ಮಿತ್ರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಿತ್ರಾ ಭಾರತೀಯ ಸಂಸ್ಕೃತಿಯ ಒಬ್ಬ ದೇವತೆ, ಮತ್ತು ಇವನ ಕಾರ್ಯ ಕಾಲ ಬದಲಾದಂತೆ ಬದಲಾಯಿತು. ಮಿಟನಿ ಶಿಲಾಶಾಸನದಲ್ಲಿ, ಮಿತ್ರಾನನ್ನು ಒಪ್ಪಂದಗಳ ರಕ್ಷಕರಲ್ಲಿ ಒಬ್ಬನೆಂದು ಆವಾಹಿಸಲಾಗುತ್ತದೆ. ಋಗ್ವೇದದಲ್ಲಿ, ಮಿತ್ರಾ ಮುಖ್ಯವಾಗಿ ದ್ವಂದ್ವ ಪದವಾದ ಮಿತ್ರಾ-ವರುಣದಲ್ಲಿ ಕಾಣಿಸುತ್ತಾನೆ, ಮತ್ತು ಇವನು ಮೂಲಭೂತವಾಗಿ ವರುಣನಂತೆ ಸಮಾನವಾದ ಗುಣಲಕ್ಷಣಗಳನ್ನು ಹೊಂದಿರುತ್ತಾನೆ, ಉದಾ. ಋತದ ಪ್ರಧಾನ ರಕ್ಷಕನಾಗಿ, ಮತ್ತು ಋತದ ಉಲ್ಲಂಘನೆಗಳನ್ನು ಶಿಕ್ಷಿಸಲಾಗುತ್ತದೆ. ನಂತರದ ವೈದಿಕ ಪಠ್ಯಗಳಲ್ಲಿ ಮತ್ತು ಬ್ರಾಹ್ಮಣಗಳಲ್ಲಿ, ಮಿತ್ರಾನನ್ನು ಹೆಚ್ಚೆಚ್ಚು ನಸುಕಿನ ಬೆಳಕು ಮತ್ತು ಮುಂಜಾನೆಯ ಸೂರ್ಯನೊಂದಿಗೆ ಸಂಬಂಧಿಸಲಾಯಿತು (ವರುಣನನ್ನು ಸಂಜೆ, ಮತ್ತು ಅಂತಿಮವಾಗಿ ರಾತ್ರಿಯೊಂದಿಗೆ ಸಂಬಂಧಿಸಲಾಯಿತು). ವೈದಿಕೋತ್ತರ ಪಠ್ಯಗಳಲ್ಲಿ – ಮಿತ್ರಾ ವಾಸ್ತವವಾಗಿ ಅದೃಶ್ಯನಾಗುತ್ತಾನೆ – ಮಿತ್ರಾನು ಸ್ನೇಹದ ಸಂರಕ್ಷಕ ದೇವತೆಯಾಗಿ ವಿಕಸನಗೊಂಡನು, ಮತ್ತು ಅವನು ಮಿತ್ರನಾದ್ದರಿಂದ, ಎಲ್ಲ ಹಿಂಸೆಯನ್ನು ಸಹಿಸುವುದಿಲ್ಲ, ಪವಿತ್ರವಿದ್ದಾಗಲೂ.[೧]

ವೈದಿಕ ಪಠ್ಯಗಳಲ್ಲಿ ಅತ್ಯಂತ ಹಳೆಯದಾದ ಋಗ್ವೇದದಲ್ಲಿ, ಮಿತ್ರಾನನ್ನು ವರುಣನಿಂದ ಬಹುತೇಕವಾಗಿ ವ್ಯತ್ಯಾಸ ಮಾಡಲಾಗದು. ವರುಣನು ಇವರಿಬ್ಬರಲ್ಲಿ ಮಹತ್ತರನಾದವನು, ಅಲ್ಲದೆ, ಋವೇ ೨.೧೨ ರ ಪ್ರಕಾರ ಇಂದ್ರನ ನಂತರ ಎರಡನೇ ಮಹತ್ತರ ಋಗ್ವೈದಿಕ ದೇವತೆ. ಮಿತ್ರಾ-ವರುಣರಿಗೆ ಸಂಬಂಧಿಸಿದ ಋಗ್ವೈದಿಕ ಸೂಕ್ತಗಳಲ್ಲಿ ಋವೇ ೧.೧೩೬, ೧೩೭, ೧೫೧-೧೫೩, ಋವೇ ೫.೬೨-೭೨, ಋವೇ ೬.೬೭, ಋವೇ ೭.೬೦-೬೬, ಋವೇ ೮.೨೫ ಮತ್ತು ಋವೇ ೧೦.೧೩೨ ಸೇರಿವೆ. ಮಿತ್ರಾನನ್ನು ಕೇವಲ ಒಂದು ಸೂಕ್ತದಲ್ಲಿ ಸ್ವಂತತ್ರವಾಗಿ ಸಂಬೋಧಿಸಲಾಗಿದೆ ಋವೇ 3.59, ಇದರಲ್ಲಿ ಇವನಿಗೆ ವರುಣನಿಂದ ಭಿನ್ನವಾದಂಥ ಯಾವುದೇ ಗುಣಲಕ್ಷಣವಿಲ್ಲ, ಮತ್ತು ಆ ಸೂಕ್ತದಲ್ಲಿ ಒದಗಿಸಲಾದ ಮಾಹಿತಿಯ ಕೊರತೆಯ ಕಾರಣ ಅವನ ಪ್ರತ್ಯೇಕ ಲಕ್ಷಣ ಸ್ವಲ್ಪಮಟ್ಟಿಗೆ ಅಸ್ಪಷ್ಟವಾಗಿ ಕಾಣಿಸುತ್ತದೆ.

ಮಿತ್ರಾ-ವರುಣರನ್ನು ಯುವಕರು ಎಂದು ಕಲ್ಪಿಸಲಾಗುತ್ತದೆ, ಅವರು ಮಿನುಗುವ ಉಡುಪುಗಳನ್ನು ಧರಿಸುತ್ತಾರೆ, ಅವರಿಬ್ಬರು ಇಡೀ ವಿಶ್ವದ ದೊರೆಗಳು ಮತ್ತು ರಕ್ಷಕರು ಮತ್ತು ಅವರ ಅರಮನೆ ಬಂಗಾರದ್ದು ಮತ್ತು ಸಾವಿರ ಕಂಬಗಳು ಹಾಗೂ ಸಾವಿರ ಬಾಗಿಲುಗಳನ್ನು ಹೊಂದಿದೆ. ಅವರು ಸ್ವರ್ಗ ಮತ್ತು ಭೂಮಿಗೆ ಮತ್ತು ಸ್ವರ್ಗ ಹಾಗೂ ಭೂಮಿಯ ನಡುವಿನ ಗಾಳಿಗೆ ಆಧಾರ ಒದಗಿಸುತ್ತಾರೆ. ಅವರು ನದಿಗಳು ಮತ್ತು ಸಮುದ್ರಗಳ ಒಡೆಯರು, ಮತ್ತು ಅವರು ಆಕಾಶದಿಂದ ಮಳೆ ಮತ್ತು ಉಪಹಾರವನ್ನು ಕಳಿಸುತ್ತಾರೆ. ಅವರು ತುಪ್ಪದ ಇಬ್ಬನಿಯಿಂದ ಹುಲ್ಲುಗಾವಲುಗಳನ್ನು ಹಸಿಮಾಡುತ್ತಾರೆ, ಮತ್ತು ಸ್ವರ್ಗದ ನೀರಿನಿಂದ ವಿಪುಲವಾದ ಮಳೆಯು ಅವರಿಂದ ಬರುತ್ತದೆ. ಅವರ ವ್ಯಾಪ್ತಿಕ್ಷೇತ್ರ ಜೇನಿನಿಂದ ಹರಿಯುವ ಹೊಳೆಗಳನ್ನು ಹೊಂದಿದೆ, ಮತ್ತು ಅವರ ಹುಲ್ಲುಗಾವಲುಗಳು ಉಪಹಾರ ನೀಡುವ ದನಗಳನ್ನು ಹೊಂದಿವೆ. ಅವರನ್ನು ಕಡೆಗಣಿಸುವವರನ್ನು ಅವರು ರೋಗಗಳಿಂದ ಬಾಧಿಸುತ್ತಾರೆ. ಅವರು ಅಸುರರು ಮತ್ತು ಮಾಯೆಯ ಮೂಲಕ ತಮ್ಮ ಅಧಿಕಾರವನ್ನು ಚಲಾಯಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. Dumézil, Georges (1990), Mitra-Varuna: An Essay on Two Indo-European Representations of Sovereignty, Cambridge: Zone Books, ISBN 0-942299-13-2.
"https://kn.wikipedia.org/w/index.php?title=ಮಿತ್ರಾ&oldid=787169" ಇಂದ ಪಡೆಯಲ್ಪಟ್ಟಿದೆ