ಸುಳ್ಳು
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
This article needs more links to other articles to help integrate it into the encyclopedia. (2017-ಅನಾಥ ಲೇಖನ) |
ಹುಸಿ
[ಬದಲಾಯಿಸಿ]ಹೇಳುವ ಪಕ್ಷ ಹುಸಿಯೆಂದು ನಂಬುವ ಮತ್ತು ಮೋಸಮಾಡುವ ಉದ್ದೇಶದಿಂದ ಹೇಳಲಾದ ಒಂದು ಹೇಳಿಕೆಯೇ ಸುಳ್ಳು. ಸುಳ್ಳು ಹೇಳುವ ವ್ಯಕ್ತಿಯನ್ನು ಸುಳ್ಳುಗಾರನೆಂದು ಕರೆಯಬಹುದು. ಸುಳ್ಳು ಹೇಳುವ ವ್ಯಕ್ತಿಗಳು ಸುಳ್ಳುಗಳನ್ನು ವಿವಿಧ ಪರಸ್ಪರ, ಮಾನಸಿಕ, ಅಥವಾ ನಿಮಿತ್ತವಾದ ಕಾರ್ಯಗಳನ್ನು ನಿರ್ವಹಿಸಲು ಬಳಸಬಹುದು. ಸಾಮಾನ್ಯವಾಗಿ, ಸುಳ್ಳು ಪದವು ನಕಾರಾತ್ಮಕ ಅರ್ಥವನ್ನು ಹೊಂದಿರುತ್ತದೆ, ಮತ್ತು ಸಂದರ್ಭವನ್ನು ಆಧರಿಸಿ, ಸುಳ್ಳು ಹೇಳುವ ವ್ಯಕ್ತಿಯು ಸಾಮಾಜಿಕ, ಕಾನೂನಿನ, ಧಾರ್ಮಿಕ, ಅಥವಾ ಕ್ರಿಮಿನಲ್ ದಂಡನೆಗೆ ಒಳಪಟ್ಟಿರುತ್ತಾನೆ.
ಆದರೆ, ಕೆಲವು ಪರಿಸ್ಥಿತಿಗಳಲ್ಲಿ, ಸುಳ್ಳು ಹೇಳುವುದನ್ನು ಅನುಮತಿಸಲಾಗುತ್ತದೆ ಮತ್ತು ಅದು ನಿರೀಕ್ಷಿತವಾಗಿರುತ್ತದೆ, ಮತ್ತು ಅದನ್ನು ಪ್ರೋತ್ಸಾಹಿಸಲಾಗುತ್ತದೆ. ಸುಳ್ಳು ಮಾಹಿತಿಯನ್ನು ನಂಬುವುದು ಮತ್ತು ಅದನ್ನು ಆಧರಿಸಿ ಕಾರ್ಯಮಾಡುವುದು ಗಂಭೀರ ಪರಿಣಾಮಗಳನ್ನು ಹೊಂದಿರಬಹುದು. ಹಾಗಾಗಿ, ಸುಳ್ಳುಗಳು ಮತ್ತು ಸತ್ಯ ಹೇಳಿಕೆಗಳ ನಡುವೆ ವ್ಯತ್ಯಾಸ ಮಾಡಲು ವಿಶ್ವಾಸಾರ್ಹ ವಿಧಾನಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಮತ್ತು ಇತರರು ಪ್ರಯತ್ನಿಸಿದ್ದಾರೆ.
ಮುಚ್ಚುಮರೆಯಿಲ್ಲದ ಸುಳ್ಳು ಇತರರು ಕೇಳಿದಾಗ ನಿಸ್ಸಂಶಯವಾಗಿ ಸುಳ್ಳು ಎನಿಸುವಂಥದ್ದು. ದೊಡ್ಡ ಸುಳ್ಳು ತುತ್ತಾದವರನ್ನು ಏನೋ ಪ್ರಮುಖವಾದದ್ದನ್ನು ನಂಬುವಂತೆ ವಂಚಿಸಲು ಪ್ರಯತ್ನಿಸುವ ಸುಳ್ಳು. ಇಂತಹ ಸುಳ್ಳನ್ನು ಮೋಸಹೋದವನು ಮೊದಲೇ ಹೊಂದಿರುವ ಯಾವುದೋ ಮಾಹಿತಿಯಿಂದ, ಅಥವಾ ತನ್ನ ಲೋಕಜ್ಞಾನದಿಂದ ಅಲ್ಲಗಳೆಯುವ ಸಾಧ್ಯತೆ ಹೆಚ್ಚು. ತಮಗೆ ಇರದ ಸಾಮರ್ಥ್ಯ ಅಥವಾ ಉದ್ದೇಶ ತಮ್ಮಲ್ಲಿದೆ ಎಂದು ನಟಿಸುವುದು ಇನ್ನೊಂದು ಬಗೆಯ ಸುಳ್ಳು. ಪೋಕರ್ ಆಟದ ಸಂದರ್ಭದಲ್ಲಿ ಆಡುವ ಈ ರೀತಿಯ ಸುಳ್ಳನ್ನು ಅಪರೂಪವಾಗಿ ಅನೈತಿಕವೆಂದು ಕಾಣಲಾಗುತ್ತದೆ, ಏಕೆಂದರೆ ಈ ರೀತಿಯ ಕಪಟಕ್ಕೆ ಎಲ್ಲ ಆಟಗಾರರು ಮೊದಲೇ ಸಮ್ಮತಿಸಿರುತ್ತಾರೆ.