ವಿಷಯಕ್ಕೆ ಹೋಗು

ಸದಸ್ಯ:ಹರೀಶಮಾಂಬಾಡಿ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹರೀಶ ಮಾಂಬಾಡಿ

[ಬದಲಾಯಿಸಿ]

ಬಂಟ್ವಾಳದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಹರೀಶ ಮಾಂಬಾಡಿ, ಮೂಲತ: ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದವರು. ಬಿ.ಸಿ.ರೋಡ್ ಕೈಕುಂಜದಲ್ಲಿ ಮಾಂಬಾಡಿ ಮನೆಯಲ್ಲಿ ವಾಸ. ಮಂಗಳೂರಿನ ಕೆನರಾ ಹೈಸ್ಕೂಲು ಉರ್ವ, ಕೆನರಾ ಕಾಲೇಜುಗಳಲ್ಲಿ ಹೈಸ್ಕೂಲು, ಪಿಯು ಮತ್ತು ಪದವಿ ವ್ಯಾಸಂಗ ಮಾಡಿದ ಅವರು ಕರಾಮುವಿವಿಯಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಕನ್ನಡ ಮತ್ತು ಪತ್ರಿಕೋದ್ಯಮಗಳಲ್ಲಿ ಪಡೆದಿದ್ದಾರೆ. ಮಣಿಪಾಲದಲ್ಲಿ ಉದಯವಾಣಿ ಬಳಗದಲ್ಲಿ ವರದಿಗಾರ, ಉಪಸಂಪಾದಕರಾಗಿ ಕೆಲಸ ಮಾಡಿ ಬಳಿಕ ಕನ್ನಡಪ್ರಭ ಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಉಪಸಂಪಾದಕರಾಗಿ ಸೇರಿ ಹಿರಿಯ ಉಪಸಂಪಾದಕರಾಗಿ ಪದೋನ್ನತಿ ಹೊಂದಿದರು. ಬಳಿಕ ವಿಜಯವಾಣಿ ಮಂಗಳೂರು ಆವೃತ್ತಿಯಲ್ಲಿ ಹಿರಿಯ ಉಪಸಂಪಾದಕರಾಗಿ ಸೇರಿ ಮುಖ್ಯ ಉಪಸಂಪಾದಕರಾಗಿ ಪದೋನ್ನತಿ ಹೊಂದಿದ ಅವರು ಹುದ್ದೆಗೆ ರಾಜೀನಾಮೆ ನೀಡಿ, ಸ್ವಂತ ಉದ್ಯಮವನ್ನು ಆರಂಭಿಸಿದರು. ಬಂಟ್ವಾಳ ತಾಲೂಕಿನ ಸುದ್ದಿ, ಸಮಾಚಾರಗಳನ್ನು ಒದಗಿಸುವ ಜಾಲತಾಣ, ಬಂಟ್ವಾಳ ನ್ಯೂಸ್ ಅನ್ನು ಆರಂಭಿಸಿದ ಅವರು ಅದರ ಸಂಪಾದಕರಾಗಿದ್ದಾರೆ. ಜೊತೆಗೆ ವಿಜಯ ಕರ್ನಾಟಕ ಪತ್ರಿಕೆಯ ಬಂಟ್ವಾಳದ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ಅವರ ತಂದೆ ಎಂ.ಗೋಪಾಲಕೃಷ್ಣ ಮತ್ತು ತಾಯಿ ಮನೋರಮಾ. ಅಜ್ಜ (ತಂದೆಯ ತಂದೆ) ಯಕ್ಷಗಾನದ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದ ಮಾಂಬಾಡಿ ನಾರಾಯಣ ಭಾಗವತರು. ಅವರ ಚಿಕ್ಕಪ್ಪ ಪ್ರಸಿದ್ಧ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟ.

[ಬದಲಾಯಿಸಿ]