ವಿಷಯಕ್ಕೆ ಹೋಗು

ಎಸೆಯುವುದು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಕ್ಷೇಪಣೆ ಲೇಖನಕ್ಕಾಗಿ ಇಲ್ಲಿ ನೋಡಿ.
ಬೇಸ್‍ಬಾಲ್ ಆಟದಲ್ಲಿ ಚೆಂಡನ್ನು ಎಸೆಯುತ್ತಿರುವುದು

ಕೈಯಿಂದ ಒಂದು ಚಿಮ್ಮುಗುಣದ ಉತ್ಕ್ಷೇಪಕವನ್ನು ಹಾರಿಸುವ ಕ್ರಿಯೆಯೇ ಎಸೆಯುವುದು. ಈ ಕ್ರಿಯೆಯು ತಮ್ಮ ಕೈಗಳಿಂದ ವಸ್ತುಗಳನ್ನು ಹಿಡಿಯುವ ಸಾಮರ್ಥ್ಯವಿರುವ ಪ್ರಾಣಿಗಳಿಗೆ ಮಾತ್ರ ಸಂಭವವಿರುತ್ತದೆ (ಮುಖ್ಯವಾಗಿ ಪ್ರೈಮೇಟ್‍ಗಳು).

ಮಾನವರು ದ್ವಿಪಾದಿಯಿರುವ ಕಾರಣ, ಬಹು ಬಗೆಯ ಎಸೆಯುವ ತಂತ್ರಗಳು ಮತ್ತು ಸಾಮರ್ಥ್ಯಗಳನ್ನು ಹೊಂದಿದ್ದಾರೆ. ಇವನ್ನು ಯುದ್ಧಗಳಲ್ಲಿ ಬಳಸಲಾಗಿದೆ – ಮೊದಲು ಕಲ್ಲು ಎಸೆತದ ಮೂಲಕ, ನಂತರ ಸುಧಾರಿತ ಆಯುಧ ಎಸೆತದ ಮೂಲಕ (ಉದಾ. ಈಟಿ, ಕೊಡಲಿ ಎಸೆತ), ಮತ್ತು ಆಧುನಿಕ ದಿನದಲ್ಲಿ ಹಸ್ತ ಸ್ಫೋಟಕಗಳು ಮತ್ತು ಅಶ್ರುವಾಯು ಗುಂಡುಗಳ ಮೂಲಕ. ಎಸೆಯುವುದನ್ನು ಅನೇಕ ಕ್ರೀಡೆಗಳು ಮತ್ತು ಆಟಗಳಲ್ಲಿ ಬಳಸಲಾಗಿದೆ, ವಿಶೇಷವಾಗಿ ಚೆಂಡು ಆಟಗಳಲ್ಲಿ, ಮತ್ತು ಎಸೆಯುವ ಕ್ರೀಡೆಗಳಲ್ಲಿ ಕ್ರಿಯೆಯು ಫಲಿತಾಂಶದ ಮುಖ್ಯ ನಿರ್ಧಾರಕವಾಗಿರುತ್ತದೆ. ಇವು ಸಮಾಜದಲ್ಲಿ ವಿನೋದ ಮತ್ತು ವ್ಯಾಯಾಮದ ರೂಪಗಳಾಗಿ ಕಾರ್ಯನಿರ್ವಹಿಸುತ್ತವೆ.

ತಮ್ಮ ಉನ್ನತ ಕೈಚಳಕ ಮತ್ತು ಒಳ್ಳೆ ಕಾಲಯೋಜನಾ ಸಾಮರ್ಥ್ಯಗಳ ಕಾರಣದಿಂದ ಮಾನವರು ಅಸಾಮಾನ್ಯವಾಗಿ ಉತ್ತಮ ಎಸೆತಗಾರರು ಎಂದು ನಂಬಲಾಗಿದೆ, ಮತ್ತು ಇದು ಒಂದು ವಿಕಾಸಗೊಂಡ ಗುಣಲಕ್ಷಣ ಎಂದು ನಂಬಲಾಗಿದೆ. ಮಾನವವಂಶಿಗಳ ಎಸೆಯುವ ಕ್ರಿಯೆಯ ಸಾಕ್ಷ್ಯಾಧಾರ ೨ ಮಿಲಿಯ ವರ್ಷಗಳಷ್ಟು ಹಿಂದಿನದಾಗಿದೆ (ಹೋಮೊ ಎರೆಕ್ಟಸ್).[] ಅನೇಕ ಅಥ್ಲೀಟ್‍ಗಳಲ್ಲಿ ಕಂಡುಬರುವ ಗಂಟೆಗೆ ೯೦ ಮೈಲಿ ಎಸೆತ ವೇಗವು ಚಿಂಪಾಂಜಿಗಳು ವಸ್ತುಗಳನ್ನು ಎಸೆಯಬಹುದ ವೇಗವನ್ನು ಬಹಳವಾಗಿ ಮೀರುತ್ತದೆ (ಸುಮಾರು ಗಂಟೆಗೆ ೨೦ ಮೈಲಿ). ಈ ಸಾಮರ್ಥ್ಯವು ವಸ್ತುವನ್ನು ಚಿಮ್ಮಲು ಬೇಕಾಗುವವರೆಗೆ ಸ್ಥಿತಿಸ್ಥಾಪಕತ್ವವನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಮಾನವರ ಭುಜಗಳ ಸ್ನಾಯುಗಳು ಮತ್ತು ಸ್ನಾಯುರಜ್ಜುಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.

ಎಸೆತಗಳ ಪ್ರಕಾರಗಳಲ್ಲಿ ಮೇಲ್ ಕೈಯ ಎಸೆತ, ಕೆಳ ಕೈಯ ಎಸೆತ ಮತ್ತು ಎರಡೂ ಕೈಗಳನ್ನು ಬಳಸುವ ಎಸೆತಗಳು ಸೇರಿವೆ. ಮೇಲ್ ಕೈಯ ಎಸೆತಗಳನ್ನು ಪ್ರಧಾನವಾಗಿ ಭುಜದ ಮೇಲೆ ಎಸೆಯಲಾಗುತ್ತದೆ, ಕೆಳ ಕೈ ಎಸೆತಗಳನ್ನು ಭುಜದ ಕೆಳಗೆ. ಮೇಲ್ ಕೈಯ ಎಸೆತಗಳು ಸಾಮಾನ್ಯವಾಗಿ ಗಣನೀಯವಾಗಿ ಹೆಚ್ಚು ವೇಗವಾಗಿರುತ್ತವೆ, ಮತ್ತು ಬೇಸ್‍ಬಾಲ್ ಕ್ರೀಡೆಯಲ್ಲಿ ಗಂಟೆಗೆ ೧೦೫ ಮೈಲಿಯಷ್ಟು ಚೆಂಡು ವೇಗವನ್ನು ದಾಖಲಿಸಲಾಗಿದೆ.

ಎಸೆದ ವಸ್ತುಗಳನ್ನು ಹಲವುವೇಳೆ ಉದ್ದೇಶಪೂರ್ವಕವಾಗಿ ಸ್ಥಿರತೆ ಅಥವಾ ವಾಯುಬಲ ಪರಿಣಾಮಗಳಿಗಾಗಿ ತಿರುಗುವಂತೆ ಮಾಡಲಾಗುತ್ತದೆ. ಇದು ಹೆಚ್ಚಾಗಿ ಡಿಸ್ಕಸ್‍ಗಳು, ಚಾಕುಗಳು, ಸುತ್ತಿಗೆಗಳು ಮತ್ತು ಹಾರುವ ತಟ್ಟೆಗಳಂತಹ ಗೋಳಾಕಾರವಲ್ಲದ ವಸ್ತುಗಳಲ್ಲಿ ಉಂಟಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Melissa Hogenboom, "Origins of human throwing unlocked", BBC News (26 June 2013).