ವಿಷಯಕ್ಕೆ ಹೋಗು

ಜಿಂದಾಲ್ ವಿಜಯನಗರ ವಿಮಾನನಿಲ್ದಾಣ

ನಿರ್ದೇಶಾಂಕಗಳು: 15°10′30″N 76°38′03″E / 15.1750°N 76.6341°E / 15.1750; 76.6341
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jindal Vijaynagar Airport
ಐಎಟಿಎ: VDYಐಸಿಎಒ: VOJV
ಸಾರಾಂಶ
ಪ್ರಕಾರPublic
ಮಾಲಕ/ಕಿJSW Steel
ಸೇವೆBellary, Hampi, Hospet, Toranagallu
ಸ್ಥಳToranagallu, ಕರ್ನಾಟಕ, India
ನಿರ್ದೇಶಾಂಕ15°10′30″N 76°38′03″E / 15.1750°N 76.6341°E / 15.1750; 76.6341
Map
VDY is located in Karnataka
VDY
VDY
VDY is located in India
VDY
VDY
ರನ್‌ವೇ
ದಿಕ್ಕು Length Surface
ft m
13/31 ೪,೯೨೧ ೧,೫೦೦ Asphalt

ಜಿಂದಾಲ್ ವಿಜಯನಗರ ವಿಮಾನನಿಲ್ದಾಣ (IATA(IATA: VDYICAO: VOJV)ICAO(IATA: VDYICAO: VOJV)  ಭಾರತದ ಕರ್ನಾಟಕ ರಾಜ್ಯದ ತೋರಣಗಲ್ಲು ಗ್ರಾಮದಲ್ಲಿ ಇದೆ  . ಏಕೆಂದರೆ ಅದರ ಸ್ಥಳ ಬಳಿ ವಿದ್ಯಾನಗರ ಎಂಬ ಪಟ್ಟಣವು ಇರುವುದರಿಂದ ಅದಕ್ಕೆ ವಿದ್ಯಾನಗರ ವಿಮಾನನಿಲ್ದಾಣ  ಎಂದೂ ಕರೆಯಲಾಗುತ್ತದೆ ತೋರಣಗಲ್ಲು ಗ್ರಾಮದಲ್ಲಿರುವ  ಸ್ಟೀಲ್ ಗಿರಣಿಯನ್ನು ನಿರ್ವಹಿಸುತ್ತಿರುವ    ಜೆ. ಎಸ್. ಡಬ್ಲ್ಯೂ ಸ್ಟೀಲ್  ಸಂಸ್ಥೆಯು  ಈ ನಿಲ್ದಾಣದ  ಒಡೆತನ ಹೊಂದಿದ್ದು  ಇದನ್ನು ನಿರ್ವಹಿಸುತ್ತದೆ  ಜಿಂದಾಲ್ ವಿಜಯನಗರ ಎಂಬ ಹೆಸರು   ಜೆ. ಎಸ್. ಡಬ್ಲ್ಯೂ ಸ್ಟೀಲ್ ಕಂಪನಿಯ ಹಿಂದಿನ ಹೆಸರಾದ ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್ (JVSL) ದಿಂದ ಬಂದಿದೆ. 

ಹಿಂದೆ JVSL ನೌಕರರಿಗಾಗಿ  ಒಂದು ಖಾಸಗಿ ಲ್ಯಾಂಡಿಂಗ್ ಸ್ಟ್ರಿಪ್ ಆಗಿದ್ದ ವಿಮಾನ ನಿಲ್ದಾಣವನ್ನು  ವಾಣಿಜ್ಯ ವಿಮಾನಗಳ ಬಳಕೆಗಾಗಿ  ಡಿಸೆಂಬರ್ 2006 ರಲ್ಲಿ ಉನ್ನತೀಕರಿಸಲಾಯಿತು. ಇದು  ಬಳ್ಳಾರಿ ಜಿಲ್ಲೆಯ  ಪ್ರವಾಸೋದ್ಯಮ ಮತ್ತು ವ್ಯಾಪಾರಗಳಿಗೆ ನೆರವಾಗಿದೆ.  ರಲ್ಲಿ ಪ್ರಾದೇಶಿಕ ವಿಮಾನಯಾನ ಟ್ರೂಜೆಟ್   ಸಂಸ್ಥೆಯು ಹೈದರಾಬಾದ್  ಮತ್ತು   ಬೆಂಗಳೂರುಗಳಿಂದ ದೈನಂದಿನ ಸಂಚಾರ ಸೇವೆಗಳನ್ನು ಒದಗಿಸುತ್ತಿದೆ.

ಇತಿಹಾಸ

[ಬದಲಾಯಿಸಿ]

ಜಿಂದಾಲ್ ವಿಜಯನಗರ ವಿಮಾನನಿಲ್ದಾಣವು  ಮೂಲತಃವಿಮಾನ ಬಳಸುವ ಜಿಂದಾಲ್ ವಿಜಯನಗರ ಸ್ಟೀಲ್  ಸಂಸ್ಥೆಯು ತನ್ನ  ಹಿರಿಯ ನೌಕರರನ್ನು  ಅದರ ಪಕ್ಕದ ಸ್ಟೀಲ್ ಪ್ಲಾಂಟ್ ಗೆ ಸಾಗಿಸಲು ಬಳಸುತ್ತಿದ್ದ   ಒಂದು ಖಾಸಗಿ ಏರ್ ಸ್ಟ್ರಿಪ್  ಆಗಿತ್ತು. []   2004 ರಲ್ಲಿ, ಇಲ್ಲಿ    ರಾಜ್ಯ ಸರ್ಕಾರ ವು  ವಾಣಿಜ್ಯ ವಿಮಾನಗಳ ಹಾರಾಟಕ್ಕೆ  ಒಪ್ಪಿಗೆ ನೀಡಿತು. ಸುವಿಖ್ಯಾತ ಹಂಪಿ ಪ್ರವಾಸಿತಾಣವು  ಹತ್ತಿರವೇ ಇದೆ.  ಇದು ಬಳ್ಳಾರಿಯಲ್ಲಿನ ಸ್ಟೀಲ್ ಉದ್ಯಮಕ್ಕೆ ಉದ್ಯಮಿಗಳನ್ನು ಆಕರ್ಷಿಸಲು ಅನುವಾಗುವುದು ಎಂದು  ರಾಜ್ಯ ಸರ್ಕಾರವು ಆಶಿಸಿತು.  . ಬಳ್ಳಾರಿ ವಿಮಾನನಿಲ್ದಾಣದ ರನ್ ವೇಯು ತುಂಬ ಕಿರಿದಾಗಿದ್ದು ಅದನ್ನು ವಿಸ್ತರಿಸಲು ಸಾಧ್ಯವಿರಲಿಲ್ಲ.[]   ಬೆಂಗಳೂರಿನಿಂದ  ಇಲ್ಲಿಗೆ  2 ಅಕ್ಟೋಬರ್ 2004ರಿಂದ ತನ್ನ  ವಿಮಾನ ಹಾರಾಟವನ್ನು ಆರಂಭ ಮಾಡುವುದಾಗಿ  ಏರ್ ಡೆಕ್ಕನ್ ಘೋಷಿಸಿತು ;  ಆದಾಗ್ಯೂ, ತಾಂತ್ರಿಕ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ.[]

ರಾಜ್ಯ ಸರ್ಕಾರವು ಇಲ್ಲಿ ಒಂದು ಏರ್ ಟ್ರಾಫಿಕ್ ಕಂಟ್ರೋಲ್ ಟವರ್ ಸೇರಿದಂತೆ ಕೆಲವು ಹೆಚ್ಚುವರಿ  ಸೌಲಭ್ಯಗಳನ್ನು ಅಳವಡಿಸಬೇಕಿತ್ತು .[]  25 ಕೋಟಿ೨೫ ಕೋಟಿ (ಯುಎಸ್$೫.೫೫ ದಶಲಕ್ಷ)  ವೆಚ್ಚದ ಪ್ರಯಾಣಿಕರ ಟರ್ಮಿನಲ್ ನ ನಿರ್ಮಾಣವನ್ನು  ಅನ್ನು  2006 ರಲ್ಲಿ ಜೆ. ಎಸ್. ಡಬ್ಲ್ಯೂ ಸ್ಟೀಲ್ ಸಂಸ್ಥೆಯು  ಆರಂಭಿಸಿತು. ಈ ವಿಮಾನನಿಲ್ದಾಣವನ್ನು  3 ನವೆಂಬರ್ 2005 ರಂದು  ವ್ಯವಸ್ಥಾಪಕ ನಿರ್ದೇಶಕ  ಸಜ್ಜನ್ ಜಿಂದಾಲ್  ಅವರು ಜೆ. ಎಸ್. ಡಬ್ಲ್ಯೂ ಸ್ಟೀಲ್ ನ , ಮತ್ತು ರಾಜ್ಯ ಸರ್ಕಾರದ ಹಲವಾರು ಅಧಿಕಾರಿಗಳು ಮತ್ತು  ರಾಜ್ಯಪಾಲ ಟಿ. ಎನ್. ಚತುರ್ವೇದಿ, ಅವರ ಹಾಜರಿಯಲ್ಲಿ ಉದ್ಘಾಟಿಸಿದರು.[][]  

ಸೌಲಭ್ಯಗಳು

[ಬದಲಾಯಿಸಿ]

ಇಲ್ಲಿ 13/31 ಎಂದು ಗೊತ್ತುಪಡಿಸಿದ  ಒಂದು ರನ್ವೇ ಇದ್ದು  , ಅದು ೧೫೦೦ ಮೀ. ಉದ್ದ ಮತ್ತು ೩೦ ಮೀ ಅಗಲ ಹೊಂದಿದೆ . ಪ್ರಯಾಣಿಕರ ಟರ್ಮಿನಲ್  ೧೯೦ ಚ.ಮೀ ಆವರಿಸಿದ್ದು   ಒಂದೇ ಒಂದು ಚೆಕ್-ಇನ್  ಡೆಸ್ಕ್ ಅನ್ನು ,  ಭದ್ರತಾ ಲೇನ್, ಬ್ಯಾಗೇಜ್ ಸ್ಕ್ಯಾನರ್ ಮತ್ತು 50 ಆಸನಗಳನ್ನು ಹೊಂದಿರುವ ಕಾಯುವ ಪ್ರದೇಶವನ್ನು  ಹೊಂದಿದೆ.

ಇದನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Dey, Sudipto (6–19 April 2008). "The Second Coming". Outlook Business. Vol. 3, no. 8. pp. 58–59. Retrieved 21 June 2016.
  2. "Bellary flights to use Jindal airstrip". ದಿ ಹಿಂದೂ. 16 July 2004. Retrieved 21 June 2016.
  3. "Bangalore-Bellary flights postponed". ದಿ ಹಿಂದೂ. 28 September 2004. Retrieved 21 June 2016.
  4. "Jindal airstrip needs a few more facilities". ದಿ ಹಿಂದೂ. 18 March 2005. Retrieved 21 June 2016.
  5. "Air Deccan launches flight from Bellary to Bangalore". ದಿ ಹಿಂದೂ. 4 November 2006. Retrieved 21 June 2016.
  6. "Hampi gets air connectivity from Bangalore, Goa". Oneindia. 3 November 2006. Retrieved 21 June 2016.

ಹೊರ ಕೊಂಡಿಗಳು

[ಬದಲಾಯಿಸಿ]