ಫ಼ಾಫ಼ಡಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ಼ಾಫ಼ಡಾ ಒಂದು ಜನಪ್ರಿಯ ಗುಜರಾತಿ ಲಘು ಆಹಾರವಾಗಿದೆ. ಅನೇಕ ಹಬ್ಬಗಳಲ್ಲಿ, ಫ಼ಾಫ಼ಡಾ ಅತ್ಯಂತ ಇಷ್ಟಪಡಲಾಗುವ ಲಘು ಆಹಾರವಾಗಿದೆ. ಫ಼ಾಫ಼ಡಾ ಆಯತಾಕಾರವಾಗಿದ್ದು ಹಳದಿ ಬಣ್ಣವನ್ನು ಹೊಂದಿರುತ್ತದೆ. ಇದನ್ನು ಚಟ್ನಿ ಹಾಗೂ ಉಪ್ಪು ಸಿಂಪಡಿಸಿದ ಕರಿದ ಹಸಿರು ಮೆಣಸಿನಕಾಯಿಯೊಂದಿಗೆ ತಿನ್ನಲಾಗುತ್ತದೆ. ಫ಼ಾಫ಼ಡಾ ದಸರಾ ಹಬ್ಬದಿಂದ ಪ್ರಸಿದ್ಧವಾಯಿತು. ಫ಼ಾಫ಼ಡಾ ಮತ್ತು ಜಿಲೇಬಿ ಅತ್ಯಂತ ಬೇಡಿಕೆಯ ಸಿಹಿ ಮತ್ತು ಉಪ್ಪು ಖಾದ್ಯದ ಸಂಯೋಜನೆಯಾಗಿದೆ.

ಫ಼ಾಫ಼ಡಾವನ್ನು ತಯಾರಿಸಲು, ಕಡಲೆ ಹಿಟ್ಟು, ಎಣ್ಣೆ, ಅಜವಾನ, ಪಾಪಡ್ ಖಾರ್, ರುಚಿಗೆ ತಕ್ಕಷ್ಟು ಉಪ್ಪು ಬೇಕಾಗುತ್ತದೆ. ಎಲ್ಲ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಸೇರಿಸಿ ಮಿಶ್ರಣ ತಯಾರು ಮಾಡಿ. ಮಿಶ್ರಣದಿಂದ ಬೇಕಾದಷ್ಟು ನೀರನ್ನು ಬಳಸಿ ಕಣಕವನ್ನು ತಯಾರಿಸಿ. ಕಣಕದ ಸಣ್ಣ ಉಂಡೆಗಳನ್ನು ಮಾಡಿ ಉರುಳೆಯಾಕಾರದಲ್ಲಿ ಲಟ್ಟಿಸಿ ಮತ್ತು ಚಪ್ಪಟೆಯಾಗಿಸಿದ ನಂತರ ಗರಿಗರಿಯಾಗುವವರೆಗೆ ಎಣ್ಣೆಯಲ್ಲಿ ಕರಿಯಿರಿ.[೧]

ಉಲ್ಲೇಖಗಳು[ಬದಲಾಯಿಸಿ]

  1. https://www.vegrecipesofindia.com/fafda-recipe/. {{cite web}}: Missing or empty |title= (help)
"https://kn.wikipedia.org/w/index.php?title=ಫ಼ಾಫ಼ಡಾ&oldid=848509" ಇಂದ ಪಡೆಯಲ್ಪಟ್ಟಿದೆ