ವಿಷಯಕ್ಕೆ ಹೋಗು

ಉತ್ತರಪ್ರದೇಶ ಸರ್ಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉತ್ತರಪ್ರದೇಶ ಸರ್ಕಾರ
Official seal of ಉತ್ತರಪ್ರದೇಶ ಸರ್ಕಾರ
Country India
States and territories of Indiaಉತ್ತರಪ್ರದೇಶ
List of regions of Indiaಅವಧ್, ಬ್ರಜ್, ಬುಂದೇಲ್ಖಂಡ್, ಪೂರ್ವಾಂಚಲ, ರೋಹಿಲ್ಖಾಂಡ್
High Courts of Indiaಅಲಹಾಬಾದ್ ಹೈಕೋರ್ಟ್, ಲಕ್ನೋ ಹೈಕೋರ್ಟ್
District Courts Indiaundefined
ಉತ್ತರಪ್ರದೇಶ14 ನವೆಂಬರ್18342
ರಾಜಧಾನಿಲಕ್ನೊ
Government
 • ಉತ್ತರ ಪ್ರದೇಶದ ಗವರ್ನರ್ಸ್ =ರಾಮ್ ನಾಯ್ಕ್
 • ಮುಖ್ಯಮಂತ್ರಿಯೋಗಿ ಆದಿತ್ಯನಾಥ್
 • Chief SecretaryRahul Bhatnagar (IAS)
Area
 • Total೨,೪೩,೨೮೬ km (೯೩,೯೩೩ sq mi)
 • Rank5th
Population
 • Total೧೯,೩೯,೭೭,೦೦೦
 • Rank1st
 • Density೭೯೨/km (೨,೦೫೦/sq mi)
Languages
 • Officialಹಿಂದಿ, ಉರ್ದು
Time zoneUTC+5:30 (IST)
ISO 3166 codeIN-UP
Vehicle registrationUP XX XXXX 1
Largest metroಕಾನ್‍ಪುರ
Sex ratio111.4 /
HDIIncrease
0.490
HDI Rank25th
HDI Year2005
HDI Categorylow
ClimateCfa (Köppen)
Avg. annual temperature31 °C (88 °F)
Avg. summer temperature46 °C (115 °F)
Avg. winter temperature6 °C (43 °F)
Websitewww.upgov.nic.in
[][] [][]
ಸಂಕ್ಷಿಪ್ತ ಇತಿಹಾಸ


- - 14 ನವೆಂಬರ್ 1834: ಆಗ್ರಾದ ಅಧಿಪತ್ಯವಾಯಿತು.(ಪ್ರೆಸಿಡೆನ್ಸಿ
- - 1 ಜನವರಿ 1836: ಹೆಸರು: ನಾರ್ತ್ -ವೆಸ್ಟರ್ನ್ ಪ್ರೊವಿನ್ಸಿಸ್. .
- - 3 ಏಪ್ರಿಲ್ 1858: ಔಧ್ ಬ್ರಿಟಿಷರ ನಿಯಂತ್ರಣಕ್ಕೆ ಒಳಪಟ್ಟಿತು. ದೆಹಲಿ ಹೊರತೆಗೆದು ಪಂಜಾಬ್ ಗೆ ವಿಲೀನಗೊಂಡು.
-- 1 ಏಪ್ರಿಲ್ 1871: ಅಜ್ಮೀರ, ಮೇರ್ವಾರ ಖೇಕರಿ ಪ್ರತ್ಯೇಕ ಕಮಿಶನರ ಆಡಳಿತಕ್ಕೆ –
- 15 ಫೆಬ್ರವರಿ 1877: ಔಧ್ ನಾರ್ತ್ -ವೆಸ್ಟರ್ನ್ ಪ್ರೊವಿನ್ಸಿಸ್. ಗೆ ಸೇರಿತು
- - 22 ಮಾರ್ಚ್ 1902: ಆಗ್ರಾ ಹಾಗೂ ಔದ್ಧಿನ ಸಂಯುಕ್ತ ಪ್ರಾಂತಗಳು ಎಂದು ಮರುನಾಮಕರಣ.
- - 3 ಜನವರಿ 1921: ಮರುನಾಮಕರಣ, 'ಬ್ರಿಟಿಷ್ ಭಾರತದ ಸಂಯುಕ್ತ ಪ್ರಾಂತಗಳು'.
- - 1 ಏಪ್ರಿಲ್ 1937: ಮರುನಾಮಕರಣ ಸಂಯುಕ್ತ ಪ್ರಾಂತಗಳು
- - 1 ಏಪ್ರಿಲ್ 1946: ಸ್ವಯಂ ಆಡಳಿತ ನೀಡಲಾಯಿತು.
- - 15 ಆಗಸ್ಟ್ 1947: ಸ್ವತಂತ್ರ ಭಾರತದ ಭಾಗ.
- - 26 ಜನವರಿ 1950: ಮರುನಾಮಕರಣ ಉತ್ತರ ಪ್ರದೇಶ


- - 9 ನವೆಂಬರ್ 2000: ಉತ್ತರಾಂಚಲ, ಈಗ ಉತ್ತರಾಖಂಡ್ ಎಂದು, ಉತ್ತರ ಪ್ರದೇಶದ ಭಾಗದಿಂದ ಹೊಸ ರಾಜ್ಯದ ಉದಯ.

ಸ್ವಾತಂತ್ರ್ಯಪೂರ್ವ

[ಬದಲಾಯಿಸಿ]
  • ಸಂಯುಕ್ತ ಪ್ರಾಂತಗಳ (ಉತ್ತರಪ್ರದೇಶ) ಭಾರತ ಸರ್ಕಾರದ ಕಾಯಿದೆ 1935 ರ ಕಾಯಿದೆಯಡಿ ಅಸೆಂಬ್ಲಿಯ ಕಾಯಿದೆ ಅನುಗುಣವಾಗಿ ಏಪ್ರಿಲ್ 1 1937 ರಂದು ಮೊದಲ ಬಾರಿಗೆ ರಚನೆಯಾಯಿತು. ಸದಸ್ಯರು 228 ಮತ್ತು ಅದರ ಅವಧಿಯ ಐದು ವರ್ಷ ವಿಧಾನ ಸಭೆಯ ರಚನೆಗೆ ಅವಕಾಶಮಾಡಿಕೊಟ್ಟಿತು. ಮೊದಲಿಗೆ ವಿಧಾನ ಸಭೆಗೆ ಪುರುಷೋತ್ತಮ್ ದಾಸ್ ಟಂಡನ್ ಮತ್ತು ಅಬ್ದುಲ್ ಹಕೀಮ್ 31 ಜುಲೈ 1937 ಕ್ರಮವಾಗಿ ಸ್ಪೀಕರ್ ಮತ್ತು ಉಪ ಸ್ಪೀಕರ್ ಆಯ್ಕೆಯಾಗಿದ್ದರು. ಮೊದಲಿನ ಪಕ್ಷೇತರ ಮುಖ್ಯಮಂತ್ರಿ ಮುಹಮ್ಮದ್ ಅಹ್ಮದ್ ಸೆಡ್ ಖಾನ್ ಚತ್ತಾರಿ, ಏಪ್ರಿಲ್ 1937 ನಿಂದ 16 ಜುಲೈ 1937 ವರೆಗೆ ಇದ್ದರು. ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಗೋವಿಂದ್ ಬಲ್ಲಭ್ ಪಂಥ್ ಅವರು ಮುಖ್ಯಮಂತ್ರಿಯಾಗಿ 17 ಜುಲೈ 1937 ರಿಂದ 2 ನವೆಂಬರ್ 1939ವರೆಗೆ ಅಧಿಕಾರದಲ್ಲಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅವರು ಪುನಃ 1 ಏಪ್ರಿಲ್ 1946 ರಿಂದ 25 ಜನವರಿ 1950 ರ ವರೆಗೆ ಮುಖ್ಯಮಂತ್ರಿಯಾಗಿದ್ದರು.

ಸ್ವಾತಂತ್ರ್ಯಾನಂತರ

[ಬದಲಾಯಿಸಿ]
  • ಸ್ವಾತಂತ್ರ್ಯ ನಂತರ ದಿ.3 ರ ನವೆಂಬರ್ 1947 ಮೇಲೆ ಮೊದಲ ಬಾರಿಗೆ ಸೇರಿತು. ಅದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಗೋವಿಂದ್ ಬಲ್ಲಭ್ ಪಂಥ್ ಅವರು ಮುಖ್ಯಮಂತ್ರಿಯಾಗಿ 26 ಜನವರಿ 1950 ರಿಂದ 20 ಮೇ 1952, ಮತ್ತು 20 ಮೇ 1952 ರಿಂದ 27 ಡಿಸೆಂಬರ್ 1954 ರವರೆಗೆ 4 ವರ್ಷಮತ್ತು, 335 ದಿನಗಳ ಕಾಲ ಮುಖ್ಯ ಮಂತ್ರಿಯಾಗಿದ್ದರು. ವಿಧಾನಸಭೆಯ 4 ನವೆಂಬರ್ 1947 ರಂದು ತನ್ನ ಸಭೆಯಲ್ಲಿ ವಿಧಾನಸಭೆಯ ಎಲ್ಲಾ ನಡೆವಳಿಕೆಗಳಿಗೆ ಹಿಂದಿ ಬಳಕೆ ಮಾಡಲು ತೀರ್ಮಾನಿಸಿತು. ಶಾಸನ ಸಭೆಯ ಎಲ್ಲಾ ನೆಡಾವಳಿ ಮತ್ತು ವಾದವಿವಾದಗಳ ವ್ಯವಹಾರಕ್ಕೆ ಹಿಂದಿ ಬಳಕೆ ಮಾಡಲು ಒಂದು ನಿರ್ಣಯವನ್ನು ತೆಗೆದುಕೊಂಡಿತು ಮತ್ತು ಅದೇ ರೀತಿ ನಂತರ ಶಾಸನ ಸಭೆಯ ಎಲ್ಲಾ ನೆಡಾವಳಿಗಳನ್ನು ಹಿಂದಿಯಲ್ಲಿ ನಿರ್ವಹಿಸಲಾಗುತ್ತದೆ ಫೆಬ್ರವರಿ 1948 25 ರಂದು ಅಸೆಂಬ್ಲಿ ಅಲಹಾಬಾದ್ ನಲ್ಲಿರವ ನ್ಯಾಯ ನಿರ್ವಹಣೆ ಹೈಕೋರ್ಟ್ ಹಾಗೂ ಅಯೋಧ್ಯೆಯ ಮುಖ್ಯ ಕೋರ್ಟ್‍ಗಳನ್ನು ಒಂದಾಗಿ ಸಂಯೋಜಿಸಲ್ಪಟ್ಟಿತು.[]

ಉತ್ತರಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾಥ್

[ಬದಲಾಯಿಸಿ]
  • 18 Mar, 2017;
  • 2017 ರ ವಿಧಾನಸಬಾ ಚುನಾವನೆಯಲ್ಲಿ ಬಿಜೆಪಿ ಭಾರಿ ಬಹುಮತ ಪಡೆದಿದೆ. ಉತ್ತರಪ್ರದೇಶ ವಿಭಜನೆ ಬಳಿಕ 403 ಸೀಟುಗಳ ಪೈಕಿ ಬಿಜೆಪಿ 312 ಸೀಟುಗಳ ಗೆಲುವಿನ ವಿಕ್ರಮ ಸಾಧಿಸಿದೆ.
  • ಉತ್ತರ ಪ್ರದೇಶದ ಮುಖ್ಯಮಂತ್ರಿಯ ಪ್ರಮಾಣವಚನ ಭಾನುವಾರ ನಡೆಯಲಿದ್ದು, ಕೇಂದ್ರ ಸಚಿವ ಮನೋಜ್ ಸಿನ್ಹಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವರು ಎಂದು ಮೊದಲುಸುದ್ದಿಯಾಗಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿಯ ಪ್ರಮಾಣವಚನ ಭಾನುವಾರ ಸಂಜೆಗೆ ನಿಗದಿಯಾಗಿದೆ. ಫಲಿತಾಂಶ ಪ್ರಕಟವಾದ ನಂತರ ಮಾಧ್ಯಮದಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಸಿನ್ಹಾ ಅವರು ‘ನಾನು ಯಾವ ಹುದ್ದೆಯ ಸ್ಪರ್ಧೆಯಲ್ಲಿಯೂ ಇಲ್ಲ’ ಎಂದು ಶುಕ್ರವಾರ ಹೇಳಿದ್ದಾರೆ.[]
  • ಆರೆಸ್ಸೆಸ್‍ನ 'ಕೆಂಪು ಧ್ವಜ' ಯುಪಿಯ ಮುಖ್ಯಮಂತ್ರಿ ಆಗಬೇಕೆಂಬ ಕೇಂದ್ರದ ಟೆಲಿಕಾಂ ಸಚಿವ ಮನೋಜ್ ಸಿನ್ಹಾರ ಅವಕಾಶಗಳನ್ನು ತಡೆಯಿತು ಎಂಬ ಅಭಿಪ್ರಾಯವಿದೆ.[]
  • 18 Mar, 2017
  • ಬಿಜೆಪಿ ಫೈರ್ ಬ್ರಾಂಡ್ ಖ್ಯಾತಿಯ ಸಂಸದ ಯೋಗಿ ಆದಿತ್ಯನಾಥ್ ಅವರನ್ನು ಶಾಸಕಾಂಗ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೇಶವ ಪ್ರಸಾದ್‌ ಮೌರ್ಯ ಮತ್ತು ಲಖನೌ ಮೇಯರ್‌ ದಿನೇಶ್‌ ಶರ್ಮ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲಾಗಿದೆ.
  • ಲಖನೌದಲ್ಲಿ ಶನಿವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ, ಗೋರಖ್‌ಪುರದ ಪ್ರಸಿದ್ಧ ಗೋರಕ್ಷನಾಥ ಪೀಠದ ‘ಮಹಂತ’ (ಧಾರ್ಮಿಕ ಮುಖ್ಯಸ್ಥ) ಯೋಗಿ ಆದಿತ್ಯನಾಥ್‌ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧ ಆಯ್ಕೆಯಾದರು. ಆದಿತ್ಯನಾಥ್‌ ಅವರು ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.[]

ಯೋಗಿ ಆದಿತ್ಯನಾಥ್‌ 21ನೇ ಮುಖ್ಯಮಂತ್ರಿ

[ಬದಲಾಯಿಸಿ]
  • 19 Mar, 2017 ಭಾನುವಾರ ಮಧ್ಯಾಹ್ನ. ಹಿಂದುತ್ವದ ಪ್ರತಿಪಾದಕ ಯೋಗಿ ಆದಿತ್ಯನಾಥ್ ಅವರು ಇಂದು ಮಧ್ಯಾಹ್ನ ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
  • ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ . ಇದೇ ಮೊದಲ ಬಾರಿ ಉತ್ತರ ಪ್ರದೇಶದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಲಾಗಿದೆ, ಬಲ್ಲಮೂಲಗಳ ಪ್ರಕಾರ ಮೌರ್ಯ ಅವರಿಗೆ ಗೃಹ ಖಾತೆಯ ಜವಾಬ್ದಾರಿಯನ್ನು ನೀಡಲಾಗುವುದು.
  • ಸೂರ್ಯ ಪ್ರತಾಪ್ ಸಾಹಿ, ಸುರೇಶ್ ಖನ್ನಾ ಮತ್ತು ಸ್ವಾಮಿ ಪ್ರಸಾದ್ ಮೌರ್ಯ ಅವರು ಸಚಿವ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
  • ಲಕ್ನೋನ ಸ್ಮೃತಿ ಉಪವನದಲ್ಲಿ. ಆದಿತ್ಯನಾಥ್ ಮತ್ತು ತನ್ನ ಎರಡು ಸಹಯೋಗಿಗಳ ಜೊತೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕ್ಯಾಬಿನೆಟ್ 43 ಸದಸ್ಯರನ್ನು ಹೊಂದಿದೆ. ಕಾಕತಾಳೀಯವಾಗಿ, ಆದಿತ್ಯನಾಥ್ ಅಥವಾ ಮೌರ್ಯ ಅಥವಾ ಶರ್ಮಾ ಮೂವರೂ (ಹೊಸ ಮುಖ್ಯಮಂತ್ರಿ ಉಪಮುಖ್ಯ ಮಂತ್ರಿಗಳು) ಸದನದ ಶಾಸಕರಲ್ಲ.
  • ಕಾಂಗ್ರೆಸ್‍ನ ಮಾಜಿ ನಾಯಕಿ ರೀಟಾ ಬಹುಗುಣ ಜೋಶಿ ಮತ್ತು ಮಾಜಿ ಬಹುಜನ ಸಮಾಜ ಪಕ್ಷದ ನಾಯಕ ಬ್ರಿಜೇಶ್ ಪಾಠಕ್ ಯುಪಿ ಅಸೆಂಬ್ಲಿ ಚುನಾವಣೆಗಳ ಮುಂಚೆ ಪಕ್ಷ ಸೇರಿಕೊಂಡವರು. ಇವರು ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.
  • ದಾರಾ ಸಿಂಗ್ ಚೌಹಾಣ್, ಧರಂ ಪಾಲ್ ಸಿಂಗ್, ಸತ್ಯದೇವ್ ಪಚೌರಿ, ರಾಮಪತಿ ಶಾಸ್ತ್ರಿ, ಜೆಪಿ ಸಿಂಗ್, ಓಂ ಪ್ರಕಾಶ್ ರಾಜ್‍ಭರ್, ಲಕ್ಷ್ಮಿ ನಾರಾಯಿನ್ ಚೌಧರಿ, ಚೇತನ್ ಚೌಹಾಣ್, ಶ್ರೀಕಾಂತ್ ಶರ್ಮಾ, ಮಾಜಿ ಕ್ರಿಕೆಟಿಗ ಮೋಹಸಿನ್ ರಾಜಾ, ನೀಲಕಾಂತ್ ತಿವಾರಿ, ಗಿರೀಶ್ ಚಂದ್ರ ಯಾದವ್ ಮತ್ತು ಬಲದೇವ್ ಔಲಾಖ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದವರ ಪೈಕಿ 22 ಕ್ಯಾಬಿನೆಟ್ ಸಚಿವರು ಮತ್ತು ಒಂಬತ್ತು ಜನ ರಾಜ್ಯದ (ಸ್ವತಂತ್ರ ಹೊಣೆಗಾರಿಕೆಯ) ಮಂತ್ರಿಗಳಾಗಿದ್ದಾರೆ.[೧೦][೧೧]

ಮಂತ್ರಿಗಳಿಗೆ ಖಾತೆ ಹಂಚಿಕೆ

[ಬದಲಾಯಿಸಿ]
  • ಬುಧವಾರ, 22 ಮಾರ್ಚಿ, 2017 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವತಃ ಗೃಹ ಸಚಿವಾಲಯ ಖಾತೆ ಸೇರಿದಂತೆ ಮೂರು ಡಜನ್ ಇಲಾಖೆಗಳನ್ನು ತಮಗೆ ಇಟ್ಟುಕೊಂಡು, ಅವರ ಕ್ಯಾಬಿನೆಟ್ ಸದಸ್ಯರಿಗೆ ಉಳಿದ ಖಾತೆಗಳ ಹಂಚಿಕೆ ಮಾಡಿದ್ದಾರೆ.[೧೨]

ಜಾತಿ ಪ್ರಾತಿನಿಧ್ಯ

[ಬದಲಾಯಿಸಿ]
  • ಮಂತ್ರಿಮಂಡಳದಲ್ಲಿ ಪ್ರಮುಖ ಜಾತಿ ಗುಂಪುಗಳಿಗೆ 23 ಸಚಿವ ಸ್ಥಾನ ಒಟ್ಟು ಹಂಚಿಕೆ ಮಾಡಿದ್ದಾರೆ ಸಾಂಪ್ರದಾಯಿಕ ಓಟ್ ಬ್ಯಾಂಕ್-ರಜಪೂತರು, ಬ್ರಾಹ್ಮಣರು ಮತ್ತು ಬನಿಯಾಗಳನ್ನು ಕಡೆಗಣನೆ ಮಾಡಲು ಬಯಸಲಿಲ್ಲ. ಬಿಜೆಪಿ ಪಕ್ಷ ಜಾತಿ ಗುಂಪಿಗೆ 14 (ಕ್ಯಾಬಿನೆಟ್) ಸಚಿವ ಸ್ಥಾನಗಳ ನೀಡಿದೆ. ಇದರಲ್ಲಿ 8 ಬ್ರಾಹ್ಮಣರಿಗೆ, 8 ಕಾಯಸ್ಥರಗೆ ಮತ್ತು -ವೈಶ್ಯರಿಗೆ, ಮತ್ತು 7 ಠಾಕುರ್ ಗೆ ಒಳಗೊಂಡಿದೆ. ಈ ಮೂರು ಸಮುದಾಯಗಳು ಉನ್ನತ ಸ್ಥಾನಗಳನ್ನು ಪಡೆದಿವೆ. 6 ದಲಿತರು ನಾಯಕರು ಗಳಿಗೆ ಸಚಿವ ಸ್ಥಾನ ನೀಡಲಾಗಿದೆ; ಇದು ಒಂದು ಅವರಿಗೆ ಬೃಹತ್ ಪ್ರಾತಿನಿಧ್ಯ ಕುತೂಹಲಕಾರಿಯಾಗಿ, 14 ಒಬಿಸಿಗಳ ಜಾತಿಗೆ ಕೇವಲ 1 ಒಂದು ಯಾದವ್ ಪ್ರಾತಿನಿಧ್ಯ ಸಿಕ್ಕಿದೆ. ಇದಲ್ಲದೆ ಮಂತ್ರಿಗಳು ಮೌರ್ಯ, ಲೋಧಾ, ರಾಜಬರ್ ಮತ್ತು ನಿಷಾದ ಜಾತಿಯಲ್ಲಿ ಬಂದವರು. 2 ಜಾಟರುಗಳನ್ನು ಮಂತ್ರಿಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಅಲ್ಪಸಂಖ್ಯಾತರನ್ನು ಕಡೆಗಣಿಸಿಲ್ಲ ಎಂದು ವಿರೋಧ ಪಕ್ಷಕ್ಕೆ ಪ್ರತ್ಯುತ್ತರ ಕೊಡಲು ಭಾರತೀಯ ಜನತಾ ಪಾರ್ಟಿ ಸಂಪುಟಕ್ಕೆ ಒಬ್ಬ ಮುಸ್ಲಿಂ ಮುಖದ ಮೊಹ್ಸಿನ್ ರಾಝಾನನ್ನು ಸಹ ಸೇರ್ಪಡೆ ಮಾಡಿಕೊಂಡಿದೆ.[೧೩]

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರವರ ಸಂಪುಟ ಸಚಿವರು ಪಟ್ಟಿ

[ಬದಲಾಯಿಸಿ]
S.No. ಮಂತ್ರಿಗಳು ಹೆಸರು ಮಂತ್ರಿಯ ದರ್ಜೆ Ministry/ ಸಚಿವಾಲಯ
1. ಯೋಗಿ ಆದಿತ್ಯನಾಥ್ . ಮುಖ್ಯಮಂತ್ರಿ ಗೃಹಖಾತೆ, ಕಂದಾಯ, ವಸತಿ ಮತ್ತು ನಗರ ಯೋಜನೆ, ಆಹಾರ ಭದ್ರತೆ, ಗಣಿಗಾರಿಕೆ, ಪ್ರವಾಹ ನಿಯಂತ್ರಣ, ತೆರಿಗೆ ನಿರ್ವಹಣೆ, ಜೈಲ್ ಸಾಮಾನ್ಯ ಆಡಳಿತ, ರಾಜ್ಯ ಆಸ್ತಿ, ಆಡಳಿತ ಸುಧಾರಣಾ ಗ್ರಾಹಕ ರಕ್ಷಣೆ
2. ಕೇಶವ ಪ್ರಸಾದ್ ಮೌರ್ಯ ಉಪಮುಖ್ಯಮಂತ್ರಿ ಲೋಕೋಪಯೋಗಿ ಇಲಾಖೆ, ಆಹಾರ ಸಂಸ್ಕರಣೆ, ಮನರಂಜನೆ ತೆರಿಗೆ, ಸಾರ್ವಜನಿಕ ಕಾರ್ಮಿಕ ಇಲಾಖೆಯ (ಹೆಚ್ಚುವರಿ ಜವಾಬ್ದಾರಿ)
3. ದಿನೇಶ್ ಶರ್ಮಾ ಉಪಮುಖ್ಯಮಂತ್ರಿ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಐಟಿ ಇಲಾಖೆ (ಹೆಚ್ಚುವರಿ ಜವಾಬ್ದಾರಿ)
4. ರೀಟಾ ಬಹುಗುಣ ಜೋಶಿ ಸಂಪುಟ ಸಚಿವೆ ಮಹಿಳೆಯರ ಕಲ್ಯಾಣ ಕುಟುಂಬ ಕಲ್ಯಾಣ ಹೆರಿಗೆ ಮತ್ತು ಮಕ್ಕಳ ಕಲ್ಯಾಣ, ಪ್ರವಾಸೋದ್ಯಮ

ಇತರ ಮಂತ್ರಿಮಂಡಲ ಸದಸ್ಯರು

[ಬದಲಾಯಿಸಿ]
  • 5. ಸಿದ್ಧಾರ್ಥ್ ನಾಥ್ ಸಿಂಗ್ : ಸಂಪುಟ ಸಚಿವ: ಆರೋಗ್ಯ
  • 6. ಚೇತನ್ ಚೌಹಾಣ್: ಸಂಪುಟ ಸಚಿವ: ಕ್ರೀಡೆ
  • 7. ಶ್ರೀಕಾಂತ್ ಶರ್ಮಾ: ಸಂಪುಟ ಸಚಿವ: ಪವರ್
  • 8. ಸ್ವಾಮಿ ಪ್ರಸಾದ್ ಮೌರ್ಯ: ಸಂಪುಟ ಸಚಿವ: ಲೇಬರ್, ಸೇವೆ ಯೋಜನೆ, ನಗರ ಉದ್ಯೋಗ ಮತ್ತು ಬಡತನ ನಿವಾರಣೆ
  • 9. ಸತೀಶ್ ಮಹಾನ (Mahana)  ; ಸಂಪುಟ ಸಚಿವ ; ಕೈಗಾರಿಕಾ ಅಭಿವೃದ್ಧಿ
  • 10. ಸುರೇಶ್ ಖನ್ನಾ ; ಸಂಪುಟ ಸಚಿವ ; ಸಂಸದೀಯ ವ್ಯವಹಾರಗ¼ÀÄ ನಗರಾಭಿವೃದ್ಧಿ
  • 11. ಲಕ್ಷ್ಮಿ ನಾರಾಯಣ ಚೌಧರಿ ; ಸಂಪುಟ ಸಚಿವ ; ಡೈರಿ ಅಭಿವೃದ್ಧಿ, ಧಾರ್ಮಿಕ ಕೃತಿಗಳು ಮತ್ತು ಸಂಸ್ಕೃತಿ, ಅಲ್ಪಸಂಖ್ಯಾತgÀ ಕಲ್ಯಾಣ
  • 12. ಎಸ್.ಪಿ. ಸಿಂಗ್ ಬಘೇಲ್ (Baghel); ಸಂಪುಟ ಸಚಿವ; ಜಾನುವಾರು, ಸಣ್ಣ ನೀರಾವರಿ, ಮೀನುಗಾರಿಕೆ
  • 13. ರಾಜೇಶ್ ಅಗರ್ವಾಲ್ ; ಸಂಪುಟ ಸಚಿವ ; ಹಣಕಾಸು
  • 14. ಧರ್ಮಪಾಲ್ ಸಿಂಗ್; ಸಂಪುಟ ಸಚಿವ ; ನೀರಾವರಿ, ನೀರಾವರಿ (ಯಾಂತ್ರಿಕ)
  • 15. ಅಶುತೋಷ್ ಟಂಡನ್; ಸಂಪುಟ ಸಚಿವ ; ಮೂಲಭೂತ ಶಿಕ್ಷಣ, ವೈದ್ಯಕೀಯ ಶಿಕ್ಷಣ
  • 16. ಬ್ರಿಜೇಶ್ ಪಾಠಕ್ ; ಸಂಪುಟ ಸಚಿವ; ಕಾನೂನು ಮತ್ತು ನ್ಯಾಯ, ಹೆಚ್ಚುವರಿ ಎನರ್ಜಿ ರಿಸೋರ್ಸಸ್, ರಾಜಕೀಯ ಪಿಂಚಣಿ
  • 17. ಮುಕುಟ ಬಿಹಾರಿ ವರ್ಮಾ ; ಸಂಪುಟ ಸಚಿವ ; ಸಹಕಾರಿ E¯ÁSÉ
  • 18. ರಮಾಪತಿ (Ramapati) ಶಾಸ್ತ್ರಿ ; ಸಂಪುಟ ಸಚಿವ ; ಸಮಾಜ ಕಲ್ಯಾಣ
  • 19. ಸತ್ಯದೇವ್ ಪಚೌರಿ ; ಸಂಪುಟ ಸಚಿವ ; ಖಾದಿ, ಗ್ರಾಮೀಣ ಉದ್ಯಮ, ಜವಳಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಮತ್ತು ರಫ್ತು
  • 20. ಜೈ ಪ್ರಕಾಶ್ ಸಿಂಗ್ ಸಂಪುಟ ಸಚಿವ
  • 21 ಸೂರ್ಯ ಪ್ರತಾಪ್ ಶಾಹಿ ; ಸಂಪುಟ ಸಚಿವ  ; ಕೃಷಿ
  • 22. ದಾರಾ ಸಿಂಗ್ ಚೌಹಾಣ್; ಸಂಪುಟ ಸಚಿವ ; ಅರಣ್ಯ ಮತ್ತು ಪರಿಸರ, ಪ್ರಾಣಿಸಂಗ್ರಹಾಲಯ
  • 23. ರಾಜೇಂದ್ರ ಪ್ರತಾಪ್ ಸಿಂಗ್ ; ಸಂಪುಟ ಸಚಿವ
  • 24. ನಂದ ಕುಮಾರ್ ನಂದಿ ; ಸಂಪುಟ ಸಚಿವ ; ಸ್ಟ್ಯಾಂಪ್ ಮತ್ತು ಕೋರ್ಟ್ ದರಗಳು, ನಾಗರಿಕ ವಿಮಾನಯಾನ
  • 25. ಗಿರೀಶ್ ಯಾದವ್ ; ಸಂಪುಟ ಸಚಿವ ; ಪುನರ್ವಸತಿ, ನಗರಾಭಿವೃದ್ಧಿ
  • 26 ಓಂ ಪ್ರಕಾಶ್ ರಾಜಭರ್ (Rajbhar) ; ಸಂಪುಟ ಸಚಿವ ; ಹಿಂದುಳಿದ ವರ್ಗಗಳ ಕಲ್ಯಾಣ, ಡಿಸೇಬಲ್ಡ್ ಪೀಪಲ್ ಅಭಿವೃದ್ಧಿ
  • 27. ಭೂಪೇಂದ್ರ ಸಿಂಗ್ ಚೌಧರಿ ಮಾಸ್ ; (ಸ್ವತಂತ್ರ); ಪಂಚಾಯತ್ ರಾಜ್
  • 28. ಧರಮ್ ಸಿಂಗ್ ಸೈನಿ ಮಾಸ್ (ಸ್ವತಂತ್ರ) ; ಆಯುಶ್ ಮತ್ತು ಪುನರ್ವಸತಿ
  • 29. ಸುರೇಶ್ ರಾಣಾ ಮಾಸ್ (ಸ್ವತಂತ್ರ) ; ಕಬ್ಬು ಮತ್ತು ಸಕ್ಕರೆ ಗಿರಣಿಗಳು, ಕೈಗಾರಿಕಾ ಅಭಿವೃದ್ಧಿ
  • 30 ಮಹೇಂದ್ರ ಸಿಂಗ್ ಮಾಸ್ (ಸ್ವತಂತ್ರ); ಗ್ರಾಮೀಣ ಅಭಿವೃದ್ಧಿ, ಸಮಗ್ರ ಗ್ರಾಮೀಣ ಅಭಿವೃದ್ಧಿ, ಆರೋಗ್ಯ
  • 31 ಸ್ವಾತಿ ಸಿಂಗ್ ಮಾಸ್ (ಸ್ವತಂತ್ರ) ; ಎನ್ನಾರೈ, ಪ್ರವಾಹ ನಿಯಂತ್ರಣ, ಕೃಷಿ ಆಮದು, ಕೃಷಿ ಮಾರ್ಕೆಟಿಂಗ್, ಕೃಷಿ ವಿದೇಶಿ ವ್ಯಾಪಾರ, ಮಹಿಳೆಯರ ಕಲ್ಯಾಣ ಕುಟುಂಬ ಕಲ್ಯಾಣ ಹೆರಿಗೆ ಮತ್ತು ಮಕ್ಕಳ ಕಲ್ಯಾಣ
  • 32. ಅನುಪಮಾ ಜೈಸ್ವಾಲ್ ಮಾಸ್ (ಸ್ವತಂತ್ರ) ;
  • 33. ಸ್ವತಂತ್ರ ದೇವ್ ಸಿಂಗ್ ಮಾಸ್ (ಸ್ವತಂತ್ರ)  ; ಸಾರಿಗೆ, ಪ್ರೊಟೊಕಾಲ್, ಶಕ್ತಿ
  • 34. ಉಪೇಂದ್ರ ತಿವಾರಿ ಮಾಸ್ (ಸ್ವತಂತ್ರ)  ; d® ಪರಿಹಾರ
  • 35. ಅನಿಲ್ ರಾಜಭರ್ ಮಾಸ್ (ಸ್ವತಂತ್ರ) ;ಸೈನಿಕ ಕಲ್ಯಾಣ,
  • 36. ಸುರೇಶ್ ಪಾಸಿ ಸಚಿವ ; ರಾಜ್ಯ ವಸತಿ, ಉದ್ಯೋಗ ಶಿಕ್ಷಣ, ಕೌಶಲ್ಯ
  • 37. ಜೈ ಕುಮಾರ್ ಸಿಂಗ್ ಜ್ಯಾಕಿ ಸಚಿವ ಅಬಕಾರಿ ಇಲಾಖೆ, ಪಾನ (ಲಿಕ್ಕರ್) ನಿಷೇಧ
  • 38. ನೀಲಕಂಠ ತಿವಾರಿ ; ರಾಜ್ಯ ಸಚಿವ ; ರಾಜ್ಯ ಕಾನೂನು ಮತ್ತು ನ್ಯಾಯ, ಮಾಹಿತಿ ಮತ್ತು ಕ್ರೀಡೆಗಳು
  • 39. ಸಂಗೀತಾ ಬಲವಂತ್ ರಾಜ್ಯ ಸಚಿವೆ
  • 40. ಗಿರೀಶ್ ಯಾದವ್ ರಾಜ್ಯ ಸಚಿವ , ನಗರಾಭಿವೃದ್ಧಿ ರಾಜ್ಯ ಪುನರ್ವಸತಿ
  • 41. ರಾಜ್ಯದ ಪ್ರಕಾಶ್ ನಿಷಾದ ರಾಜ್ಯ ಸಚಿವ
  • 42 ಜ್ಞಾನೇಂದ್ರ ಸಿಂಗ್ ರಾಜ್ಯ ಸಚಿವ
  • 43. ಮನ್ನು ಕೋರಿ ರಾಜ್ಯ ಸಚಿವ ರಾಜ್ಯ ಕೂಲಿ ಸೇವೆಯ ಯೋಜನೆ
  • 44. ರಣವೇಂದ್ರ ಪ್ರತಾಪ್ ಸಿಂಗ್ ;ರಾಜ್ಯ ಸಚಿವ; ಕೃಷಿ
  • 45. ನೀಲಕಂಠ ತಿವಾರಿ - ರಾಜ್ಯ ಸಚಿವ; ಕಾನೂನು ಮತ್ತು ನ್ಯಾಯ
  • 46.ಅರ್ಚನಾ ಪಾಂಡೆ ರಾಜ್ಯ ಸಚಿವ; ಗಣಿಗಾರಿಕೆ, ಅಬಕಾರಿ ಮತ್ತು ನಿಷೇಧ
  • 47. ಮೊಹ್ಸಿನ್ ರಾಜಾ ರಾಜ್ಯ ಸಚಿವ ಅಲ್ಪಸಂಖ್ಯಾತ ವ್ಯವಹಾರ; ವಿಜ್ಞಾನ, ಎಲೆಕ್ಟ್ರಾನಿಕ್ಸ್

♠♠♠♠-♠♠♠♠-♠♠♠♠ [೧೪]

ಉಲ್ಲೇಖ

[ಬದಲಾಯಿಸಿ]