ಆದರ್ಶ (ನೀತಿಶಾಸ್ತ್ರ)
ಸಾಮಾನ್ಯವಾಗಿ ನೀತಿಶಾಸ್ತ್ರದ ವಿಷಯದಲ್ಲಿ, ಆದರ್ಶ ಎಂದರೆ ಗುರಿಯಾಗಿ ಒಬ್ಬರು ಸಕ್ರಿಯವಾಗಿ ಹಿಂಬಾಲಿಸುವ ಒಂದು ನೀತಿ ಅಥವಾ ಮೌಲ್ಯ, ಮತ್ತು ಒಬ್ಬರ ಆದರ್ಶಗಳ ಆದ್ಯತೆಯು ಪ್ರತಿಯೊಂದಕ್ಕೆ ಒಬ್ಬರ ಸಮರ್ಪಣೆಯ ವಿಸ್ತಾರವನ್ನು ಸೂಚಿಸುವ ಕಾರ್ಯನಿರ್ವಹಿಸಬಹುದು. ಉದಾಹರಣೆಗೆ, ಪ್ರಾಮಾಣಿಕತೆಯ ಆದರ್ಶವನ್ನು ಸಮರ್ಥಿಸುವವನು, ಆದರೆ ತನ್ನ ಸ್ನೇಹಿತನನ್ನು ರಕ್ಷಿಸಲು ಸುಳ್ಳು ಹೇಳಲು ಸಿದ್ಧನಿರುವವನು ಸ್ನೇಹಕ್ಕೆ ನಿಷ್ಠೆಯ ಜೊತೆಗೆ ಪ್ರಾಮುಖ್ಯದಲ್ಲಿ ಪ್ರಾಮಾಣಿಕತೆಗಿಂತ ಸ್ನೇಹದಲ್ಲಿ ನಂಬಿಕೆಯನ್ನೂ ಪ್ರದರ್ಶಿಸುತ್ತಾನೆ.
ಕಾನೂನಿನಲ್ಲಿ, ಕೆಲವೊಮ್ಮೆ ಸತ್ಯದ ಆದರ್ಶ (ಇದು ಎಲ್ಲ ಸಾಕ್ಷಿಯನ್ನು ಕೇಳಬೇಕು ಎಂದು ಸಲಹೆ ನೀಡುತ್ತದೆ) ಮತ್ತು ನ್ಯಾಯದ ಆದರ್ಶದ ನಡುವಿನ ಸಮತೋಲನವನ್ನು ಪರಿಹರಿಸಲು ಒಬ್ಬ ನ್ಯಾಯಾಧೀಶನನ್ನು ವಿನಂತಿಸಲಾಗುತ್ತದೆ. ರಾಜಕೀಯದಲ್ಲಿ ಆದರ್ಶಗಳು ಮಹತ್ವದ ಪಾತ್ರವಹಿಸುತ್ತವೆ. ಫ಼್ರೆಂಚ್ ಕ್ರಾಂತಿಯ ಅವಧಿಯಲ್ಲಿ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ನೀತಿಗಳನ್ನು ಆದರ್ಶಗಳ ಸ್ಥಾನಕ್ಕೆ ಏರಿಸಲಾಯಿತು. ವಾಸ್ತವವಾಗಿ, ಬಹುತೇಕ ರಾಜಕೀಯ ಚಳುವಳಿಗಳು ಆದರ್ಶಗಳ ಒಂದು ನಿರ್ದಿಷ್ಟ ಸಮೂಹವನ್ನು ಹೊಂದಿರುತ್ತವೆ. ಆದರೆ, ಅನೇಕ ಸಂದರ್ಭಗಳಲ್ಲಿ, ಆದರ್ಶಗಳು ನೆರವೇರದ ಉದಾಹರಣೆಗಳನ್ನು ಸುಲಭವಾಗಿ ಕಾಣಬಹುದು - ಇವುಗಳಲ್ಲಿ ಕೆಲವು ಸಂದರ್ಭಗಳಲ್ಲಿ ಯಾವುದೋ ನಿರ್ದಿಷ್ಟ ನಿರ್ಧಾರಕ್ಕಾಗಿ ಒಂದು ಆದರ್ಶ ಮತ್ತೊಂದನ್ನು ಮೀರಿಸುತ್ತದೆಂದು ಸಾಬೀತಾಗುತ್ತದೆ, ಅಥವಾ ಅವುಗಳನ್ನು ಮುಂದುವರಿಸಲು ಹತೋಟಿ ಉಳಿಸಿಕೊಳ್ಳಲು ಎಲ್ಲ ಆದರ್ಶಗಳನ್ನು ದುರ್ಬಲಗೊಳಿಸಬೇಕಾಗುತ್ತದೆ.
ಒಂದು ಭಿನ್ನ ರೂಪದ ಆದರ್ಶವೆಂದರೆ ಆರಾಧ್ಯವಕ್ತಿ ಅಥವಾ ಮಹಾಪುರುಷನದು. ಇವನನ್ನು ನೈತಿಕ ಉದಾಹರಣೆಯಾಗಿ ನೋಡಲಾಗುತ್ತದೆ. ಇವನು ಒಬ್ಬ ವಾಸ್ತವಿಕ ವ್ಯಕ್ತಿ ಅಥವಾ ಕಾಲ್ಪನಿಕ ಪಾತ್ರವಾಗಿರುವುದರಿಂದ, ಅಮೂರ್ತ ಅರ್ಥದಲ್ಲಿ ಇದನ್ನು ಆದರ್ಶವಾಗಿ ಪರಿಗಣಿಸಲು ಬಹಳ ಸಂಕೀರ್ಣ ಮತ್ತು ಬಹುಮುಖವಾಗಿರುತ್ತದೆ. ಆದರೆ, ಇವರನ್ನು ಕಥೆಯ ರೂಪದಲ್ಲಿ ಕೇವಲ ಕೆಲವು ಗುಣಲಕ್ಷಣಗಳು ಪ್ರದರ್ಶಿಸಲ್ಪಟ್ಟು ಎದುರಿಸಿದಾಗ, ಅವರು ಸರಳೀಕೃತ ಮೂಲರೂಪವಾಗಿರುತ್ತಾರೆ ಮತ್ತು ಇದರಿಂದ ಒಬ್ಬರು ಬಹಳ ಸುಲಭವಾಗಿ ಪಡಿಯಚ್ಚುಗಳನ್ನು ಪಡೆದುಕೊಳ್ಳಬಹುದು. ಉದಾಹರಣೆಗೆ, ಹಿಂದೂ ಧರ್ಮದಲ್ಲಿ, ರಾಮನ ಜೀವನವನ್ನು ಆದರ್ಶವೆಂದು ನೋಡಲಾಗುತ್ತದೆ, ಆದರೆ ನಂಬುವವರಿಗೆ ಅವನ ಬದುಕಿನ ಕಥೆಯ ಮೂಲಕ ಬಿಡಿಸಿ ಹೇಳಬೇಕಾಗುತ್ತದೆ.
ಆದರ್ಶಗಳನ್ನು ಆಚರಣೆಯಲ್ಲಿ ತರುವುದರ, ಮತ್ತು ಅವುಗಳ ನಡುವಿನ ಸಂಘರ್ಷಗಳನ್ನು ಬಗೆಹರಿಸುವುದರ ಸಂಕೀರ್ಣತೆಯನ್ನು ಪರಿಗಣಿಸಿದರೆ, ಅವುಗಳು ತತ್ತ್ವವಾಗಿ ಇಳಿಕೆಯಾಗುವುದನ್ನು ನೋಡುವುದು ಅಸಾಮಾನ್ಯವಲ್ಲ. ಇದನ್ನು ತಪ್ಪಿಸುವ ಒಂದು ರೀತಿಯೆಂದರೆ, ಪರಿಣಾಮದ ಬದಲಾಗಿ ಒಂದು ಪ್ರಕ್ರಿಯೆಯನ್ನು ವಿವರಿಸುವಂತಹ ಆದರ್ಶಗಳನ್ನು ಹೊಂದಿರುವುದು. ಸಾಮಾನ್ಯವಾಗಿ ಸದ್ಗುಣವು ಒಬ್ಬರು ಅಭ್ಯಾಸವಾಗಿ ಮಾಡಿಕೊಳ್ಳಬಹುದಾದ ಆದರ್ಶವಾಗಿರುತ್ತದೆ.
ಮೂಲಗಳು
[ಬದಲಾಯಿಸಿ]- Rescher, Nicholas (1987). Ethical Idealism: An Inquiry into the Nature and Function of Ideals. Berkeley and Los Angeles, California: University of California Press. ISBN 0520078888.