ಸದಸ್ಯ:ಜಯಲಕ್ಷ್ಮೀ ಭಟ್/ನನ್ನ ಪ್ರಯೋಗಪುಟ2
ಕೇಪ್ರಿ ಪ್ಯಾಂಟ್
[ಬದಲಾಯಿಸಿ]ಕೇಪ್ರಿ ಪ್ಯಾಂಟ್ , ಕ್ರಾಪ್ ಪ್ಯಾಂಟ್, ಪೆಡಲ್ ಪುಶ್ಶರ್ ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಕರೆಯಲ್ಪಡುವ ಈ ಉಡುಗೆ ಹೆಣ್ಣುಮಕ್ಕಳ ಪ್ಯಾಷನ್ ಉಡುಗೆಗಳಲ್ಲಿ ಒಂದು. ಈ ಪ್ಯಾಂಟ್‍ಗಳು ಸಾಮಾನ್ಯ ಪ್ಯಾಂಟ್‍ಗಳಂತೆ ಕಂಡರೂ, ಇದು ಮೊಣಕಾಲಿನಿಂದ ಕೆಳಗೆ ಮತ್ತು ಪಾದದಿಂದ ಮೇಲಿರುತ್ತದೆ. ಹಾಗಾಗಿ ಕೇಪ್ರಿಗಳನ್ನು ಫ್ರೀ ವೇರ್ ಉಡುಪುಗಳಾಗಿ ಬಳಸಲಾಗುತ್ತದೆ. ಕೇಪ್ರಿಗಳು ಭಾರತ, ಅಮೇರಿಕ, ಯುರೋಪ್, ಏಶಿಯಾ ದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ.
ಇತಿಹಾಸ
[ಬದಲಾಯಿಸಿ]1948ರಲ್ಲಿ ಫ್ಯಾಶನ್ ಡಿಸೈನರ್ ಸೊಂಜಾ ದೆ ಲೆನ್ನಾಟ್ರ್ಟ್ ಎಂಬುವವರು ಕೇಪ್ರಿ ಪ್ಯಾಂಟ್ ಉಡುಪನ್ನು ಪರಿಚಯಿಸಿದರು. ಅಮೇರಿಕಾದ ಸಿನಿಮಾ ನಟಿ ಗ್ರೇಸ್ ಕೆಲ್ಲಿ ಎಂಬುವವರು ಪ್ರಥಮ ಬಾರಿಗೆ ಕೇಪ್ರಿ ಪ್ಯಾಂಟ್ ಧರಿಸಿದ್ದರು ಹೀಗಾಗಿ ಕೇಪ್ರಿ ಪ್ಯಾಂಟ್ ಮತ್ತಷ್ಟು ಪ್ರಸಿದ್ಧಿ ಪಡೆಯಿತು.1960ರಲ್ಲಿ ಅಮೇರಿಕಾದ ದಿ ಡಿಕ್ ವಾನ್ ದೈಕ್ ಶೊ ಎಂಬ ಧಾರವಾಹಿಯ ಮೂಲಕ ಅಮೇರಿಕಾದಲ್ಲಿ ಕೇಪ್ರಿ ಪ್ಯಾಂಟ್ ಜನಪ್ರಿಯತೆ ಪಡೆಯಿತು.[೧] 1960ರ ಮಧ್ಯದಲ್ಲಿ ಕೇಪ್ರಿ ಸ್ಟೈಲ್‍ನ ಟೈಟ್ ಫಿಟ್ಟಿಂಗ್ ಕಾರ್ಗೊ ಪ್ಯಾಂಟ್ ಟೀನೆಜ್ ಗಂಡುಮಕ್ಕಳಲ್ಲಿ ಜನಪ್ರಿಯತೆ ಪಡೆಯಿತು. ಆದರೆ 1970 ರಿಂದ 1990 ವರೆಗೆ ಕೇಪ್ರಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತು. 2000 ಇಸವಿಯ ಮಧ್ಯದಲ್ಲಿ ಸ್ಪಾನಿಷ್ ಟೆನ್ನಿಸ್ ಆಟಗಾರ ರಾಫೆಲ್ ನಡಾಲ್ ತನ್ನ ಹೆಚ್ಚು ಆಟಗಳನ್ನು ಕೇಪ್ರಿ ಧರಿಸಿ ಆಡಿದ್ದ. ಇದು ಮತ್ತೆ ಕೇಪ್ರಿ ಪ್ಯಾಂಟ್ ಪ್ರಸಿದ್ಧವಾಗಲು ಸಹಾಯವಾಯಿತು.
ಇತರ ಹೆಸರುಗಳು
[ಬದಲಾಯಿಸಿ]ಕೇಪ್ರಿ ಪ್ಯಾಂಟ್‍ಗಳನ್ನು ಪೆಡಲ್ ಪುಶ್ಶರ್, ಕ್ರೋಪ್ ಪ್ಯಾಂಟ್, ಫ್ಲಡ್ ಪ್ಯಾಂಟ್, ಜಾಮ್ಸ್, ಹೈವಾಟರ್ಸ್ ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಕರೆಯಲಾಗುತ್ತದೆ. ಎಲ್ಲಾ ವಿಧಗಳು ವಿನ್ಯಾಸದಲ್ಲಿ ಕೇಪ್ರಿ ಪ್ಯಾಂಟ್‍ಗಳೇ ಆದರೂ, ಅದರ ಬಳಕೆಯ ದೃಷ್ಠಿಯಿಂದ ಬೇರೆ ಬೇರೆ ಹೆಸರಿಡಲಾಗಿದೆ.
ಉದಾ: ಪೆಡಲ್ ಪುಶ್ಶರ್ ಪ್ಯಾಂಟ್‍ಗಳನ್ನು ಮೊದಲು ಸಾಮಾನ್ಯವಾಗಿ ಸೈಕಲ್ ಚಲಾಯಿಸುವಾಗ ಧರಿಸುತ್ತಿದ್ದರು.[೨] ಹೀಗಾಗಿ ಪೆಡಲ್ ಪುಶ್ಶರ್ ಎಂಬ ಹೆಸರು ಬಂತು. ಕೇಪ್ರಿ ಪ್ಯಾಂಟ್‍ಗಳು ಕಾಟನ್, ಜೀನ್ಸ್ ಎಲ್ಲಾ ತರಹದ ಬಟ್ಟೆಗಳಲ್ಲೂ ದೊರೆಯುತ್ತವೆ. ಮಾಡರ್ನ್ ಲುಕ್ ಜೊತೆಗೆ ಕಂಫರ್ಟೇಬಲ್ ಫೀಲ್ ಕೊಡುವ ಕೇಪ್ರಿಗಳು ಕಾಲೇಜು ಹುಡುಗಿಯರ ಅಚ್ಚುಮೆಚ್ಚಿನ ಉಡುಪು. ಅಷ್ಟೇ ಅಲ್ಲ ಕೇಫ್ರಿ ಪ್ಯಾಂಟ್‍ಗಳು ಹೋಮ್‍ವೇರ್ ಉಡುಪುಗಳಾಗಿಯೂ ಜನಪ್ರಿಯತೆ ಪಡೆದಿದೆ.[೩] ಬೇಸಿಗೆ ಕಾಲದಲ್ಲಿ ಕೇಪ್ರಿ ಪ್ಯಾಂಟ್‍ಗಳನ್ನು ಹೆಣ್ಣುಮಕ್ಕಳು ಹೆಚ್ಚಾಗಿ ಧರಿಸಲು ಇಷ್ಟಪಡುತ್ತಾರೆ. ಪ್ಲೇನ್, ಪ್ರಿಂಟೆಡ್ ಹೀಗೆ ಎಲ್ಲಾ ರೀತಿಯ ವರ್ಣಗಳಲ್ಲಿ ದೊರೆಯುವ ಕೇಪ್ರಿ ಪ್ಯಾಂಟ್‍ಗಳು ಎಲ್ಲಾ ರೀತಿಯ ಶಾರ್ಟ್, ಲಾಂಗ್ ಟಾಪ್‍ಗಳಿಗೆ ಹೊಂದುತ್ತವೆ. ಹೀಗಾಗಿ ಕೇಪ್ರಿ ಪ್ಯಾಂಟ್‍ಗಳು ಧರಿಸಿದವರಿಗೆ ಕಂಫರ್ಟೇಬಲ್ ಫೀಲ್ ನೀಡುತ್ತದೆ. ಕೇಪ್ರಿ ಪ್ಯಾಂಟ್‍ಗಳು ಕೇವಲ ಟೀನೇಜ್ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಲ್ಲ, ಮಧ್ಯವಯಸ್ಸಿನ ಗೃಹಿಣಿಯರು, ಚಿಕ್ಕಮಕ್ಕಳೂ ಕೂಡ ಕೇಪ್ರಿ ಪ್ಯಾಂಟ್‍ನ್ನು ಇಷ್ಟಪಡುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]<reference>