ಎಲೈನ್ ಫೆಯಿನ್ಸ್ಟಯಿನ್
ಎಲೈನ್ ಫೆಯಿನ್ಸ್ಟಯಿನ್ ಒಬ್ಬ ಪ್ರಸಿದ್ಧ ಬರಹಗಾರ್ತಿ,ಲೇಖಕಿ,ಜೀವನ ಚರಿತ್ರೆಗಳನ್ನು ಬರೆದಿರುವವರು,ಸಣ್ಣ ಕಥೆಗಳನ್ನು ಹಾಗೂ ಪ್ರಸಿದ್ಧ ಪುಸ್ತಕಗಳನ್ನು ಬೇರೆ ಭಾಷೆಗಳಿಂದ ಆರಿಸಿ ಆಂಗ್ಲಾ ಭಾಷೆಗೆ ತರ್ಜುಮೆ ಮಾಡಿರುವ ಬಹಳ ಪ್ರಭಾವಶಾಲಿ ವ್ಯಕ್ತಿತ್ವವಿದ್ದ ನಾಟಕ ರಚನಕಾರ್ತಿ.ಇವರು ಹುಟ್ಟಿದ್ದು ಬೂಟ್ಲ್,ಲಂಕಾಶೈರ್ನಲ್ಲಿ,ಅಕ್ಟೋಬರ್ ೨೪,೧೯೩೦ರಂದು.ಇವರನ್ನು ಸಮಾಜಿಕ ಮಾಧ್ಯಮಗಳಿಗಿಂತ ನಾವು ಹರಟೆ ಮತ್ತು ಚರ್ಚೆಗಳಲ್ಲಿ ಭಾಗವಹಿಸುವುದನ್ನು ನೋಡಬಹುದು.ಕೆಲುವ ಮಾಧ್ಯಮಗಳಿಗೆ ಸ್ವತಃ ಇವರೆ ಸಂದರ್ಶನಗಳನ್ನು ಕೊಟ್ಟಿರುವುದನ್ನು ಕಾಣಬಹುದು.ಪ್ರಸಿದ್ಧ ಬರಹಗಾರ್ತಿ,ತನ್ನ ಭಾವನೆಗಳನ್ನು ಮುಕ್ತವಾಗಿ ಕವಿತೆಗಳ ಮೂಲಕ ವ್ಯಕ್ತ ಪಡಿಸುತ್ತಾರೆ.ಎಲೈನ್ರವರ ಅಸಾಂಪ್ರದಾಯಿಕವಾದ ಜೀವನದಲ್ಲಿ ಬಹಳ ಕಷ್ಟಗಳನ್ನು ಅನುಭವಿಸಿದ್ದಾರೆ.ಆದರೆ ಮದುವೆಯ ನಂತರ ಇವರು ಹೆಚ್ಚು ಬರವಣಿಗೆಗಳನ್ನು ಬರೆದಿದ್ದಾರೆ. ಬರೆಯಲು ಆರಂಭಿಸಿದ್ದಾಗ ಬರಹಗಾರ್ತಿಯಾಗಿ ಜನರು ಇವರನ್ನು ಸ್ವೀಕರಿಸಲು ಶುರುವಿನಲ್ಲಿ ತಿರಸ್ಕರಿಸಿದರು. ಆದರೆ ಇವರ ಪದಗಳ ಪ್ರಭೆ ಎಲ್ಲಾರ ಮನಸ್ಸುಗಳನ್ನು ಪ್ರಭಾವಿಸಿತು.ಆಳಪರಿಣಾಮ ಉಂಟು ಮಾಡಿತು. ಇವರ ಅಜ್ಜನವರು ಪಂಚಭಾಷಿಕರು.ಆನುವಂಶಿಕವಾಗಿ ಭಾಷಾಂತರಿಸುವುದು ಕಲಿತಿರುವರೆಂದು ಎಲೈನ್ರವರು ಹೇಳುತ್ತಾರೆ.
ಬಾಲ್ಯ ಮತ್ತು ಶಿಕ್ಷಣ
[ಬದಲಾಯಿಸಿ]ಇವರ ತಂದೆ ೧೨ನೇ ವಯಸ್ಸಿನಲ್ಲೆ ಶಾಲೆಯನ್ನು ಬಿಟ್ಟು,ತಮ್ಮ ಸಮಯವನ್ನು ಕಥೆಗಳನ್ನು ಓದುವುದರಲ್ಲಿ,ತನ್ನ ಮಗಳಿಗೆ ಕಥೆಗಳನ್ನು ಹೇಳುವುದರಲ್ಲಿ ಕಳೆಯುತ್ತಿದ್ದರು.ಇವರ ತಂದೆ ಕಟ್ಟಿಗೆ ಕಾರ್ಖಾನೆಯ ಒಡೆಯಕಾರ.ಬಾಲ್ಯದಲ್ಲೆ ನಮ್ಮ ಜೀವನದ ಪ್ರಥಮ ನಿರ್ಮಾಣ ಕಾರ್ಯ ಪ್ರಾರಂಭವಾಗುವುದು.ತನ್ನ ತಂದೆಯ ಬಗ್ಗೆ ಅಪಾರ ವಾತ್ಸಲ್ಯವಿರುವ ಈಕೆ ತನ್ನ ಬರಹ ಕೌಶಲ್ಯಕ್ಕೆ ತನ್ನ ತಂದೆಯ ಸಣ್ಣ ಕಥೆಗಳೇ ಕಾರಣವೆಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಇವರು ಕೇವಲ ಎಂಟನೆಯ ವಯಸ್ಸಿನಲ್ಲಿ ಕವಿತೆಗಳನ್ನು ಬರೆಯಲು ಆರಂಭಿಸಿದ್ದರು. ಇವರು ಬರೆದ ಕವಿತೆಗಳು ಅವರು ಒದುತ್ತಿದ್ದ ಲೀಸೆಸ್ಟರಯಿನ ಶಾಲೆಯ ವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು.ನಾಜ಼ಿ ಮೂಲೋತ್ಪಾಟನೆಯ ಪಾಳೆಯಗಳ ಪ್ರಭಾವದಿಂದ ಇವರು ಕೊಡ ಯಹೂದ್ಯರುವೆಂದೆನಿಸಿದ್ದು. ಈ ಯುದ್ಧಕಾಲದ ನಂತರ ಫೆಯಿನ್ಸ್ಟಯಿನ್ ತಮ್ಮ ಶಾಲೆಯ ಇತರ ಕೆಲಸಗಳಲ್ಲಿ ಭಾಗವಹಿಸಲು ಆರಂಭಿಸಿದರು.ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮುಂದಿನ ಉನ್ನತ ಶಿಕ್ಷಣವನ್ನು ಪಡೆದುಕೊಂಡರು. ಎಸೆಕ್ಸ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ.ಡೊನಾಲ್ಡ್ ಡೇವಿಯವರೇ ಇವರನ್ನ ಶಾಲೆ ಉಪನ್ಯಾಸಕಿಯಾಗಿ ನೇಮಿಸಿದ್ದು. [೨]
ವೈವಾಹಿಕ ಜೀವನ
[ಬದಲಾಯಿಸಿ]ಅರ್ನಾಲ್ಡ್ ಫೆಯಿನ್ಸ್ಟಯಿನ್ ಮತ್ತು ಎಲೆಯೈನ್ ಫೆಯಿನ್ಸ್ಟಯಿನ್ ಮದುವೆಯಾಗಿ ಮೂರು ಮಕ್ಕಳನ್ನು ಹೆತ್ತಿ ಸೊಗಸಾದ ವೈವಾಹಿಕ ಜೀವನವನ್ನು ನೆಡೆಸಿದರು.ಗಂಡನನ್ನು ಕಳೆದುಕೊಂಡ ಬಳಿಕ ಆತನ ನೆನಪಿನಲ್ಲಿ ಬರೆದ ಕವಿತೆ ಬಹಳ ಭಾವನಾತ್ಮಕವಾದುದು.ತದನಂತರ ಬರೆಯಲಾರಂಭಿಸಿದರು.ಹೊಸ ಜೀವನವನ್ನೇ ಪ್ರಾರಂಭಿಸಿದರು. ಕಥೆಗಳನ್ನು ಒದುವುದು,ಬರೆಯುವುದು,ಕವಿತೆಗಳನ್ನು ರಚಿಸುವುದು, ಪತ್ರಿಕೆಗಳಿಗೆ ಲೇಖನಗಳನ್ನು ಬರೆಯಲಾರಂಭಿಸಿದರು. ಹಾಡಿನ ತಾಳಗಳಂತೆ ತನ್ನ ಕವನಗಳ ನುಡಿಯಿರಬೇಕು ಎಂದು ಅವರು ಆಶಿಸುತ್ತಿದ್ದರು.ಇವರು ಮರಿನಾಳ ಕವಿತೆಗಳನ್ನು ಭಾಷಾಂತರಿಸಿದರು.೧೯೯೦ರಲ್ಲಿ ಇವರ ಕವಿತೆಗಳಿಗೆ ಚಾಲ್ಮಾಂಡ್ಲೆ ಪ್ರಶಸ್ತಿ ದೊರೆತಿದೆ.ರಶಿಯಾದಲ್ಲಿ ಸಂಶೊಧನೆ ನೆಡೆಸಿದ್ದರು. ೧೪ ಪುಸ್ತಕಗಳನ್ನು ಬರೆದು,ರೇಡಿಯೋಗೆ ಸಂಬಂಧಪಟ್ಟ ಹಲವು ನಾಟಕಗಳನ್ನು ಬರೆದಿದ್ದರೆ.ರಶಿಯಾದ ಕವಿ ಮತ್ತು ಬರಹಗಾರರೊಡನೆ ಸ್ನೇಹವನ್ನು ಬೆಳೆಸಿದ್ದರು.'ಅನಾ ಆಫ಼್ ಆಲ್ ದ ರಶಿಯಾಸ್' ಎಂಬ ಜೀವನ ಚರಿತ್ರೆ,೨೦೦೫ರಲ್ಲಿ ಬಹಳ ಪ್ರಸಿದ್ಧವಾಗಿತ್ತು.ಇವರು ಹಲವಾರು ರಾಜ್ಯಗಳಿಗೆ, ಹಲವಾರು ಪ್ರದೇಶಗಳಿಗೆ ಒಡಾಡಿ, ಚರ್ಚಿಸಿಸಾಕಷ್ಟು ವಿಷಯಗಳ ಬಗ್ಗೆ ತಿಳಿದುಕೊಂಡರು.ಪ್ರಯಾಣದಲ್ಲಿ ಬಗೆಬಗೆಯ ಹಬ್ಬಗಳ ಬಗ್ಗೆ ಇವರು ಬರೆದಿದ್ದುಂಟ್ಟು.ಗ್ರೆಗೊರೈ ಪ್ರಶಸ್ತಿಗಳ ನಿರ್ಣಯಕಾರರಾಗಿದ್ದರು.ಟೆಡ್ ಹ್ಯೂಗ್ಸ್ರವರ ಜೀವನ ಚರಿತ್ರೆಯನ್ನು ೨೦೦೧ರಲ್ಲಿ ಬರೆದಿದ್ದರು.೧೯೮೧ರಲ್ಲಿ 'ರಾಯಲ್ ಸೊಸೈಟಿ ಆಫ್ ಲಿಟ್ರೇಚರ್', ಕವಿಗಳ ಸಮಾಜವೆ ಇದ್ದ ಹಾಗೆ ಇರುವ ಈ ಸಮುದಾಯದ ಸದಸ್ಯರಾಗಿದ್ದರು.ಪ್ರಯಾಣ ಬರವಣಿಗೆಯಲ್ಲಿ ಹಲವಾರು ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಬಾಲ್ಯದಲ್ಲಿ ಮನೆಗೆ ಬರುತ್ತಿದ್ದ ನೆಂಟರಿಗೆ ಕಥೆಗಳನ್ನು ಹೇಳುತ್ತಾ ಹೇಳುತ್ತಾ ಇವತ್ತು ಮಹಿಳಾ ಸಾಧಕಿಯರಲ್ಲಿ ಒಬ್ಬರಾಗಿದ್ದರೆ.ಎಂತಹ ಅದ್ಭುತವಾದ ಪಯಣ.ಮೂರು ಮಕ್ಕಳು ಹೆತ್ತಿದ ಬಳಿಕ ಅವರು ಬರೆಯುವುದನ್ನು ನಿಲ್ಲಿಸುತ್ತಾರೆ ಎಂದು ಭಾವಿಸಿದ್ದ ಹಲವಾರು ಸಂಬಂಧಿಕರಿಗೆ ಎವರ ವೈವಾಹಿಕ ಜೀವನ ಮತ್ತು ಏಕಕಾಲದಲ್ಲಿ ಬರವಣಿಗೆ ತಂದು ಕೊಟ್ಟ ಕೀರ್ತಿ ಆಶ್ಚ್ರರ್ಯ ಉಂಟು ಮಾಡಿತು.ತನ್ನ ಮಗನನ್ನು ಕೊಳಲು ನುಡಿಸುತ್ತಾ ನೋಡುವುದು ಇವರ ಅದ್ಭುತವಾದ ಸ್ಮರಣೆ,ತನ್ನ ಮೊದಲ ಪುಸ್ತಕವು ಬಿಡುಗಡೆಗೆ ಆದ ಸಂತೋಷಕ್ಕಿಂತ ಮಗನನ್ನು ಹಾಗೆ ಕಂಡು ಹೆಚ್ಚು ಸಂತೋಷವಾಯಿತೆಂದು ಹೇಳುತ್ತಾರೆ.
ಬರಹಗಳು
[ಬದಲಾಯಿಸಿ]- ದಿ ಕ್ಲಿನಿಕ್ ಮೆಮೋರಿ(೨೦೧೭)
- ಸಿಟೀಸ್(೨೦೧೦)
- ಗೋಲ್ಡ್(೨೦೦೦)
- ಡೇಲೈಟ್(೧೯೯೭)ಮತ್ತು ಹಲವಾರು ಕವಿತೆಗಳ ಸಂಗ್ರಹಗಳನ್ನು ಬರೆದಿದ್ದಾರೆ.
- ಅನಾ ಆಫ್ ದಿ ರಶಿಯಾಸ್(೨೦೦೫)
- ಟಾಲ್ಕಿನ್ಗ್ ಟು ದಿ ಡೆಡ್(೨೦೦೭)
- ದಿ ರಶಿಯನ್ ಜೆರುಸಲೆಮ್(೨೦೦೮)
- ಪುಶ್ಕಿನ್(ಜೀವನ ಚರಿತ್ರೆ,೧೯೯೮) ಹಾಗು ಭಾವಚಿತ್ರಗಳನ್ನು ವಿಷಯವಾಗಿ ಇಟ್ಟಿಕೊಂಡು ಪುಸ್ತಕಗಳನ್ನು ಬರೆದಿದ್ದಾರೆ.
- ಅ ವಿಂಟರ್ ಮೀಟಿಂಗ್(೧೯೯೪)
- ದಿ ಸರ್ಕಲ್ ಲಂಡನ್
- ದಿ ಗ್ಲಾಸ್ ಅಲೆಂಬಿಕ್
ಲೇಡಿ ಚಟರ್ಲೆಯ್ಸ್ ಕನ್ಫೆಷನ್ ಮುಂತಾದ ಹಲವಾರು ಬರಹಗಳನ್ನು ಬರೆದಿದ್ದಾರೆ.
ಪ್ರಶಸ್ತಿಗಳು ಮತ್ತು ಪುರಸ್ಕಾರಗಳು
[ಬದಲಾಯಿಸಿ]- ೧೯೭೦, ಆರ್ಟ್ ಆಫ್ ಟ್ರಾನ್ಸ್ಲೇಷನ್ ಅವಾರ್ಡ್
- ೧೯೭೯, ಆರ್ಟ್ ಆಫ್ ಟ್ರಾನ್ಸ್ಲೇಷನ್ ಅವಾರ್ಡ್
- ೧೯೮೧, ಆರ್ಟ್ ಆಫ್ ಟ್ರಾನ್ಸ್ಲೇಷನ್ ಅವಾರ್ಡ್
- ೨೦೦೪, ಆರ್ಟ್ ಆಫ್ ಟ್ರಾನ್ಸ್ಲೇಷನ್ ಅವಾರ್ಡ್(ಭಾಷಾಂತರಿಸಲು ನೀಡಿರುವ ಪ್ರಶಸ್ತಿಗಳು)
- ೧೯೭೧,ಬೆಟ್ಟಿ ಮಿಲ್ಲರ್ ಪ್ರಶಸ್ತಿ.
ಉಲ್ಲೇಖಗಳು
[ಬದಲಾಯಿಸಿ]