಾಗೂ ಒಬ್ಬ ತರಬೇತುದಾರ, ಭಾರಿ ಮಳೆ ಬಂದಿದ್ದರಿಂದ ಅವರೆಲ್ಲ ಹೊರಬರಲಾರದೇ ಅಲ್ಲಿ ಸಿಲುಕಿಕೊಂಡರು. ಅವರು ಗುಹೆಯಲ್ಲಿ ತುಂಬಿದ ನೀರಿನಿಂದ ತಪ್ಪಸಿಕೊಳ್ಳಲು ಗುಹೆ ಒಳಗೆ ಇರುವ ಒಂದು ದಿಣ್ಣೆಯ ಮೇಲೆ ಆಶ್ರಯ ಪಡದರು. ಹುಡುಕುವ ತಂಡದವರಿಗೆ 10 ದಿನಗಳ ಶೋಧನೆಯ ಬಳಿಕ ನೀರು ತಾಗದ ಕಿರಿದಾದ ಜಾಗವೊಂದರಲ್ಲಿ ಈ ತಂಡ ಪತ್ತೆಯಾಯಿತು. ಗುಹೆಯಲ್ಲಿ ಪ್ರವಾಹದ ನೀರು ತುಂಬಿದ್ದರಿಂದ ಅವರನ್ನು ಹೊರತರುವ ಕೆಲಸಕ್ಕೆ ಅಡ್ಡಿಯಾಗಿ ತಡವಾಯಿತು.
- ಅಂಕಿ–ಅಂಶ
- ಗುಹೆಯೊಳಗೆ ತೆರಳಿದ್ದವರ ಸಂಖ್ಯೆ -13. (23-6-2018 ರಿಂದ 10-7-2018)
- ಗುಹೆಯಲ್ಲಿದ್ದ ದಿನಗಳು - 20 ದಿನ - ಹೊರಟ ಮತ್ತು ಹೊರಬಂದ ದಿನಗಳು ಸೇರಿ.
- ದಿ.8-7-2015 ಮೊದಲ 4 ಬಾಲಕರ ರಕ್ಷಣೆ
- ದಿ. 9- 7-2018 ಎರಡನೇ 4 ಬಾಲಕರ ತಂಡದ ರಕ್ಷಣೆ.
- ದಿ. 10- 7- 2018 ಕೊನೆಯ ಬಾಲಕರು ಮತ್ತು ಫುಟ್‍ಬಾಲ್ ತರಬೇತುದಾರರ ರಕ್ಷಣೆ.
- ಎಲ್ಲರೂ ಆರೋಗ್ಯವಾಗಿದ್ದರೂ ಮುನ್ನೆಚ್ಚರಿಕೆಯಾಗಿ ಆಸ್ಪತ್ರೆಗೆ ದಾಖಲೆ ಮತ್ತು ಸೋಂಕಿನ ಬಗೆಗೆ ಪರೀಕ್ಷೆ.
- ಒಟ್ಟು ರಕ್ಷಿಸಲ್ಪಟ್ಟವರ ಸಂಖ್ಯೆ - 13 .[೮]
ರಕ್ಷಣಾ ಕಾರ್ಯ
[ಬದಲಾಯಿಸಿ]- ಆಮ್ಲಜನಕ ಸಿಲಿಂಡರ್‌ಗಳನ್ನು ತೆಗೆದುಕೊಂಡು ತಜ್ಞರು ಈಜಿಕೊಂಡು ಸುರಂಗ ದಾರಿಯ ಗುಹೆಯೊಳಗೆ ಹೋದರು. ಮೊದಲ ಬಾರಿಗೆ ಒಬ್ಬ ಬಾಲಕನಿಗೆ ಇಬ್ಬರು ಮುಳುಗುತಜ್ಞರು ಜೊತೆಯಾಗಿ, ಒಟ್ಟು ನಾಲ್ವರನ್ನು ಹೊರತಂದರು. ಅದು ಅನೇಕ ಸುರಂಗಗಳನ್ನು ಹೊಂದ್ದುದರಿಂದರಿಂದಲೂ ಅಲ್ಲಿ ಕತ್ತಲೆಯಾದ್ದರಿಂದಲೂ ದಾಪಾಸು ಬರಲು, ಗುಹೆಯ ಒಳಗೆ ಬರುವಾಗ ಮಾರ್ಗದ ಗುರುತಿಗಾಗಿ ಹಗ್ಗವನ್ನು ಬಳಸಲಾಗಿತ್ತು. ಗುಹೆಯ ಚಿತ್ರಣ ಅರಿತಿದ್ದ ಕಾರಣ ಹಿಂದಿನ ದಿನ ರಕ್ಷಣೆಗೆ ತೆರಳಿದ್ದ ತಂಡವನ್ನೇ ಎರಡನೇ ಬಾರಿಗೂ ಕಳುಹಿಸಲಾಗಿತ್ತು. ಕಾರ್ಯಾಚರಣೇಗೆ 3–4 ದಿನ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕಾರ್ಯಾಚರಣೆ ಶೀಘ್ರದಲ್ಲೇ ಮುಗಿಯಿತು. ರಕ್ಷಣಾ ತಂಡದಲ್ಲಿ ವಿದೇಶದ 13 ಮಂದಿ ಮುಳುಗುತಜ್ಞರು ಇದ್ದರು. ಖ್ಯಾತ ಮುಳುಗುತಜ್ಞ ರಿಚರ್ಡ್ ಹ್ಯಾರಿಸ್ ಎಂಬುವವರೂ ಇದ್ಗರು. ಮುಳುಗು ತಜ್ಞರಿಗೂ ಈ ಗುಹೆ ಮತ್ತು ರಕ್ಷಣೆ ಸವಾಲಾಗಿತ್ತು. ಬಾಲಕರಲ್ಲಿ ಯಾರಿಗೂ ನೀರಿನಾಳದಲ್ಲಿ ಈಜುವುದು ಗೊತ್ತಿರಲಿಲ್ಲ. ಅವರಿಗೆಲ್ಲಾ ನೀರಿನಲ್ಲಿ ಮುಳುಗುವುದು, ಆಮ್ಲಜನಕ ಸಿಲಿಂಡರ್ ಬಳಸುವುದು ಹೇಗೆಂದು ಗುಹೆಯೊಳಗಡೆಯೆ ತರಬೇತಿ ನೀಡಿ ಕರೆತರಲಾಯಿತು.
- ಗುಹೆಯಲ್ಲಿ ಬಾವಲಿಗಳು ಬಳಸಿದ ನೀರು ಅಥವಾ ಕಲುಷಿತ ನೀರು ಕುಡಿದಿರುವುದಿರಂದ ಅಪಾಯ ಹೆಚ್ಚು ಎಂದು ತಜ್ಞರು ಎಚ್ಚರಿಸಿದ್ದರು. ಆದರೆ ಮೊದಲು ರಕ್ಷಣೆ ಮಾಡಲಾದ ಎಂಟೂ ಬಾಲಕರು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದಿಂದಿದ್ದಾರೆ ಎಂದು ವೈದ್ಯರು ಪರೀಕ್ಷಿಸಿ ಹೇಳಿದ್ದರು. ಅವರು ಯಾವುದೇ ಸೋಂಕಿಗೆ ಅವರು ಒಳಗಾಗಿಲ್ಲ ಎಂದು ದೃಢಪಟ್ಟ ಬಳಿಕ ಅವರನ್ನು ಮನೆಗೆ ಕಳುಹಿಸಲು ನಿರ್ಧರಸಲಾಯಿತು. (ಫಿಫಾ ವಿಶ್ವಕಪ್ ಫುಟ್ಬಾಲ್ ವೀಕ್ಷಿಸಲು ಬಾಲಕರಿಗೆ ಆಹ್ವಾನ ನೀಡಿಲಾಗಿತ್ತು. ಆದರೆ ಆರೋಗ್ಯದ ದೃಷ್ಟಿಯಿಂದ ಇವರು ಭಾಗವಹಿಸುತ್ತಿಲ್ಲ.)
- ವಿನಾಯಿತಿ: ಮುಂದಿನ ವಾರ ಶಾಲೆಗಳಲ್ಲಿ ಪರೀಕ್ಷೆ ನಡೆಯಲಿದ್ದು, ಇದರಿಂದ ಮಕ್ಕಳಿಗೆ ವಿನಾಯಿತಿ ನೀಡಲಾಗಿದೆ. 15 ದಿನಗಳವರೆಗೆ ಶಾಲೆಯ ಪಾಠ ತಪ್ಪಿದ್ದಕ್ಕಾಗಿ ವಿಶೇಷ ಟ್ಯೂಷನ್ ನೀಡಲು ಶಾಲೆಗಳು ನಿರ್ಧರಿಸಿವೆ.[೯]
- ರಕ್ಣಾಕಾರ್ಯದಲ್ಲಿ ದಿ. ೩ ಜುಲೈ ೨೦೧೮ರಂದು ಮೊದಲ ಏಳು ಜನರ, ಮತ್ತು ಒಬ್ಬ ನರ್ಸ್ ತಂಡದಲ್ಲಿ ಹೋದವರು ಮುಳುಗುತಜ್ಞ ತರಬೇತಿ ಹೊಂದಿದ್ದ, ಜಗತ್ತಿನ ಪ್ರಸಿದ್ಧ ವೈದ್ಯರ ಪೈಕಿ ಒಬ್ಬರೆನಿಸಿರುವ ಆಸ್ಟ್ರೇಲಿಯಾದ ರಿಚರ್ಡ್ ಹ್ಯಾರಿಸ್. ಹ್ಯಾರಿ ರಕ್ಷಣಾ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದರು. ನೀರಿನಲ್ಲಿ ಮುಳುಗಿ, ಅಲ್ಲಿನ ಬಂಡೆಗಲ್ಲನ್ನು ಹತ್ತಿ, ಕೆಸರಿನ ನಡುವೆ ಸಾಗಿ ಆ ಕಾರ್ಗತ್ತಲ ಗುಹೆಯೊಳಗೆ ಔಷದ ಉಪಕರಣಗಳನ್ನು ಹೊತ್ತೊಯ್ದ ಹ್ಯಾರಿ ಗುಹೆಯೊಳಗೆ ಸಿಲುಕಿದ್ದ 13 ಮಂದಿ ಆರೋಗ್ಯ ಪರೀಕ್ಷೆ ಮಾಡಿ ಅಗತ್ಯ ಚಿಕಿತ್ಸೆ ಮತ್ತು ಸುಲಭವಾಗಿ ಜೀರ್ಣವಾಗುವ ಶಕ್ತಿಯುತ ಆಹಾರ ವಸ್ತುಗಳನ್ನು ನೀಡಿದರು. ಆಸ್ಟ್ರೇಲಿಯಾದ ರಿಚರ್ಡ್ ಹ್ಯಾರಿಸ್ ಗುಹೆಯೊಳಗಿದ್ದವರನ್ನು ರಕ್ಷಿಸಿ ಹೊರ ಬಂದಾಗ ಜಗತ್ತೇ ಅವರನ್ನು ಹೊಗಳಿದರೂ ಅವರು ಸಂತಸ ಪಡುವಹಾಗಾಗಲಿಲ್ಲ. ಅವರು ತಮ್ಮ ತಂದೆಯು ಅನಾರೋಗ್ಯದಿಂದ ಸಾವಿಗೀಡಾದ ಸುದ್ದಿ ಕೇಳಬೇಕಾಯಿತು.[೧೦][೧೧]
- ಈ ಕಾರ್ಯಾಚರಣೆಯಲ್ಲಿ ಭಾರತದ ಪಾತ್ರವೂ ಇದೆ. ಥಾಯ್ಲೆಂಡ್ ಸರ್ಕಾರದ ಗುಹೆಯಲ್ಲಿ ತುಂಬಿದ ನೀರು ಖಾಲಿಮಾಡಲು ಸಹಾಯಕೇಳಿತ್ತು. ಕಿರ್ಲೊಸ್ಕರ್ ಫ್ಲಡ್ ಪಂಪ್ ತಂಡದ ಪರಿಣಿತಿ ಕುರಿತಂತೆ ಥಾಯ್ ಅಧಿಕಾರಿಗಳಿಗೆ ಭಾರತೀಯ ರಾಯಭಾರಿ ಅಧಿಕಾರಿಗಳು ತಿಳಿಸಿದರು. ತಕ್ಷಣ ಥಾಯ್ ಸರ್ಕಾರ ಅವರನ್ನು ಕಳುಹಿಸಿಕೊಡುವಂತೆ ಕೋರಿತು. ಅವರ ಮನವಿ ಮೇರೆಗೆ ಮಹಾರಾಷ್ಟ್ರದ ಮೀರಜ್‍ನ ಎಂಜಿನಿಯರ್ ಪ್ರಸಾದ್ ಕುಲಕರ್ಣಿ ನೇತೃತ್ವದಲ್ಲಿ ಕಿರ್ಲೊಸ್ಕರ್ ಫ್ಲಡ್ ಪಂಪ್ ಟೀಂ ಕಾರ್ಯಾಚರಣೆಯಲ್ಲಿ ಗುಹೆಯ ನೀರು ಖಾಲಿಮಾಡುವ ಮಹತ್ವದ ಕಾರ್ಯವನ್ನು ಮಾಡಿದೆ. ಈ ಕಾರ್ಯಾಚರಣೆಯಲ್ಲಿ ತಂಡವು ವಿಶಿಷ್ಟ ಉನ್ನತ ಸಾಮರ್ಥ್ಯದ ಆಟೋಮೇಟಿಕ್ ಪ್ರೈಮ್ ಡಿವರೇಟಿಂಗ್ ಪಂಪ್ ಗಳನ್ನು ಬಳಸಿಕೊಂಡಿತ್ತು. ಜೂನ್ 24ರಂದು ಈ ತಂಡ ಕಾರ್ಯಾಚರಣೆ ಆರಂಭಿಸಿ ಜುಲೈ 10ಕ್ಕೆ ಕಾರ್ಯಾಚರಣೆ ಮುಕ್ತಾಯಗೊಂಡಿತು. ಆದರೆ ಮಳೆ ಸತತ ಬೀಳುತ್ತಿದ್ದುದರಿಂದ ನೀರು ಖಾಲಿಯಾಗದೆ, ಸಿಲುಕಿದವರನ್ನು ಆಕ್ಸಿಜನ್ ಕೊಟ್ಟ ಸಿಲೆಂಡರಿನ ಜೊತೆ ಅರವಿಳಿಕೆ ಕೊಟ್ಟು ವಿಶೇಷ ಮುಳುಗು ಬೋಟ್ ನಲ್ಲಿ ಹೊರಕ್ಕೆ ಸಾಗಿಸಿ ತಂದರು.
- ಎಕ್ಕಾಪೊಲ್ ಚಂಟಾವಾಂಗ್ (25) ತರಬೇತುದಾರ ಹಾಗೂ 12 ಬಾಲಕರು ಗುಹೆಯಲ್ಲಿ ಆರಂಭದ ದಿನಗಳಲ್ಲಿ ಗುಹೆಯಲ್ಲಿ ಹನಿಯುತ್ತಿದ್ದ ನೀರು ಕುಡಿದು, ಹುಟ್ಟುಹಬ್ಬಕ್ಕೆ ತಂದಿದ್ದ ಕುರುಕಲು ತಿಂಡಿ ತಿಂದು ಜೀವ ಉಳಿಸಿಕೊಂಡಿದ್ದರು.
- ಚಂಟಾವಾಂಗ್ ತರಬೇತುದಾರ ಬಾಲಕರಲ್ಲಿ ಧೈರ್ಯ ತುಂಬುತ್ತಾ ಕತ್ತಲ ಗುಹೆಯಲ್ಲಿ ದಿನಗಳನ್ನು ಕಳೆದರು ಅವರ ಬಗ್ಗೆ ಜಗತ್ತಿನಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.
ನೋಡಿ
[ಬದಲಾಯಿಸಿ]- ಥೈಲ್ಯಾಂಡ್
- ಗುಹೆಯೊಳಗೆ 10 ದಿನಗಳ ಅಜ್ಞಾತವಾಸ: 12 ಬಾಲಕರು, ಫುಟ್ಬಾಲ್ ಕೋಚ್ ಜೀವಂತ: 03 ಜುಲೈ 2018
- [ರಕ್ಷಣೆಯ ವಿಡಿಯೋ ಕೊನೆಯಲ್ಲದೆ--:ಗುಹೆಯಿಂದ 8 ಬಾಲಕರ ರಕ್ಷಣೆ: ಹೊರ ಬರುವ ನಿರೀಕ್ಷೆಯಲ್ಲಿ ಉಳಿದ 5 ಜನ;
- ಗುಹೆಯ ನಕ್ಷೆ ಮತ್ತು ದಾರಿ--:Thai cave rescue route: Operation map of route divers are taking to save soccer boys
ವಿಡಿಯೋ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ boys trapped, thai/story
- ↑ Thailand cave rescue: Boys appear in new video, 'I am healthy
- ↑ Thai cave rescue suspended
- ↑ live map,soccer boys
- ↑ https://www.express.co.uk/news/world/986337/thai-cave-rescue-update-latest-news-live-map-soccer-boys
- ↑ ಸವಾಲಿನ ಗುಹೆಯಿಂದ 8 ಬಾಲಕರ ರಕ್ಷಣೆ
- ↑ All 12 boys and coach successfully rescued from Thai cave – as it happened
- ↑ ಫುಟ್‌ಬಾಲ್ ರೋಚಕತೆ ಮೀರಿದ ಸಾಹಸಗಾಥೆ ಎಪಿ/ರಾಯಿಟರ್ಸ್11 ಜುಲೈ 2018
- ↑ [mission-planned-to-bring-out-remaining-boys-and-coach-live-updates?page=with:block-5b449f95e4b0f86cea7468e2#block-5b449f95e4b0f86cea7468e2 All 12 boys and coach successfully rescued from Thai cave – as it happened
- ↑ "ಪ್ರಾಣ ಪಣಕ್ಕಿಟ್ಟು ಗುಹೆಯೊಳಗಿದ್ದ ಬಾಲಕರನ್ನು ರಕ್ಷಿಸಿ ಹೊರಬಂದ ವೈದ್ಯನಿಗೆ ಕಾದಿತ್ತು ದೊಡ್ಡ ಶಾಕ್!;12 Jul 2018". Archived from the original on 13 ಜುಲೈ 2018. Retrieved 12 ಜುಲೈ 2018.
- ↑ Thailand cave: 'Zero risks' to be taken in rescue of boys;3 July 2018
- ↑ "ಥಾಯ್ಲೆಂಡ್ ಗುಹೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತದ ಪಾತ್ರ ನಿಜಕ್ಕೂ ಅವಿಸ್ಮರಣೀಯ!; 12 Jul 2018". Archived from the original on 12 ಜುಲೈ 2018. Retrieved 12 ಜುಲೈ 2018.
- ↑ htmlಥಾಯ್ಲೆಂಡ್: ಮಕ್ಕಳ ರಕ್ಷಣೆ ಕಾರ್ಮೋಡದ ನಡುವಿನ ಬೆಳ್ಳಿರೇಖೆ;;12 ಜುಲೈ 2018
- ↑ ಸಾಹಸಗಾಥೆ
- ↑ ಗುಹೆಯಲ್ಲಿದ್ದ ಎಲ್ಲರ ರಕ್ಷಣೆ